ಕನ್ನಡ ಕಿರುತೆರೆಯ (Kannada Small Screen) ಎಲ್ಲಾ ಧಾರವಾಹಿಗಳು ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡಿ ಸಿನಿಮಾದ ಗುಣಮಟ್ಟದಲ್ಲಿ ಧಾರಾವಾಹಿಗಳನ್ನು ಚಿತ್ರೀಕರಣ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಸಾಲಿನಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಪಾರು (Paaru) ಧಾರವಾಹಿ ಕೂಡ ಒಂದು. ಇದೀಗ ಪಾರುವನ್ನು ಹೊಸ ಅವತಾರದಲ್ಲಿ ನೋಡಿದ ಜನ ಖುಷಿಯಾಗಿದ್ದಾರೆ. ಅಖಿಲಮ್ಮ (Akhilamma) ಕೊಟ್ಟ ಎಲ್ಲಾ ಟಾಸ್ಕ್ಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾಳೆ ಪಾರು. ಇನ್ನು ಪಾರುಗೆ ಸಾಥ್ ಕೊಡುತ್ತಿರುವ ಪಾರು ಗಂಡ ಆದಿಯಂತು ಎಲ್ಲರಿಗೂ ಅಚ್ಚುಮೆಚ್ಚು. 'ಪಾರು' ಈಗ ಮನೆ ಮನೆಯ ಮುದ್ದಿನ ಮಗಳು ಅಷ್ಟೇ ಅಲ್ಲ ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆ.
ಆತ್ಮ ವಿಶ್ವಾಸ ತುಂಬಲು ಪ್ರೀತು-ಜನನಿ ನಾಟಕ
ಹರ್ಬಲ್ ಸೋಪ್ ಅನ್ನು ಮಾರ್ಕೆಟಿಗೆ ಬಿಡುವ ಯೋಚನೆಯಲ್ಲಿದ್ದ ಅಖಿಲಾಂಡೇಶ್ವರಿ 300 ಕೋಟಿ ಹೂಡಿಕೆದಾರರನ್ನು ಹುಡುಕುವ ಕೆಲಸವನ್ನು ನೀಡಿದ್ದರು. ನಾಯಕಿ ಪಾರು ಮನದಲ್ಲಿ ಆತ್ಮ ವಿಶ್ವಾಸ ತುಂಬಲು ಪ್ರೀತು, ಜನನಿ ಒಂದು ನಾಟಕ ಆಡುತ್ತಾರೆ.
ಜನನಿಯ ಕೆನ್ನೆಗೆ ಪ್ರೀತು ಬಾರಿಸುತ್ತಾನೆ ಈ ವೇಳೆ ಆಗಮಿಸಿದ ಆದಿ ಪಾರ್ವತಿ ಇದನ್ನು ತಡೆಯುತ್ತಾಳೆ, ಪ್ರೀತು ಯಾಕೆ ಜನನಿಯ ಮೇಲೆ ಕೈ ಎತ್ತಿದ್ದಾನೆ ಎಂಬುವುದನ್ನು ಪಾರು ಕೇಳುತ್ತಾಳೆ. ಅದಕ್ಕೆ ಜನನಿ ನಾನು ಮಾಡಿದ ಶಾಪಿಂಗ್ ಬಗ್ಗೆ ಲೆಕ್ಕ ನೀಡಬೇಕಂತೆ ನಾನು ನೀಡಿಲ್ಲ ಅದಕ್ಕೆ ಹೊಡೆದರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಅವನು ಕೇಳಿದ ಪ್ರಶ್ನೆ ಸರಿಯಾಗಿತ್ತು.
ಅದಕ್ಕೆ ಹೇಳಬಹುದಿತ್ತಲ್ಲ ಎಂದಾಗ ಜನನಿ ಹೇಳುತ್ತಾಳೆ, ಅವನು ಲೆಕ್ಕ ಕೇಳಿರುವುದು ನಿಜವಾದರೆ ಹೂಡಿಕೆದಾರರು ಕೇಳಿದ ಪ್ರಶ್ನೆಯೂ ಸರಿಯಾಗಿತ್ತಲ್ಲ, ನೀವು ಯಾಕೆ ಉತ್ತರಿಸಿಲ್ಲ, ಹೂಡಿಕೆದಾರರು ಹೂಡಿಕೆ ಮಾಡುವಾಗ ನಿಮ್ಮನ್ನು ನಂಬಿ ಹೂಡಿಕೆ ಮಾಡಬೇಕಾಗುತ್ತದಲ್ಲ, ನಿಮ್ಮ ಮೇಲೆ ನಂಬಿಕೆ ಇಲ್ಲದೇ ಯಾಕೆ ಅವರು ಹೂಡಿಕೆ ಮಾಡುತ್ತಾರೆ ಎಂದು ಹೇಳುತ್ತಾಳೆ, ಆ ವೇಳೆ ಪಾರುಗೆ ಅರ್ಥವಾಗುತ್ತದೆ, ಪಾರುಗೆ ಇದನ್ನು ಅರ್ಥಮಾಡಿಕೊಳ್ಳಲು ಜನನಿ ಹಾಗೂ ಪ್ರೀತು ನಾಟಕವಾಡಿದ್ದು ಎಂದು. ಇದನ್ನೆಲ್ಲ ನೋಡಿದ ಪಾರ್ವತಿಗೆ ಕುಗ್ಗಿರುವ ಆತ್ಮವಿಶ್ವಾಸ ಇನ್ನೂ ಹೆಚ್ಚಾಗುತ್ತದೆ.
ಇದನ್ನೂ ಓದಿ: Sandalwood: ಮದ್ವೆಯಾಗಿ ಎರಡೇ ದಿನಕ್ಕೆ ಶೂಟಿಂಗ್ಗೆ ಹೊರಟ ತಾರಾ ಜೋಡಿ; ನಾವ್ ಹೇಳ್ತಿರೋದು 'ಪುರಾಣ' ಅಲ್ಲ ರೀ, ಸತ್ಯ ಕಥೆ!
ಅಖಿಲಾಂಡೇಶ್ವರಿ ವಿಶ್ವಾಸಕ್ಕೆ ಪುನಃ ಪಾತ್ರಳಾಗುತ್ತಾಳಾ ಪಾರು?
ಇನ್ನೂ ಪುನಃ ಪಾರು ಹೂಡಿಕೆದಾರರನ್ನು ಮನೆಗೆ ಕರೆಯಿಸಿಕೊಂಡು ಮೀಟಿಂಗ್ ಮಾಡುತ್ತಾಳೆ. ಇದನ್ನೆಲ್ಲ ಅಖಿಲಾಂಡೇಶ್ವರಿ ಮರೆಯಲ್ಲಿ ಕುಳಿತು ನೋಡುತ್ತಿರುತ್ತಾಳೆ. ಏನೇ ಸಮಸ್ಯೆ ಆದ್ರೂ ನಾವೇ ಜವಾಬ್ದಾರಿ, ಈ ವ್ಯಾಪಾರದಲ್ಲಿ ನಷ್ಟ ಆದ್ರೂ ಅದರ ಹೊಣೆ ನಮ್ಮದಾಗಿರುತ್ತದೆ. ಹೂಡಿಕೆದಾರರು ಕೇಳುತ್ತಾರೆ ನಾವು ಯಾಕೆ ನೀವು ತಯಾರಿಸುವ ಪ್ರೊಡಕ್ಟ್ ಮೇಲೆ ಹಣ ಇನ್ವೆಸ್ಟ್ ಮಾಡಬೇಕು ಎಂದಾಗ ಪಾರು ಹೇಳುತ್ತಾ,ಳೆ ಹಣ ಗಳಿಸುವುದಕ್ಕೋಸ್ಕರ ಎಂದು ಅದಕ್ಕೆ ಇನ್ನೊಬ್ಬರು ಕೇಳುತ್ತಾರೆ ದುಡ್ಡೆ ಮುಖ್ಯಾಂತನ ನಿಮ್ಮ ಮಾತಿನ ಅರ್ಥ ಎಂದಾಗ, ಪಾರು ಅಲ್ಲ ಆದ್ರೆ ನಂಬಿಕೆ ವ್ಯವಹಾರ ಇದ್ರು ಕೊನೆಗೆ ಬೇಕಾಗುವುದು ಹಣ ಅಲ್ವಾ ಎನ್ನುತ್ತಾಳೆ. ನಾವು ಮುಖದ ಮೇಲಿನ ಬಂಗು ಮೊಡವೇ ನಿವಾರಿಸಲು ಸೋಪ್ ರೆಡಿ ಮಾಡುತ್ತಿದ್ದೇವೆ, ಅದಕ್ಕೆ ಬೇಕಾಗುವ ಎಲ್ಲದರ ಜವಾಬ್ದಾರಿಯೂ ನಮ್ಮದೇ ಆಗಿರುತ್ತದೇ. ಪ್ರಾರಂಭದ ಹೂಡಿಕೆಯೂ ನಮ್ಮದೇ ಆಗಿರುತ್ತದೆ. ನೀವು ಹಾಕುವ ಹಣನ ನಾವೂ ವಾಪಸ್ ಮಾಡುತ್ತೇವೆ.
ಇದನ್ನೂ ಓದಿ: Manasa Manohar: ಎಂಬಿಎ ಮಾಡಿ ನಟನಾ ಕ್ಷೇತ್ರಕ್ಕೆ ಬಂದ ಮೀರಾ - ಮಾನಸ ಮನೋಹರ ಲೈಫ್ ಸ್ಟೋರಿ
ಹೂಡಿಕೆದಾರರಿಗೆ ಖಡಕ್ ಆಗಿ ಧೈರ್ಯ ನೀಡುವ ಪಾರು
ಉತ್ಪಾದನೆಗೆ ಬಳಸುವ ಎಣ್ಣೆ ಪರಿಶುದ್ಧವಾಗಿರುತ್ತದೆ. ಈಗ ಹೇಳಿ ಹಣ ಹೂಡಿಕೆ ಮಾಡುತ್ತಿರಾ, ಒಪ್ಪಿಕೊಂಡರೇ ಖುಷಿ ಬಂದ ಲಾಭದಲ್ಲಿ 60% ನಿಮ್ಮದಾಗುತ್ತದೆ. ಹೂಡಿಕೆ ಮಾಡಿದ್ರೆ ಖುಷಿ, ಇಲ್ಲವಾದರೆ ಬೇರೆಯವರು ನಿಮ್ಮ ಜಾಗದಲ್ಲಿ ಕೂರುತ್ತಾರೆ ಎಂದು ಪಾರು ಖಡಕ್ ಆಗಿ ಹೇಳುತ್ತಾಳೆ, ಇದನ್ನು ಕೇಳಿದ ಹೂಡಿಕೆದಾರರು ಚಪ್ಪಾಳೆ ತಟ್ಟುತ್ತಾರೆ. ಪಾರು ಬಳಿ ಇರುವ ಪಾಡೆಕ್ಟ್ಗೆ ಇನ್ವೆಸ್ಟ್ ಮಾಡಲು ಒಪ್ಪಿಕೊಳ್ಳುತ್ತಾರೆ. ಇದನ್ನು ಕಂಡ ಅಖಿಲಾಂಡೇಶ್ವರಿಗೆ ಬಹಳ ಖುಷಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ