Kamali Serial: ಯಶಸ್ವಿಯಾಗಿ 1100 ಸಂಚಿಕೆ ಪೂರೈಸಿದ ಕಮಲಿ ಧಾರಾವಾಹಿ! ಮುಂದಿನ ಬಿಗ್​ ಟ್ವಿಸ್ಟ್ ಏನು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕಮಲಿ ಧಾರಾವಾಹಿಯು ಯಶಸ್ವಿಯಾಗಿ 1100 ಸಂಚಿಕೆಗಳನ್ನು ಪೂರೈಸಿದೆ. ರಿಷಿ ಮತ್ತು ಕಮಲಿಯ ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತಾ ಇರುತ್ತಾರೆ.

ಕಮಲಿ

ಕಮಲಿ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕಮಲಿ (Kamali) ಧಾರಾವಾಹಿಯು ಯಶಸ್ವಿಯಾಗಿ 1100 ಸಂಚಿಕೆಗಳನ್ನು ಪೂರೈಸಿದೆ. ರಿಷಿ ಮತ್ತು ಕಮಲಿಯ ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತಾ ಇರುತ್ತಾರೆ. ಹಳ್ಳಿ ಹುಡುಗಿ ಕಮಲಿಯ ಮುಗ್ಧ ನಟನೆಗೆ ಸೋಲದವರಿಲ್ಲ. ಅನಿಕಾನ (Anika) ಕುತಂತ್ರದಿಂದ ಕಮಲಿ ಮತ್ತು ರಿಷಿ (Rishi) ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇದನ್ನು ಅನಿಕಾಳಿಗೆ  ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ರಿಷಿ ಮತ್ತು ಕಮಲಿಗೆ ವಿಚ್ಛೇದನ (Divorce) ಮಾಡಲು ಹೊರಟಿದ್ದಳು ಅನಿಕಾ. ಆದರೆ ಅವರಿಬ್ಬರ ನಡುವೆ ಇದ್ದ ಬೆಟ್ಟದಷ್ಟು ಪ್ರೀತಿ ಅನಿಕಾಳ ಕುತಂತ್ರಕ್ಕೆ ಬಲಿಯಾಗಲಿಲ್ಲ.

    ರಚನ ಮತ್ತು ಅಮರ್ ಜೀವನ ಇನ್ನಾದರೂ ಸರಿ ಹೋಗುತ್ತಾ

    ರಚನ ಹಾಗೂ ಅಮರ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಯಾವುದೋ ಒಂದು ಬಲವಾದ ಕಾರಣಕ್ಕೋಸ್ಕರ ಅಮರ್ ರಚನಾಳನ್ನು ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಮನೆಯಲ್ಲಿ ಎಲ್ಲರಿಗೂ ಅಸಮಧಾನ ಕೂಡ ಇದೆ. ಆದರೆ ಅಮರ್ ತನ್ನ ತಂಗಿ ಕಮಲಿಯ ಬಾಳು ಹಾಳಾಗಬಾರದು ಎನ್ನುವ ಉದ್ದೇಶದಿಂದ ರಚನಾಳನ್ನು ದ್ವೇಷಿಸುವಂತೆ ನಾಟಕವಾಡುತ್ತಿದ್ದಾರೆ ಎಂದು ಇತ್ತೀಚಿನ ಸಂಚಿಕೆಯಲ್ಲಿ ತಿಳಿದಿದೆ.

    ಕಮಲಿ ಮತ್ತು ರಿಷಿ ಸೇರಿಕೊಂಡು ರಚನಾಳ ಬದುಕನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಮರ್ ಯಾವುದೋ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವುದು ಅವರಿಬ್ಬರಿಗೆ ತಿಳಿದಿದೆ.

    ಇದನ್ನೂ ಓದಿ: Paaru Serial: ಅರಸನಕೋಟೆ ಹಿರಿಯ ಸೊಸೆಗೆ ಮತ್ತೆ ಸಂಕಷ್ಟ! ಸಮಸ್ಯೆಯಿಂದ ಹೇಗೆ ಹೊರಬರುತ್ತಾಳೆ ಪಾರು?

    ಕಾಲೇಜಿನ ಅಧಿಕಾರವನ್ನು ಪಡೆದುಕೊಂಡ ಅನಿಕಾ

    ಅನಿಕಾಳ ಕುತಂತ್ರದಿಂದ ಇನ್ನೂ ಈ ಧಾರವಾಹಿಯಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ರಿಷಿಯನ್ನು ಪ್ರೀತಿಸುತ್ತಿರುವ ಅನಿಕಾಳಿಗೆ ಕಮಲಿ ಮತ್ತು ರಿಷಿ ಜೊತೆಗೆ ಇರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಇದೀಗ ಅನಿಕಾ ಕಾಲೇಜಿನ ಅಧಿಕಾರವನ್ನು ಮರಳಿ ತನ್ನ ವಶಕ್ಕೆ ಪಡೆದುಕೊಂಡಿದ್ದಾಳೆ. ಕಾಲೇಜಿನಲ್ಲಿ ಇನ್ನು ಮುಂದೆ ಏನೆಲ್ಲ ಬದಲಾವಣೆಗಳನ್ನು ತರುತ್ತದೆ ಎನ್ನುವ ಬಗ್ಗೆ ರಿಷಿ ಮತ್ತು ಕಮಲಿ ಭಯ ಕೂಡಾ ಹುಟ್ಟಿಕೊಂಡಿದೆ. ರಿಷಿಯನ್ನು ಇನ್ನು ಮುಂದೆ ಕಾಲೇಜಿಗೆ ಬರದಂತೆ ಪತ್ರದ ಮೂಲಕ ಹೇಳಿ ಕಳಿಸುವ ಯೋಚನೆಯಲ್ಲಿದ್ದಾಳೆ ಅನಿಕಾ ಮಹಾಜನ್.

     ಅನಿಕಾಳ ಕುತಂತ್ರಕ್ಕೆ ರಿಷಿ ಮತ್ತು ಕಮಲಿಯ ಬಾಳು ಹಾಳಾಗುತ್ತಾ?

    ಈ ಹಿಂದೆ ಕಮಲಿಯ ಅಜ್ಜನನ್ನು ಅನಿಕಾಳೆ ಕೊಲೆ ಮಾಡಿಸಿ ಅಪವಾದವನ್ನು ಕಮಲಿಯ ಗಂಡ ರಿಷಿ ಸರ್ ಮೇಲೆ ಹಾಕಿದ್ದಳು. ಇದರಿಂದ ಕಮಲಿ ಮತ್ತು ಅಜ್ಜಿಯ ನಡುವೆ ಭಿನ್ನಾಭಿಪ್ರಾಯಗಳು ಕೂಡ ಮೂಡಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ಅಧಿಕಾರವನ್ನು ಅಜ್ಜಿ ಅನಿಕಾಳಿಗೆ ನೀಡಿದ್ದು ಬಳಿಕ ಕಮಲಿ ಯನ್ನು ಕಾಲೇಜಿಗೆ ಬರದಂತೆ ಕೂಡ ಆರ್ಡರ್ ಮಾಡಿದ್ದರು. ಇದೀಗ ಮತ್ತೆ ರಿಷಿ ವಿಚಾರದಲ್ಲಿ ಇದೇ ರೀತಿ ನಡೆಯುತ್ತಾ ಎನ್ನುವುದನ್ನು ನೋಡಬೇಕಿದೆ. ಅನಿಕಾಳ ಕುತಂತ್ರಕ್ಕೆ ರಿಷಿ ಮತ್ತು ಕಮಲಿಯ ಬಾಳು ಏನಾಗುತ್ತದೆ ಎನ್ನುವುದನ್ನು ಮುಂದೆ ನೋಡಬೇಕಿದೆ.

    ಇದನ್ನೂ ಓದಿ: Jothe Jotheyali Serial: ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಸಿರಿಮನೆ! ವರ್ಕೌಟ್ ಆಯ್ತಾ ಹರ್ಷ-ಮೀರಾ ಪ್ಲಾನ್?

    ಯಾರ ಪರವಾಗಿ ನಿಂತು ನ್ಯಾಯ ಒದಗಿಸಿಕೊಡುತ್ತಾರೆ ಅಜ್ಜಿ?

    ಈ ಬಾರಿ ಅಜ್ಜಿ ಯಾರ ಪರವಾಗಿ ನಿಂತು ನ್ಯಾಯ ಒದಗಿಸಿಕೊಡುತ್ತಾರೆ? ರಿಷಿಯ ತಾಯಿ ಈ ವಿಚಾರವನ್ನು ತಿಳಿದರೆ ಹೇಗೆ ಸಹಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ತನ್ನ ಮಗು ಹೊಟ್ಟೆಯಲ್ಲೇ ಸಾಯಲು ಅನಿಕಾ ಮತ್ತು ಅನಿಕಾಳ ತಾಯಿಯೇ ಕಾರಣವೆನ್ನುವ ಸತ್ಯ ಕಮಲಿಗೆ ಯಾವಾಗ ತಿಳಿಯುತ್ತದೆ. ಮತ್ತು ತನ್ನ ಜೀವನದಲ್ಲಿ ಇಷ್ಟೆಲ್ಲಾ ಆಟವಾಡಿದ ಅನಿಕಾಳನ್ನು ಸುಮ್ಮನೆ ಬಿಡುತ್ತಾಳಾ ಕಮಲಿ ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಮುಂದಿನ ಸಂಚಿಕೆಗಳಲ್ಲಿ ತಿಳಿಯಬಹುದು. ಒಟ್ಟಾರೆಯಾಗಿ ಧಾರವಾಹಿಯು ಹಳ್ಳಿಯಿಂದ ಬಂದ ಮುಗ್ಧ ಹುಡುಗಿಯ ಜೀವನದಲ್ಲಿ ಸಿಟಿಯಲ್ಲಿ ಏನೆಲ್ಲಾ ಸಂಕಷ್ಟಗಳು ದೂರಾಗುತ್ತದೆ ಎನ್ನುವ ಬಗ್ಗೆ ತಿಳಿಸುತ್ತಾ ಬರುವುದರಲ್ಲಿ ಯಶಸ್ವಿಯಾಗಿದೆ.
    Published by:Swathi Nayak
    First published: