Paaru Serial: ಆಫೀಸ್ CEO ಪಟ್ಟ ಪ್ರೀತಮ್​ಗೆ ಒಪ್ಪಿಸಿದ ಅಖಿಲಾಂಡೇಶ್ವರಿ? ಇದೇನಿದು ಬಿಗ್ ಟ್ವಿಸ್ಟ್

ಪಾರ್ವತಿ ಮತ್ತು ಆದಿತ್ಯ ನಡುವಿನ ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಇತ್ತೀಚಿಗಷ್ಟೇ ಮದುವೆಯಾದ ನವ ಜೋಡಿಗಳು ಕಷ್ಟಗಳ ಮೇಲೆ ಕಷ್ಟಗಳನ್ನು ಅನುಭವಿಸುತ್ತಿರುವುದು ಪ್ರೇಕ್ಷಕರಿಗೆ ಬೇಸರ ಕೂಡ ತಂದಿದೆ

ಅಖಿಲಾಂಡೇಶ್ವರಿ

ಅಖಿಲಾಂಡೇಶ್ವರಿ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರೂ (Paaru) ಕೂಡ ಒಂದು. ಅರಸನ ಕೋಟೆ (Arasana Kote) ಅಖಿಲಾಂಡೇಶ್ವರಿಯ ಪಾತ್ರವನ್ನು ಮಾಡುತ್ತಿರುವ ವಿನಯ್ ಪ್ರಸಾದ್ ಅವರ ನಟನೆಗೆ ಪ್ರೇಕ್ಷಕರ ಬಳಗವೇ ಇದೆ. ಅದೇ ರೀತಿ ಪಾರ್ವತಿ (Parvathi) ಮತ್ತು ಆದಿತ್ಯ (Adhithya) ನಡುವಿನ ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಇತ್ತೀಚಿಗಷ್ಟೇ ಮದುವೆಯಾದ ನವ ಜೋಡಿಗಳು ಕಷ್ಟಗಳ ಮೇಲೆ ಕಷ್ಟಗಳನ್ನು ಅನುಭವಿಸುತ್ತಿರುವುದು ಪ್ರೇಕ್ಷಕರಿಗೆ ಬೇಸರ ಕೂಡ ತಂದಿದೆ.ಅಖಿಲಾಂಡೇಶ್ವರಿ (Akhilandeshwari) ಪಾರ್ವತಿಯನ್ನು ಸೊಸೆ‌ ಎಂದು ಯಾವಾಗ ಒಪ್ಪಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಅಡಗಿದೆ.

    ಆಫೀಸ್ ಜವಾಬ್ದಾರಿಯನ್ನು ಪ್ರೀತಮ್ ಗೆ ಒಪ್ಪಿಸಿದ ಅಖಿಲಾಂಡೇಶ್ವರಿ

    ಆಫೀಸ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಈ ಹಿಂದೆ ಅಖಿಲಾಂಡೇಶ್ವರಿ ಹಿರಿಯ ಮಗ ಆದಿತ್ಯ ವಹಿಸಿಕೊಂಡಿದ್ದನ್ನು. ಅಷ್ಟೇ ಅಲ್ಲದೆ ಆಫೀಸನ್ನು ಒಳ್ಳೆ ರೀತಿಯಲ್ಲಿ ನಡೆಸಿಕೊಂಡು ಬರುವಲ್ಲಿ ಆದಿತ್ಯ ಯಶಸ್ವಿಯಾಗಿದ್ದನು. ಆದರೆ ತನ್ನ ಇಷ್ಟಕ್ಕೆ ವಿರುದ್ಧವಾಗಿ ಪಾರ್ವತಿಯನ್ನು ಆದಿತ್ಯ ಮದುವೆಯಾಗಿದ್ದಾನೆ ಎನ್ನುವ ವಿಚಾರ ತಿಳಿದ ಮೇಲೆ ಅಖಿಲಾಂಡೇಶ್ವರಿಗೆ ತನ್ನ ಮಗ ಆದಿತ್ಯನ ಮೇಲೆ ನಂಬಿಕೆ ಕಮ್ಮಿಯಾಗಿದೆ‌. ಇದರ ಜೊತೆಗೆ ರಾಣ ಮತ್ತು ಅರುಂಧತಿಯ ಕುತಂತ್ರದಿಂದ ಎರಡೆರಡುಬಾರಿ ಆದಿತ್ಯ ಮುಖ್ಯವಾದ ಮೀಟಿಂಗ್ ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದೇ ವಿಚಾರವಾಗಿ ಅಖಿಲಾಂಡೇಶ್ವರಿಗೆ ಆದಿತ್ಯನ ಮೇಲೆ ಸಿಟ್ಟು ಕೂಡ ಬಂದಿತ್ತು. ಆದರೆ ಆದಿತ್ಯ ನಡೆದ ಯಾವುದೇ ಘಟನೆಯನ್ನು ತಾಯಿಯ ಬಳಿ ಹೇಳದೆ ಎಲ್ಲಾ ತಪ್ಪನ್ನು ತನ್ನ ಮೇಲೆ ಹಾಕಿಕೊಂಡಿದ್ದಾನೆ.

    ಇದೇ ವಿಚಾರವಾಗಿ ಕೋಪಗೊಂಡ ಅಖಿಲಾಂಡೇಶ್ವರಿ ಇದೀಗ ಆಫೀಸ್ ನ ಎಮ್ ಡಿ ಸೀಟನ್ನು ಪ್ರೀತಮ್ ಗೆ ವಹಿಸಿದ್ದಾರೆ. ಆದರೆ ಅಣ್ಣನ ಮೇಲೆ ಅಭಿಮಾನ ಮತ್ತು ಪ್ರೀತಿ ಇಟ್ಟುಕೊಂಡಿರುವ ಪ್ರೀತಮ್ ತಾಯಿಯ ಮಾತಿಗೆ ಬೆಲೆಕೊಟ್ಟು CEO ಪದವಿಯನ್ನು ಸ್ವೀಕರಿಸಿದ್ದರೂ ಅಣ್ಣ ಆದಿತ್ಯ ಕುಳಿತುಕೊಳ್ಳುವ CEO ಚೇರ್ ನಲ್ಲಿ ಕುಳಿತುಕೊಳ್ಳದೇ ಅದರ ಪಕ್ಕ ಒಂದು ಚೇರ್ ನಲ್ಲಿ ಕುಳಿತುಕೊಂಡಿದ್ದಾನೆ.

    ಇದನ್ನೂ ಓದಿ: Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

    ತಾಯಿಯ ನಂಬಿಕೆಯನ್ನು ಮರಳಿ ಹೇಗೆ ಪಡೆಯುತ್ತಾನೆ ಆದಿತ್ಯ? 

    ಈಗಾಗಲೇ ಆದಿತ್ಯ ಅಖಿಲಾಂಡೇಶ್ವರಿ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ನಡೆಯುತ್ತಿರುವ ಸನ್ನಿವೇಶಗಳು ಕೂಡ ಇದಕ್ಕೆ ಸರಿಯಾಗಿ ಅಖಿಲಾಂಡೇಶ್ವರಿ ವಿರುದ್ಧವಾಗಿಯೇ ನಡೆಯುತ್ತಿದೆ. ಮುಂದೆ ಪ್ರಾಣ ಮತ್ತು ಅರುಂಧತಿಯ ಕುತಂತ್ರದಿಂದಲೇ ಆದಿತ್ಯ ಮೀಟಿಂಗ್ ಗೆ ಹೋಗದೆ ಇರಲು ಕಾರಣ ಎನ್ನುವ ವಿಚಾರ ತಿಳಿದರೆ ಮತ್ತೆ ಆದಿತ್ಯನಿಗೆ CEO ಪಟ್ಟ ಸಿಗುತ್ತದೆಯೇ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

    ಇದನ್ನೂ ಓದಿ: Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?

    ಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯ ತಂದಿಡುವಲ್ಲಿ ಯಶಸ್ವಿಯಾಗುತ್ತಾನಾ ರಾಣ?

    ದಾಮಿನಿಯ ಹಣದ ಆಸೆಗೆ ಅಖಿಲಾಂಡೇಶ್ವರಿ ಮನೆಯ ನೆಮ್ಮದಿಯು ಹದಗೆಡುತ್ತಿದೆ. ಆದರೆ ಈ ಬಗ್ಗೆ ಮನೆಯಲ್ಲಿ ಯಾರಿಗೂ ಮಾಹಿತಿಯಿಲ್ಲ. ಅಷ್ಟೇ ಅಲ್ಲದೆ ಬೇಳೆ ಬೇಯಿಸಿಕೊಳ್ಳಲು ದಾಮಿನಿಯ ಮುಗ್ಧತೆ ಮತ್ತು ಹಣದ ಆಸೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಅಖಿಲಾಂಡೇಶ್ವರಿ ಮನೆಯಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವ ಬಗ್ಗೆ ಪೆನ್ ನಲ್ಲಿ ಇಟ್ಟಿರುವ ಕ್ಯಾಮರಾ ಮೂಲಕ ತಿಳಿಯುತ್ತಿದ್ದಾನೆ.

    ಆದರೆ ಎಷ್ಟೇ ಪ್ರಯತ್ನಪಟ್ಟರು ಆದಿತ್ಯ ಮತ್ತು ಪ್ರೀತಮ್ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಡುವಲ್ಲಿ ರಾಣ ಮತ್ತು ಅರುಂಧತಿ ಯಶಸ್ವಿಯಾಗಲಿಲ್ಲ. ಮುಂದೆ ಎಮ್ ಡಿ ಪಟ್ಟದ ವಿಚಾರವಾಗಿ ಅಣ್ಣ ತಮ್ಮಂದಿರ ಮಧ್ಯೆ ಭಿನ್ನಾಭಿಪ್ರಾಯಗಳು ಎದುರಾಗುತ್ತದೆಯೇ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಇಲ್ಲಾ ಅದರ ಮುನ್ನವೇ ಅಖಿಲಾಂಡೇಶ್ವರಿಗೆ ರಾಣ ಮತ್ತು ಅರುಂಧತಿಯ ಕುತಂತ್ರದ ಬಗ್ಗೆ ಅರಿವಾಗುತ್ತಾ ಎನ್ನುವ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕು.
    Published by:Swathi Nayak
    First published: