Paaru Serial: ಅರಸನಕೋಟೆ ಸೊಸೆ ‌ಪಾರ್ವತಿಗೆ ಪ್ರತಿ ದಿನ ಅಗ್ನಿ ಪರೀಕ್ಷೆ! ದುಷ್ಟರ ಮೋಸದ ಜಾಲಕ್ಕೆ ಬಲಿಯಾದ ಪಾರು

ಅಖಿಲಾಂಡೇಶ್ವರಿ ಪಾರ್ವತಿಯನ್ನು ಮನೆಯ ಸೊಸೆಯನ್ನಾಗಿ ಸ್ವೀಕರಿಸಿ ಕೊಳ್ಳಲು ಕೆಲವು ಟಾಸ್ಕ್ ಗಳನ್ನು ಕೂಡ ನೀಡಿದ್ದರು. ಆದರೆ ದುಷ್ಟರ ಜಾಲಕ್ಕೆ ಬಲಿಯಾದ ಪಾರ್ವತಿ ಅಖಿಲಾಂಡೇಶ್ವರಿಯ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ. 

ಪಾರು

ಪಾರು

 • Share this:
  ಜೀ ಕನ್ನಡ (Zee Kannada) ವಾಹಿನಿಯ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರೂ (Paaru) ಕೂಡ ಒಂದು. ಇದೀಗ ಪಾರ್ವತಿ (Parvathi) ಅರಸನಕೋಟೆ (Arasanakote) ಸೊಸೆಯಾದ ಬಳಿಕ ಧಾರವಾಹಿಯಲ್ಲಿ ಪ್ರತಿದಿನವೂ ಹೊಸ ಹೊಸ ತಿರುವುಗಳು ಬರುತ್ತಿವೆ. ಅಖಿಲಾಂಡೇಶ್ವರಿ ಪಾರ್ವತಿಯನ್ನು ಮನೆಯ ಸೊಸೆಯನ್ನಾಗಿ ಸ್ವೀಕರಿಸಿ ಕೊಳ್ಳಲು ಕೆಲವು ಟಾಸ್ಕ್ ಗಳನ್ನು ಕೂಡ ನೀಡಿದ್ದರು. ಆದರೆ ದುಷ್ಟರ ಜಾಲಕ್ಕೆ ಬಲಿಯಾದ ಪಾರ್ವತಿ ಅಖಿಲಾಂಡೇಶ್ವರಿಯ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ. ಇತ್ತ ಮನೆಯಲ್ಲಿ ದಾಮಿನಿ (Damini) ಕೂಡ ಪಾರ್ವತಿಯ ವಿರುದ್ಧ ಏನಾದರೂ ಒಂದು ಪಿತೂರಿಯನ್ನು ಮಾಡುತ್ತಲೇ ಬರುತ್ತಿದ್ದಾಳೆ ಕಳೆದುಕೊಂಡ ನಂಬಿಕೆಯನ್ನು ಮತ್ತೆ ಪಾರ್ವತಿ ಹೇಗೆ  ಪಡೆದುಕೊಳ್ಳುತ್ತಾಳೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  ಆಫೀಸ್ ಕಡೆ ಹೆಜ್ಜೆ ಹಾಕಿದ ಪ್ರೀತೂ

  ಆಫೀಸ್ ಕಡೆ ಇಲ್ಲಿಯತನಕ ಹೋಗದ ಪ್ರೀತೂ ಇದೀಗ ಅಮ್ಮನ ಮಾತಿಗೆ ಬೆಲೆ ಕೊಟ್ಟು ಚಿಕ್ಕಪ್ಪನೊಂದಿಗೆ ಹೂಡಿಕೆದಾರರನ್ನು ಭೇಟಿಯಾಗಲು ಹೋಗಿದ್ದಾನೆ. ಅಲ್ಲಿ ಉತ್ತಮವಾಗಿ ಮಾತನಾಡಿ ಹೂಡಿಕೆದಾರರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

  ಆದರೆ ಅಣ್ಣ ಮಾಡಬೇಕಿದ್ದ ಕೆಲಸವನ್ನು ತಾನು ಮಾಡಬೇಕೆಂದು ಪ್ರೀತೂನ ಮನಸಲ್ಲಿ ಬೇಸರವಿದೆ. ಆದರೆ ಅಣ್ಣ ಆದಿತ್ಯನಿಗೆ ತಮ್ಮ ಆಫೀಸ್ ವಿಚಾರವಾಗಿ ಹೋಗಿರುವುದು ಕೇಳಿ ಬಹಳ ಸಂತೋಷವಾಗಿದೆ. ತಮ್ಮನ ಸಾಧನೆಯ ಕಂಡು ಆದಿ ಖುಷಿ ಕೂಡ ಪಟ್ಟಿದ್ದಾನೆ.

  ಇದನ್ನೂ ಓದಿ: Ramachari Serial: 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ

  ದಾಮಿನಿಯ ಕುತಂತ್ರಕ್ಕೆ ಹಾದಿಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರಾ ಅಖಿಲಾಂಡೇಶ್ವರಿ?

  ದಾಮಿನಿ ಕುತಂತ್ರದಿಂದ ಇದೀಗ ಆದಿಯನ್ನು ಆಫೀಸ್ ನಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾಳೆ. ಅಷ್ಟೇ ಅಲ್ಲ ನಿನ್ನೆ ಸಂಚಿಕೆಯಲ್ಲಿ ಅಖಿಲಾಂಡೇಶ್ವರಿ ತನ್ನ ಮಗನ ಮೇಲೆ ಇಟ್ಟಿರುವ ನಂಬಿಕೆಯನ್ನು ಕೂಡ ಹಾಳುಮಾಡುವ ಪ್ರಯತ್ನಪಟ್ಟಿದ್ದಾಳೆ ದಾಮಿನಿ. ಆದಿ ಮತ್ತು ಪಾರ್ವತಿ ಏನೋ ಮಾತನಾಡಿಕೊಂಡು ಇರುವಾಗ ಅಖಿಲಾಂಡೇಶ್ವರಿ ಬಳಿ ಇಲ್ಲಸಲ್ಲದ ವಿಚಾರಗಳನ್ನು ಹೇಳಿ ಆದಿಯನ್ನು ಆಫೀಸ್ ಕಡೆ ಹೋಗದಂತೆ ಮಾಡಿದ್ದಾಳೆ.

  ಇನ್ನೂ ಅಧಿಕಾರದ ಆಸೆಗೋಸ್ಕರ ದಾಮಿನಿ ಏನು ಮಾಡಲು ಸಿದ್ಧಳಿದ್ದಾಳೆ, ಪಾರುವನ್ನು ಅಖಿಲಾಂಡೆಶ್ವರಿ ಸ್ಥಾನದಲ್ಲಿ ಕೂರಿಸಿದರೆ ಜನನಿಗೆ ಮನೆಯಲ್ಲಿ ಏನು ಸ್ಥಾನ ಎನ್ನುವುದರ ಬಗ್ಗೆ ಯಾಮಿನಿ ಈಗಾಗಲೇ ಜನನಿ ತಲೆಗೆ ತುಂಬಿದ್ದಾಳೆ.

  ಜನನಿಯ ಮನಸ್ಸನ್ನು ಕೆಡಿಸುತ್ತಿದ್ದಾಳೆ ದಾಮಿನಿ

  ಪಾರುನ ಗೆಲುವನ್ನು ಸಹಿಸಲಾಗದ ದಾಮಿನಿ ಹೊಸದೊಂದು ಪಿತೂರಿಯೊಂದಿಗೆ ಪಾರು ಮತ್ತು ಜನನಿಯ ನಡುವಿನ ಬಾಂಧವ್ಯವನ್ನು ಹಾಳು ಮಾಡಲು ಪ್ರಯತ್ನ ಪಡುತ್ತಿದ್ದಾಳೆ.   ಮುಂದಿನ ಟಾಸ್ಕ್ ಗಳಲ್ಲಿ ಪಾರುನ ಗೆಲ್ಲಿಸಲು ಜನನಿ ಸಹಾಯಮಾಡುವಂತೆ ಕಾಣಿಸುತ್ತಿಲ್ಲ.

  ದಾಮಿನಿ ಕುತಂತ್ರದಿಂದ ಪಾರು ಗೆಲ್ಲದಂತೆ ಆಗಬಹುದು ಎನ್ನುವ ಸಂಶಯ ಮೂಡುತ್ತಿದೆ. ಪಾರು ಸೊಲಗಬೇಕೆಂದು ಬಯಸುತ್ತಿರುವ ದಾಮಿನಿ ಪಾರು ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಜನನಿಯ ತಲೆಯಲ್ಲಿ ತುಂಬಿಸುತ್ತಿದ್ದಾರೆ. ಪ್ರೀತಮ್ ಆಫೀಸಿಗೆ ಹೋಗಿರುವ ವಿಚಾರ ಕೇಳಿ ಜನನಿ ಬಹಳ ಸಂತೋಷಗೊಂಡಿದ್ದಾಳೆ. ಅಷ್ಟೇ ಅಲ್ಲದೆ ಪ್ರೀತೂ ಜವಾಬ್ದಾರಿಯುತವಾಗಿ ನಡೆದುಕೊಂಡಿರುವುದು ಕಂಡು ಆಕೆಗೆ ಹೆಮ್ಮೆ ಕೂಡ ಆಗಿದೆ.

  ಇದನ್ನೂ ಓದಿ: Jothe Jotheyali Serial: ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಸಿರಿಮನೆ! ವರ್ಕೌಟ್ ಆಯ್ತಾ ಹರ್ಷ-ಮೀರಾ ಪ್ಲಾನ್?

  ಜನನಿ ಮನದಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ತುಂಬಿಸಿ ಬಿಟ್ಟಿದ್ದಾಳೆ ದಾಮಿನಿ 

  ಜನನಿ ಮನದಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ದಾಮಿನಿ ತುಂಬಿಸಿ ಬಿಟ್ಟಿದ್ದಾಳೆ. ಗೊಂದಲದಲ್ಲಿ ಜನನಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನೂ ಅವಳ ವಿರುದ್ಧವಾಗಿ ನಡೆಯುತ್ತಿದೆಯೆಂದು ತಿಳಿಯುತ್ತಿದ್ದಾಳೆ.

  ಅಖಿಲಾಂಡೇಶ್ವರಿಯ ಅರಮನೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನು ದಾಮಿನಿಯ ಕುತ್ತಿಗೆಗೆ ಕಟ್ಟಿದ ಮೂಲಕ ದಮಯಂತಿ ಮತ್ತು ರಾಣ ನೋಡುತ್ತಿದ್ದಾರೆ. ತಪ್ಪೇ ಮಾಡದ ಪಾರ್ವತಿ ಇದೀಗ ಅಖಿಲಾಂಡೇಶ್ವರಿಯ ಬಳಿ ನಾನೇನು ತಪ್ಪು ಮಾಡಲಿಲ್ಲ ಎಂದು ಬೇಡಿಕೊಳ್ಳುತ್ತಿದ್ದಾಳೆ. ಆದರೆ ಇದನ್ನು ನಂಬುವ ಸ್ಥಿತಿಯಲ್ಲಿ ಅಖಿಲಾಂಡೇಶ್ವರಿಯು ಇಲ್ಲ.

  ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಪಾರ್ವತಿಯ ಸಹಾಯಕ್ಕೆ ಯಾರು ಬರುತ್ತಾರೆ, ಇಂತಹ ದೊಡ್ಡ ಸಮಸ್ಯೆಯಿಂದ ಪಾರ್ವತಿ ಹೇಗೆ ಹೊರಬರುತ್ತಾಳೆ ಎನ್ನುವುದನ್ನು ನೋಡಬೇಕಿದೆ.
  Published by:Swathi Nayak
  First published: