Paaru Serial: ಪಾರು ಧಾರಾವಾಹಿಯಲ್ಲಿ ದಿನಕ್ಕೊಂದು ರೋಚಕ ಟ್ವಿಸ್ಟ್! ಜನನಿ-ಪಾರು ಮಧ್ಯ ಭಿನ್ನಾಭಿಪ್ರಾಯ ತಂದಿಟ್ಟ ದಾಮಿನಿ

 ಪಾರು ಸೋಲಗಬೇಕೆಂದು ಬಯಸುತ್ತಿರುವ ದಾಮಿನಿ ಪಾರು ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಜನನಿಯ ತಲೆಯಲ್ಲಿ ತುಂಬಿಸುತ್ತಿದ್ದಾರೆ. ಇದೀಗ ಪಾರು ತನ್ನ ಡ್ರೆಸ್ಸಿಂಗ್ ಸ್ಟೈಲ್ ಕೂಡ ಬದಲಾಯಿಸಿದ್ದಾಳೆ. ಮನೆಯ ಸೊಸೆಯಂತೆ ಸೀರೆ ಚಿನ್ನ ಗಳನ್ನು ಹಾಕಿ ಓಡಾಡುತ್ತಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೀ ಕನ್ನಡ (Zee kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಮನಗೆದ್ದ ಧಾರಾವಾಹಿ ಪಾರು (Paaru) ಇದೀಗ ರೋಚಕ ಹಂತಕ್ಕೆ ತಲುಪಿದ್ದು ಪ್ರತಿದಿನ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಅಖಿಲಾಂಡೇಶ್ವರಿಯ (Akhilandeshwarai) ಪರೀಕ್ಷೆ ಒಂದೊಂದಾಗಿ ಗೆದ್ದುಕೊಂಡು ಬರುತ್ತಿರುವ ಪಾರುಗೆ ಇದೀಗ ಹೊಸದೊಂದು ಸವಾಲು ಎದುರಾಗುತ್ತದೆ ಕಾಣುತ್ತಿದೆ. ದಾಮಿನಿಯ ಕುತಂತ್ರಕ್ಕೆ ಬಲಿಯಾಗುತ್ತಿದೆ ಅಕ್ಕ-ತಂಗಿಯ ಮುದ್ದಾದ ಸ್ನೇಹ. ಪಾರು ಹಾಗೂ ಜನನಿ ಆರಂಭದಿಂದಲೂ ಪರಸ್ಪರ ಸ್ನೇಹಿತರಂತೆ ಮನೆ ತುಂಬಾ ಓಡಾಡುತ್ತಿದ್ದರು. ಪಾರು ಸೊಲಗಬೇಕೆಂದು ಬಯಸುತ್ತಿರುವ ದಾಮಿನಿ (Damini) ಪಾರು ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಜನನಿಯ (Janani) ತಲೆಯಲ್ಲಿ ತುಂಬಿಸುತ್ತಿದ್ದಾರೆ.

    ಇನ್ನು ಮುಂದೆ ನಿನಗೆ ಈ ಮನೆಯಲ್ಲಿ ಯಾವುದೇ ಸ್ಥಾನ ಇರುವುದಿಲ್ಲ. ಪಾರು ಅಧಿಪತ್ಯ ಬಂದರೆ ನಿನ್ನನ್ನು ಕೇಳುವವರೇ ಇರುವುದಿಲ್ಲ ಎಂದೆಲ್ಲಾ ಮುಗ್ದೆ ಜನನಿಯ ಮನದಲ್ಲಿ ದಾಮಿನಿ ತುಂಬಿಸುತ್ತಿದ್ದಾಳೆ.

    ಇದನ್ನೂ ಓದಿ: Ashwini: ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ ಮೂಲಕ ಮತ್ತೆ ಕನ್ನಡ ಧಾರಾವಾಹಿಗೆ ಮರಳಿದ್ದಾರೆ ಅಶ್ವಿನಿ

    ಜನನಿಯ ಮನಸ್ಸನ್ನು ಕೆಡಿಸುತ್ತಿದ್ದಾಳೆ ದಾಮಿನಿ

    ಅಖಿಲಾಂಡೇಶ್ವರಿ ಟಾಸ್ಕ್ ನಲ್ಲಿ ಗೆದ್ದ ಪಾರು ಕೊನೆಗೆ ತನ್ನ ಗೆಲುವಿಗೆ ಅಖಿಲ ಅಮ್ಮನೇ ಕಾರಣ ಎಂದು ಹೇಳಿ ಬಿಡುತ್ತಾಳೆ. ಅದು ಕೇವಲ ಅಖಿಲಮ್ಮನ ಮೇಲಿದ್ದ ಅಭಿಮಾನದ ಮೇಲೆ ಹೊರತು ಬೇರಾವ ಉದ್ದೇಶದಿಂದ ಅಲ್ಲ. ಜನನಿ ಮನದಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ದಾಮಿನಿ ತುಂಬಿಸಿ ಬಿಟ್ಟಿದ್ದಾಳೆ. ಗೊಂದಲದಲ್ಲಿ ಜನನಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನೂ ಅವಳ ವಿರುದ್ಧವಾಗಿ ನಡೆಯುತ್ತಿದೆಯೆಂದು ತಿಳಿಯುತ್ತಿದ್ದಾಳೆ.

    ಇದೀಗ ಪಾರು ತನ್ನ ಡ್ರೆಸ್ಸಿಂಗ್ ಸ್ಟೈಲ್ ಕೂಡ ಬದಲಾಯಿಸಿದ್ದಾಳೆ. ಮನೆಯ ಸೊಸೆಯಂತೆ ಸೀರೆ ಚಿನ್ನಗಳನ್ನು ಹಾಕಿ ಓಡಾಡುತ್ತಿದ್ದಾಳೆ. ಇತ್ತ ಜನನಿ ತುಂಬಾ ಸಿಂಪಲ್ ಹುಡುಗಿ ಚೂಡಿದಾರ ಹಾಕಿಕೊಂಡು ಇರುತ್ತಾಳೆ. ಮನೆಗೆ ಬಂದ ಅತಿಥಿ ಜನನಿಯನ್ನು ಅವಹೇಳನ ಮಾಡುತ್ತಾರೆ. ಪ್ರತಿ ವಿಚಾರಗಳಲ್ಲೂ ಜನನಿ ಈಗ ಸೋಲುತ್ತಿದ್ದಾಳೆ ಎನ್ನುವಂತೆ ಆಕೆಯ ಮನಸ್ಸಿನಲ್ಲಿ ತುಂಬಿಸುತ್ತಿದ್ದಾಳೆ ದಾಮಿನಿ.

    ಗೊಂದಲದ ಗೂಡಾಗಿದೆ ಜನನಿಯ ಮನಸ್ಸು

    ಮುಗ್ಧ ಜನನಿ ಅದನ್ನು ನಂಬಲು ತಯಾರಿಲ್ಲದಿದ್ದರೂ ನಡೆಯುತ್ತಿರುವ ವಿಚಾರಗಳನ್ನು ನೋಡುತ್ತಿರುವಾಗ ಆಕೆಯ ಸ್ಥಾನ ಮನೆಯಲ್ಲಿ ಏನು ಇಲ್ಲ ಎಂಬಂತೆ ಭಾಸವಾಗುತ್ತುರುವುದಂತು ಸತ್ಯ. ತನ್ನ ಸ್ಥಾನವನ್ನು ನಾನೆಂದು ಬಿಟ್ಟುಕೊಡುವುದಿಲ್ಲ ಪಾರು ಏನು ನನ್ನ ಒಡಹುಟ್ಟಿದ ಅಕ್ಕ ಅಲ್ಲ, ನಾವ್ ಯಾವ ಕಾರಣಕ್ಕೆ ಆಕೆಗೆ ಸಹಾಯ ಮಾಡಬೇಕು ಎನ್ನುವ ಮಾತುಗಳನ್ನು ನಿನ್ನೆಯ ಸಂಚಿಕೆಯಲ್ಲಿ ಜನನಿ ಹೇಳಿದ್ದಾಳೆ. ಅದೇ ರೀತಿ ತನ್ನ ಮನದಲ್ಲಿ ಇರುವ ಗೊಂದಲಗಳ ಬಗ್ಗೆ ಅಖಿಲಾಂಡೇಶ್ವರಿಯ ಬಳಿ ಕೇಳಿದಾಗ ಅವರು ಹೇಳುವ ಮಾತು ಮತ್ತು ಜನನಿಯ ಮನದಲ್ಲಿದ್ದ ಸಂಶಯಕ್ಕೂ ಒಂದುಕ್ಕೊಂದು ಲಿಂಕ್ ಆದಂತೆ ತೋರಿತು.

    ಇದನ್ನೂ ಓದಿ: Jothe Jotheyali Serial: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೆ ಟ್ವಿಸ್ಟ್! ಹರ್ಷನ ವರ್ತನೆ ನೋಡಿ ಮಾನ್ಸಿ ಗೆ ಕನ್ಫ್ಯೂಷನ್

    ಪಾರು ಜೀವನದಲ್ಲಿ ಹೊಸ ತಿರುವು

    ಮುಂದಿನ ಟಾಸ್ಕ್ ಗಳಲ್ಲಿ ಪಾರುನ ಗೆಲ್ಲಿಸಲು ಜನನಿ ಸಹಾಯ ಮಾಡುವಂತೆ ಕಾಣಿಸುತ್ತಿಲ್ಲ. ದಾಮಿನಿ ಕುತಂತ್ರದಿಂದ ಪಾರು ಗೆಲ್ಲದಂತೆ ಆಗಬಹುದು ಎನ್ನುವ ಸಂಶಯ ಮೂಡುತ್ತಿದೆ. ಹೊಸದಾಗಿ ಲಾಂಚ್ ಆಗುತ್ತಿರುವ ಪ್ರಾಡಕ್ಟ್ ಗೆ ರಾಯಬಾರಿಯಾಗಿ ಪಾರು ಅನ್ನು ಮಾಡಬೇಕೆಂದು ಯೋಚನೆ ಮಾಡುತ್ತಿದ್ದಾರೆ ಮನೆಯಲ್ಲಿ ಎಲ್ಲರೂ. ಇದೀಗ ಈ ವಿಚಾರವಾಗಿ ಮತ್ತೆ ಅಕ್ಕ-ತಂಗಿಯ ಮಧ್ಯೆ ಭಿನ್ನಾಭಿಪ್ರಾಯ ಮಾಡುವುದಂತೂ ಸತ್ಯ. ದಾಮಿನಿ ವಿಚಾರವಾಗಿ ಮತ್ತೆ ಜನನಿಯ ತಲೆಯಲ್ಲಿ ಏನಾದರೂ ತುಂಬಿಸಿದರೆ ಎನ್ನುವ ಗೊಂದಲ ಪ್ರೇಕ್ಷಕರಲ್ಲಿ ಇದೆ. ಗೆಲುವನ್ನು ಆಚರಿಸುತ್ತಿರುವ ಪಾರು ಜೀವನದಲ್ಲಿ ಇನ್ನೇನು ಹೊಸ ತಿರುವು ಬರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಜನನಿ ಮತ್ತು ಪಾರು ಮಧ್ಯದಲ್ಲಿ ಬಿನ್ನಾಭಿಪ್ರಾಯ ತಂದಿಡುವುದರಲ್ಲಿ ಯಶಸ್ವಿಯಾಗುತ್ತಾಳ ದಾಮಿನಿ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಷ್ಟೆ.
    Published by:Swathi Nayak
    First published: