• Home
  • »
  • News
  • »
  • entertainment
  • »
  • Puttakkana Makkalu: ಎಡವಟ್ಟು ಮಾಡಿಕೊಳ್ತಾನಾ ಬಂಗಾರಮ್ಮನ ಮಗ? ಅಷ್ಟಕ್ಕೂ ಏನಾಯ್ತು ಕಂಠಿಗೆ?

Puttakkana Makkalu: ಎಡವಟ್ಟು ಮಾಡಿಕೊಳ್ತಾನಾ ಬಂಗಾರಮ್ಮನ ಮಗ? ಅಷ್ಟಕ್ಕೂ ಏನಾಯ್ತು ಕಂಠಿಗೆ?

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ಕಂಠಿ' ಪಾತ್ರಧಾರಿ ಧನುಷ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ಕಂಠಿ' ಪಾತ್ರಧಾರಿ ಧನುಷ್

ಬಂಗಾರಮ್ಮನವರು ಪುಟ್ಟಕ್ಕ ಮತ್ತು ಸ್ನೇಹಳನ್ನು ಮನೆಗೆ ಊಟಕ್ಕೆ ಕರೆದಿರುತ್ತಾರೆ. ಇತ್ತ ಮೊದಲೇ ಟೆನ್ಷನ್ ನಲ್ಲಿದ್ದ ಕಂಠಿಗೆ ತಾಯಿಯ ಈ ಮಾತನ್ನುಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯ ಸುಳಿಯಿಂದ ಹೇಗಪ್ಪ ಸಹಿಸಿಕೊಳ್ಳುವುದು ಅಂತ ದಾರಿ ಹುಡುಕುತ್ತಿದ್ದರೆ, ಆ ದಾರಿಗೆ ಮತ್ತಷ್ಟು ಜನ ಅಡ್ಡ ಬಂದು ನಿಲ್ಲುತ್ತಿದ್ದಾರೆ. ಮುಂದೇನಾಗುತ್ತೆ?

ಮುಂದೆ ಓದಿ ...
  • Share this:

    ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಸದ್ದು ಮಾಡ್ತಿರೋ ಧಾರಾವಾಹಿ ಎಂದರೆ ಅದು 'ಪುಟ್ಟಕ್ಕನ ಮಕ್ಕಳು'. 'ಪುಟ್ಟಕ್ಕನ ಮಕ್ಕಳು' (Puttakkana Makkalu) ಧಾರಾವಾಹಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಇನ್ನೂ ಈ ಧಾರಾವಾಹಿಯಲ್ಲಿ ಪುಟ್ಟಕ್ಕನ 2ನೇ ಮಗಳು ಸ್ನೇಹ (Sneha) ಪಾತ್ರ ಅತ್ಯಂತ ಪ್ರಮುಖವಾಗಿದೆ. ಸ್ನೇಹಳ ಸಾಧನೆಗೆ ಕಾಲೇಜಿನಲ್ಲಿ ಸನ್ಮಾನ ಮಾಡಿದ್ದಾರೆ. ಈ ಬಗ್ಗೆ ತಿಳಿದ ಬಂಗಾರಮ್ಮನವರು ಪುಟ್ಟಕ್ಕ (Puttakka) ಮತ್ತು ಸ್ನೇಹಳನ್ನು ಮನೆಗೆ ಊಟಕ್ಕೆ ಕರೆದಿರುತ್ತಾರೆ. ಇತ್ತ ಮೊದಲೇ ಟೆನ್ಷನ್ ನಲ್ಲಿದ್ದ ಕಂಠಿಗೆ ತಾಯಿಯ ಈ ಮಾತನ್ನುಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯ ಸುಳಿಯಿಂದ ಹೇಗಪ್ಪ ಸಹಿಸಿಕೊಳ್ಳುವುದು ಅಂತ ದಾರಿ ಹುಡುಕುತ್ತಿದ್ದರೆ, ಆ ದಾರಿಗೆ ಮತ್ತಷ್ಟು ಜನ ಅಡ್ಡ ಬಂದು ನಿಲ್ಲುತ್ತಿದ್ದಾರೆ.


    ಸರಳ ಮತ್ತು ಪೂರ್ವಿ ಕೂಡ ಸೇರಿಕೊಂಡಿದ್ದಾರೆ. ಮನೆಗೆ ಊಟಕ್ಕೆ ಬರುವವರನ್ನು ತಡೆಯಲು ಹೊರಟ ಕಂಠಿಗೆ ಅತ್ತೆ, ಬಾವಿ ಪತ್ನಿ ಆಗಬೇಕಿರುವವಳು ಎದುರಾಗಿದ್ದಾರೆ. ಕಂಠಿಗೆ ಮೊದಲೇ ಟೆನ್ಶನ್ ಇನ್ನು ಇವರಿಂದ ಮತ್ತೆಲ್ಲಿ ಅಪಾಯ ಆಗುತ್ತದೆಯೋ ಎಂಬ ದುಗುಡದಿಂದಲೇ ಮುನ್ನಡೆದಿದ್ದಾನೆ. ಕಂಠಿಗೆ ಈಗ ಮುಂದಿರುವುದು ಪುಟ್ಟಕ್ಕನನ್ನು ತಡೆಯುವುದು. ಅದಕ್ಕಾಗಿಯೇ ಎದುರು ಸಿಕ್ಕಿದ ಸರಳ ಮತ್ತು ಪೂರ್ವಿಯನ್ನು ಅವ್ವನೆದುರಿಗೆ ಪ್ರೀತಿಯಿಂದಲೇ ಮಾತನಾಡಿಸಿದ್ದಾನೆ.


    ಸ್ನೇಹಾಳಿಗೆ ಅವಮಾನ ಮಾಡಲು ಮಾಸ್ಟರ್ ಫ್ಲ್ಯಾನ್


    ಪೂರ್ವಿಗೆ ಬಂಗಾರಮ್ಮ ಸ್ನೇಹಾಳನ್ನು ಊಟಕ್ಕೆ ಕರೆದಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಸ್ನೇಹಾ ಮತ್ತು ಪೂರ್ವಿ ಆಗಾಗ ಎದುರು ಬದುರಾದಾಗ ಸುಮ್ಮನೆ ಹೋದ ದಿನಗಳೆ ಇಲ್ಲ. ಕಂಠಿಗೆ ಪುಟ್ಟಕ್ಕನ ಮೆಸ್ ಊಟ ಎಂದರೆ ಎಲ್ಲಿಲ್ಲದ ಪ್ರೀತಿ. ಅದು ಪೂರ್ವಿಗೆ ಒಂದಷ್ಟು ಕೋಪ ತರಿಸಿದೆ. ಅದಕ್ಕೆ ಸ್ನೇಹಾ ಎಂದರೆ ಕೆಂಡಕಾರುತ್ತಾಳೆ. ಸ್ನೇಹಾಳ ಬಗ್ಗೆ ಕೆಟ್ಟದಾಗಿ ಹೇಳಲು ಹೊರಟು, ಅತ್ತೆ ಮುಂದೆ ಕೆಟ್ಟವಳಾಗಬಾರದು ಎಂಬ ಕಾರಣಕ್ಕೆ ಸುಮ್ಮನಾಗಿ ಬಿಟ್ಟಿದ್ದಾಳೆ. ಆದರೆ ಇದೀಗ ಪುಟ್ಟಕ್ಕನ ಮಕ್ಕಳಲ್ಲಿ ಸ್ನೇಹಾಳನ್ನು ಕೆಡ್ಡಕ್ಕೆ ಕೆಡವಲು ತಯಾರಾಗಿದ್ದಾಳೆ. ಅದೇ ಫ್ಲ್ಯಾನ್ ಮಾಡಿಕೊಂಡು ಸರಳ ಮತ್ತು ಪೂರ್ವಿ, ಬಂಗಾರಮ್ಮನ ಮನೆಗೆ ಬಂದಿದ್ದಾರೆ.


    ಇದನ್ನೂ ಓದಿ: Yamuna Srinidhi: ಯಮುನಾ ಶ್ರೀನಿಧಿ ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು ನೀವೇ ಓದಿ ನೋಡಿ


    ಬಂಗಾರಮ್ಮ ಎಂದರೆ ನಿಜವಾದ ರಾಕ್ಷಸಿ ಎಂದೇ ನಂಬಿರುವ ಸ್ನೇಹಾ, ಆಕೆಯ ಮನೆಗೆ ಔತಣಕೂಟಕ್ಕೆ ಹೋಗುವ ಮಾತೆ ಇಲ್ಲ. ಪುಟ್ಟಕ್ಕ ಆದಷ್ಟು ಸ್ನೇಹಾಳಿಗೆ ಅರ್ಥ ಮಾಡಿಸಲು ಹೊರಟಿದ್ದಾಳೆ.  ತಲೆ ಮೇಲೆ ತಲೆ ಬಿದ್ದರು ಬಂಗಾರಮ್ಮನ ಮನೆಗೆ ಬರಲ್ಲ ಎಂದು ಸ್ನೇಹಾ ಹಠ ತೊಟ್ಟು ಕುಳಿತಿದ್ದಾಳೆ. ಬಂಗಾರಮ್ಮನಲ್ಲಿಯೂ ಮಾನವೀಯತೆಯ ಗುಣ ಹೆಚ್ಚಾಗಿದೆ. ಆಕೆ ಬಡ್ಡಿಯನ್ನೇ ಕೊಟ್ಟರು ಒಳ್ಳೆಯವಳು ಎಂದು ಎಷ್ಟೇ ಹೇಳಿದರು ಸ್ನೇಹಾಳಿಗೆ ಆಕೆ ಮೇಲೆ ಕೋಪ ಹೆಚ್ಚಾಗುತ್ತಾ ಇದೆಯೇ ವಿನಃ ಶಮನವಾಗುತ್ತಿಲ್ಲ. ಬಂಗಾರಮ್ಮ ಕೂಡ ರಾಜೇಶ್ವರಿ ಜೊತೆಗೆ ಸೇರಿಕೊಂಡು, ಊಟ ಹಾಕಿಸಿ ಮನೆ ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾಳೆ ಅಂತ ಪುಟ್ಟಕ್ಕನ ಯೋಚನಾ ಹಾದಿಯ ದಿಕ್ಕನ್ನೇ ತಪ್ಪಿಸಲು ಹೊರಟಿದ್ದಾಳೆ.


    ಇದನ್ನೂ ಓದಿ: Gichi Giligili: ಗಿಚ್ಚಿ ಗಿಲಿಗಿಲಿ ಶೋನಿಂದ ಹೊರಬಂದ ಮಂಜು ಪಾವಗಡ, ಶೋ ಮುಗಿಯೋವರಗೂ ನಾನು ಸಿಂಗಲ್ ಎಂದ ನಿರಂಜನ್


    ಎಡವಟ್ಟು ಮಾಡಿಕೊಳ್ಳುತ್ತಾನಾ ಬಂಗಾರಮ್ಮನ ಮಗ ಕಂಠಿ?


    ಕಂಠಿ ಏನಾದರೊಂದು ಎಡವಟ್ಟು ಮಾಡಿಕೊಳ್ಳುವ ಸೂಚನೆಯೂ ಕಾಣುತ್ತಿದೆ. ಕಾರಣ ಕಂಠಿಗೆ ಅವ್ವ ಮತ್ತು ತಾನೂ ಪ್ರೀತಿಸುತ್ತಿರುವ ಹುಡುಗಿ ಎದುರು ಬದುರಾಗೋದು ಇಷ್ಟವಿಲ್ಲ. ಕಂಠಿಗೆ ಸ್ನೇಹಾ ತಮ್ಮ ಮನೆಗೆ ಬರುತ್ತಿಲ್ಲ ಎಂಬ ವಿಚಾರ ಇನ್ನು ತಿಳಿದಿಲ್ಲ. ಪುಟ್ಟಕ್ಕ ಸಾಕಷ್ಟು ಪ್ರಯತ್ನ ಪಟ್ಟು ಸೋತಿದ್ದಾಳೆ. ಬಂಗಾರಮ್ಮನ ಮನೆಗೆ ಹೋಗಿ ಬರುವುದಕ್ಕೆ ಸ್ನೇಹಾ ಬಿಲ್‌ಕುಲ್ ಒಪ್ಪಲಿಲ್ಲ. ಸ್ನೇಹಾಳಿಗೋಸ್ಕರವೇ ಮಾಡಿರುವ ಔತಣಕೂಟವದು ಸ್ನೇಹಾಳೆ ಇಲ್ಲದೆ ಹೋದರೆ ಪುಟ್ಟಕ್ಕ ಒಬ್ಬರೆ ಹೋಗುವುದಾದರೂ ಹೇಗೆ..? ಹೀಗಾಗಿ ಏನಾದರೊಂದು ಕಾರಣ ಹೇಳಲುಬಹುದು. ಇದು ಇಲ್ಲಿಗೆ ಸಮಸ್ಯೆ ಬಗೆಹರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    Published by:Swathi Nayak
    First published: