Paaru Serial: ಅಪರಾಧಿ ಸ್ಥಾನದಲ್ಲಿ ನಿಂತಿರುವ ಜನನಿ ಕಳೆದುಕೊಂಡ ನಂಬಿಕೆ ಮರಳಿ ಪಡೆಯುತ್ತಾಳಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಕೂಡ ಒಂದು. ಅರಸನ ಕೋಟೆ ಅಖಿಲಾಂಡೇಶ್ವರಿ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದ ವಿನಯ ಪ್ರಸಾದ್ ಅವರ ನಟನೆಗೆ ಸೋಲದವರಿಲ್ಲ.

 ಜನನಿ

ಜನನಿ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು (Paaru) ಕೂಡ ಒಂದು. ಅರಸನ ಕೋಟೆ ಅಖಿಲಾಂಡೇಶ್ವರಿ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದ ವಿನಯ ಪ್ರಸಾದ್ (Vinaya Prasad) ಅವರ ನಟನೆಗೆ ಸೋಲದವರಿಲ್ಲ. ಆದಿತ್ಯ ಮತ್ತು ಪಾರ್ವತಿಯ ಮದುವೆ ಸಂಚಿಕೆಗಳ ಬಳಿಕ ಧಾರಾವಾಹಿಯಲ್ಲಿ ಪ್ರತಿದಿನ ಕೂಡ ಹೊಸ ಹೊಸ ತಿರುವುಗಳು ಎದುರಾಗುತ್ತಿದೆ ಪ್ರೇಕ್ಷಕರಿಗೆ ಮುಂದೇನಾಗುತ್ತದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಆದಿ ಮತ್ತು ಪಾರ್ವತಿ (Parvathi) ಒಳ್ಳೆ ರೀತಿಯಲ್ಲಿ ಸಂಸಾರ ನಡೆಸುವುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  ಅಖಿಲಾಂಡೇಶ್ವರಿ ಮನೆಯ ನೆಮ್ಮದಿ ಕೆಡಿಸಿದ ರಾಣ

  ಈಗಾಗಲೇ ಹಲವಾರು ಬಾರಿ ಆದಿತ್ಯ ಮತ್ತು ಪಾರ್ವತಿ ಸಾಂಸಾರಿಕ ಜೀವನದಲ್ಲಿ ಒಂದರ ಮೇಲೊಂದರಂತೆ ನೋವು ಕೊಡುತ್ತಾ ಬಂದಿರುವ ರಾಣಾ ಮತ್ತು ಅರುಂಧತಿ ಇದೀಗ ಅರಸನ ಕೋಟೆಯ ಪೂರ್ತಿ ನೆಮ್ಮದಿಯನ್ನು ಕೆಡಿಸಿದ್ದಾನೆ.ಅನ್ಯೋನ್ಯವಾಗಿದ್ದ ಪ್ರೀತಮ್ ಮತ್ತು ಜನನಿ ಮಧ್ಯೆ ಭಿನ್ನಾಭಿಪ್ರಾಯಗಳನ್ನು ತಂದಿಡುವಲ್ಲಿ ರಾಣಾ ಯಶಸ್ವಿಯಾಗಿದ್ದಾನೆ.ಅಷ್ಟೇ ಅಲ್ಲದೆ ಮನೆಯ ಎಲ್ಲಾ ಸದಸ್ಯರ ಮುಂದೆ ತನ್ನ ಪತ್ನಿ ಜನನಿಯ ಕೆನ್ನೆಗೆ ಏಟು ಕೊಟ್ಟಿದ್ದಾನೆ ಪ್ರೀತಮ್.

  ಇದನ್ನೂ ಓದಿ: Kannadathi Serial: ಧೂಮಪಾನ ನಿಷೇಧ ಜಟಾಪಟಿಯಲ್ಲಿ ಗೆಲುವು ಯಾರಿಗೆ? ಮುಂದಿದೆ ಬಿಗ್ ಟ್ವಿಸ್ಟ್

  ಕಳೆದ ಕೆಲವು ಸಂಚಿಕೆಗಳಿಂದ ಜನನಿ ಮತ್ತು ಪಾರ್ವತಿ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿದ್ದವು. ಅಷ್ಟೇ ಅಲ್ಲದೆ ದಾಮಿನಿ ಕುತಂತ್ರದಿಂದ ಜನನಿ ಪಾರ್ವತಿಯನ್ನು ದ್ವೇಷಿಸಲು ಕೂಡ ಪ್ರಾರಂಭಿಸಿದ್ದಳು. ಇನ್ನೂ ಅಧಿಕಾರದ ಆಸೆಗೋಸ್ಕರ ದಾಮಿನಿ ಏನು ಮಾಡಲು ಸಿದ್ಧಳಿದ್ದಾಳೆ, ಪಾರುವನ್ನು ಅಖಿಲಾಂಡೆಶ್ವರಿ ಸ್ಥಾನದಲ್ಲಿ ಕೂರಿಸಿದರೆ ಜನನಿಗೆ ಮನೆಯಲ್ಲಿ ಏನು ಸ್ಥಾನ ಎನ್ನುವುದರ ಬಗ್ಗೆ ಯಾಮಿನಿ ಈಗಾಗಲೇ ಜನನಿ ತಲೆಗೆ ತುಂಬಿದ್ದಾಳೆ. ಕಂಪನಿಯ ರಾಯಭಾರಿ ಆಗಬೇಕು ಎನ್ನುವ ಜನನಿಯ ಕನಸನ್ನು ರಾಣಾ ತನ್ನ ಕುತಂತ್ರದಿಂದ ಹಾಳಾಗುವಂತೆ ಮಾಡಿದ್ದನು. ಅಷ್ಟೇ ಅಲ್ಲದೆ ಆರೋಪವನ್ನು ಪಾರ್ವತಿಯ ಮೇಲೆ ಬರುವಂತೆ ಮಾಡಿದ್ದನು.

  ಇದೀಗ ಮಾರ್ಕೆಟ್ ಗೆ ಹೊರಟಿದ್ದ ಪಾರ್ವತಿ ಮೇಲೆ ಆಸಿಡ್ ಎರಚಲು ಪ್ರಯತ್ನಪಟ್ಟ ರಾಣ ಆದಿ ಮತ್ತು ಪ್ರೀತಮ್ ಕೈಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ‌. ಆದರೆ ಆಸಿಡ್ ಎರಚುವ ಪ್ಲಾನ್ ಜನನಿ ಮಾಡಿರುವಂತೆ ಹೊಸ ಕಥೆಯನ್ನು ಕಟ್ಟಿ ಅರಸನ ಕೋಟೆಯ ನೆಮ್ಮದಿಯನ್ನು ಕೆಡಿಸಿದ್ದಾನೆ ರಾಣ.

  ಅಪರಾಧಿ ಸ್ಥಾನದಲ್ಲಿ ನಿಂತಿರುವ ಜನನಿ

  ಈಗಾಗಲೇ ಹಲವಾರು ವಿಚಾರಗಳಲ್ಲಿ ನೇರವಾಗಿ ಪಾರ್ವತಿಯನ್ನು ಚುಚ್ಚುಮಾತುಗಳಿಂದ ನೋಯಿಸಿದ ಜನನಿ ಇದೀಗ ತಪ್ಪು ಮಾಡದೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಅಷ್ಟೇ ಅಲ್ಲದೆ ದಾಮಿನಿಯ ಕುತಂತ್ರದಿಂದ ಮನೆಯ ಮಂದಿಯ ಮುಂದೆ ಈ ಆಸಿಡ್ ಹಾಕಿಸಿಕೊಳ್ಳುವ ಪ್ಲಾನ್ ಪಾರ್ವತಿಯೇ ಮಾಡಿದ್ದಾಳೆ ಹೇಳಿ ಎಲ್ಲರ ಮುಂದೆ ಕೆಟ್ಟವಳಾಗಿದ್ದಾಳೆ ಜನನಿ. ಮುಂದೆ ಇದೇ ವಿಚಾರವಾಗಿ ಜನನಿ ಮತ್ತು ಪಾರ್ವತಿಯ ನಡುವೆ ಇನ್ನಷ್ಟು ಭಿನ್ನಾಭಿಪ್ರಾಯಗಳು ಎದುರಾಗಬಹುದು ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಸಂಶಯ ಮೂಡಿದೆ. ಜನನಿ ಯಾವುದೇ ತಪ್ಪು ಮಾಡಲಿಲ್ಲ ಎಂದು ಹೇಗೆ ನಿರೂಪಿಸಿ ಕೊಳ್ಳುತ್ತಾಳೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.ಇಷ್ಟೆಲ್ಲಾ ವಿಚಾರಗಳು ನಡೆದರೂ ಇಲ್ಲಿಯವರೆಗೆ ಯಾರಿಗೂ ರಾಣ ಮತ್ತು ಅರುಂಧತಿಯ ಮೇಲೆ ಕಿಂಚಿತ್ತು ಸಂಶಯ ಮೂಡಲಿಲ್ಲ.

  ಇದನ್ನೂ ಓದಿ: Nammane Yuvarani Serial: ಪುಟ್ಟ ಕಂದಮ್ಮ ಸಾಕೇತ್-ಅಹಲ್ಯಾಳ ಮಗಳಾ? ರಾಜ್ ಗುರು ಮನೆಗೆ ಹೊಸ ಅತಿಥಿ ಆಗಮನ!

  ಮುಂದೆ ಪಾರ್ವತಿ ಜೀವನದಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತದೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ಮುಂದಿನ ಸಂಚಿಕೆಗಳನ್ನು ಬಹಳ ಕುತೂಹಲಕಾರಿಯಾಗಿ ಇರುವುದು ಎನ್ನುವುದಕ್ಕೆ ಎರಡು ಮಾತಿಲ್ಲ. ಕಳೆದುಕೊಂಡ ನಂಬಿಕೆಯನ್ನು ಜನನಿ ಮತ್ತೆ  ಹೇಗೆ ಇದು ಕೊಳ್ಳುತ್ತಾಳೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
  Published by:Swathi Nayak
  First published: