Puttakkana Makkalu: 200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಮುಂದಿನ ಟ್ವಿಸ್ಟ್ ಏನು?

ಧಾರಾವಾಹಿ ಶುರುವಾದಾಗಿನಿಂದ ತುಂಬಾ ಚೆನ್ನಾಗಿ ಓಡುತ್ತಿದೆ. ಜನ ತಪ್ಪದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡ್ತಾರೆ. ಈ ಧಾರಾವಾಹಿಗೆ ಇಂದು 200 ಸಂಚಿಕೆಗಳ ಸಂಭ್ರಮ. ಆ ಖುಷಿಯಲ್ಲಿದೆ ಧಾರಾವಾಹಿ ತಂಡ.

200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ

200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ

  • Share this:
    ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ (Hotel)ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ (Games) ಮುಂದು.

    ಧಾರಾವಾಹಿಗೆ 200 ಸಂಚಿಕೆಗಳ ಸಂಭ್ರಮ
    ಧಾರಾವಾಹಿ ಶುರುವಾದಾಗಿನಿಂದ ತುಂಬಾ ಚೆನ್ನಾಗಿ ಓಡುತ್ತಿದೆ. ಜನ ತಪ್ಪದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡ್ತಾರೆ. ಈ ಧಾರಾವಾಹಿಗೆ ಇಂದು 200 ಸಂಚಿಕೆಗಳ ಸಂಭ್ರಮ. ಆ ಖುಷಿಯಲ್ಲಿದೆ ಧಾರಾವಾಹಿ ತಂಡ. ಅಷ್ಟು ಬೇಗ 200 ಸಂಚಿಕೆಗಳನ್ನು ಪೂರೈಸಿದೆ.

    ಯಶಸ್ಸಿನ ಹಾದಿಯತ್ತ ಧಾರಾವಾಹಿ
    ಸಂಜೆ 7.30ಕ್ಕೆ ಬೇರೆ ಬೇರೆ ವಾಹಿನಿಗಳಲ್ಲಿ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಸಮಯಕ್ಕೆ ಮೂಡಿ ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಅವುಗಳಿಗೆ ಸ್ಪರ್ಧೆ ನೀಡುತ್ತಿದೆ. ಹಾಗಾಗಿ 200 ಸಂಚಿಕೆಗಳನ್ನು ಪೂರೈಸುತ್ತಿರುವ ಧಾರಾವಾಹಿ ಯಶಸ್ಸಿನತ್ತ ಸಾಗುತ್ತಿದೆ.

    ಇದನ್ನೂ ಓದಿ: Gattimela: ವೇದಾಂತ್, ವಿಕ್ರಾಂತ್‍ಗೆ ಅಮ್ಮನ ಸುಳಿವು ಸಿಗುತ್ತಾ, ವೈದೇಹಿ ಚಿತ್ರ ಬಿಡಿಸ್ತಾನಾ ಸಿಕ್ಕಿರೋ ಅನಾಮಿಕ ವ್ಯಕ್ತಿ? 

    ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ
    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಕಂಠಿ ಯಾವಾಗ ತನ್ನ ಪ್ರೀತಿ ಹೇಳಿ ಒಪ್ಪಿಸುತ್ತಾನೋ ಗೊತ್ತಿಲ್ಲ.

    Zee Kannada serial, Kannada serial, Puttakkana Makkalu serial today episode, 200 episode of serial, Puttakkana Makkalu serial cast, Kho Kho Coach, ಪುಟ್ಟಕ್ಕನ ಮಕ್ಕಳು ಧಾರಾವಾಹಿ, 200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಖೋ ಖೋ ಕೋಚ್ ಪುಟ್ಟಕ್ಕ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪುಟ್ಟಕ್ಕನ ಮಕ್ಕಳು


    ಸಹನಾಳನ್ನು ಪ್ರೀತಿ ಮಾಡ್ತಿರೋ ಮುರುಳಿ ಸರ್
    ಇನ್ನು ಈ ಧಾರಾವಾಹಿಯಲ್ಲಿ ಮುರುಳಿ ಎನ್ನುವ ಮೇಷ್ಟ್ರು ಸಹನಾಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೇ ಈ ವಿಷಯವನ್ನು ಸಹನಾಗೆ ಹೇಳಿದ್ದಾರೆ. ಸಹನಾಗೂ ಇಷ್ಟ ಇದೆ. ಆದ್ರೆ ಮನೆಯವರ ಬಳಿ ಬಂದು ಮಾತನಾಡಿ ಎಂದಿದ್ದಾಳೆ. ಅದಕ್ಕೆ ಮುರುಳಿ ಸರ್ ಮನೆಯವರ ಬಳಿ ಬಂದು ಮಾತನಾಡುಲು ಕಷ್ಟ ಪಡುತ್ತಿದ್ದಾರೆ.

    ಸುಮಾಗೆ ಖೋ ಖೋ ಕೋಚ್ ಬೇಕು
    ಇನ್ನು ಪುಟ್ಟಕ್ಕನ ಕೊನೆ ಮಗಳು ಸುಮಾಗೆ ಖೋ ಖೋ ಆಟ ಎಂದ್ರೆ ಪ್ರಾಣ. ಅದರಲ್ಲಿ ಗೆಲ್ಲಲೇ ಬೇಕು. ಆದ್ರೆ ಸರಿಯಾದ ಕೋಚ್ ಸಿಗುತ್ತಿಲ್ಲ. ಪುಟ್ಟಕ್ಕ ನಾನೇ ಆಟ ಹೇಳಿ ಕೊಡ್ತೀನಿ ಅಂದ್ರೆ ಸುಮಾ ಒಪ್ಪುತ್ತಿಲ್ಲ. ಪುಟ್ಟಕ್ಕನು ಸಹ ಚಿಕ್ಕವಳಿದ್ದಾಗ ಖೋ ಖೋ ಆಟದಲ್ಲಿ ಪ್ರಸಿದ್ಧಿ ಹೊಂದಿದ್ದವಳು.

    ಇದನ್ನೂ ಓದಿ: Paaru Serial: ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳೋಕೆ ರೆಡಿಯಾದ ಅಖಿಲಾಂಡೇಶ್ವರಿ! ಆದಿಗೆ ಎರಡನೇ ಮದುವೆ?

    ಇಂದು ಲೈವ್ ಬರಲಿರುವ ತಂಡ
    ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ 200 ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆ, ಧಾರಾವಾಹಿ ತಂಡವು ಸಂಜೆ 6 ಗಂಟೆಗೆ ಇನ್‍ಸ್ಟಾಗ್ರಾಂ ಲೈವ್‍ನಲ್ಲಿ ಬರಲಿದ್ದಾರೆ. ನಿಮಗೆ ಏನಾದ್ರೂ ಪ್ರಶ್ನೆ ಇದ್ರೆ, ಅವರ ಬಳಿ ಕೇಳಬಹುದು. ಸಂಭ್ರಮವನ್ನು ಹಂಚಿಕೊಳ್ಳಲು ಧಾರಾವಾಹಿ ತಂಡ ಲೈವ್ ಬರುತ್ತೆ.
    Published by:Savitha Savitha
    First published: