• Home
  • »
  • News
  • »
  • entertainment
  • »
  • Paaru Serial: ಅರಸನಕೋಟೆ ಹಿರಿಯ ಸೊಸೆಗೆ ಮತ್ತೆ ಸಂಕಷ್ಟ! ಸಮಸ್ಯೆಯಿಂದ ಹೇಗೆ ಹೊರಬರುತ್ತಾಳೆ ಪಾರು?

Paaru Serial: ಅರಸನಕೋಟೆ ಹಿರಿಯ ಸೊಸೆಗೆ ಮತ್ತೆ ಸಂಕಷ್ಟ! ಸಮಸ್ಯೆಯಿಂದ ಹೇಗೆ ಹೊರಬರುತ್ತಾಳೆ ಪಾರು?

ಪಾರ್ವತಿ

ಪಾರ್ವತಿ

ಪಾರ್ವತಿಯ ಮುಗ್ಧತೆಯನ್ನು ಬಳಸಿಕೊಂಡು ಅಖಿಲಾಂಡೇಶ್ವರಿಯ ಶತ್ರುಗಳು ಅವಳನ್ನು ಅಸ್ತ್ರವಾಗಿಸಿಕೊಂಡು ಅರಸನಕೋಟೆ ಮತ್ತು ಕಂಪನಿಯ ಘನತೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ.

  • Share this:

    ಜೀ ಕನ್ನಡ (ZEE Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಪಾರು (Paaru) ಧಾರಾವಾಹಿಯು ರೋಚಕ ತಿರುವುಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಇದೀಗ ಪಾರು ಮತ್ತು ಆದಿಯ ಮದುವೆಯಾದ ಬಳಿಕವಂತೂ ಧಾರಾವಾಹಿಯು ಬಹಳ ಇಂಟರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಅರಸನಕೋಟೆ (Arasanakote) ಅಖಿಲಾಂಡೇಶ್ವರಿಯ (Akhilandeshwari) ಪಾರ್ವತಿಯನ್ನು ಮನೆಯ ಸೊಸೆಯನ್ನಾಗಿ ಸ್ವೀಕರಿಸಲು ಒಂದಷ್ಟು ಟಾಸ್ಕ್ ಗಳನ್ನು ಕೂಡ ಮಾಡಲು ಕೂಡ ನೀಡಿದ್ದರು. ಇದೀಗ ಪಾರ್ವತಿ (Parvathi) ಅದನ್ನು ಯಶಸ್ವಿಯಾದ ಪೂರೈಸುತಿದ್ದಾಳೆ ಎನ್ನುವಷ್ಟರಲ್ಲಿ ಪಾರ್ವತಿಗೆ ಹೊಸತೊಂದು ಸಮಸ್ಯೆ ಎದುರಾಗಿದೆ. ಪಾರ್ವತಿಯ ಮುಗ್ಧತೆಯನ್ನು ಬಳಸಿಕೊಂಡು ಅಖಿಲಾಂಡೇಶ್ವರಿಯ ಶತ್ರುಗಳು ಅವಳನ್ನು ಅಸ್ತ್ರವಾಗಿಸಿಕೊಂಡು ಅರಸನಕೋಟೆ ಮತ್ತು ಕಂಪನಿಯ ಘನತೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ.


    ಅನಾಥಾಶ್ರಮದ ಮಕ್ಕಳಿಗೋಸ್ಕರ ನೀಡುತ್ತಿರುವ ಜಾಹೀರಾತು ಎಂದು ಆದಿ ನಡೆಸುತ್ತಿದ್ದ ಕಂಪನಿಯ ಎದುರಾಳಿ ಕಂಪೆನಿಯ ಜಾಹೀರಾತನ್ನು ಪಾರ್ವತಿಯ ಬಳಿ ಶತ್ರುಗಳು ಮಾಡಿಸಿದ್ದಾರೆ. ಇದೀಗ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ ಕೂಡ.ಪಾರ್ವತಿ ಮನೆಯ ಸೊಸೆ ಆದ ಬಳಿಕ ಅಖಿಲಾಂಡೇಶ್ವರಿ ತನ್ನ ಸ್ಥಾನವನ್ನು ಪಾರ್ವತಿಗೆ ಹಸ್ತಾಂತರಿಸಿದ್ದರು. ಇದೀಗ ಮತ್ತೆ ಈ ಸಮಸ್ಯೆ ಎದುರಾದ ಬಳಿಕ ಅಖಿಲಾಂಡೇಶ್ವರಿಯು ಹಿಂದಿನಂತೆ ಅರಸನಕೋಟೆಯ ಮಹಾರಾಣಿಯಾಗಿ ಬಂದಿದ್ದಾರೆ.


    ಇದನ್ನೂ ಓದಿ: Hitler Kalyana Serial: ಎಜೆ ನೀಡಿದ ಸರ್ಪ್ರೈಸ್ ಲೀಲಾ ಫುಲ್ ಖುಷ್! ಎಡವಟ್ಟು ಸುಂದರಿ ಲವ್​ನಲ್ಲಿ ಬಿದ್ಲಾ?


    ಅಪರಾಧಿ ಸ್ಥಾನದಲ್ಲಿ ನಿಂತಿರುವ  ಪಾರ್ವತಿ


    ತಪ್ಪೇ ಮಾಡದ ಪಾರ್ವತಿಯು ಇದೀಗ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಪಾರ್ವತಿ ತನ್ನ ಗತ್ತು ಮತ್ತು ಗಾಂಭೀರ್ಯದಿಂದ 300 ಕೋಟಿ ಹೂಡಿಕೆದಾರರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಳು. ಆದರೆ ಇದೀಗ ಆ ಹುಡುಗಿ ದಾರರು ಬಂದು ತಮ್ಮ ಹೂಡಿಕೆಯನ್ನು ಹಿಂದೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಪಾರ್ವತಿಯನ್ನು ಅಖಿಲಾಂಡೇಶ್ವರಿ ಯ ಬಳಿ ಹೀಯಾಳಿಸಿದ್ದಾರೆ ಕೂಡ.


    ದಮಯಂತಿಯ ಕುತಂತ್ರ ಮತ್ತು ರಾಣನ ಮೋಸದ ಜಾಲಕ್ಕೆ ಇದೀಗ ಪಾರ್ವತಿ ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಖಿಲಾಂಡೇಶ್ವರಿಯ ಕಂಪೆನಿಯ ಪಾಲುದಾರರು ಬಂದು ಇಲ್ಲಸಲ್ಲದ ಮಾತುಗಳನ್ನು ಆಡಿ ಅವಮಾನ ಕೂಡ ಮಾಡುತ್ತಿದ್ದಾರೆ. ನಿಮ್ಮ ಸೊಸೆಗೆ ಎಲ್ಲಾ ಅಧಿಕಾರ ವಹಿಸಿ ನೀವು ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಇರುವುದು ಸರಿಯಲ್ಲ, ಸೊಸೆ ಯಾವ ರೀತಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದನ್ನು ಕೂಡ ನೀವು ನೋಡಿಕೊಳ್ಳಬೇಕಿತ್ತು ಎಂದು ಹೇಳುತ್ತಾರೆ. ಅಖಿಲಾಂಡೇಶ್ವರಿ ಯು ಪಾರ್ವತಿ ಮೂರ್ಖತನಕ್ಕೆ ಏನು ಹೇಳಬೇಕು ಎಂದು ತೋಚದೆ ಸುಮ್ಮನಿದ್ದಾರೆ.


    ಹನುಮಂತುಗೆ ಮಗಳ ಈ ಕಾರ್ಯದಿಂದ ಬಹಳ ಅನುಮಾನ


    ಅಷ್ಟೇ ಅಲ್ಲ ಅಖಿಲಾಂಡೇಶ್ವರಿಯು ಪಾರ್ವತಿಯ ತಂದೆ ಹನುಮಂತನನ್ನು ಕರೆದು 60 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗು ಈ ಹಣ ನಿನ್ನ ಮಗಳು ನಿನಗೆ ಹೊಸ ಮನೆಕೊಳ್ಳಲು ಸಂಪಾದಿಸಿದ್ದಾರೆ ಎಂದು ಹೇಳಿಬಿಡುತ್ತಾಳೆ. ಸ್ವಾಭಿಮಾನದಿಂದ ಬದುಕಿದ ಹನುಮಂತು ಗೆ ಮಗಳ ಈ ಕಾರ್ಯದಿಂದ ಬಹಳ ಅನುಮಾನವಾಗುತ್ತದೆ.


    ಇದನ್ನೂ ಓದಿ: Sathya Serial: ಅತ್ತೆ ಸೀತಾ ಚುಚ್ಚು ಮಾತಿನಿಂದ ತಾಳ್ಮೆ ಕಳೆದುಕೊಳ್ಳುತ್ತಾಳಾ ಸತ್ಯ?


    ಪಾರ್ವತಿಯ ಸಹಾಯಕ್ಕೆ ಯಾರು ಬರುತ್ತಾರೆ ?


    ಅಖಿಲಾಂಡೇಶ್ವರಿಯ ಅರಮನೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನು ದಾಮಿನಿಯ ಕುತ್ತಿಗೆಗೆ ಕಟ್ಟಿದ ಮೂಲಕ ದಮಯಂತಿ ಮತ್ತು ರಾಣ ನೋಡುತ್ತಿದ್ದಾರೆ. ತಪ್ಪೇ ಮಾಡದ ಪಾರ್ವತಿ ಇದೀಗ ಅಖಿಲಾಂಡೇಶ್ವರಿಯ ಬಳಿ ನಾನೇನು ತಪ್ಪು ಮಾಡಲಿಲ್ಲ ಎಂದು ಬೇಡಿಕೊಳ್ಳುತ್ತಿದ್ದಾಳೆ.


    ಆದರೆ ಇದನ್ನು ನಂಬುವ ಸ್ಥಿತಿಯಲ್ಲಿ ಅಖಿಲಾಂಡೇಶ್ವರಿಯು ಇಲ್ಲ. ತಪ್ಪು ಕಣ್ಣೆದುರೇ ಇರುವಾಗ ಅದನ್ನು ನಂಬದಿರಲೂ ಸಾಧ್ಯವಿಲ್ಲ ಎಂದು ಅಖಿಲಾಂಡೇಶ್ವರಿಯು ಪಾರ್ವತಿಯ ಮೇಲೆ ಕೈ ಮಾಡುತ್ತಾರೆ. ಇದೀಗ ಪಾರ್ವತಿಯನ್ನು ಅತಿಯಾಗಿ ನಂಬಿದ್ದ ಆಗಿ ಕೂಡ ಅವಳನ್ನು ನಂಬುತ್ತಿಲ್ಲ ಬದಲಾಗಿ ಚೆನ್ನಾಗಿ ಬಂದಿದ್ದಾನೆ ಕೂಡ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಪಾರ್ವತಿಯ ಸಹಾಯಕ್ಕೆ ಯಾರು ಬರುತ್ತಾರೆ, ಇಂತಹ ದೊಡ್ಡ ಸಮಸ್ಯೆಯಿಂದ ಪಾರ್ವತಿ ಹೇಗೆ ಹೊರಬರುತ್ತಾಳೆ ಎನ್ನುವುದನ್ನು ನೋಡಬೇಕಿದೆ.

    Published by:Swathi Nayak
    First published: