Paaru Serial: ದುಷ್ಟರ ಜಾಲಕ್ಕೆ ಸಿಲುಕಿ ಮೋಸ ಹೋಗ್ತಾಳಾ ಪಾರು? ಅಖಿಲಾಂಡೇಶ್ವರಿ ಸೊಸೆಯ ಮುಂದೆ ಸವಾಲುಗಳ ಸರಮಾಲೆ

ಪಾರ್ವತಿಯ ಒಳ್ಳೆತನವನ್ನು ಉಪಯೋಗಿಸಿಕೊಂಡು ದುಷ್ಟರು ಅವಳನ್ನು ಮೋಸದ ಜಾಲಕ್ಕೆ ತುಳುಕಿಸುವ ಹುನ್ನಾರ ಹೂಡಿದ್ದಾರೆ. ಈ ವಿಚಾರವಾಗಿ ಮುಂದೇನು ಹೊಸ ತಿರುವು ಬರುವ ಸಾಧ್ಯತೆ ಇದೆ ಎಂದು ಇನ್ನು ಕಾದುನೋಡಬೇಕಿದೆ.

ಪಾರು

ಪಾರು

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು (Paaru) ಕೂಡ ಒಂದು. ಇದೀಗ ಅಖಿಲಾಂಡೇಶ್ವರಿ ಯ ಮನೆಯ ಸೊಸೆಯಾಗಿ ಪಾರು ಬಂದ ಬಂದ ಪ್ರತಿದಿನ ಹೊಸ ಹೊಸ ತಿರುವುಗಳನ್ನು ಮುನ್ನುಗ್ಗುತ್ತಿದೆ. ಅಖಿಲಾಂಡೇಶ್ವರಿ ನೀಡಿದ ಎಲ್ಲಾ ಟಾಸ್ಕ್ ಗಳಲ್ಲಿ ಪಾರ್ವತಿ (Parvathi) ಯಶಸ್ವಿಯಾಗಿ ಗೆದ್ದಿದ್ದಾಳೆ. ಇದೀಗ ಪಾರ್ವತಿ ಅರಸನಕೋಟೆ (Arasana Kote) ಮನೆಗೆ ತಕ್ಕಂತೆ ತನ್ನ ವೇಷಭೂಷಣವನ್ನು ಕೂಡ ಬದಲಾಯಿಸಿದ್ದಾಳೆ. ಪಾರ್ವತಿ ಮೇಲೆ ಇದೀಗ ದುಷ್ಟರ ಕಣ್ಣು ಬಿದ್ದಿದೆ. ಪಾರ್ವತಿಯ ಒಳ್ಳೆತನವನ್ನು ಉಪಯೋಗಿಸಿಕೊಂಡು ದುಷ್ಟರು ಅವಳನ್ನು ಮೋಸದ ಜಾಲಕ್ಕೆ ತುಳುಕಿಸುವ ಹುನ್ನಾರ ಹೂಡಿದ್ದಾರೆ. ಈ ವಿಚಾರವಾಗಿ ಮುಂದೇನು ಹೊಸ ತಿರುವು ಬರುವ ಸಾಧ್ಯತೆ ಇದೆ ಎಂದು ಇನ್ನು ಕಾದುನೋಡಬೇಕಿದೆ.

    ಅಗ್ರಿಮೆಂಟ್ ಗೆ ಸಹಿ ಹಾಕುತ್ತಾಳಾ ಪಾರು

    ಅಖಿಲಾಂಡೇಶ್ವರಿ ಅನುಮತಿ ಪಡೆದು ಇದೀಗ ಪಾರು ದೇವಸ್ಥಾನಕ್ಕೆ ಹೋಗಿದ್ದಾಳೆ. ಆದರೆ ಈ ಮಧ್ಯೆ ಜನನಿಯನು ಕೂಡ ತನ್ನ ಜೊತೆ ಕರೆದುಕೊಂಡು ಹೋಗುವಾಗ ಹೇಳಿದಾಗ ಪಾರ್ವತಿ ಸುಳ್ಳು ಹೇಳಿ ತಾನೊಬ್ಬಳೆ ದೇವಸ್ಥಾನಕ್ಕೆ ಹೋಗುತ್ತಾಳೆ. ಈ ಮೊದಲೇ ಜನನಿಗೆ ಪಾರ್ವತಿ ಮೇಲೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿರುವುದರಿಂದ ಪಾರು ನಡತೆಯು ಜನನಿಗೆ ಸಂಶಯಾಸ್ಪದವಾಗಿ ಅನಿಸುತ್ತದೆ. ಇದೇ ಕಾರಣಕ್ಕೆ ಪಾರ್ವತಿಯನ್ನು ಹಿಂಬಾಲಿಸಿಕೊಂಡು ಜನನಿ ಕೂಡ ದೇವಸ್ಥಾನಕ್ಕೆ ಹೋಗುತ್ತಾಳೆ. ಇತ್ತ ದೇವಸ್ಥಾನಕ್ಕೆ ಪಾರ್ವತಿ ತೆರಳಿ ಹೊರಗೆ ಕಾಯುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ದುಷ್ಟರು ಕಳಿಸಿರುವ ಇಬ್ಬರು ಯುವತಿಯರು ಕೂಡ ಆಗಮಿಸುತ್ತಾರೆ. ಅನಾಥಾಶ್ರಮದವರೆಂದು ಕೇಳಿಕೊಂಡು ಬಂದ ಈ ಯುವತಿಯರು ಕಾರಿನಲ್ಲಿ ಬಂದಿರುವುದನ್ನು ಕಂಡು ಪಾರ್ವತಿಗೆ ಸಂಶಯ ಕೂಡ ಬರುತ್ತದೆ.

    ಇತ್ತ ದೇವಸ್ಥಾನಕ್ಕೆ ಪಾರ್ವತಿ ತೆರಳಿ ಹೊರಗೆ ಕಾಯುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ದುಷ್ಟರು ಕಳಿಸಿರುವ ಇಬ್ಬರು ಯುವತಿಯರು ಕೂಡ ಆಗಮಿಸುತ್ತಾರೆ. ಅನಾಥಾಶ್ರಮದವರೆಂದು ಕೇಳಿಕೊಂಡು ಬಂದ ಈ ಯುವತಿಯರು ಕಾರಿನಲ್ಲಿ ಬಂದಿರುವುದನ್ನು ಕಂಡು ಪಾರ್ವತಿಗೆ ಸಂಶಯ ಕೂಡ ಬರುತ್ತದೆ. ಡೊನೇಶನ್ ಅಗ್ರಿಮೆಂಟ್ ಇಂಗ್ಲಿಷ್ನಲ್ಲಿ ಇರುವುದರಿಂದ ಪಾರ್ವತಿ ಇದೀಗ ಅದಕ್ಕೆ ಸಹಿ ಹಾಕಲು ಹಿಂದೆ-ಮುಂದೆ ನೋಡಿದ್ದಾಳೆ.

    ಇದನ್ನೂ ಓದಿ: Puttakkana Makkalu Serial: ಸ್ನೇಹ ಮುಂದೆ ಸಿಕ್ಕಿ ಬೀಳುತ್ತಾನಾ ಕಂಠಿ? ಮತ್ತೆ ಎಲ್ಲಾ ಕಡೆಯಿಂದ ಕಂಟಕ

    ಜನನಿಯ ದೃಷ್ಟಿಯಲ್ಲಿ ಪಾರು ಅನ್ನು ವಿಲನ್ ತರ ಮಾಡಿಸುತ್ತಿದ್ದಾಳೆ ದಾಮಿನಿ

    ಜನನಿಯ ಮನಸ್ಸನ್ನು ಕೆಡಿಸುತ್ತಿದ್ದಾಳೆ ದಾಮಿನಿ . ಮನಸ್ಸಿನಲ್ಲಿ ಜನನಿತ ತುಂಬಾ ಮುಗ್ದೆ. ಪಾರು ಮೇಲೆ ಅಕ್ಕರೆಯ ಜೊತೆಗೆ ಆಕೆಗೆ ಪ್ರೀತಿ ಕೂಡ ಹೆಚ್ಚೆ ಇದೆ. ಆದರೆ ದಾಮಿನಿಯ ಕುತಂತ್ರದಿಂದ ಇದೀಗ ಅವರಿಬ್ಬರ ನಡುವಿನ ಸ್ನೇಹ ಬಿರುಕು ಮೂಡುವಂತೆ ಕಾಣಿಸುತ್ತಿದೆ. ಜನನಿ ಮತ್ತು ಪಾರು ನಡುವಿನ ಸ್ನೇಹವನ್ನು ದ್ವೇಷವಾಗಿ ಬದಲಾಯಿಸಲು ದಾಮಿನಿ ಹರಸಾಹಸಪಡುತ್ತಿದ್ದಾಳೆ. ಪಾರು ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿ ಜನನಿಯ ದೃಷ್ಟಿಯಲ್ಲಿ ಪಾರು ಅನ್ನು ವಿಲನ್ ತರ ಮಾಡಿಸುತ್ತಿದ್ದಾಳೆ ದಾಮಿನಿ. ಇನ್ನೂ ಅಧಿಕಾರದ ಆಸೆಗೋಸ್ಕರ ದಾಮಿನಿ ಏನು ಮಾಡಲು ಸಿದ್ಧಳಿದ್ದಾಳೆ, ಪಾರುವನ್ನು ಅಖಿಲಾಂಡೆಶ್ವರಿ ಸ್ಥಾನದಲ್ಲಿ ಕೂರಿಸಿದರೆ ಜನನಿಗೆ ಮನೆಯಲ್ಲಿ ಏನು ಸ್ಥಾನ ಎನ್ನುವುದರ ಬಗ್ಗೆ ಯಾಮಿನಿ ಈಗಾಗಲೇ ಜನನಿ ತಲೆಗೆ ತುಂಬಿದ್ದಾಳೆ.  ಆದರೆ ಇದರ ಅರಿವು ಜನನಿಗಾಗಲಿ, ಪಾರುಗಾಗಲಿ ಇಲ್ಲ.

    ಇದನ್ನೂ ಓದಿ: Jothe Jothyali Serial: ಅನು ಬಳಿ ಎಲ್ಲಾ ರಹಸ್ಯ ಹೇಳಿ ಬಿಡುತ್ತಾನಾ ಆರ್ಯವರ್ಧನ್?

    ದುಷ್ಟರ ತಂತ್ರಕ್ಕೆ ಈಗ ಪಾರ್ವತಿ ಬಲಿಯಾಗುತ್ತಾಳಾ ಪಾರ್ವತಿ

    ದುಷ್ಟರ ತಂತ್ರಕ್ಕೆ ಈಗ ಪಾರ್ವತಿ ಬಲಿಯಾಗುತ್ತಾಳಾ ಎಂದು ನೋಡಬೇಕಿದೆ. ಈ ಹಿಂದೆ ಹಲವು ವಿಚಾರಗಳಲ್ಲಿ ಅಖಿಲಾಂಡೇಶ್ವರಿ ಅಮೇಲೆ ಸಿಟ್ಟಿನಲ್ಲಿ ಎಲ್ಲಾ ರೀತಿಯ ತಂತ್ರಗಳನ್ನು ಮಾಡಿ ಸೋತು ಹೋಗಿರುವ ದುಷ್ಟರು ಇದೀಗ ಮತ್ತೆ ಮಗಳ ಸಾವಿಗೆ ಕಾರಣವಾದ ಅಖಿಲಾಂಡೇಶ್ವರಿ ಮತ್ತು ಅವರ ಮನೆಯವರನ್ನು ಸುಮ್ಮನೆ ಬಿಡುತ್ತಾರಾ ಎಂದು ಕಾದು ನೋಡಬೇಕಿದೆ
    Published by:Swathi Nayak
    First published: