Jothe Jotheyali Serial: ಜೊತೆ ಜೊತೆಯಲಿ ಸೀರಿಯಲ್​ಗೆ 30 ಮಿಲಿಯನ್ ವೀಕ್ಷಕರು! ವಿಶೇಷ ಏನು ಗೊತ್ತಾ?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರತಿದಿನ ಕೇಳುವ ಶೀರ್ಷಿಕೆ ಗೀತೆ ಯೂ ಇದೀಗ 30 ಮಿಲಿಯನ್ ವೀಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹೃದಯಕ್ಕೆ ಮುದನೀಡುವ ಶೀರ್ಷಿಕೆ ಗೀತೆಯನ್ನು ಪ್ರೇಕ್ಷಕರೆಲ್ಲರೂ ಬಹಳ ಆನಂದದಿಂದ ಆಲಿಸುತ್ತಿದ್ದಾರೆ. 

ಜೊತೆ ಜೊತೆಯಲಿ

ಜೊತೆ ಜೊತೆಯಲಿ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲಿ (Jothe Jotheyali) ಇದೀಗ ಮತ್ತೆ ಸುದ್ದಿಯಲ್ಲಿದೆ. ಹೌದು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರತಿದಿನ ಕೇಳುವ ಶೀರ್ಷಿಕೆ ಗೀತೆಯೂ (Title Song) ಇದೀಗ 30 ಮಿಲಿಯನ್ (30 Million) ವೀಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹೃದಯಕ್ಕೆ ಮುದನೀಡುವ ಶೀರ್ಷಿಕೆ ಗೀತೆಯನ್ನು ಪ್ರೇಕ್ಷಕರೆಲ್ಲರೂ ಬಹಳ ಆನಂದದಿಂದ ಆಲಿಸುತ್ತಿದ್ದಾರೆ. ಜನವರಿ 2020 ರಲ್ಲಿ ಈ ಧಾರಾವಾಹಿಯು ಪ್ರಸಾರವಾಗಲು ಆರಂಭವಾಯಿತು ಆದರೆ ಅದಕ್ಕೂ ಮುನ್ನ ಸುಮಾರು ಒಂದು ತಿಂಗಳ ಹಿಂದೆ ಇದರ ಟೈಟಲ್ ಗೀತೆಯನ್ನು ರಿಲೀಸ್ ಮಾಡಲಾಗಿತ್ತು. ಈ ಶೀರ್ಷಿಕೆ ಗೀತೆಯು ಪ್ರೇಕ್ಷಕರಲ್ಲಿ ಧಾರಾವಾಹಿ ಒಲವನ್ನು ಹೆಚ್ಚಿಸಿರುವುದರಲ್ಲಿ ಸಂಶಯವಿಲ್ಲ.

  30 ಮಿಲಿಯನ್ ವೀಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾದ ಶೀರ್ಷಿಕೆ ಗೀತೆಯು

  ಈ ಜನಪ್ರಿಯ ಶೀರ್ಷಿಕೆ ಗೀತೆಗೆ ನೀನಾದ ನಾಯಕ್, ನಿಹಾಲ್ ತೌರ್ವೋ ಹಾಗೂ ರಜತ್ ಹೆಗಡೆ ಧ್ವನಿಯಾಗಿದ್ದಾರೆ. ಹಾಗೆ ಸುನಾತ್ ಗೌತಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಗೆ ಹರ್ಷ ಪ್ರಿಯ ಭದ್ರಾವತಿ ಅವರು ಈ ಸುಂದರವಾದ ಶೀರ್ಷಿಕೆ ಗೀತೆಯನ್ನು ಬರೆದಿದ್ದಾರೆ. ಇದೀಗ 30 ಮಿಲಿಯನ್ ವೀಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಈ ತಂಡ.

  ಸ್ಯಾಂಡಲ್ ವುಡ್ ನಟ ಅನಿರುಧ್ ಮತ್ತು ಮೇಘ ಶೆಟ್ಟಿ ನಟನೆಯಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯು ಆರಂಭದಿಂದಲೂ ಟಿ ಆರ್ ಪಿ ನಲ್ಲಿ ಸದಾ ಟಾಪ್ 5 ನೇ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅನುಸಿರಿಮನೆ ಮತ್ತು ಆರ್ಯವರ್ಧನ್ ನಡುವಿನ ಮುದ್ದಾದ ಪ್ರೀತಿ ಮತ್ತು ಅತ್ತೆ-ಸೊಸೆ ನಡುವಿನ ಬಾಂಧವ್ಯವು ಧಾರಾವಾಹಿಯಲ್ಲಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.

  ಇದೀಗ ರಾಜನಂದಿನಿ ಅಧ್ಯಾಯದ ಬಳಿಕವಂತೂ ಧಾರಾವಾಹಿಯಲ್ಲಿ ಪ್ರತಿದಿನ ಹೊಸ ಹೊಸ ತಿರುವುಗಳು ಬರುತ್ತಾ ಇವೆ‌. ರಾಜನಂದಿನಿ ಮತ್ತು ರಾಜವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಇದೀಗ ಅನು ಸಿರಿಮನೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ.

  ಇದನ್ನೂ ಓದಿ: Kannadathi Serial: ಸುಸೂತ್ರವಾಗಿ ನಡೆಯುತ್ತಾ ಹರ್ಷ ಭುವಿ ಮದುವೆ? ಕನ್ನಡತಿಯಲ್ಲಿ ಬಿಗ್ ಟ್ವಿಸ್ಟ್

  ರಾಜನಂದಿನಿ ಅಧ್ಯಾಯದಲ್ಲಿ ಎಲ್ಲಾ ಕುತೂಹಲಕ್ಕೆ ತೆರೆ

  ರಾಜನಂದಿನಿ ಕಥೆ ಬಗ್ಗೆ ಧಾರಾವಾಹಿಯ ಆರಂಭದಿಂದಲೂ ನಿಗೂಢತೆಯನ್ನು ಕಾಪಾಡಿಕೊಂಡು ಬಂದಿದ್ದ ಕಥೆಯು ಇತ್ತೀಚೆಗೆ ರಾಜ ನಂದಿನಿಯ ಎಲ್ಲಾ ಕಥೆಗಳನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ತೋರಿಸಿದ್ದಾರೆ. ಹೌದು ನಟಿ ಸೋನುಗೌಡ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆ ಸುಭಾಷ್ ಪಾಟೀಲ್ ಅಲಿಯಾಸ್ ಆರ್ಯವರ್ಧನ್ ರಾಜ ನಂದಿನಿಗೆ ಹೇಗೆ ಮೋಸ ಮಾಡಿರುತ್ತಾನೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿತ್ತು. ರಾಜನಂದಿನಿ ಅಧ್ಯಾಯದಲ್ಲಿ ಎಲ್ಲಾ ಕುತೂಹಲಕ್ಕೆ ತೆರೆ ಕಂಡಿತ್ತು. ರಾಜನಂದಿನಿ ಬಗ್ಗೆ ಸಂಪೂರ್ಣ ಕಥೆಯನ್ನು ತಿಳಿದುಕೊಂಡ ಅನು ಸಿರಿಮನೆ, ಈಗ ಆರ್ಯನ ಬಣ್ಣವನ್ನು ಬಯಲು ಮಾಡಲು ಮುಂದಾಗಿದ್ದಾಳೆ ಇದಕ್ಕಾಗಿ ತುಂಬಾ ಪ್ಲಾನ್ ಮಾಡಿದ್ದಾಳೆ.

  ಆರ್ಯನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅನುಸಿರಿಮನೆ ನಿನ್ನ ಪ್ರತಿ ಹೆಜ್ಜೆಗೂ ಅಡ್ಡಗಾಲಾಗಿ ನಿಂತಿದ್ದಾಳೆ. ಅಷ್ಟೇ ಅಲ್ಲ ಆರ್ಯ ಸರ್ ಮೇಲೆ ವಿಪರೀತ ಒಲವನ್ನು ಇಟ್ಟುಕೊಂಡಿದ್ದಂತಹ ಮೀರಾ ಹೆಗಡೆ ಕೂಡ ಇದೀಗ ಅನ್ಯಾಯದ ವಿರುದ್ಧ ಹೋರಾಡಲು ಅನು ಸಿರಿಮನೆ ಕೈಜೋಡಿಸಿದ್ದಾಳೆ. ಹಾಗೆ ದಾದ ಮೇಲೆ ಹುಚ್ಚು ನಂಬಿಕೆ ಇಟ್ಟುಕೊಂಡಿದ್ದಂತಹ ಹರ್ಷವರ್ಧನ ಈಗ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹರಸಾಹಸಪಡುತ್ತಿದ್ದಾನೆ.

  ಇದನ್ನೂ ಓದಿ: Sathya Serial: ಕೋಟೆಮನೆ ಸತ್ಯಾಳಿಗೆ ಮತ್ತೆ ಮತ್ತೆ ಅಗ್ನಿಪರೀಕ್ಷೆ! ಅತ್ತೆ ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯ

  ತನ್ನೊಳಗೆ ನೋವನ್ನು ಅನುಭವಿಸುತ್ತಿರುವ ಅನು ಸಿರಿಮನೆ

  ಈ ಹಿಂದೆ ತನ್ನ ಆಸ್ತಿಯಲ್ಲಿ ಯಾವುದೇ ಪಾಲು ನನಗೆ ಬೇಡ ಎಂದು ಹೇಳಿದ ಅನುಸಿರಿಮನೆ ಇದೀಗ ಮತ್ತೆ ತನ್ನ ಪಾಲಿನ ಆಸ್ತಿ ನನಗೆ ಬೇಕು ಎಂದು ತಿಳಿದುಕೊಂಡಿದ್ದಾಳೆ. ಇದರ ಹಿಂದಿನ ಉದ್ದೇಶ ಇನ್ನೂ ಅನು ಯಾರ ಬಳಿಯೂ ಹೇಳಿಕೊಂಡಿಲ್ಲಾ. ಹಾಗೆಯೇ ತಾನು ಗರ್ಭವತಿಯಾಗಿರುವ ವಿಚಾರವನ್ನು ಕೂಡ ಮನೆಯಲ್ಲಿ ಅವರು ಹೇಳದೆ ತನ್ನೊಳಗೆ ನೋವನ್ನು ಅನುಭವಿಸುತ್ತಿದ್ದಾರೆ ಅನುಸಿರಿಮನೆ. ಮುಂದೆ ಧಾರವಾಹಿಯಲ್ಲಿ ಯಾವೆಲ್ಲ ಟ್ವಿಸ್ಟ್ ಬರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಅಡಗಿರುವುದನ್ನು ಸುಳ್ಳಲ್ಲ.
  Published by:Swathi Nayak
  First published: