• Home
  • »
  • News
  • »
  • entertainment
  • »
  • Puttakkana Makkalu Serial: ಸ್ನೇಹ ಮುಂದೆ ಸಿಕ್ಕಿ ಬೀಳುತ್ತಾನಾ ಕಂಠಿ? ಮತ್ತೆ ಎಲ್ಲಾ ಕಡೆಯಿಂದ ಕಂಟಕ

Puttakkana Makkalu Serial: ಸ್ನೇಹ ಮುಂದೆ ಸಿಕ್ಕಿ ಬೀಳುತ್ತಾನಾ ಕಂಠಿ? ಮತ್ತೆ ಎಲ್ಲಾ ಕಡೆಯಿಂದ ಕಂಟಕ

ಕಂಠಿ

ಕಂಠಿ

ಕಂಠಿ ಹಾಗೂ ಸ್ನೇಹ ಪ್ರೀತಿ ಆರಂಭದಲ್ಲಿ ಬ್ರೇಕಪ್ ಆಗುವ ಸೂಚನೆ ಕೊಡ ಕಾಣಿಸುತ್ತಾ ಇದೆ. ಸ್ನೇಹಾಳ ಪ್ರೀತಿ ಪಡೆಯುವುದಕ್ಕಾಗಿ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿ ಸುಳ್ಳಿನ ಸರಮಾಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ ಬಂಗಾರಮ್ಮನ ಮಗ ಕಂಠಿ.

  • Share this:

    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಕೂಡ ಒಂದು. ಟಿಆರ್ ಪಿ ನಲ್ಲೂ ಮುಂದಿರುವ ಈ ಧಾರಾವಾಹಿ ಪ್ರತಿದಿನ ರೋಚಕ ಟ್ವಿಸ್ಟ್ ಗಳೊಂದಿಗೆ ಮುನ್ನುಗ್ಗುತ್ತಿದೆ. ಮೇಷ್ಟ್ರು ಮತ್ತು ಸುಮಾ ಸೈಲೆಂಟ್ ಲವ್ ಸ್ಟೋರಿ ಇದೀಗ ವೀಕ್ಷಕರಿಗೆ ಅಚ್ಚುಮೆಚ್ಚಾಗಿ ಹೊರಹೊಮ್ಮಿದೆ. ಇತ್ತ ಕಂಠಿ (Kanti) ಹಾಗೂ ಸ್ನೇಹ (Sneha) ಪ್ರೀತಿ ಆರಂಭದಲ್ಲಿ ಬ್ರೇಕಪ್ ಆಗುವ ಸೂಚನೆ ಕೊಡ ಕಾಣಿಸುತ್ತಾ ಇದೆ. ಸ್ನೇಹಾಳ ಪ್ರೀತಿ ಪಡೆಯುವುದಕ್ಕಾಗಿ ಸುಳ್ಳು ಗಳ ಮೇಲೆ ಸುಳ್ಳುಗಳನ್ನು ಹೇಳಿ ಸುಳ್ಳಿನ ಸರಮಾಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ ಬಂಗಾರಮ್ಮನ ಮಗ ಕಂಠಿ.


    ಎಲ್ಲಾ ಕಡೆಗಳಿಂದಲೂ ದುಶ್ಮನ್ ಗಳು ಅಟ್ಯಾಕ್ ಮಾಡುತ್ತಿದ್ದಾರೆ


    ಬಂಗಾರಮ್ಮನ ಮಗ ಕಂಠಿ ಯಾರೆಂಬುದು ತಿಳಿಯದೆ ಹಾಗೆಯೇ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ಇಟ್ಟುಕೊಂಡಿರುವ ಸ್ನೇಹ ಈಗ ಡಮ್ಮಿ ಕಂಠಿಯನ್ನು ಅರೆಸ್ಟ್ ಮಾಡಿಸಿದ್ದಾಳೆ. ಇವೆಲ್ಲದರ ಮಧ್ಯೆ ಕಂಠಿ ಮೇಲೆ ಎಲ್ಲಾ ಕಡೆಗಳಿಂದಲೂ ದುಶ್ಮನ್ ಗಳು ಅಟ್ಯಾಕ್ ಮಾಡುತ್ತಿದ್ದಾರೆ. ಇತ್ತ ಸ್ನೇಹ ಎಲ್ಲರ ಬಳಿ ಬಂಗಾರಮ್ಮನ ಮಗ ಕಂಠಿಯನ್ನು ಅರೆಸ್ಟ್ ಮಾಡಿಸಿದ್ದೇನೆ ಎಂದು ಹೇಳುತ್ತ ಬಂದಿದ್ದಾಳೆ. ಕಂಠಿಯ ಪೇಚಾಟಕ್ಕೆ ಕಾರಣವಾದ ಸ್ನೇಹಾ ಮೇಲೆ ಚೂರೂ ಮುನಿಸು ತೋರ್ಪಡಿಸದ ಕಂಠಿ, ತಾಯಿ ವಿರುದ್ಧ ಕೆಟ್ಟದಾಗಿ ಮಾತನಾಡಿದ ಪೊಲೀಸ್ ಅಧಿಕಾರಿಯ ಮೇಲೆ ಉಗ್ರ ಕೋಪ ತಾಳಿದ್ದಾನೆ.  ಸ್ನೇಹಾ ಹಿಡಿದುಕೊಟ್ಟಿರುವ ಬಂಗಾರಮ್ಮನ ಮಗನೇ ಬೇರೆ. ಎಲ್ಲರೂ ಈ ವಿಚಾರ ಕೆದಕಿದರೆ ಸ್ನೇಹಾ ಕಂಠಿ ಪ್ರೀತಿ ಶುರುವಾಗುವ ಅಂತ್ಯವಾಗುವ ಸೂಚನೆ ದೊರಕುತ್ತಿದೆ.


    ಇದನ್ನೂ ಓದಿ: Hitler Kalyana: ಚಂದ್ರಶೇಖರ್ ಮೇಲಿನ ಕಳಂಕ ತೊಳೆದು ಹಾಕಿದ ಮಿಸ್ಟರ್ ಪರ್ಫೆಕ್ಟ್; ವರ್ಕೌಟ್ ಆದ ದುರ್ಗಾಳ ಪ್ಲಾನ್


    ಪುಟ್ಟಕ್ಕನ ಮೇಲೆ ವಿನಾಕಾರಣ ದ್ವೇಷ ಕಾರುತ್ತಿರುವ ರಾಜೇಶ್ವರಿ


    ಇತ್ತ ಪುಟ್ಟಕ್ಕನ ಮೇಲೆ ವಿನಾಕಾರಣ ದ್ವೇಷ ಕಾರುತ್ತಿರುವ ರಾಜೇಶ್ವರಿಗೆ ಬಂಗಾರಮ್ಮ ಪುಟ್ಟಕ್ಕನ ಮೇಲೆ ತೋರಿಸುವ ಒಲವು ಮತ್ತು ಸಹಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಪುಟ್ಟಕ್ಕನ ಮನೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಮೆಸ್ ನಲ್ಲಿ ತನ್ನ ಕಡೆ ಒಂದು ವ್ಯಕ್ತಿಯನ್ನು ಕೆಲಸಕ್ಕೆ ಕೂಡ ಇರಿಸಿದ್ದಾಳೆ ರಾಜೇಶ್ವರಿ. ಪುಟ್ಟಕ್ಕನ ಬಗ್ಗೆ ಸಣ್ಣ ವಿಚಾರ ಸಿಕ್ಕಿದರೂ ಬಂಗಾರಮ್ಮ ನ ಮನಸ್ಸಿನಲ್ಲಿ ಪುಟ್ಟ ತನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಪ್ರಯತ್ನಿಸುತ್ತಿದ್ದಾಳೆ ರಾಜೇಶ್ವರಿ.


    ಇದನ್ನೂ ಓದಿ: Jothe Jothyali Serial: ಅನು ಬಳಿ ಎಲ್ಲಾ ರಹಸ್ಯ ಹೇಳಿ ಬಿಡುತ್ತಾನಾ ಆರ್ಯವರ್ಧನ್?


    ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಸಹನಾ ಮತ್ತು ಮುರಳಿ ಮೇಷ್ಟ್ರು ಪ್ರೀತಿ


    ಮೇಷ್ಟ್ರು ಮತ್ತು ಸಹನಾನ ಪ್ರೀತಿ ಇದೀಗ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಇದೆ. ತಂಗಿ ಸುಮಾಳಿಗೆ ಮುರಳಿ ಮೇಷ್ಟ್ರಿಗೆ ಅಕ್ಕನ ಮೇಲೆ ಏನೋ ಆಕರ್ಷಣೆ ಇದೆ ಎನ್ನುವ ವಿಚಾರ ಕೂಡ ತಿಳಿದಿದೆ. ಇತ್ತ ಅಕ್ಕ ಕೂಡ ಅವರ ಬಗ್ಗೆ ಏನೋ ಒಲವನ್ನು ಇಟ್ಟುಕೊಂಡಿದ್ದಾಳೆ ಎನ್ನುವುದು ಅಕ್ಕನ ನಡವಳಿಕೆಯಿಂದಲೇ ತಿಳಿಯುತ್ತದೆ. ಇದೇ ಕಾರಣಕ್ಕೆ ಆಗಾಗ ಸಹನಳನ್ನೂ ಸುಮಾ ರೇಗಿಸುತ್ತಾ ಇರುತ್ತಾಳೆ. ಆದಷ್ಟು ಬೇಗ ಅವರಿಬ್ಬರು ಪ್ರೀತಿಯನ್ನು ಹೇಳಿಕೊಳ್ಳಲಿ ಎಂದು ಸುಮಾ ಮತ್ತು ಅವಳ ಗೆಳತಿ ಬಯಸುತ್ತಿದ್ದಾರೆ. ಸಹನಾ ಬಹಳ ಸೈಲೆಂಟ್ ಹುಡುಗಿ. ಮೇಷ್ಟ್ರ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿರುವವರು ಪ್ರೀತಿಯನ್ನು ಹೇಳಿಕೊಳ್ಳುವುದು ಸಂಶಯವೇ ಸರಿ. ಹಿರಿಯ ಮಾಡಿ ಮುರಳಿ ಮೇಷ್ಟ್ರು ಈ ಕೆಲಸಕ್ಕೆ ಕೈ ಹಾಕಬೇಕಷ್ಟೇ. ಇತ್ತ ಮನೆಯಲ್ಲಿ ಅವ್ವ ಸುಮಾಳಿಗೆ ಮದುವೆ ಮಾಡುವ ಯೋಚನೆ ಕೂಡ ಮಾಡಿದ್ದಾರೆ.  ಆದರೆ ಪುಟ್ಟಕ್ಕನಿಗೆ ತಲೆ ನೋವಾಗಿರುವುದು ಗೋಪಾಲನದ್ದೇ. ಗೋಪಾಲ ಬರದೆ ಈ ಮದುವೆ ಕಷ್ಟಸಾಧ್ಯ ಎಂಬುದು ಮದುವೆಗೆ ಸಂಬಂಧ ಹುಡುಕಿದವನ ಅಭಿಪ್ರಾಯ.

    Published by:Swathi Nayak
    First published: