ಅಖಿಲಾಂಡೇಶ್ವರಿಗೆ ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳಲು ಹಾಗೆಯೆ ಅರಸನ ಕೋಟೆಯ ಪಟ್ಟದರಸಿ ಆಗಲು ಇನ್ನೇನು ಪಾರುಗೆ ಕೆಲವು ದಿನಗಳು ಸಾಕು ಎನಿಸಿದೆ. ಹಾಗಿದ್ರೆ ಅರಸನ ಕೋಟೆಯಲ್ಲಿ ಏನಾಗ್ತಿದೆ?
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಪಾರು (Paaru) ಧಾರಾವಾಹಿ ಆರಂಭದಿಂದಲೂ ಅತ್ಯುತ್ತಮ ತಾರಾಗಣ , ರೋಚಕ ತಿರುವು, ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಿದೆ. ಸಿನಿಮಾದಲ್ಲಿ ಫೇಮಸ್ ಆಗಿರುವ ನಟಿ ವಿನಯಾಪ್ರಸಾದ್ (Vinaya Prasad), ಎಸ್ ನಾರಾಯಣ್ (S. Narayan) ಮುಂತಾದ ಪ್ರತಿಭಾವಂತ ಹಿರಿಯ ಕಲಾವಿದರ ನಟನೆಯಿಂದಾಗಿ ಜನಮನ ಗೆದ್ದಿದೆ. ಇದೀಗ ಪಾರುವನ್ನು ಹೊಸ ಅವತಾರದಲ್ಲಿ ನೋಡಿದ ಜನ ಖುಷಿಯಾಗಿದ್ದಾರೆ. ಅಖಿಲಾಂಡೇಶ್ವರಿಗೆ ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳಲು ಹಾಗೆಯೆ ಅರಸನ ಕೋಟೆಯ ಪಟ್ಟದರಸಿ ಆಗಲು ಇನ್ನೇನು ಪಾರುಗೆ ಕೆಲವು ದಿನಗಳು ಸಾಕು ಎನಿಸಿದೆ.
ಟಾಸ್ಕ್ ಗೆಲ್ಲಲು ಪಾರುಗೆ ಮನೆಯವರು ಸಾಥ್
ಅಖಿಲಾಂಡೇಶ್ವರಿ ಇತ್ತೀಚಿಗೆ ಅರಸನ ಕೋಟೆಯ ಸೊಸೆಯಾಗಿ ಪಾರ್ವತಿ ಯಾವ ರೀತಿ ಇರಬೇಕು, ಯಾವ ರಿತಿ ಗತ್ತು ಗಾಂಭೀರ್ಯದಲ್ಲಿ ಇರಬೇಕೆಂದು ಹೇಳಿಕೊಡುತ್ತಿದ್ದಾರೆ. ಇತ್ತ ಹೆಂಡತಿಗೆ ಯಾವುದೇ ರೀತಿಯ ಕಷ್ಟ ಬಂದರು ಆದಿ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಇನ್ನು ಪ್ರೀತು ಮತ್ತು ಜನನಿ ಮಾತ್ರ ಪಾರು ಎಲ್ಲ ರೀತಿಯಲ್ಲೂ ಟಾಸ್ಕ್ ಪೂರೈಸಿ ಅತ್ತೆಯ ಪ್ರೀತಿಗೆ ಭಾಜನಳಾಗಬೇಕೆಂದು ಕಾಯುತ್ತಿದ್ದಾರೆ. ಅಖಿಲಮ್ಮ ಕೊಟ್ಟ ಎಲ್ಲಾ ಟಾಸ್ಕ್ಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾಳೆ ಪಾರು. ಇನ್ನು ಪಾರುಗೆ ಸಾಥ್ ಕೊಡುತ್ತಿರುವ ಪಾರು ಗಂಡ ಆದಿಯಂತು ಎಲ್ಲರಿಗೂ ಅಚ್ಚುಮೆಚ್ಚು.
ಅದೆಷ್ಟೇ ಕಷ್ಟವಾದರೂ ಈ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು, ಅಖಿಲಮ್ಮನ ಮನಸ್ಸು ಗೆಲ್ಲಬೇಕು ಎನ್ನುವುದು ಪಾರುವಿನ ಹೆಬ್ಬಯಕೆ, ಇದಕ್ಕೆ ಧಾಮಿನಿಯನ್ನು ಬಿಟ್ಟು ಉಳಿದ ಎಲ್ಲರೂ ಪಾರುವಿನ ಬೆಂಗಾವಲಾಗಿದ್ದಾರೆ. ಪಾರುವಿನ ಸ್ಥಾನದಲ್ಲಿ ಅಖಿಲಮ್ಮನನ್ನು ಕಾಣಲು ಧಾಮಿನಿಗೆ ಬಹಳ ಸಂಕಟವಾಗುತ್ತಿದೆ. ಆದರೆ ಸ್ವಲ್ಪ ಯಾಮಾರಿದರು ಪಾರುಗೆ ಈ ಟಾಸ್ಕ್ನಲ್ಲಿ ಗೆಲ್ಲಲು ಅಸಾಧ್ಯ ಎನ್ನುವ ನೆನಪು ಪಾರುಗೆ ಆದಿ ಮಾಡುತ್ತಲೇ ಇರುತ್ತಾನೆ.
ಆತ್ಮವಿಶ್ವಾಸ ಟಾಸ್ಕ್ನಲ್ಲಿ ಅಖಿಲಾಂಡೇಶ್ವರಿ ಉತ್ತರ ಇನ್ನೂ ದೊರಕಬೇಕಷ್ಟೆ
ಅಖಿಲಾಂಡೇಶ್ವರಿ ಊಟ ಚೆನ್ನಾಗಿದ್ಯಾ ಕೇಳಿದಾಗ ಎಲ್ಲರು ಚೆನ್ನಾಗಿದೆ ಎಂದಾಗ ಪಾರು ಮಾತ್ರ ನಿವ್ಯಾಕೆ ಸುಳ್ಳು ಹೇಳುತ್ತಿದ್ದೀರ ಪಾಯಸಕ್ಕೆ ಸಕ್ಕರೆ ಜಾಸ್ತಿಯಾಗಿದೆ, ಅನ್ನ ಬೆಂದಿಲ್ಲ, ಪಲ್ಯಕ್ಕೆ ಖಾರ ಕಮ್ಮಿಯಾಗಿದೆ ಎಲ್ಲದಕ್ಕೂ ಹದವಾಗಿದ್ದರೆ ಮಾತ್ರ ಊಟ ಚೆನ್ನಾಗಿರುವುದು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಖಿಲಾಂಡೇಶ್ವರಿ ಯಾವುದೇ ಕೆಲಸ ಮಾಡಲು ಆತ್ಮವಿಶ್ವಾಸ ಮುಖ್ಯ ಮನೆ ಕೆಲಸದಲ್ಲಿ ಮಾತ್ರ ಅಲ್ಲ ಎಲ್ಲ ಕೆಲಸದಲ್ಲೂ ಆತ್ಮವಿಶ್ವಾಸ ಬೇಕು ಎಂದು ಹೇಳಿ ಆತ್ಮವಿಶ್ವಾಸ ಎಂಬ ಟಾಸ್ಕ್ನಲ್ಲಿ ಈಗಲೇ ಏನು ಹೇಳಲಾರೆ ಇನ್ನು ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಹೇಳಿ ಅಖಿಲಾಂಡೇಶ್ವರಿ ಒಳ ಹೋಗುತ್ತಾರೆ. ಇದನ್ನು ಕಂಡ ಪಾರು ನಾನು ಇಷ್ಟೆಲ್ಲ ಮಾಡಿದರು ಅಖಿಲಮ್ಮ ಮಾತ್ರ ನನ್ನ ಅಧಿಕಾರ ವಾಪಸ್ ತೆಗೆದುಕೊಳ್ಳುತ್ತಿಲ್ಲವಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಿರುತ್ತಾಳೆ.
ಆಫೀಸಿನ ವಿಚಾರದಲ್ಲಿ ಪಾರುವನ್ನು ಎಳೆದು ತಂದ ಅಖಿಲಾಂಡೇಶ್ವರಿ
ಹರ್ಬಲ್ ಸೋಪ್ನ್ನು ಮಾರ್ಕೆಟಿಗೆ ಬಿಡುವ ಯೋಚನೆ ಮಾಡುತ್ತಿದ್ದಾರೆ ಅಖಿಲಮ್ಮ, ಇದಕ್ಕೆ 500 ಕೋಟಿ ವೆಚ್ಚ ತಗುಲುತ್ತೆ ಇದರಲ್ಲಿ 300 ಕೋಟಿಯನ್ನು ಹೂಡಿಕೆ ಮಾಡುವ ಹೂಡಿಕೆ ದಾರರನ್ನು ಹುಡುಕು ಸವಾಲಿನ ಕೆಲಸ ಪಾರ್ವತಿಗೆ ನೀಡಿದ್ದಾರೆ. ಅಖಿಲಾಂಡೆಶ್ವರಿ ಆಫೀಸಿನ ವಿಚಾರದಲ್ಲಿ ಪಾರುವನ್ನು ಎಳೆದು ತಂದಿದ್ದಾಳೆ. ಅರಸನ ಕೋಟೆಯ ಅರಸಿಯಂತಿರೋ ಪಾರು ಇದೀಗ ಅಖಿಲಾಂಡೇಶ್ವರಿ ಸವಾಲಿನ ಕೆಲಸ ನೀಡಿದ್ದಾರೆ. ಹೂಡಿಕೆ ದಾರರನ್ನು ಹುಡುಕುವ ಕೆಲಸ ನಿಡಿದ್ದಾರೆ. ರೂಮಿನ ಮಂಚದ ಮೇಲೆ ಮಲಗಿದ್ದ ಪಾರ್ವತಿಯನ್ನು ಆದಿ ಪ್ರೀತು ಜನನಿ ಎದ್ದೇಳಿಸಲು ಬರುತ್ತಾರೆ, ಪಾರು ಹೇಳುತ್ತಾಳೆ 300 ರೂ. ಯಾರಲ್ಲಾದ್ರು ಕೇಳಿದ್ರೆ ಸಿಗಬಹುದೇನು ಆದ್ರೆ 300 ಕೋಟಿ ನಾನು ಯಾರ ಬಳಿ ಕೇಳಲಿ ಎಂದು ಹೇಳಿದಾಗ ಎಲ್ಲರ ಮನದಲ್ಲೂ ನಗು ಮೂಡುವುದು ಸಹಜ. 300 ಕೋಟಿ ಹೂಡಿಕೆ ದಾರರನ್ನು ಯಾವ ರೀತಿ ಹುಡುಕುತ್ತಾಳೆ ಪಾರು ಎಂಬುವುದನ್ನು ಕಾದು ನೋಡಬೇಕಾಗಿದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ