Puttakkana Makkalu: ಸ್ನೇಹಾಳನ್ನು ಪ್ರೀತಿಸ್ತಿರೋ ಶ್ರೀಗೆ ಪೂರ್ವಿ ಕೊಟ್ಲು ಶಾಕ್! ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ

ಪೂರ್ವಿ ಅವ್ವನ ಬಳಿ ಮದುವೆ ಬೇಡ ಎನ್ನುತ್ತಾಳೆ ಎಂದು ಕಂಠಿ ತುಂಬಾ ಖುಷಿಯಲ್ಲಿದ್ದ. ಆದ್ರೆ ಆಕೆ ಬಂಗಾರಮ್ಮನ ಬಳಿ ಉಲ್ಟಾ ಹೊಡೆದಿದ್ದಾಳೆ. ಅದನ್ನು ಕೇಳಿ ಕಂಠಿ ಬೇಸರ ಮಾಡಿಕೊಂಡಿದ್ದಾನೆ.

ಸ್ನೇಹ-ಕಂಠಿ

ಸ್ನೇಹ-ಕಂಠಿ

  • Share this:
    ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ (Hotel) ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.

    ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ
    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಕಂಠಿ ಯಾವಾಗ ತನ್ನ ಪ್ರೀತಿ ಹೇಳಿ ಒಪ್ಪಿಸುತ್ತಾನೋ ಗೊತ್ತಿಲ್ಲ.

    ಪೂರ್ವಿ ಜೊತೆ ಕಂಠಿ ನಿಶ್ಚಿತಾರ್ಥ
    ಇನ್ನು ಬಂಗಾರಮ್ಮ ತನ್ನ ಮಗ ಕಂಠಿಗೆ, ಅಣ್ಣನ ಮಗಳು ಪೂರ್ವಿ ಜೊತೆ ನಿಶ್ಚಿತಾರ್ಥ ಮಾಡಲು ಬಂಗಾರಮ್ಮ ರೆಡಿ ಆಗಿದ್ದಾಳೆ. ಇರೋ ಒಬ್ಬ ಮಗನ ನಿಶ್ಚಿತಾರ್ಥ ಗ್ರಾಂಡ್ ಆಗಿ ಮಾಡಲು ಮುಂದಾಗಿದ್ದಾಳೆ. ಅದಕ್ಕೆ ತನಗೆ ಪರಿಚಯ ಇರೋರನ್ನೆಲ್ಲಾ ಕರೆಯುತ್ತಿದ್ದಾಳೆ. ಆದ್ರೆ ಈ ಮದುವೆ ಕಂಠಿಗೆ ಇಷ್ಟ ಇಲ್ಲ.

    ಇದನ್ನೂ ಓದಿ: Kannadathi: ಸಾಯುವ ಡ್ರಾಮಾ ಮಾಡಿ ಭುವಿಯನ್ನ ದಾಳವಾಗಿಸಿಕೊಳ್ತಾಳಾ ಸಾನಿಯಾ? ಹರ್ಷನ ಮುಂದೆ ಠುಸ್ ಪಟಾಕಿಯಾದ ಆದಿ ಮಡದಿ

    ಪೂರ್ವಿಗೆ ಮದುವೆ ಬೇಡ ಎಂದಿರುವ ಕಂಠಿ
    ಕಂಠಿಗೆ ಪೂರ್ವಿಯನ್ನು ಮದುವೆ ಆಗಲು ಇಷ್ಟ ಇಲ್ಲ. ಅದಕ್ಕೆ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ, ನನಗೆ ನಿನ್ನ ಮದುವೆ ಆಗಲು ಇಷ್ಟ ಇಲ್ಲ. ಅದನ್ನು ಅವ್ವನ ಬಳಿ ಹೇಳಲು ನನಗೆ ಆಗಲ್ಲ. ನೀನು ಹೇಳು, ಕಂಠಿ ನನಗೆ ಇಷ್ಟ ಇಲ್ಲ ಎಂದು, ಆಗ ಅಮ್ಮ ಒಪ್ಪುತ್ತಾರೆ. ನಾನು ಹೇಳಿದ್ರೆ ಬೇಸರ ಮಾಡಿಕೊಳ್ತಾರೆ ಎಂದಿದ್ದಾನೆ.

    Zee Kannada serial, Kannada serial, Puttakkana Makkalu serial today episode, Puttakkana Makkalu serial cast, Kho Kho Coach, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಬಂಗಾರಮ್ಮ-ಕಂಠಿ


    ಪೂರ್ವಿಗೆ ಕಂಠಿಯನ್ನು ಕಂಡ್ರೆ ತುಂಬಾ ಇಷ್ಟ
    ಅದಲ್ಲದೇ ಪೂರ್ವಿ ಕಂಠಿ ಅಂದ್ರೆ ತುಂಬಾ ಇಷ್ಟ. ಅವನನ್ನು ಮಾವ ಮಾವ ಎಂದುಕೊಂಡು ಓಡಾಡುತ್ತಿದ್ದಾರೆ. ಆಕೆ ಕಂಠಿ ತಾಯಿ ಬಂಗಾರಮ್ಮನ ಬಳಿ ಮಾತನಾಡಬೇಕು ಎಂದಿದ್ದಾಳೆ. ಮನೆಯವರೆಲ್ಲಾ ಒಂದೆಡೆ ಸೇರಿದ್ದಾರೆ. ಪೂರ್ವಿ ಮದುವೆ ಬಗ್ಗೆ ಮಾತನಾಡಬೇಕು ಎಂದು, ನನಗೆ ಕಂಠಿ ಇಷ್ಟ. ನಿಶ್ಚಿತಾರ್ಥದ ಶಾಪಿಂಗ್‍ಗೆ ಇಬ್ಬರು ಒಟ್ಟಿಗೆ ಹೋಗ್ತೀವಿ ಅತ್ತೆ ಎಂದು ಮಾತು ಬದಲಾಯಿಸಿದ್ದಾಳೆ. ಅದನ್ನು ಕೇಳಿ ಕಂಠಿಗೆ ಶಾಕ್ ಆಗಿದ್ದಾನೆ.

    Zee Kannada serial, Kannada serial, Puttakkana Makkalu serial today episode, Puttakkana Makkalu serial cast, Kho Kho Coach, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪೂರ್ವಿ


    ಖುಷಿಯಲ್ಲಿದ್ದ ಕಂಠಿಗೆ ಬೇಸರ
    ಪೂರ್ವಿ ಅವ್ವನ ಬಳಿ ಮದುವೆ ಬೇಡ ಎನ್ನುತ್ತಾಳೆ ಎಂದು ಕಂಠಿ ತುಂಬಾ ಖುಷಿಯಲ್ಲಿದ್ದ. ಆದ್ರೆ ಆಕೆ ಬಂಗಾರಮ್ಮನ ಬಳಿ ಉಲ್ಟಾ ಹೊಡೆದಿದ್ದಾಳೆ. ಅದನ್ನು ಕೇಳಿ ಕಂಠಿ ಬೇಸರ ಮಾಡಿಕೊಂಡಿದ್ದಾನೆ. ಸ್ನೇಹಗೆ ಪ್ರೀತಿ ಹೇಳಿಕೊಳ್ಳೋ ತವಕದಲ್ಲಿರೋ ಶ್ರೀಗೆ, ಮದುವೆ, ಪೂರ್ವಿ ಇಬ್ಬರು ಅಡ್ಡ ಆಗಿದ್ದಾರೆ. ಇಬ್ಬರಿಂದ ತಪ್ಪಿಸಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾನೆ.

    ಇದನ್ನೂ ಓದಿ: Happy Birthday Ramya Krishnan: ಬಾಹುಬಲಿ ನಟಿಗೆ 52 ಅಂದ್ರೆ ನಂಬ್ತೀರಾ? ಸ್ಯಾಂಡಲ್​​ವುಡ್ ನೀಲಾಂಬರಿಗೆ ಹ್ಯಾಪಿ ಬರ್ತ್​ಡೇ

    ಕಂಠಿ ಮದುವೆ ಬೇಡ ಅಂತ ತನ್ನ ಅಮ್ಮನ ಬಳಿ ಹೇಳ್ತಾನಾ? ಅಥವಾ ಸ್ನೇಹ ಬಳಿ ಪ್ರೀತಿ ಹೇಳಿಕೊಳ್ತಾನಾ? ಎಲ್ಲವನ್ನೂ ನೋಡಲು ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡಬೇಕು.
    Published by:Savitha Savitha
    First published: