Paaru Serial: 900 ಎಪಿಸೋಡ್ ಕಂಪ್ಲೀಟ್ ಮಾಡಿದ ಪಾರು! ಮುಂದೇನಾಗುತ್ತೆ ಅನ್ನೋ ಕೌತುಕ

ಇದೀಗ 'ಪಾರು' ಧಾರಾವಾಹಿ 900 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿದೆ. 'ಪಾರು' ಈಗ ಮನೆ ಮನೆಯ ಮುದ್ದಿನ ಮಗಳು. ಅಷ್ಟೇ ಅಲ್ಲ ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆ. 

ಪಾರು

ಪಾರು

 • Share this:
  ಕನ್ನಡ ಕಿರುತೆರೆಯ ಎಲ್ಲಾ ಧಾರಾವಾಹಿಗಳು ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡಿ ಸಿನಿಮಾದ ಗುಣಮಟ್ಟದಲ್ಲಿ ಧಾರಾವಾಹಿಗಳನ್ನು ಚಿತ್ರೀಕರಣ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಸಾಲಿನಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಪಾರು (Paaru Serial) ಧಾರವಾಹಿ ಕೂಡ ಒಂದು. ಸಿನಿಮಾದಲ್ಲಿ ಫೇಮಸ್ ಆಗಿರುವ ನಟಿ ವಿನಯಪ್ರಸಾದ್ (Vinaya Prasad), ಎಸ್ ನಾರಾಯಣ್ (S. Narayan) ಮುಂತಾದ ಪ್ರತಿಭಾವಂತ ಹಿರಿಯ ಕಲಾವಿದರ ನಟನೆಯಿಂದಾಗಿ ಜನಮನ ಗೆದ್ದಿದೆ. ಇದೀಗ 'ಪಾರು' ಧಾರಾವಾಹಿ 900 ಸಂಚಿಕೆ (Paaru Serial Episodes) ಪೂರೈಸಿದ ಸಂಭ್ರಮದಲ್ಲಿದೆ. 'ಪಾರು' ಈಗ ಮನೆ ಮನೆಯ ಮುದ್ದಿನ ಮಗಳು. ಅಷ್ಟೇ ಅಲ್ಲ ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆ. 

  900 ಸಂಚಿಕೆಗಳ ಕಂಪ್ಲೀಟ್ ಹಾದಿಯನ್ನು ವಿಡಿಯೋ ಮೂಲಕ ಪಾರು ಟೀಂ ಅನಾವರಣಗೊಳಿಸಿದೆ. 'ಪಾರು' ಜರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೊಂಚವೂ ಬೇಸರ ಎನಿಸಿಲ್ಲ. ಪಾರು ಅಖಲಾಂಡೇಶ್ವರಿ ಮನೆಗೆ ಸುಮ್ಮ ಸುಮ್ಮನೆ ಬಂದಿದ್ದಲ್ಲ, ನೂರೆಂಟು ಎಡವಟ್ಟು ಮಾಡಿಕೊಂಡು ಅರಸನ ಕೋಟೆಯಲ್ಲಿ ಮನೆಗೆಲಸದವಳಾಗಿ ಬಂದಳು.

  ಭಾವನಾತ್ಮಕ ಯುದ್ಧದಲ್ಲಿ ಗೆಲುವು!
  ಪಾರು ಕಣ್ಣು ಆದಿಯ ಹೃದಯವನ್ನು ಗೆದ್ದಿತ್ತು. ಮನೆಕೆಲಸದವಳನ್ನೇ ಪ್ರೀತಿಸಿದರೂ ಸಹ ತನ್ನ ಪ್ರೀತಿ ಹುಡುಕಾಟದಲ್ಲಿ ಸಿಕ್ಕಿರಲೇ ಇಲ್ಲ. ಮನೆಯವರೆಲ್ಲರ ಸಹಾಯದಿಂದ ಕಡೆಗೂ ಪ್ರೀತಿಯ ಕಣ್ಣಿನ ಹುಡುಗಿ ಸಿಕ್ಕಿಬಿಟ್ಟಳು. ಹಾಗಂತ ಪ್ರೀತಿ ಒಲಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಮ್ಮನನ್ನು ಎದುರಾಕಿಕೊಂಡು ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದ ಹಕ್ಕಿಗಳಿಗೆ ಅಧಿಕೃತವಾಗಿ ತಾಳಿ ಎಂಬ ಮುದ್ರೆಯ ಮೂಲಕ ರೆಕ್ಕೆ ಸಿಕ್ಕಿದೆ. ಎಲ್ಲಾ ಭಾವನಾತ್ಮಕ ಯುದ್ಧವನ್ನು ಗೆದ್ದು ಸದ್ಯ ಸಂಸಾರದ ನೌಕೆಯಲ್ಲಿ ಸಾಗುತ್ತಿದ್ದಾರೆ.


  ಕಪಾಳ ಮೋಕ್ಷದಿಂದ ಶುರುವಾದ ಪಾರುವಿನ ಸ್ಥಾನ
  'ಪಾರು' ಈಗ ಮನೆ ಮನೆಯ ಮುದ್ದಿನ ಮಗಳು. ಅಷ್ಟೇ ಅಲ್ಲ ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆ. ಕಪಾಳ ಮೋಕ್ಷದಿಂದ ಶುರುವಾದ ಪಾರುವಿನ ಸ್ಥಾನ, ಇವತ್ತು ಅಧಿಕಾರ ಹಿಡಿಯುವ ಹಂತಕ್ಕೆ ಬಂದು ನಿಂತಿದೆ. ಪ್ರೀತಿಸಿದವಳ ಕೈ ಹಿಡಿದು ಮನೆಗೆ ಕರೆತಂದರೂ ಸವಾಲುಗಳ ಸುಳಿಯಲ್ಲಿ 'ಪಾರು' ಜೀವನ ನಡೆಯುತ್ತಿದೆ.

  ವಿನಯಾ ಪ್ರಸಾದ್, ಎಸ್ ನಾರಾಯಣ್ ನಟನೆ
  ನಟಿ ವಿನಯಾ ಪ್ರಸಾದ್ ಅವರು ಅಖಿಲಾಂಡೇಶ್ವರಿ ಮತ್ತು ಎಸ್ ನಾರಾಯಣ್ ಅವರು ವೀರಯ್ಯದೇವ ಎಂಬ ಗತ್ತಿನ ಪಾತ್ರಗಳಲ್ಲಿ ಕಿರುತೆರೆ ಮಂದಿ ಮುಂದೆ ಬರುತ್ತಿದ್ದಾರೆ. ಇದೀಗ ಇವರಿಬ್ಬರೂ ಮುಖಾಮುಖಿಯಾಗುವ ಸನ್ನಿವೇಶಗಳು, ಇಬ್ಬರೂ ಅವರವರ ಪಾತ್ರಗಳನ್ನು ನಿರ್ವಹಿಸುತ್ತಿರುವ ರೀತಿ ಈಗಾಗಲೇ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ವೀರಯ್ಯ ದೇವ ಹಾಗೂ ಅರಸನಕೋಟೆ ಅಖಿಲಾಂಡೇಶ್ವರಿಯ ಮಧ್ಯದಲ್ಲಿನ ಭಿನ್ನಾಭಿಪ್ರಾಯವು ಸರಿಯಾಗಿದ್ದು, ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಅಖಿಲಾಂಡೇಶ್ವರಿ ಹಾಗೂ ಕುಟುಂಬವು ವೀರಯ್ಯ ದೇವನ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ.

  ಇದನ್ನೂ ಓದಿ: Hitler Kalyana: ಅತ್ಯಾಚಾರದ ಆರೋಪದಿಂದ ತಂದೆಯನ್ನು ಹೇಗೆ ಪಾರು ಮಾಡ್ತಾಳೆ ಲೀಲಾ?

  'ಪಾರು' ಧಾರಾವಾಹಿ ಕಥೆಯೇನು?
  ಅರಸನಕೋಟೆಯ ಆಳುವ ಅರಸಿಯಷ್ಟೇ ಅಲ್ಲದೆ ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ , ತಾಯಿ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು , ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ ,ಒಳ್ಳೆಯ ಗುಣಗಳೊಂದಿಗೆ ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಆದಿ ಮತ್ತು ಪಾರು ಇವರೆಲ್ಲರೂ ಮೆಚ್ಚುವ ಪ್ರೀತು , ಜನನಿ ಹೀಗೆ ವಿಭಿನ್ನ ಬಗೆಯ ಎಲ್ಲಾ ಪಾತ್ರಗಳೂ ತನ್ನದೇ ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ. ಶ್ರೀಮಂತವಾದ ಸೆಟ್, ಭವ್ಯ ಬಂಗಲೆ, ಪ್ರತಿದೃಶ್ಯದ ಸಿರಿವಂತಿಕೆ ವೀಕ್ಷಕರಿಗೆ ಸಿನಿಮಾದ ಅನುಭವ ನೀಡಬೇಕು ಎನ್ನುವ ಆಶಯದಲ್ಲಿ ಧಾರಾವಾಹಿ ತಂಡವಿದೆ.
  Published by:Swathi Nayak
  First published: