Puttakkana Makkalu: ಪೊಲೀಸ್​ ತಾಂಡವ್ ವಿರುದ್ಧ ಉಗ್ರ ರೂಪತಾಳಿದ ಕಂಠಿ - ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ‌ಬಿಗ್ ಫೈಟ್

ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಸದ್ದು ಮಾಡ್ತಿರೋ ಧಾರಾವಾಹಿ ಎಂದರೆ ಅದು 'ಪುಟ್ಟಕ್ಕನ ಮಕ್ಕಳು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

 'ಕಂಠಿ' ಪಾತ್ರಧಾರಿ ಧನುಷ್

'ಕಂಠಿ' ಪಾತ್ರಧಾರಿ ಧನುಷ್

  • Share this:
    ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಸದ್ದು ಮಾಡ್ತಿರೋ ಧಾರಾವಾಹಿ ಎಂದರೆ ಅದು 'ಪುಟ್ಟಕ್ಕನ ಮಕ್ಕಳು' (Puttakkana makkalu ) ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ (Serial) ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿ ಶುರುವಾದ ಮೊದಲ ವಾರದಿಂದ ಅಧಿಕ ಟಿಆರ್‌ಪಿ (TRP) ಗಳಿಸಿ ಮೊದಲ ಸ್ಥಾನದಲ್ಲಿಯೇ ಇದೆ. ಕೇವಲ ಮನರಂಜನೆಗಷ್ಟೇ ಸೀಮಿತವಾಗಿರದೆ ಸ್ತ್ರೀಶಕ್ತಿ, ಸಾಮಾಜಿಕ ಸಂದೇಶ , ಸಂಬಂಧಗಳ ಮೌಲ್ಯ ಹೀಗೆ ಎಲ್ಲಾ ವಿಭಾಗವನ್ನು ಪ್ರತಿನಿಧಿಸುತ್ತಿದೆ. ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿರುವ ಉಮಾಶ್ರೀ (Umashree) ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈ ಧಾರವಾಹಿಯಲ್ಲಿ ನಟಿಸುತ್ತಿರುವ ಎಲ್ಲ ನಟರ ಅಭಿನಯ ಬಹಳ ಮನೋಜ್ಞವಾಗಿ ಮೂಡಿಬರುತ್ತಿದೆ.

    ಕಂಠಿಗೆ ಮನೆಯ ಬಳಿ ಯಾವುದೇ ಕಾರಣಕ್ಕೂ ಪೊಲೀಸ್ ಹೋಗುವುದು ಇಷ್ಟವಿಲ್ಲ

    ಕಂಠಿ ಮತ್ತು ಸ್ನೇಹಾ ಪ್ರೀತಿಗೆ ಈಗ ದೊಡ್ಡ ವಿಲನ್ ಆಗಿ ಕಾಡುತ್ತಿರುವುದು ಹೊಸದಾಗಿ ಬಂದಿರುವ ಪೊಲೀಸ್. ಕಂಠಿಯನ್ನು ಅರೆಸ್ಟ್ ಮಾಡಲೇ ಬೇಕೆಂದು ಬಂಗಾರಮ್ಮನ ಮನೆಯ ಕಡೆಗೆ ಪಯಣ ಬೆಳೆಸಿದ್ದಾನೆ. ಅದು ಸ್ನೇಹಾ ಮತ್ತು ಕಂಠಿಯನ್ನು ಜೊತೆಗೆ ಕೂರಿಸಿಕೊಂಡು. ಏನೇ ಫ್ಯ್ಲಾನ್ ಮಾಡಿದರು ಪೊಲೀಸ್ ತನ್ನ ಹಠ ಬಿಡುತ್ತಿಲ್ಲ.

    ಕಂಠಿಗೆ ಮನೆಯ ಬಳಿ ಯಾವುದೇ ಕಾರಣಕ್ಕೂ ಪೊಲೀಸ್ ಹೋಗುವುದು ಇಷ್ಟವಿಲ್ಲ. ಆ ಠಾಣೆಯಲ್ಲಿರುವ ಎಲ್ಲಾ ಪೊಲೀಸರಿಗೆ ತಿಳಿದಿರುತ್ತದೆ ಬಂಗಾರಮ್ಮ ಅವರ ಪವರ್ ಹಾಗೆಯೇ ಖದರ್, ಇನ್ನೂ ಬಂಗಾರಮ್ಮ ಅವರ ಮಗನನ್ನು ಅರಸ್ಟ್ ಮಾಡಲು ಬಂದರೆ ಬಿಡ್ತಾರ? ಪೊಲೀಸ್ ಇನ್ಸ್ ಪೆಕ್ಟರ್ ಬರಲಿ ಮನೆಗೆ ಏನು ಕೇಸ್ ಕೊಟ್ಟಿದ್ದಾರೆ ಯಾರು ಕೇಸ್ ಕೊಟ್ಟಿದ್ದಾರೆ ಎಂಬುವುದನ್ನೆಲ್ಲ ತಿಳಿದುಕೊಳ್ಳಬೇಕು ಹಾಗೆಯೇ ತಪ್ಪೆ ಮಾಡದ ನನ್ನ ಮಗನಿಗೆ ಯಾಕೆ ಶಿಕ್ಷೆ ಕೊಡಿಸಬೇಕು ಎಂಬುವುದು ಬಂಗಾರಮ್ಮನ ವಾದ.

    ಇದನ್ನೂ ಓದಿ: Kannadathi Serial: ಹರ್ಷ-ಭುವಿ ಕನ್ನಡದ ಮದುವೆಯಾಗುತ್ತಿದ್ದಾರಂತೆ? ಏನಪ್ಪಾ ಇದರ ವಿಶೇಷತೆ?

    ತಾಂಡವ್ ಕಂಠಿಯನ್ನು ಅರೆಸ್ಟ್ ಮಾಡಲು ಕಾಯುತ್ತಿದ್ದಾನೆ

    ತಾಂಡವ್ ಕಂಠಿಯನ್ನು ಅರೆಸ್ಟ್ ಮಾಡಲು ಕಾಯುತ್ತಿದ್ದಾನೆ, ಕಂಠಿಯನ್ನು ಅರೆಸ್ಟ್ ಮಾಡುತ್ತಾರಾ ಪೊಲೀಸಪ್ಪ? ಇಷ್ಟೆಲ್ಲ ಆದ್ರೂ ಸ್ನೇಹಾಗೆ ಬುದ್ಧಿ ಬಂದಿಲ್ಲ, ಮುಂಗೋಪದಿಂದ ಅಪಾಯಕ್ಕೆ ಸಿಲುಕಿಕೊಳ್ಳುತ್ತಾಳಾ ಸ್ನೇಹ ಎಂದು ಸ್ನೇಹ ತಾಯಿ ಪುಟ್ಟಕ್ಕ ಭಯಗೊಳ್ಳುತ್ತಿರುತ್ತಾಳೆ.

    ಕಾಳಿ ವಿರುದ್ಧ ಕಂಪ್ಲೇಂಟ್ ಕೊಡಲು ಹೋಗಿ ಕಂಠಿ ವಿರುದ್ಧ ಕೂಡ ಸಮರ ಸಾರುತ್ತಿದ್ದಾಳೆ. ಆಕೆಯ ಜೊತೆಗಿದ್ದು ಆಕೆಗೆ ಬೆನ್ನುಲುಬಾಗಿ ನಿಂತ ಕಂಠಿ ಎಂದು ಇದುವರೆಗೂ ಆಕೆಗೆ ತಿಳಿದಿಲ್ಲ. ಕಂಠಿ ಅಂದ್ರೆ ಯಾರು, ಆತನ ಮುಖ ಪರಿಚಯವೇ ಇಲ್ಲ ಸ್ನೇಹಾಗೆ.

    ಇನ್ನೂ ಇತ್ತ ಬಂಗಾರಮ್ಮನ ಮನೆಯಲ್ಲಿ ಪುಟ್ಟಕ್ಕ, ಸಹನಾ ಆಕೆಯ ಚಿಕ್ಕ ಮಗಳು ಇರುತ್ತಾರೆ. ಪುಟ್ಟಕ್ಕ ಗಾಬರಿಯಿಂದ ಏನು ಮಾಡುವುದು ಬಂಗಾರಮ್ಮನ ಮಗನ ವಿರುದ್ಧ ಕಂಪ್ಲೇಂಟ್ ಕೊಟ್ಟಿರುವುದು ಸ್ನೇಹನೇ ಎಂಬ ವಿಚಾರ ಮಾತ್ರ ಪುಟ್ಟಕ್ಕನಿಗೆ ತಿಳಿದಿದೆ.

    ಇದನ್ನೂ ಓದಿ: Yuganthara Serial: ಕಿರುತೆರೆಯಲ್ಲಿ ಐಎಎಸ್ ಅಧಿಕಾರಿ ಕಥೆ - ಯುಗಾಂತರದಲ್ಲಿದೆಯಾ ರೋಹಿಣಿ ಸಿಂಧೂರಿ ಜೀವನಗಾಥೆ?

    ಕಂಠಿ ಮುಖಮುಚ್ಚಿಕೊಂಡು ತಾಂಡವ್‌ಗೆ ಮನಬಂದಂತೆ ಥಳಿಸಿದ್ದಾನೆ

    ಇನ್ಸ್‌ಪೆಕ್ಟರ್ ತಾಂಡವ್ ಹಾಗೂ ಸ್ನೇಹಾ, ಕಂಠಿ , ಒಂದೇ ಜೀಪಿನಲ್ಲಿ ಬಂಗಾರಮ್ಮನ ಮಗನ್ನು ಅರೆಸ್ಟ್ ಮಾಡಲು ಹೋಗುತ್ತಿರುತ್ತಾರೆ.

    ಕಂಠಿಯ ಪೇಚಾಟಕ್ಕೆ ಕಾರಣವಾದ ಸ್ನೇಹಾ ಮೇಲೆ ಚೂರೂ ಮುನಿಸು ತೋರ್ಪಡಿಸದ ಕಂಠಿ, ತಾಯಿ ವಿರುದ್ಧ ಕೆಟ್ಟದಾಗಿ ಮಾತನಾಡಿದ ಪೊಲೀಸ್ ಅಧಿಕಾರಿಯ ಮೇಲೆ ಉಗ್ರ ಕೋಪ ತಾಳಿದ್ದಾನೆ. ಆ ವೇಳೆ ರಸ್ತೆಯಲ್ಲಿ ವಾಗ್ವಾದ ನಡೆಯುತ್ತಿರುತ್ತದೆ. ಅದನ್ನು ಸರಿಪಡಿಸಲು ಪೊಲೀಸ್ ತೆರಳಿದ ವೇಳೆ ಕಂಠಿ ಜೀಪಿನಿಂದ ಇಳಿದು ತನ್ನ ಗೆಳೆಯನಿಗೆ ಕಾಲ್ ಮಾಡುತ್ತಾರೆ.

    ಇತ್ತ ಕಂಠಿ ಗೆಳೆಯ ಮಾರ್ಕೆಟ್​ಗೆ ಬರುವಂತೆ ತಾಂಡವ್‌ನನ್ನು ಕೆರಳಿಸಿದ್ದಾನೆ. ತಾಂಡವ್ ಮಾರ್ಕೆಟ್​ಗೆ ಬರುತ್ತಿದ್ದಂತೆ ಕಂಠಿ ಮುಖಮುಚ್ಚಿಕೊಂಡು ತಾಂಡವ್‌ಗೆ ಮನಬಂದಂತೆ ಥಳಿಸಿದ್ದಾನೆ. ಕಂಠಿ ಉಗ್ರ ಅವತಾರ ನೋಡಿದ ಜನ ದಂಗಾಗಿದ್ದಾರೆ.
    Published by:Swathi Nayak
    First published: