• Home
 • »
 • News
 • »
 • entertainment
 • »
 • Jothe Jotheyali: ಜೊತೆ ಜೊತೆಯಲಿ ಧಾರಾವಾಹಿಗೆ 800 ಸಂಚಿಕೆಗಳ ಸಂಭ್ರಮ, ಸಂಜು ಮೇಲೆ ಝೇಂಡೆ ಅಟ್ಯಾಕ್!

Jothe Jotheyali: ಜೊತೆ ಜೊತೆಯಲಿ ಧಾರಾವಾಹಿಗೆ 800 ಸಂಚಿಕೆಗಳ ಸಂಭ್ರಮ, ಸಂಜು ಮೇಲೆ ಝೇಂಡೆ ಅಟ್ಯಾಕ್!

ಜೊತೆ ಜೊತೆಯಲಿ ಧಾರಾವಾಹಿಗೆ 800 ಸಂಚಿಕೆಗಳ ಸಂಭ್ರಮ

ಜೊತೆ ಜೊತೆಯಲಿ ಧಾರಾವಾಹಿಗೆ 800 ಸಂಚಿಕೆಗಳ ಸಂಭ್ರಮ

ಜೊತೆ ಜೊತೆಯಲಿ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಅಲ್ಲದೇ ಧಾರಾವಾಹಿ 800 ಸಂಚಿಕೆಗಳ ಸಂಭ್ರಮದಲ್ಲಿದೆ. ಇನ್ನೂ ಹೆಚ್ಚು ಸಂಚಿಕೆಗಳನ್ನು ಮಾಡೋ ಸಂಭ್ರಮದಲ್ಲಿ ಧಾರಾವಾಹಿ ತಂಡ ಇದೆ.

 • News18 Kannada
 • Last Updated :
 • Karnataka, India
 • Share this:

  ಜೊತೆ ಜೊತೆಯಲಿ (Jothe Jotheyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಧಾರಾವಾಹಿ 800 ಸಂಚಿಕೆಗಳನ್ನು (800 Episodes) ಪೂರೈಸಿದ ಸಂಭ್ರಮದಲ್ಲಿದೆ.


  800 ಸಂಚಿಕೆಗಳ ಸಂಭ್ರಮ
  ಇಷ್ಟು ದಿನ ಜೀ ಕನ್ನಡದಲ್ಲಿ ರಾತ್ರಿ 8.30ಕ್ಕೆ ಜೊತೆ ಜೊತೆಯಲಿ ಸೀರಿಯಲ್ ಧಾರಾವಾಹಿ ಪ್ರಸಾರವಾಗ್ತಿತ್ತು. ಈಗ ಅದೇ ಟೈಂಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬರುತ್ತಿದೆ. ಅದಕ್ಕೆ ಜೊತೆ ಜೊತೆಯಲಿ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಅಲ್ಲದೇ ಧಾರಾವಾಹಿ 800 ಸಂಚಿಕೆಗಳ ಸಂಭ್ರಮದಲ್ಲಿದೆ. ಇನ್ನೂ ಹೆಚ್ಚು ಸಂಚಿಕೆಗಳನ್ನು ಮಾಡೋ ಸಂಭ್ರಮದಲ್ಲಿ ಧಾರಾವಾಹಿ ತಂಡ ಇದೆ.


  ಸಂಜು ಮೇಲೆ ಝೇಂಡೆ ಅಟ್ಯಾಕ್
  ಆರ್ಯನಿಗೆ ಎಲ್ಲಾ ಮರೆತು ಸಂಜು ಆಗಿ ಬಂದಿದ್ದಾರೆ. ಆದ್ರೆ ಕಂಪನಿಗೆ ಕೆಲಸಕ್ಕೆ ಬಂದಾಗ. ಇಲ್ಲಿ ಮೊದಲೇ ಕೆಲಸ ಮಾಡಿದಂತೆ ಅನ್ನಿಸುತ್ತಿದೆ. ಎಲ್ಲರೂ ಪರಿಚಯ ಅನ್ನೋ ರೀತಿ ಅನ್ನಿಸುತ್ತಿದೆಯಂತೆ. ಎಲ್ಲಾ ಕೆಲಸಗಳನ್ನು ಬೇಗ ಬೇಗ ಮಾಡಿ ಮುಗಿಸುತ್ತಾರೆ. ಆದ್ರೆ ಝೇಂಡೆಗೆ ಸಂಜು ಮೇಲೆ ಅನುಮಾನ ಬಂದಿದೆ. ಅವನಿಗೆ ಹೊಡೆದು ಕಳಿಸಿದ್ದಾರೆ.


  ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಾಗಿ ಕಿತ್ತಾಟ, ಜಗಳ; ಕ್ಯಾಪ್ಟನ್ ಅನುಪಮಾಗೆ ತಲೆನೋವು!


  ಸಂಜುವನ್ನು ಕಿಡ್ನ್ಯಾಪ್ ಮಾಡಿ, ಪ್ರಶ್ನೆ
  ಝೇಂಡೆ ಸಂಜುವನ್ನು ಕಿಡ್ನ್ಯಾಪ್ ಮಾಡಿ, ಚೆನ್ನಾಗಿ ಹೊಡೆದಿದ್ದಾನೆ. ನೀನು ಯಾರು ಹೇಳು. ಯಾವ ಉದ್ದೇಶದಿಂದ ಬಂದಿದ್ದೀಯಾ ಎಂದು ಕೇಳಿದ್ದಾರೆ. ಸಂಜುಗೆ ಏನೂ ಹೇಳಲು ಗೊತ್ತಾಗಿಲ್ಲ. ಯಾಕಂದ್ರೆ ಎಲ್ಲವನ್ನೂ ಮರೆತು ಹೋಗಿದ್ದಾನೆ.


  Zee Kannada serial jothe jotheyali serial complete 800 episodes hero role change
  ಜೊತೆ ಜೊತೆಯಲಿ ಧಾರಾವಾಹಿಗೆ 800 ಸಂಚಿಕೆಗಳ ಸಂಭ್ರಮ


  ಅನು ಕೈ ಹಿಡಿದು ಸಹಾಯ ಕೇಳಿದ ಸಂಜು
  ಸಂಜು ಅನು ಮನೆಗೆ ಬಂದು. ಅವಳು ಕೈ ಹಿಡಿದು ಸಹಾಯ ಕೇಳಿದ್ದಾನೆ. ನಾನು ಯಾರು ಅಂತ ದಯವಿಟ್ಟು ಹೇಳಿ. ಅವರೆಲ್ಲಾ ನನಗೆ ಹೊಡೆದ್ರು. ಸಂಜು ಸತ್ತಿದ್ದಾನೆ ಎಂದು ಅವರ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಹಾಗಾದ್ರೆ ನೀನು ಯಾರು ಎಂದು ಕೇಳಿದ್ರು ಎಂದು ಅನು ಬಳಿ ಹೇಳಿದ್ದಾನೆ. ನಿನ್ನ ಮೇಲೆ ಅಟ್ಯಾಕ್ ಮಾಡಿದವರೇ, ನನಗೂ ಹೊಡೆದ್ರು ಎಂದು ಹೇಳಿದ್ದಾನೆ.


  Zee Kannada serial jothe jotheyali serial complete 800 episodes hero role change
  ಅನು ಕೈ ಹಿಡಿದು ಸಹಾಯ ಕೇಳಿದ ಸಂಜು


  ಅನಿರುದ್ಧ್ ಇಲ್ಲದೇ ಧಾರಾವಾಹಿಗೆ ಹೊಡೆತ ಬಿತ್ತಾ?
  ಜೊತೆ ಜೊತೆಯಲ್ಲಿ ಧಾರಾವಾಹಿಗೆ ತುಂಬಾ ಜನ ಅಭಿಮಾನಿಗಳು ಇದ್ರು. ಅದರಲ್ಲೂ ಆರ್ಯನ ಪಾತ್ರ ಮಾಡ್ತಿದ್ದ ಅನಿರುದ್ಧ್​ಗಾಗಿ ಅದೆಷ್ಟೋ ಅಭಿಮಾನಿಗಳು ಸೀರಿಯಲ್ ನೋಡ್ತಾ ಇದ್ರು. ಈಗ ಅವರಿಲ್ಲದ ಧಾರಾವಾಹಿಯನ್ನು ಜನ ನೋಡ್ತಾ ಇಲ್ವಾ? ಅದಕ್ಕೆ ಧಾರಾವಾಹಿ ಸಮಯವನ್ನು ಬದಲು ಮಾಡಿದ್ರಾ ಅನ್ನೋ ಪ್ರಶ್ನೆಗಳು ಎದ್ದಿವೆ.


  ಇದನ್ನೂ ಓದಿ: Kannadathi: ಅಮ್ಮಮ್ಮನ ವಿಲ್ ನೋಡಿ ಮನೆಯಲ್ಲಿ ಕೋಲಾಹಲ, ಕನಸು ನಿಜವಾದ್ರೆ ಗಲಾಟೆ ಗ್ಯಾರಂಟಿ! 


  ಸಂಜುಗೆ ತಾನೇ ಆರ್ಯ ಎಂದು ಗೊತ್ತಾಗುತ್ತಾ? ಅನುಗೆ ಆರ್ಯ ಬದುಕಿರೋದು ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: