Paaru Serial: ಅರುಂಧತಿಯ ಮೋಸದ ಜಾಲ ಕಂಡುಹಿಡಿದರಾ ಆದಿ-ಪ್ರೀತೂ? ಮುಂದಿದೆ ಬಿಗ್ ಟ್ವಿಸ್ಟ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಕೂಡ ಒಂದು. ಅರಸನ ಕೋಟೆ ಅಖಿಲಾಂಡೇಶ್ವರಿ ಗಂಭೀರ ನಟನೆಗೆ ಸೋಲದವರಿಲ್ಲ.

ಆದಿ-ಪ್ರೀತೂ

ಆದಿ-ಪ್ರೀತೂ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು (Paaru) ಕೂಡ ಒಂದು. ಅರಸನಕೋಟೆ ಅಖಿಲಾಂಡೇಶ್ವರಿ (Akhilandeshawari) ಗಂಭೀರ ನಟನೆಗೆ ಸೋಲದವರಿಲ್ಲ. ಅದೇ ರೀತಿ ಪಾರ್ವತಿ ಮತ್ತು ಆದಿತ್ಯ (Adhithya) ನಡುವಿನ ಪ್ರೀತಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಆರಂಭದಿಂದಲೂ ಯಶಸ್ವಿಯಾಗಿದೆ. ಹಲವು ಪರೀಕ್ಷೆಗಳನ್ನು ಗೆದ್ದು ಇದೀಗ ಪಾರ್ವತಿ (Parvatahi) ಅಖಿಲಾಂಡೇಶ್ವರಿ ಮನೆಯ ಸೊಸೆಯಾಗಿದ್ದಾಳೆ. ಪಾರ್ವತಿಯ ಮುಗ್ಧತೆಯನ್ನು ಬಳಸಿಕೊಂಡು ಅಖಿಲಾಂಡೇಶ್ವರಿಯ ಶತ್ರುಗಳು ಅವಳನ್ನು ಅಸ್ತ್ರವಾಗಿಸಿಕೊಂಡು ಅರಸನಕೋಟೆ ಮತ್ತು ಕಂಪನಿಯ ಘನತೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ.ಆದರೂ ಆಕೆಗೆ ಸಮಸ್ಯೆಗಳೇನು ಕಡಿಮೆಯಾಗುತ್ತಿಲ್ಲ. ಮುಂದೆ ಯಾವಾಗ ಅಖಿಲಾಂಡೇಶ್ವರಿ ಪಾರ್ವತಿಯನ್ನು ತನ್ನ ಸೊಸೆಯಾಗಿ ಸ್ವೀಕರಿಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.

    ಅರುಂಧತಿಯ ಅಂತ್ಯ ಅಣ್ಣ ಮತ್ತು  ತಮ್ಮ ಕೈಯಿಂದಲೇ ಆಗುತ್ತ?

    ಕಳೆದ ಸಂಚಿಕೆಯಲ್ಲಿ ಆದಿಯನ್ನು ಅಸ್ತ್ರವಾಗಿಯೂ ಉಪಯೋಗಿಸಿಕೊಂಡು ರಾಣ ಮತ್ತು ಅರುಂಧತಿ ಹೊಸದೊಂದು ಪ್ಲಾನ್ ಮಾಡಿದ್ದರು. ಅದೇ ರೀತಿ ಪಾರ್ವತಿಯನ್ನು ಕಿಡ್ನಾಪ್ ಮಾಡಿದ್ದೇನೆ ಎಂದು ಸುಮ್ಮನೆ ಹೇಳಿ ಆದಿತ್ಯನನ್ನು ಇಂಪಾರ್ಟೆಂಟ್ ಮೀಟಿಂಗ್ ಗೆ ಹೋಗದಂತೆ ಮಾಡಿದ್ದನ್ನು ರಾಣ ಆದರೆ ಆದಿತ್ಯ ಈ ಬಗ್ಗೆ ಮನೆಯಲ್ಲಿ ತಾಯಿ ಅಖಿಲಾಂಡೇಶ್ವರಿ ಬಳಿ ಏನು ಹೇಳಿಕೊಳ್ಳಲ್ಲಿಲ್ಲಾ. ಆದಿತ್ಯನಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ತಮ್ಮ ಪ್ರೀತು ಬಳಿ ಆತ ಎಲ್ಲಾ ಹೇಳಿಕೊಂಡಿದ್ದಾನೆ. ಇದೀಗ ಅಣ್ಣ ತಮ್ಮ ಸೇರಿಕೊಂಡು ಈ ಸುಳ್ಳಿನ ಕೋಟೆಯನ್ನು ಭೇದಿಸಲು ಕೈಜೋಡಿಸಿದ್ದಾರೆ ಮುಂದೆ ಪ್ರಾಣ ಮತ್ತು ಅರುಂಧತಿಯ ಅಂತ್ಯ ಇವರ ಕೈಯಿಂದಲೇ ಆಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

    ಇದನ್ನೂ ಓದಿ: Gattimela Serial: ವೇದಾಂತ್ ವಸಿಷ್ಠ ಮುಂದೆ ಯಾವಾಗ ಬಯಲಾಗುತ್ತೆ ಸುಹಾಸಿನಿಯ ನಿಜ ಮುಖ?

    ಅಖಿಲಾಂಡೇಶ್ವರಿಯಿಂದ ಭೇಷ್ ಎನಿಸಿಕೊಂಡ ಪ್ರೀತೂ

    ಬೇಜವಾಬ್ದಾರಿಯಿಂದ ಸುತ್ತಾಡುತ್ತಿದ್ದ ಪ್ರೀತೂ ಇತ್ತೀಚೆಗೆ ಆಫೀಸ್ ಕೆಲಸದಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಾನೆ. ಅಷ್ಟೇ ಅಲ್ಲದೆ ಅಣ್ಣ ಆದಿ ನಡೆಸಬೇಕಿದ್ದ ಮೀಟಿಂಗ್ ಗಳನ್ನು ಬಹಳ ಜವಾಬ್ದಾರಿಯುತವಾಗಿ ಪ್ರೀತೂ ನಡೆಸಿಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಅಖಿಲಾಂಡೇಶ್ವರಿಗೆ ಮಗನ ಬಗ್ಗೆ ಬಹಳ ಹೆಮ್ಮೆ ಕೂಡ ಆಗಿದೆ. ಅಷ್ಟೇ ಅಲ್ಲದೆ ಜನನಿಗೆ ಕೂಡ ತನ್ನ ಪತಿ ಜವಾಬ್ದಾರಿಯುತವಾಗಿ ಇರುವುದನ್ನು ಕಂಡು ಸಂತೋಷವಾಗಿದೆ. ಮುಂದೆ ಪಾರ್ವತಿ ಜೀವನದಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತದೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ.

    ಇದನ್ನೂ ಓದಿ: Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

    ಮೊಬೈಲ್ ನಿಂದ ಸಿಕ್ಕಿಹಾಕಿಕೊಂಡ ರಾಣ?

    ಅಖಿಲಾಂಡೇಶ್ವರಿ ಯ ಶತ್ರು ಅರುಂಧತಿತ ಅಣ್ಣ ಇದೀಗ ಆದಿ ಮತ್ತು ಪ್ರೀತೂ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ.ಹೌದು ಪಾರ್ವತಿಯನ್ನು ಕಿಡ್ನಾಪ್ ಮಾಡಿದ್ದೇನೆ ಎಂದು ರಾಣ ಮಾಡಿದ ಪ್ಲಾನ್ ಇದೀಗ ಅವನಿಗೆ ಉಲ್ಟಾ ಹೊಡೆಯುವ ಸಾಧ್ಯತೆ ಕಾಣಿಸುತ್ತಿದೆ. ಆದಿಯನ್ನು ಸೋಲಿಸಿದೆ ಎನ್ನುವ ಸಂತೋಷದಲ್ಲಿ ಆದಿ ಕೈಯಲ್ಲಿ ತಾನು ಕೊಟ್ಟಿರುವ ಮೊಬೈಲ್ ಮತ್ತು ನನ್ನ ನಂಬರ್ ಇದೆ ಎನ್ನುವುದನ್ನು ರಾಣ ಮರೆತಿದ್ದಾನೆ. ಇದೀಗ ಪ್ರೀತು ಈ ಮೊಬೈಲ್ ನಂಬರ್ ಮೂಲಕ ರಾಣ ಮನೆಯ ವಿಳಾಸವನ್ನು ಕಂಡುಹಿಡಿದಿದ್ದಾನೆ.

    ಈ ಬಗ್ಗೆ ಈಗಾಗಲೇ ರಾಣ ಮತ್ತು ಅರುಂಧತಿಗೆ ಭಯ ಕಾಡುತ್ತಿದೆ. ಇದೇ ವಿಚಾರವಾಗಿ ಅವರು ಮನೆ ಬದಲಾಯಿಸುವ ಯೋಚನೆ ಕೂಡ ಮಾಡುವಷ್ಟರಲ್ಲಿ ಆದಿತ್ಯ ಮತ್ತು ಪ್ರೀತಮ್ ರಾಣ ತಲುಪಿಬಿಡುತ್ತಾರೆ. ಇತ್ತ ಮನೆಯಲ್ಲಿರುವ ಅರುಂಧತಿಯನ್ನು ಚೆನ್ನಾಗಿ ತಿಳಿದಿರುವ ಆದಿ ಮತ್ತು ಪ್ರೀತಮ್ ನಡೆದ ಎಲ್ಲ ಘಟನೆಗಳಿಗೆ ಈಕೆ ಕಾರಣ ಎಂದು ತಿಳಿದುಕೊಳ್ಳುತ್ತಾರಾ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ಅಷ್ಟೇ ಅಲ್ಲದೆ ಆ ಮನೆಯಲ್ಲಿ ಆದಿ ಅನುಷ್ಕಾ ಫೋಟೋ ನೋಡುತ್ತಾರಾ? ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಕಾಡುತ್ತಿದೆ. ಮುಂದಿನ ಸಂಚಿಕೆಗಳನ್ನು ಬಹಳ ಕುತೂಹಲಕಾರಿಯಾಗಿ ಇರುವುದು ಎನ್ನುವುದಕ್ಕೆ ಎರಡು ಮಾತಿಲ್ಲ.
    Published by:Swathi Nayak
    First published: