Puttakkana Makkalu Serial: ತಾಯಿ ಮಾತಿಗೆ ಕಟ್ಟುಬಿದ್ದು ಚಂದ್ರು ಪ್ರೀತಿಯನ್ನು ಕಳೆದುಕೊಳ್ಳುತ್ತಾಳಾ ವಸು?

ರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿ ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಮಾಜದಲ್ಲಿ ಒಂಟಿಯಾಗಿ ಮೂರು ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಕಷ್ಟಗಳನ್ನು ಧಾರಾವಾಹಿಯಲ್ಲಿ ತೋರಿಸಿಕೊಟ್ಟಿದ್ದಾರೆ.

ವಸು

ವಸು

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಕೂಡ ಒಂದು. ಪುಟ್ಟಕ್ಕನ ಮಕ್ಕಳಾದ ಸಹನ (Sahana), ಸ್ನೇಹಾ (Sneha) ಮತ್ತು ಸುಮಾ (Suma) ನಡುವಿನ ಬಾಂಧವ್ಯದ ಸನ್ನಿವೇಶಗಳು ಧಾರವಾಹಿಯಲ್ಲಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಅಷ್ಟೇ ಅಲ್ಲದೆ ಹಿರಿಯ ನಟಿ ಉಮಾಶ್ರೀ (Umashree) ಅವರು ಪುಟ್ಟಕ್ಕನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿ ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಮಾಜದಲ್ಲಿ ಒಂಟಿಯಾಗಿ ಮೂರು ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಕಷ್ಟಗಳನ್ನು ಧಾರಾವಾಹಿಯಲ್ಲಿ ತೋರಿಸಿಕೊಟ್ಟಿದ್ದಾರೆ.

    ಬಂಗಾರಮ್ಮ-ನಂಜಮ್ಮನ ಜಟಾಪಟಿಯಿಂದ ಸೊರಗುತ್ತಿದೆ ವಸು- ಚಂದ್ರು ಪ್ರೀತಿ

    ಪರಸ್ಪರ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವವರು ವಸು ಮತ್ತು ಚಂದ್ರು ಹೆತ್ತವರ ಮಾತು ಕೇಳಿ ಇದೀಗ ದೂರವಾಗಿದ್ದಾರೆ.ಹಲವಾರು ಬಾರಿ ಚಂದ್ರು ಮತ್ತು ವಸು ಒಂದಾಗಲು ಪ್ರಯತ್ನಪಟ್ಟರು ಹೆತ್ತವರ ದ್ವೇಷದಿಂದ ಮತ್ತೆ ಮತ್ತೆ ದೂರವಾಗುತ್ತಿದ್ದಾರೆ. ಇದೀಗ ಚಂದ್ರು ಮತ್ತು ನಂಜಮ್ಮ ಬಂಗಾರಮ್ಮನ ಮನೆಗೆ ಬಂದು ನಿಂತಿದ್ದಾರೆ. ಅಷ್ಟೇ ಅಲ್ಲದೆ ಚಂದ್ರು ನಡೆದ ಘಟನೆಗಳಿಗೆ ತಾನೇ ಕಾರಣ ಎಂದು ಕ್ಷಮೆಕೇಳಲು ಕೊಡ ತಯಾರಾಗಿದ್ದಾನೆ. ಆದರೆ ನಂಜಮ್ಮ ತನ್ನ ಅಹಂ ಇಂದ ಮಗನ ಭವಿಷ್ಯವನ್ನು ಹಾಳು ಮಾಡುತ್ತಿದ್ದಾಳೆ. ಮಗ ಚಂದ್ರು ಕ್ಷಮೆ ಕೇಳಲು ತಯಾರಿದ್ದರೂ ನಂಜಮ್ಮ ಇದಕ್ಕೆ ಸಮ್ಮತಿ ಕೊಡದೆ ದರ್ಪದಿಂದ ಸೊಸೆಯನ್ನು ಮನೆಗೆ ಬರಲಿ ಎಂದು ಕರೆದಿದ್ದಿದ್ದಾಳೆ.ಆದರೆ ಈಗಾಗಲೇ ವಸು ಈ ಬಗ್ಗೆ ತಾಯಿ ಜೊತೆ ತನ್ನ ಅಭಿಪ್ರಾಯವನ್ನು ಹೇಳಿದ್ದು, ಚಂದ್ರು ತಾನಾಗಿ ಬಂದು ನಿನ್ನ ಎಲ್ಲಾ ಮಾತಿಗೆ ಒಪ್ಪಿಗೆ ಸೂಚಿಸುವ ತನಕ ನಾನು ಚಂದ್ರು ಮನೆಗೆ ಹೋಗುವುದಿಲ್ಲಾ ಎಂದು ಹೇಳಿದ್ದಾಳೆ. ಚಂದ್ರು ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ವಸು ಇದೀಗ ತಾಯಿಗೆ ಕೊಟ್ಟ ಮಾತನ್ನು ದಿಕ್ಕರಿಸಿ ಮತ್ತೆ ನಂಜಮ್ಮನ ಮನೆಗೆ ಚಂದ್ರು ಪತ್ನಿಯಾಗಿ ಹೋಗುತ್ತಾಳಾ?

    ಇದನ್ನೂ ಓದಿ: Jothe Jotheyali Serial: ಅನು ಸಿರಿಮನೆ ಕಾರ್ ಆಕ್ಸಿಡೆಂಟ್, ಇನ್ನಾದರೂ ಬಯಲಾಗುತ್ತಾ ಜೇಂಡೆ ನಿಜಮುಖ?

    ಪೂರ್ವಿ ಜೊತೆ ಕಂಠಿ ನಿಶ್ಚಿತಾರ್ಥ?

    ಬಂಗಾರಮ್ಮ ಈಗಾಗಲೇ ತನ್ನ ಮಗ ಕಂಠಿಗೆ ಪೂರ್ವಿಯನ್ನು ಮದುವೆ ಮಾಡಿ ತರುವುದಾಗಿ ನಿಶ್ಚಿಯಿಸಿದ್ದಾರೆ. ತಾಯಿಯ ಮಾತಿಗೆ ಕಟ್ಟು ಬಿದ್ದು ಕಂಠಿ ಇಷ್ಟವಿಲ್ಲದೆ ಪೂರ್ವಿಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾನೆ. ಆದರೆ ಈ ಮಧ್ಯ ಕಂಠಿಗೆ ಸ್ನೇಹನ ಮೇಲೆ ಪ್ರೀತಿ ಹೆಚ್ಚಾಗಿದ್ದು ಪೂರ್ವಿಯನ್ನು ‌ಕಂಡರೆ ಸಿಟ್ಟು ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಇದೀಗ ಪೂರ್ವಿ ಮತ್ತು ಆಕೆಯ ತಾಯಿ ಬಂಗಾರಮ್ಮನ ಮನೆಗೆ ನಿಶ್ಚಿತಾರ್ಥದ ವಿಚಾರವನ್ನು ಮಾತಾನಾಡುತ್ತಿದ್ದಾರೆ. ಇನ್ನೇನು ಕೆಲವೆ ದಿನಗಳಲ್ಲಿ ಪೂರ್ವಿ ತಂದೆ ವಿದೇಶದಿಂದ ಬರುತ್ತಿದ್ದು, ಸದ್ಯದಲ್ಲೇ ನಿಶ್ಚಿತಾರ್ಥ ದಿನವನ್ನು ನಿಗದಿ ಮಾಡುವ ಬಗ್ಗೆ ‌ಮಾತನಾಡಿದ್ದಾರೆ.ಈ ಸಂಕಷ್ಟದಿಂದ ಕಂಠಿ ಹೇಗೆ ಹೊರ ಬರುತ್ತಾನೇ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.

    ಇದನ್ನೂ ಓದಿ: Jothe Jotheyali Serial: ಅಪಾಯದಿಂದ ಅನು‌ ಸಿರಿಮನೆಗೆ ಅರಿಶಿನ ದಾರದ ರಕ್ಷಣೆ? ಇದೇನಿದು ಬಿಗ್ ಟ್ವಿಸ್ಟ್

    ಕಂಠಿ ಪ್ರೀತಿಗೆ ಯಾರು ಸಹಾಯ ಮಾಡುತ್ತಾರೆ?

    ಸದ್ಯದ ಪರಿಸ್ಥಿತಿಯಲ್ಲಿ ಕಂಠಿ ಪ್ರೀತಿಗೆ ಸಹಾಯ ಮಾಡಲು ತಂಗಿ ವಸು ಇಂದ ಮಾತ್ರ ಸಾಧ್ಯ. ಆದರೆ ಆಕೆಯ ಬಾಳಿನಲ್ಲಿ ಕಷ್ಟಗಳ ಸುರಿಮಳೆಗಳೇ ಇರುವಾಗ ಕಂಠಿ ಪ್ರೀತಿಗೆ ಯಾರು ಮಾಡುತ್ತಾರೆ? ಅಷ್ಟೇ ಅಲ್ಲದೆ ಕಂಠಿ ಸ್ನೇಹಳನ್ನು ಪ್ರೀತಿ‌ ಮಾಡುತ್ತಿರುವ ವಿಚಾರ ಸ್ವತಃ ಸ್ನೇಹಾಳಿಗೂ ತಿಳಿದಿಲ್ಲಾ. ಅಕಸ್ಮಾತ್ ಕಂಠಿ ಪ್ರೀತಿ ಬಗ್ಗೆ ಸ್ನೇಹಳ ಬಳಿ ಹೇಳಿಕೊಂಡರೂ ಆ ಸ್ನೇಹ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ? ಈ ಬಗ್ಗೆ ಪ್ರೇಕ್ಷಕರಲ್ಲಿ ಬಹಳ ಕೂತುಹಲ ಇದೆ. ತಾನು ಅತಿಯಾಗಿ ದ್ವೇಷಿಸುತ್ತಿರುವ ಬಂಗಾರಮ್ಮನ ಮಗನೇ ಕಂಠಿ ಎಂದು ತಿಳಿದರೆ  ಇದನ್ನು ‌ಸ್ನೇಹಾ ಅದನ್ನು ಹೇಗೆ ಸ್ವೀಕರಿಸುತ್ತಾಳೆ. ಕಂಠಿಯ ಸುಳ್ಳಿನ ಕೋಟೆ ಯಾವಾಗ ಒಡೆಯುತ್ತದೆ ಎನ್ನುವ ‌ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರಕಬಹುದು.
    Published by:Swathi Nayak
    First published: