• Home
  • »
  • News
  • »
  • entertainment
  • »
  • Paaru Serial: ರಾಣಾ ಬಲೆಯಿಂದ ಪಾರ್ವತಿಯನ್ನು ರಕ್ಷಿಸುತ್ತಾನಾ ಆದಿ? ಮುಂದೆ ಇದೆಯಾ ಬಿಗ್ ಟ್ವಿಸ್ಟ್

Paaru Serial: ರಾಣಾ ಬಲೆಯಿಂದ ಪಾರ್ವತಿಯನ್ನು ರಕ್ಷಿಸುತ್ತಾನಾ ಆದಿ? ಮುಂದೆ ಇದೆಯಾ ಬಿಗ್ ಟ್ವಿಸ್ಟ್

 ಆದಿತ್ಯ

ಆದಿತ್ಯ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಕೂಡ ಒಂದು. ಅಖಿಲಾಂಡೇಶ್ವರಿ ಸೊಸೆಯಾಗಿ ಪಾರ್ವತಿ ಅರಸನಕೋಟೆ ಸೊಸೆಯಾಗಿ ಬಂದ ಬಳಿಕ ಧಾರವಾಹಿಯಲ್ಲಿ ಪ್ರತಿದಿನವೂ ಹೊಸ ಹೊಸ ತಿರುವುಗಳು ಎದುರಾಗುತ್ತಿವೆ.

  • Share this:

    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು (Paaru) ಧಾರಾವಾಹಿ ಕೂಡ ಒಂದು. ಅಖಿಲಾಂಡೇಶ್ವರಿ ಸೊಸೆಯಾಗಿ ಪಾರ್ವತಿ (Parvathi) ಅರಸನಕೋಟೆ ಸೊಸೆಯಾಗಿ ಬಂದ ಬಳಿಕ ಧಾರವಾಹಿಯಲ್ಲಿ ಪ್ರತಿದಿನವೂ ಹೊಸ ಹೊಸ ತಿರುವುಗಳು ಎದುರಾಗುತ್ತಿವೆ. ಈ ಮಧ್ಯೆ ಪಾರ್ವತಿ ಮತ್ತು ಆದಿತ್ಯ (Adhithya) ನಡುವಿನ ಮುದ್ದಾದ ಬಂಧವನ್ನು ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಅತ್ತ ಅಖಿಲಾಂಡೇಶ್ವರಿ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಎಲ್ಲಾ ಕಡೆಗಳಿಂದ ಶತ್ರುಗಳ ಬಲೆಗೆ ಪಾರ್ವತಿ ಬೀಳುತ್ತಿರುವುದು ಪ್ರೇಕ್ಷಕರಿಗೆ ಬೇಸರತಂದಿದೆ. ಕಷ್ಟಗಳನ್ನೆಲ್ಲ ತನ್ನ ಮನದಲ್ಲಿ ಇರಿಸಿಕೊಂಡು ನಗುಮುಖದಲ್ಲಿ ಪಾರ್ವತಿ ತನ ಜವಾಬ್ದಾರಿಗಳು ನಿಭಾಯಿಸುತ್ತಿರುವ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬರುತ್ತಿವೆ.


    ರಾಣ ರಣತಂತ್ರಕ್ಕೆ ಬಲಿಯಾಗುತ್ತಾಳಾ ಪಾರ್ವತಿ


    ಈಗಾಗಲೇ ಹಲವಾರು ಬಾರಿ ಪಾರ್ವತಿಯನ್ನು ಅಸ್ತ್ರವಾಗಿತ್ತು ಕೊಂಡು ಅರಸನಕೋಟೆ ಮೇಲೆ ತನ್ನ ದ್ವೇಷವನ್ನು ಸಾಧಿಸಿಕೊಳ್ಳುತ್ತಿರುವ ರಾಣ ಮತ್ತು ಅರುಂಧತಿ ಇದೀಗ ಪಾರ್ವತಿ ಮುಖದ ಮೇಲೆ ಆಸಿಡ್ ಹಾಕುವ ಕೆಟ್ಟ ಆಲೋಚನೆಗೆ ತಯಾರಾಗಿದ್ದಾನೆ.


    ಮನೆಯಿಂದ ಪಾರ್ವತಿ ಪ್ರೀತಮ್ ಮತ್ತು ಆದಿತ್ಯ ಜೊತೆಯಾಗಿ ಹೊರಟಿದ್ದಾರೆ ಈ ಮಧ್ಯೆ ಪ್ರೀತಮ್ ಸಹಿಯಾಗಬೇಕು ಎಂದು ಆಫೀಸ್ ನಿಂದ ಫೋನ್ ಬಂದಾಗ ಪಾರ್ವತಿ ದಾರಿ ಮಧ್ಯದಲ್ಲಿ ಇಳಿದು ಮಾರ್ಕೆಟ್ ಕಡೆಗೆ ಹೋಗುತ್ತಿದ್ದಾಳೆ.


    ಇದೇ ಸಂದರ್ಭ ರಾಣ ಬಳಸಿಕೊಂಡು ಮಾರ್ಕೆಟ್ ಕಡೆಗೆ ಹೋಗುತ್ತಿರುವ ಪಾರ್ವತಿಯ ಬಳಿ ಅಡ್ರೆಸ್ ಕೇಳುವ ನೆಪದಲ್ಲಿ ಬೈಕ್ ನಿಲ್ಲಿಸಿದ್ದಾನೆ ಅಷ್ಟೇ ಅಲ್ಲದೆ ಪಾರ್ವತಿ ಮೇಲೆ ಆಸಿಡ್ ಹಾಕಲು ತಯಾರಾಗಿದ್ದಾನೆ.


    ಇದನ್ನೂ ಓದಿ: Gattimela Serial: ಧ್ರುವನ ಪ್ರೀತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅದಿತಿ! ಮುಂದಿದೆ ಬಿಗ್ ಟ್ವಿಸ್ಟ್?


    ಪಾರ್ವತಿಯನ್ನು ಪಾರು ಮಾಡುತ್ತಾನಾ‌ ಆದಿ


    ಈ ಮಧ್ಯೆ ಪಾರ್ವತಿ ಗಡಿಬಿಡಿಯಲ್ಲಿ ತನ್ನ ಫೋನ್ ಅನ್ನು ಕಾರಿನಲ್ಲಿ ಬಿಟ್ಟು ಬಂದಿದ್ದಾಳೆ. ಕಾರಿನ ಹಿಂಬದಿ ಸೀಟಿನಲ್ಲಿ ಇರುವ ಫೋನ್ ಈಗಾಗಲೇ ಪ್ರೀತಮ್ ಕಣ್ಣಿಗೆ ಬಿದ್ದಿದೆ. ಅದನ್ನು ಆಕೆಗೆ ಕೊಡಲು ಮರಳಿ ಪಾರ್ವತಿ ಇರುವ ಕಡೆಗೆ ಹೋಗುತ್ತಾರಾ ಆದಿ ಮತ್ತು ಪ್ರೀತಮ್ ಎನ್ನುವ ಬಗ್ಗೆ ಇಂದಿನ ಸಂಚಿಕೆಯ ತಿಳಿಯಬಹುದು.


    ಈ ಬಾರಿ ಆದಿ ಮತ್ತು ಪ್ರೀತಮ್ ಮುಂದೆ ರೆಡ್ ಹ್ಯಾಂಡಾಗಿ ರಾಣ ಸಿಕ್ಕಿಹಾಕಿಕೊಳ್ಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿದೆ. ಪಾರ್ವತಿ ರಾಯಭಾರಿ ಆಗದಂತೆ ತಡೆಯಲು ರಾಣ ಮಾಡಿದಂತಹ ಎಲ್ಲಾ ಪ್ಲಾನ್ಗಳು ಆದಿ ಹಾಗೂ ಪ್ರೀತಮ್ ಮುಂದೆ ಬದಲಾಗಬಹುದು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.


    ಇದನ್ನೂ ಓದಿ: Hitler Kalyana Serial: ಎಜೆ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ತಾನಾ ದೇವ್? ಮುಂದಿದೆ ಬಿಗ್ ಟ್ವಿಸ್ಟ್


    ದಾಮಿನಿಯ ಕುತಂತ್ರಕ್ಕೆ‌ ಜನನಿ-ಪಾರ್ವತಿ ಸ್ನೇಹ ಬಲಿ


    ಈ ಹಿಂದೆ ಅರಸನ ಕೋಟೆಯ ಕಂಪನಿಯ ರಾಯಭಾರಿಯಾಗಿದ್ದಳು ಪಾರ್ವತಿ. ಆದರೆ ಈ ಬಾರಿ ಅಖಿಲಾಂಡೇಶ್ವರಿ ಈಗ ರಾಯಭಾರಿ ಪಟ್ಟವನ್ನು ಮನೆಯ ಕಿರಿಯ ಸೊಸೆ ಜನನಿಗೆ ಕೊಡುವುದಾಗಿ ನಿಶ್ಚಯಿಸಿದ್ದರು.


    ಈ ವಿಚಾರವಾಗಿ ಪಾರ್ವತಿಗೆ ಕೂಡ ಸಂತೋಷವಾಗಿತ್ತು ಆದರೆ ದಾಮಿನಿ ಕುತಂತ್ರದಿಂದ ಜನನಿ ಮತ್ತು ಪಾರ್ವತಿ ನಡುವೆ ಭಿನ್ನಾಭಿಪ್ರಾಯ ಗಳನ್ನು ತಂದು ಇಟ್ಟಿದ್ದಾಳೆ. ಅಷ್ಟೇ ಅಲ್ಲದೆ ಜನನಿಯ ಮೇಕಪ್ ಅನ್ನು ಕೂಡ ಹಾಳು ಮಾಡಿ ಅಪವಾದವನ್ನು ಪಾರ್ವತಿ ಮೇಲೆ ಹಾಕಿದ್ದಾಳೆ ದಾಮಿನಿ. ಇದರ ಜೊತೆಗೆ ಫೋಟೋಶೂಟ್ ಕ್ಯಾನ್ಸಲ್ ಆಗಿದೆ ಎಂದು ದಾಮಿನಿ ಹೇಳಿಸಿ ಅದು ಕೂಡ ಪಾರ್ವತಿ ಹೇಳಿಸಿದ್ದಾಳೆ ಎನ್ನುವಂತೆ ಜನನಿಯ ಮನದಲ್ಲಿ ತುಂಬಿಸಿ ಬಿಟ್ಟಿದ್ದಾಳೆ ದಾಮಿನಿ.


    ಇದೇ ವಿಚಾರವಾಗಿ ಜನನಿ ಪಾರ್ವತಿ ಮೇಲೆ ಕೋಪಿಸಿಕೊಂಡು ಆಕೆಯ ಫೋಟೋ ಒಂದನ್ನು ಕೂಡ ಸುಟ್ಟು ಹಾಕಿದ್ದಾಳೆ. ಈ ಹಿಂದೆ ಹಲವಾರು ಬಾರಿ ಜನನಿ ಮತ್ತು ಪಾರ್ವತಿ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಡುವುದು ದಾಮಿನಿ ಯಶಸ್ವಿಯಾಗಿದ್ದಳು. ಇದೀಗ ಮತ್ತೆ ಇದೇ ತಂತ್ರವನ್ನು ಬಳಸಿಕೊಂಡು ಜನನಿ ಮೇಲೆ ಪಾರ್ವತಿಯನ್ನು ದ್ವೇಷ ಮನೋಭಾವವನ್ನು ಬೆಳೆಸಿಕೊಳ್ಳಲು ಕಾರಣಳಾಗಿದ್ದಾಳೆ ದಾಮಿನಿ.

    Published by:Swathi Nayak
    First published: