Kamali Serial: 'ಕಮಲಿ' ಪಾತ್ರಧಾರಿ ಅಮೂಲ್ಯ ಓಂಕಾರ್ ಗೌಡ ನಿಜ ಜೀವನದಲ್ಲಿ ಹೀಗಿದ್ದಾರೆ ಅಂದ್ರೆ ನೀವು ನಂಬಲಿಕ್ಕಿಲ್ಲ!

'ಕಮಲಿ' ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ. ಕಮಲಿ ಪಾತ್ರಕ್ಕೆ ನಟಿ ಅಮೂಲ್ಯಾ ಓಂಕಾರ್ ಗೌಡ ಬಣ್ಣ ಹಚ್ಚಿದ್ದಾರೆ.

ಅಮೂಲ್ಯ ಗೌಡ

ಅಮೂಲ್ಯ ಗೌಡ

 • Share this:
  'ಕಮಲಿ' (Kamali) ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ. ಕಮಲಿ ಪಾತ್ರಕ್ಕೆ ನಟಿ ಅಮೂಲ್ಯಾ ಓಂಕಾರ್ ಗೌಡ (Amulya Omkar Gowda) ಬಣ್ಣ ಹಚ್ಚಿದ್ದಾರೆ. ಸೀರಿಯಲ್‌ನಲ್ಲಿ ಹಳ್ಳಿ ಭಾಷೆಯನ್ನು ಮುದ್ದು ಮುದ್ದಾಗಿ ಮಾತನಾಡುವ ಇವರಿಗೆ ಕರ್ನಾಟಕದ ತುಂಬೆಲ್ಲ ಅಭಿಮಾನಿಗಳಿದ್ದಾರೆ. ಈ ಹಿಂದೆ ಅವರು 'ಅರಮನೆ' (Aramane) ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ 'ಕಮಲಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕರ್ನಾಟಕದ ಮನೆಮಾತಾಗಿದ್ದಾರೆ.  ಟ್ರೆಡಿಷನಲ್ (Traditional)  ಮಾಡರ್ನ್ ಪಾತ್ರಗಳನ್ನು ಕೂಡ ತುಂಬ ಅಚ್ಚುಕಟ್ಟಾಗಿ ನಿಭಾಯಿಸುವ ಇವರ ಸಾಮರ್ಥ್ಯವನ್ನು ಕನ್ನಡಿಗರು ನಿಜಕ್ಕೂ ಮೆಚ್ಚಿದ್ದಾರೆ.

  ತೆಲುಗು ಕಾರ್ತಿಕ ದೀಪಂ‘ ಎಂಬ ಧಾರಾವಾಹಿ ನಟಿಸುತ್ತಿದ್ದಾರೆ

  ನಟಿ ಅಮೂಲ್ಯ ಗೌಡ ಸದ್ಯ ತೆಲುಗು ಟಿವಿ ಧಾರಾವಾಹಿಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಕೆಲ ದಿನಗಳಿಂದ ತೆಲುಗು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಕಾರ್ತಿಕ ದೀಪಂ‘ ಎಂಬ ಧಾರಾವಾಹಿಯಲ್ಲಿ ಆಟೋ ಚಾಲಕಿಯಾಗಿ ಲೀಡ್​ ರೋಲ್​ನಲ್ಲಿ ನಟಿಸುತ್ತಿದ್ದಾರೆ.

  ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೂಲ್ಯಾಗೆ ಅಜಗಜಾಂತರ ವ್ಯತ್ಯಾಸ ಇದೆ

  'ಕಮಲಿ' ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ಮಂಡ್ಯ ಭಾಷೆ ಮಾತನಾಡುತ್ತ, ಯಾವಾಗಲೂ ಲಂಗ-ಧಾವಣಿ ಹಾಕಿಕೊಂಡು, ರಿಬ್ಬನ್ ಹಾಕಿ ಎರಡು ಜಡೆ ಕಟ್ಟಿಕೊಂಡಿರುವ ಕಮಲಿಗೂ, ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೂಲ್ಯಾಗೆ ಅಜಗಜಾಂತರ ವ್ಯತ್ಯಾಸ ಇದೆ. ಇದನ್ನೇ ಅಮೂಲ್ಯಾ ಕೂಡ ಹಲವು ಬಾರಿ ಹೇಳಿದ್ದಾರೆ.

  ಇದನ್ನೂ ಓದಿ: Paaru Serial: ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಅರಸನಕೋಟೆ ಒಡತಿಯಾಗುತ್ತಾಳಾ ಪಾರು? ಮುಂದೇನಿದೆ ಟ್ವಿಸ್ಟ್​?

  ಯಾವ ಪಾತ್ರ ಕೊಟ್ಟರೂ ಜೀವ ತುಂಬುವ ಅಮೂಲ್ಯ

  ಟ್ರೆಡಿಷನಲ್, ಮಾಡರ್ನ್ ಪಾತ್ರಗಳನ್ನು ಕೂಡ ತುಂಬ ಅಚ್ಚುಕಟ್ಟಾಗಿ ನಿಭಾಯಿಸುವ ಇವರ ಸಾಮರ್ಥ್ಯವನ್ನು 'ಸ್ವಾತಿ ಮುತ್ತು', 'ಪುನರ್ ವಿವಾಹ', 'ಅರಮನೆ' ಧಾರಾವಾಹಿಗಳಲ್ಲಿ ಕನ್ನಡಿಗರು ನೋಡಿದ್ದಾರೆ. ಸಿನಿಮಾಗಳಿಂದ, ಬೇರೆ ಭಾಷೆಯ ಧಾರಾವಾಹಿಗಳಿಂದ ಅಮೂಲ್ಯಾಗೆ ಸಾಕಷ್ಟು ಆಫರ್ ಬರುತ್ತಿದೆ. ಅನ್ನ ಹಾಕುತ್ತಿರುವ 'ಕಮಲಿ'ಯನ್ನು ತೊರೆದು ಬೇರೆ ಪ್ರಾಜೆಕ್ಟ್ ಮಾಡುವ ಆಸೆ ಇವರಿಗಿಲ್ಲ. ಮುಂದೆ ಸಮಯ ಹೊಂದಾಣಿಕೆಯಾದರೆ, ಒಳ್ಳೆಯ ಚಾಲೆಂಜಿಂಗ್ ಪಾತ್ರಗಳು ಸಿಕ್ಕರೆ ಸಿನಿಮಾಗಳಲ್ಲಿ ನಟಿಸಲು ಅಮೂಲ್ಯ ಫುಲ್ ರೆಡಿಯಿದ್ದಾರಂತೆ.

   'ಕಮಲಿ'ಯನ್ನು ಬಿಟ್ಟು ಸಿನಿಮಾಕ್ಕೆ ಹೋಗುವ ಆಲೋಚನೆ ಇಲ್ಲ

  ನಟಿ ಅಮೂಲ್ಯ ಗೌಡ ಅವರು ಟಿವಿ ಧಾರಾವಾಹಿಗಳಲ್ಲಿ ಅತ್ಯಂತ ಪ್ರಸಿದ್ಧ ನಟಿ ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಕಮಲಿ ಸೀರಿಯಲ್ ಯಶಸ್ಸಿನ ನಂತರ ಅವರು ಏಕೆ ಚಿತ್ರರಂಗದತ್ತ ಮುಖ ಮಾಡಲಿಲ್ಲ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡುತ್ತದೆ. ಆದರೆ ಅವರಿಗೆ ಕಮಲಿ ಸೀರಿಯಲ್ ಮಾಡುವಾಗ ಅನೇಕ ಸಿನಿಮಾಗಳ ಆಫರ್ ಬಂದಿತ್ತಂತೆ ಆದರೆ ಧಾರಾವಾಹಿಯನ್ನು ಅರ್ಧದಲ್ಲಿಯೇ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಸದ್ಯ ಸಿನಿಮಾದಿಂದ ದೂರವಿರುವುದಾಗಿ ಅವರು ಹೇಳುತ್ತಾರೆ.

  ಇದನ್ನೂ ಓದಿ: Kannadathi Serial: ಹರ್ಷ-ಭುವಿ ಕನ್ನಡದ ಮದುವೆಯಾಗುತ್ತಿದ್ದಾರಂತೆ? ಏನಪ್ಪಾ ಇದರ ವಿಶೇಷತೆ?

  ಗಾಸಿಪ್‌ಗಳ ಬಗ್ಗೆ ಅಮೂಲ್ಯಾ ತಲೆಕೆಡಿಸಿಕೊಳ್ಳಲ್ಲ!

  ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರದ ಅಮೂಲ್ಯ ತೆರೆಯ ಹಿಂದೆ ಮಾತನಾಡೋದು ಕೂಡ ತುಂಬ ಕಡಿಮೆ. ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಮೂಲ್ಯ ಬಗ್ಗೆ ವಾದ, ವಿವಾದ, ಗಾಸಿಪ್ ಹರಡಿದ್ದಿಲ್ಲ. ಸಹನಟ ರಿಷಿ ಅವರನ್ನು ಪ್ರೀತಿಸುತ್ತಿದ್ದಾರೆ ಅಮೂಲ್ಯ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅವರೇ ಸಾಕಷ್ಟು ಬಾರಿ ಹೇಳಿದ್ದಾರೆ. ಸೆಲೆಬ್ರಿಟಿಗಳಾದಮೇಲೆ ಅಥವಾ ನಾವು ಸೆಟ್‌ನಲ್ಲಿ ತುಂಬ ಚೆನ್ನಾಗಿರುತ್ತೇವೆ ಎಂದಮೇಲೆ ಇಂತ ಮಾತುಗಳು ಬರೋದು ಸಹಜ ಎಂದು ಅಮೂಲ್ಯ ಸಂದರ್ಶನದಲ್ಲಿ ಹೇಳಿದ್ದಾರೆ.

  ಇನ್ನು, ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಸ್ನೇಹಿತರೊಂದಿಗೆ ಟ್ರಿಪ್ ಹೋಗುವ ಅಮೂಲ್ಯ, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಸಕ್ರೀಯರಾಗಿರುತ್ತಾರೆ. ಇವರಿಗೆ ಇನನ್ಸ್ಟಾಗ್ರಾಂ ನಲ್ಲಿ ಬರೋಬ್ಬರಿ 321k ಪಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಫೇಸ್​ಬುಕ್​ನಲ್ಲಿಯೂ ಸಖತ್ ಹಿಂಬಾಲಕರನ್ನು ಅಮೂಲ್ಯ ಹೊಂದಿದ್ದಾರೆ,
  Published by:Swathi Nayak
  First published: