Rachana Smith: ಕಮಲಿಯ ಅನಿಕಾ ಬಣ್ಣದ ಲೋಕಕ್ಕೆ ಬಂದು 9 ವರ್ಷ - ರಚನಾ ಸ್ಮಿತ್​ ರಿಯಲ್​ ಸ್ಟೋರಿ ಇದು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ ಅನಿಕಾ ಪಾತ್ರದಲ್ಲಿ ಮಿಂಚುತ್ತಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್ ಎಂದರೆ ಅಪಾರ ಆಸಕ್ತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' (Kamali)  ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ ಅನಿಕಾ ಪಾತ್ರದಲ್ಲಿ ಮಿಂಚುತ್ತಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್ ಎಂದರೆ ಅಪಾರ ಆಸಕ್ತಿ. ರಚನಾ ಸ್ಮಿತ್ (Rachana Smith) ಮಾಡೆಲಿಂಗ್‌ ಮೂಲಕ ಬಣ್ಣದ ಜಗತ್ತಿಗೆ ಪರಿಚಿತರಾದ ಚೆಂದುಳ್ಳಿ ಚೆಲುವೆ. ತನ್ನ ಹದಿನೇಳನೇ ವಯಸ್ಸಿಗೆ ಮಾಡೆಲಿಂಗ್ (Modeling) ಜಗತ್ತಿಗೆ ಕಾಲಿಟ್ಟ ರಚನಾ ಹಿಂದಿಯ ಖಾಸಗಿ ಕಂಪನಿ ಆಯೋಜಿಸಿದ್ದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಇಬ್ಬರಲ್ಲಿ ರಚನಾ ಸ್ಮಿತ್ ಕೂಡಾ ಒಬ್ಬರು. 'ಕಮಲಿ'ಯಲ್ಲಿ ಬ್ಯೂಟಿಫುಲ್ ವಿಲನ್ ಅನಿಕಾ ಮಹಾಜನ್ (Anika Mahajan) ಅವತಾರವೆತ್ತಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ. 

    ರಚನಾ ಸ್ಮಿತ್ ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 9 ವರ್ಷಗಳು ಕಳೆದಿದೆ.  ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು 'ಕಮಲಿ'ಯ ಅನಿಕಾ ಆಗಿ ಬದಲಾದ ಬಳಿಕವೇ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಮಿಂಚಿದ್ದ ರಚನಾ ಸ್ಮಿತ್ ಇಂದು ಕಿರುತೆರೆ ಲೋಕದಲ್ಲಿ ಅದೆಷ್ಟು ಫೇಮಸ್ಸು ಎಂದರೆ, ಹಲವರಿಗೆ ಆಕೆಯ ನಿಜವಾದ ಹೆಸರು ರಚನಾ ಎಂದೇ ಗೊತ್ತಿಲ್ಲ. ಆಕೆ ಇಂದು ಎಲ್ಲೇ ಹೋದರೂ ಜನ ಈ ನಟಿಯನ್ನು ಗುರುತಿಸುವುದು ಅನಿಕಾ ಅಂತಲೇ. ಅಷ್ಟರ ಮಟ್ಟಿಗೆ ಆ ಪಾತ್ರ ಜನರಿಗೆ ಹಿಡಿಸಿದೆ. ಕೆಸರಿನ ಕಮಲಿ ಎಂದು ಡೈಲಾಗ್ ಹೇಳುವ ಅನಿಕಾ ಪರಿಚಯ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಇದೆ. ಈ ಧಾರಾವಾಹಿಯಲ್ಲಿ ಈ ದೃಶ್ಯ ಒಂಥರ ಸಿಗ್ನೇಚರ್ ಆಗಿಬಿಟ್ಟಿದೆ.

    'ಕೊಡೆಮುರುಗ' ಸಿನಿಮಾದಲ್ಲಿ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ

    ಮುರುಗ ಆಲಿಯಾಸ್ ಮುನಿಕೃಷ್ಣ ಅಭಿನಯದ 'ಕೊಡೆಮುರುಗ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ವರದನಾಯಕ', 'ವಿಕ್ಟರಿ', 'ಗೆಸ್ಟ್ ಹೌಸ್' ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ರಂಜಿಸಿದ ರಚನಾ ಸ್ಮಿತ್ ಇದೀಗ 'ಕೊಡೆ ಮುರುಗ' ಸಿನಿಮಾದಲ್ಲಿ ಡಾಕ್ಟರ್ ಆಗಿ ನಟಿಸಿದ್ದಾರೆ. ಕಾಮಿಡಿ ಆಧಾರಿತ ಸಿನಿಮಾವಿದು. ಇಷ್ಟು ದಿನ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಚನಾ ಇದೀಗ ಸಿನಿಮಾ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಭಾಷೆಗಳಲ್ಲಿ ನಟಿಸುವ ಆಸೆ ರಚನಾಗಿದೆಯಂತೆ. ಒಳ್ಳೆಯ ಪಾತ್ರಕ್ಕಾಗಿ ಅವರು ಕಾಯುತ್ತಿದ್ದಾರೆ.

    ಇದನ್ನೂ ಓದಿ: Ninaad Harithsa: ಹಸೆಮಣೆ ಏರಲು ಸಜ್ಜಾದ ನಾಗಿಣಿ 2 ನಟ ನಿನಾದ್ - ಸೂಪರ್ ಜೋಡಿ ಎಂದ ಅಭಿಮಾನಿಗಳು

    ಕಿರುತೆರೆಯ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಚನಾ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ನಲ್ಲಿ ಭಾಗವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಚನಾ ಅಲ್ಲೂ ಸೈ ಎನಿಸಿಕೊಂಡಾಕೆ. ಮಾಡೆಲಿಂಗ್ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ರಚನಾ, ಮೊದಲ ಬಾರಿ ರ್ಯಾಂಪ್ ವಾಕ್ ಮಾಡಿದಾಗ ಬರೀ ಹದಿನೇಳು ವರ್ಷ. ಹಿಂದಿಯ ಖಾಸಗಿ ಟಿವಿಯಲ್ಲಿ ಆಯೋಜಿಸಿದ್ದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಇಬ್ಬರು ಆಯ್ಕೆಯಾಗಿದ್ದು ಅದರಲ್ಲಿ ಒಬ್ಬರು ರಚನಾ ಸ್ಮಿತ್.  ಅಷ್ಟೇ ಅಲ್ಲ, ನಂತರ ಟಾಪ್ -12 ಸ್ಪರ್ಧಿಗಳಲ್ಲಿ ಇವರು ಕೂಡಾ ಒಬ್ಬರಾಗಿ ಆಯ್ಕೆಯಾಗಿದ್ದರು. ಒಂದಷ್ಟು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿರುವ ರಚನಾ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ.

    ಇದನ್ನೂ ಓದಿ: Sathya Serial: ಸತ್ಯಗೆ ಸುತ್ತಿಕೊಂಡ ಮದುವೆ ನಂಟು ಕಾರ್ತಿಕ್ ತಾಳಿ ಕಟ್ಟೋದೊಂದೆ ಬಾಕಿ!

    ಇವರು ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಇದ್ದು ಆಗಾಗ ರೀಲ್ಸ್ ಮಾಡುವುದರ ‌ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇವರ ಇಂಗ್ಲೀಷ್ ಮಿಶ್ರಿತ ಫಾರಿನ್ ಕನ್ನಡವೂ ವೀಕ್ಷಕರಿಗೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಇನ್ಸ್ಟಾಗ್ರಾಮ್ ನಲ್ಲಿ ಇವರ ಹೆಸರಿನ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ.
    Published by:Swathi Nayak
    First published: