Manasa Manohar: ಎಂಬಿಎ ಮಾಡಿ ನಟನಾ ಕ್ಷೇತ್ರಕ್ಕೆ ಬಂದ ಮೀರಾ - ಮಾನಸ ಮನೋಹರ ಲೈಫ್ ಸ್ಟೋರಿ
ಮಾನಸ ಮನೋಹರ್ ಮಾಡೆಲ್ ಕೂಡ ಆಗಿದ್ದು, ಯಾವ ಸಿನಿಮಾ ನಟಿಯರಿಗೇನು ಕಡಿಮೆ ಇಲ್ಲ ಎಂಬಂತಿದ್ದಾರೆ ಮಾನಸ ಮನೋಹರ್ಗೆ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.
ಜೊತೆ ಜೊತೆಯಲಿ' (Jothe Jotheyali) ಧಾರಾವಾಹಿಯಲ್ಲಿ ಮೀರಾ ಹೆಗಡೆ (Meera Hegde) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ಮಾನಸ ಮನೋಹರ್ (Manasa Manohar). ತೆರೆ ಮೇಲೆ ತುಂಬ ಜಾಣ್ಮೆಯಿಂದಯಿಂದ ಡಿಗ್ನಿಫೈಡ್ ಆಗಿದ್ದು, ಫಾರ್ಮಲ್ ಡ್ರೆಸ್ ಹಾಕಿಕೊಂಡು ಗತ್ತಿನಿಂದ ಕಂಪನಿ (Company) ಕೆಲಸ ಮಾಡುವ ಇವರನ್ನು ನೋಡಿದಾಗ ಹಲವರಿಗೆ ನಾವು ಇವರ ರೀತಿ ಕಾಣಬೇಕು, ಆಗಬೇಕು ಎಂದೆನಿಸುವುದುಂಟು. ಎಂಬಿಎ (MBA) ಓದಿದ ನಟಿ ಮಾನಸ ಮನೋಹರ್, ನಟಿ, ನಿರೂಪಕಿಯಾಗಿ ಈಗ ಫೇಮಸ್ ಆಗಿದ್ದಾರೆ. ಮಾನಸ ಮನೋಹರ್ ಮಾಡೆಲ್ ಕೂಡ ಆಗಿದ್ದು, ಯಾವ ಸಿನಿಮಾ ನಟಿಯರಿಗೇನು ಕಡಿಮೆ ಇಲ್ಲ ಎಂಬಂತಿದ್ದಾರೆ.
2 ವರ್ಷಗಳ ಕಾಲ ಪ್ರಯತ್ನ ಪಟ್ಟು ಮನೆಯಲ್ಲಿ ನಟಿಸುವುದಕ್ಕೆ ಒಪ್ಪಿಸಿದರಂತೆ
ಮಾನಸ ಮನೋಹರ್ ಆಕಸ್ಮಾತ್ ಆಗಿ ಅಭಿನಯ ರಂಗಕ್ಕೆ ಕಾಲಿಟ್ಟರು. ಮಗಳ ಶಾಲೆ ಕಾಲೇಜು ಮಾರ್ಕ್ಕಾರ್ಡ್ ನೋಡಿ ಮಗಳು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಸ ಮಾಡುತ್ತಾಳೆ ಎಂದುಕೊಂಡಿದ್ದರು ಇವರ ಪಾಲಕರು. ಆದರೆ ಮಾನಸ ಈಗ ಕರ್ನಾಟಕದ ಮನೆಮಾತಾಗಿದ್ದಾರೆ. ಮನೆಯಲ್ಲಿ ತಾವು ನಟಿಸುವುದಕ್ಕೆ ವಿರೋಧವಿತ್ತಂತೆ. ಎರಡು ವರ್ಷಗಳ ಕಾಲ ಪ್ರಯತ್ನ ಪಟ್ಟು ಮನೆಯಲ್ಲಿ ಒಪ್ಪಿಸಿದರಂತೆ. ಸದ್ಯ ಮಾನಸ ಮನೋಹರ್ ಎಲ್ಲರ ಅಚ್ಚುಮೆಚ್ಚಿನ ಮೀರಾ ಹೆಗಡೆ ಆಗಿದ್ದಾರೆ.
ಮಾನಸ ಮನೋಹರ್ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮಿಂಚಿದ್ದಾರೆ. ಅಲ್ಲೂ ಮಾನಸಗೆ ಅಭಿಮಾನಿಗಳ ಬಳಗವಿದೆ. ಕೇವಲ ಧಾರಾವಾಹಿಗಳಲ್ಲದೇ, ಮಾನಸ ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಮಾನಸ ನಟಿಸಿದ ಮೊದಲ ಚಿತ್ರ ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ 'ಮೈ ಡಾರ್ಲಿಂಗ್'. ಸದ್ಯ ಮಾನಸ ಒಳ್ಳೆಯ ಪಾತ್ರದ ಸಿನಿಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 2014ನೇ ಸಾಲಿನ ಮಿಸ್ ಕರ್ನಾಟಕ ಪಟ್ಟವನ್ನು ಕೂಡ ಮಾನಸ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮೋಸ್ಟ್ ಡಿಸೈರಬಲ್ ವುಮೆನ್-ಬೆಂಗಳೂರು ಎಂಬ ಗರಿಯನ್ನೂ ಅಲಂಕರಿಸಿದ್ದಾರೆ.
'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ
ಮಾನಸ ಮನೋಹರ್ಗೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ 'ಶುಭವಿವಾಹ' ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡರು. ತದನಂತರ ಮಾನಸಗೆ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. ಎಲ್ಲಾ ಧಾರಾವಾಹಿಗಳಲ್ಲೂ ಮಾನಸ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಇಷ್ಟವಂತೆ. ನೆಗೆಟಿವ್ ರೋಲ್ ಮೂಲಕವಾದರೂ ಜನರ ಮನ ಗೆಲ್ಲುವ ಪ್ರಯತ್ನ ಮಾನಸರದ್ದು. ಇನ್ನು ಕಳೆದೆರಡು ವರ್ಷಗಳಿಂದ ಮಾನಸ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಹೆಗಡೆ ಪಾತ್ರ ಮಾತ್ರ ಪೂರ್ತಿ ನೆಗೆಟಿವ್, ಪೂರ್ತಿ ಪಾಸಿಟಿವ್ ಅಂತ ಸ್ಪಷ್ಟವಾಗಿ ಹೇಳಲಾಗೋದಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ತುಂಬ ಡಿಗ್ನಿಫೈಡ್ ಆಗಿರುವ ಹುಡುಗಿಯ ಪಾತ್ರವಿದು.
ಲಾಕ್ಡೌನ್ ನಲ್ಲಿ ಬರೋಬ್ಬರಿ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು
ಮಾನಸ ಮನೋಹರ್ ಸದಾ ಫಿಟ್ ಆಗಿರಲು ಬಯಸುತ್ತಾರೆ. ಪ್ರತಿನಿತ್ಯ 2 ಗಂಟೆ ವರ್ಕೌಟ್ ಮಾಡುವ ಮಾನಸ ಮನೆಯ ಮಹಡಿಯಲ್ಲಿ 1 ಗಂಟೆ ನಡೆಯುತ್ತಿದ್ದರಂತೆ ಹಾಗಾಗಿಯೇ ಲಾಕ್ಡೌನ್ ಸಂದರ್ಭದಲ್ಲಿ ಬರೋಬ್ಬರಿ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು.
ಮಾನಸ ಮನೋಹರ್ಗೆ ದೊಡ್ಡ ಅಭಿಮಾನಿಗಳ ಬಳಗವಿದೆ
ಮಾನಸ ಮನೋಹರ್ ಮಾಡೆಲ್ ಕೂಡ ಆಗಿದ್ದು, ಯಾವ ಸಿನಿಮಾ ನಟಿಯರಿಗೇನು ಕಡಿಮೆ ಇಲ್ಲ ಎಂಬಂತಿದ್ದಾರೆ. ಮಾನಸ ಮನೋಹರ್ಗೆ ದೊಡ್ಡ ಅಭಿಮಾನಿಗಳ ಬಳಗವಿದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ