Jothe Jotheyali Serial: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೆ ಟ್ವಿಸ್ಟ್! ಹರ್ಷನ ವರ್ತನೆ ನೋಡಿ ಮಾನ್ಸಿ ಗೆ ಕನ್ಫ್ಯೂಷನ್

ರಾಜನಂದಿನಿ ಮತ್ತು ರಾಜ್ಯವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಹೊರಟ ಅನುಸಿರಿ ಮನೆಗೆ ಕಚೇರಿಯಲ್ಲಿ ಮತ್ತು ಮನೆಯಲ್ಲಿ ಒಬ್ಬೊಬ್ಬರ ಸಹಾಯ ದೊರಕುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಇದೀಗ ಪ್ರತಿ ದಿನ ಹೊಸ ಹೊಸ ಟ್ವಿಸ್ಟ್ ಗಳು ಬರುತ್ತಿವೆ. ಹೌದು ರಾಜನಂದಿನಿ (Rajanandini) ಅಧ್ಯಾಯದ ಬಳಿಕ ಅನು ಸಿರಿಮನೆ (Anu Sirimane) ಬದಲಾಗಿದ್ದಾಳೆ. ರಾಜನಂದಿನಿ ಮತ್ತು ರಾಜ್ಯವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಹೊರಟ ಅನುಸಿರಿ ಮನೆಗೆ ಕಚೇರಿಯಲ್ಲಿ ಮತ್ತು ಮನೆಯಲ್ಲಿ ಒಬ್ಬೊಬ್ಬರ ಸಹಾಯ ದೊರಕುತ್ತಿದೆ. ಇತ್ತ ಆರ್ಯವರ್ಧನ್ ಗೆ ಅಪಘಾತ ವಾಗಿರುವುದು ಅನುಗೆ ಬೇಸರವಿದ್ದರೂ ಅದನ್ನು ಕಡೆಗಣಿಸಿ ತನಗಿರುವ ಕರ್ತವ್ಯಗಳ ಬಗ್ಗೆ ಯೋಚಿಸಲು ಆರಂಭಿಸಿದ್ದಾಳೆ.  ಆರ್ಯವರ್ಧನ್ ಬಗೆಗಿನ ಎಲ್ಲಾ ಸತ್ಯವನ್ನು ತಿಳಿದಿರುವ ಶಾನುಭೋಗರ (Shanubogh) ಬಳಿ ಅನುಸಿರಿಮನೆ ಸಹಾಯವನ್ನು ಕೇಳಿದ್ದಾಳೆ. ಆದರೆ ಜೇಂಡೆಗೆ ಈ ಬಗ್ಗೆ ತಿಳಿದಿದೆ ‌ಮುಂದೆನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

    ಆಕ್ಸಿಡೆಂಟ್ ಆಕಸ್ಮಿಕವೋ ಜೇಂಡೆಯ ಪ್ರಿ ಪ್ಲಾನೋ?

    ಆರ್ಯವರ್ಧನ್ ಬದುಕಿನ ಎಲ್ಲ ಸತ್ಯಗಳು ಹರ್ಷನಿಗೆ ತಿಳಿದಿದೆ ಎಂಬ ಸೂಚನೆ ದೊರೆಕಿದ ಮೇಲೆ ಆರ್ಯ ನಿಗೆ ಆಕ್ಸಿಡೆಂಟ್ ಆಯಿತೇ? ಇಲ್ಲ ಆಕ್ಸಿಡೆಂಟ್ ಗೂ ಹರ್ಷನಿಗೆ ತಿಳಿದ ಸತ್ಯಕ್ಕೆ ಸಂಬಂಧ ಇದೆಯ ಇಲ್ಲವೇ ಎಂದು ಪ್ರೇಕ್ಷಕರಲ್ಲಿ ಸಂಶಯ ಮೂಡಿದೆ. ರಾಜನಂದಿನಿ ವಿಲಾಸಕ್ಕೆ ಹೋದ ಅನು ಹಾಗೂ ಹರ್ಷನಿಗೆ ಆರ್ಯವರ್ಧನ್ ತಲೆಗೆ ಬ್ಯಾಂಡೇಜ್ ಹಾಕಿಕೊಂಡು ಮಲಗಿರುವುದು ಅಷ್ಟೇ ಕಾಣಿಸುತ್ತದೆ. ಮುಂದಿನ ಸಂಚಿಕೆಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ತೆರೆಯಬಹುದೇ ಕಾದು ನೋಡ ಬೇಕಿದೆ.

    ಇದನ್ನೂ ಓದಿ: Sushma Shekhar: ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಸುಷ್ಮಾ ಶೇಖರ್

    ಅನು ಸಿರಿಮನೆಯ ಕಾಡುತ್ತಿರುವ ರಾಜನಂದಿನಿ

    ರಾಜನಂದಿನಿ ಇದೀಗ ಅನು ಹಿಂದೆ ಬಿದ್ದಿದ್ದಾಳೆ. ಆರ್ಯನ ಮೇಲೆ ಅತಿಯಾಗಿ ಕಾಳಜಿ ಮತ್ತು ಪ್ರೀತಿ ಹೊಂದಿರುವ ಅನುಗೆ ಆರ್ಯ ಈ ರೀತಿ ಮಲಗಿರುವುದನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಪತಿಯ ಸೇವೆ ಮಾಡುತ್ತಿರುವ ಅನುಗೆ ಆಗಾಗ ರಾಜನಂದಿನಿ ಬಂದು ವ್ಯಂಗ್ಯವಾಗಿ ಮಾತನಾಡಿ ನ್ಯಾಯದ ಪರ ಹೋರಾಡು ಎಂದು ಕೀ ಕೊಡುತ್ತಿದ್ದಾಳೆ. ಇದೇ ಕಾರಣಕ್ಕೆ ರಾಜನಂದಿನಿ ಹಾಗೂ ಅನು ಮುಧ್ಯ ಚರ್ಚೆ ಕೂಡ ನಡೆಯುತ್ತದೆ. ಅನು ರಾಜನಂದಿನಿ ಜೊತೆ ವಾದಕ್ಕೆ ಇಳಿದಿದ್ದಾಳೆ. ಹುಷಾರಿಲ್ಲದೆ ಮಲಗಿರುವ ಪತಿಯ ಸೇವೆ ಮಾಡುವುದು ನನ್ನ ಧರ್ಮ ಎಂದು ರಾಜನಂದಿನಿ ಜೊತೆ ಅನು ಹೇಳಿದ್ದಾಳೆ. ಆದರೂ ರಾಜನಂದಿನಿ ತನ್ನ ಹಾಗೆ ತೀರಿಸಿಕೊಳ್ಳುವ ಪಣವನ್ನು ಬಿಟ್ಟುಕೊಟ್ಟಂತೆ ಕಾಣಿಸುತ್ತಿಲ್ಲ.

    ಹರ್ಷನ ಮನಸ್ಸು ಅತಂತ್ರ!

    ಹೌದು ತನ್ನ ದಾದನ ಬಗ್ಗೆ ಎಲ್ಲಾ ಸತ್ಯವನ್ನು ತಿಳಿದ ಹರ್ಷವರ್ಧನ್ ಗೆ ದಾದಾ ಮೋಸ ಮಾಡಿರುವುದಿಲ್ಲ ಎಂಬ ನಂಬಿಕೆ ಇದೆ. ತನ ಗೊಂದಲಗಳನ್ನೇಲ್ಲಾ ದಾದಾನ ಬಳಿ ಕೇಳಿ ಪರಿಹರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಪಘಾತದ ಸುದ್ದಿ ಹರ್ಷನಿಗೆ ತಿಳಿದಿದೆ.

    ಇದೀಗ ಅನು ಮಾನ್ಸಿ ಮತ್ತು ಹರ್ಷನನ್ನು ಸೀಕ್ರೆಟ್ ರೂಮಿಗೆ ಕರೆದುಕೊಂಡು ಹೋಗಿದ್ದಾಳೆ. ಹರ್ಷ ಸೀಕ್ರೆಟ್ ರೂಮ್ನಲ್ಲಿ ನನ್ನ ಮುದ್ದಿನ ಅಕ್ಕ ರಾಜ ನಂದಿನಿಯ ಫೋಟೋ ಕಂಡು ಖುಷಿಪಡುತ್ತಾನೆ. ಅದೇ ರೀತಿ ತಂದೆ ರಾಜವರ್ಧನ್ ಫೋಟೋ ನೋಡಿ ಮಾನ್ಸಿಯ ಬಳಿ ಅಪ್ಪ ಇರಬೇಕಿತ್ತು ನಮ್ಮಿಬ್ಬರನ್ನು ನೋಡಿ ತುಂಬಾ ಸಂತೋಷ ಪಡುತ್ತಿದ್ದರು ಎಂದು ಹೇಳಿ ಬೇಸರ ಪಟ್ಟುಕೊಳ್ಳುತ್ತಾನೆ.

    ಇದನ್ನೂ ಓದಿ: Sathya Serial: ಕೋಟೆ ಮನೆ ಸೊಸೆ ಸತ್ಯಾಳಿಗೆ ಇನ್ನು ಪ್ರತಿದಿನ ಹೊಸ ಹೊಸ ಪರೀಕ್ಷೆ!

    ಕನ್ಫ್ಯೂಷನ್ ನಲ್ಲಿ ಮಾನ್ಸಿ

    ಮಾನ್ಸಿಗೆ ಇವೆಲ್ಲವೂ ಒಗಟಾಗಿ ಕಂಡರು ಮನೆಯಲ್ಲೇನೋ ವಿಚಿತ್ರ ನಡೆಯುತ್ತದೆ ಎಂದು ಫೀಲ್ ಬರುತ್ತಿದೆ. ಒಮ್ಮೆ ಹರ್ಷ ಅನು ಸಿರಿಮನೆಯನ್ನು ಅತ್ತಿಗೆ ಎಂದು ಕರೆದರೆ ಇನ್ನೊಂದು ಸಲ ಅಕ್ಕ ಎಂದು ಕರೆಯುತ್ತಾನೆ, ಹಾಗೆ ಅನು ಕೂಡ ಏನಾದರೂ ಬುದ್ಧಿ ಮಾತು ಹೇಳುವ ಸಂದರ್ಭದಲ್ಲಿ ಹರ್ಷನನ್ನು ದೊಡ್ಡ ದನಿಯಲ್ಲಿ ಹಸ್ತ ಎಂದೇ ಕರೆಯುತ್ತಾಳೆ! ಆದರೆ ಇನ್ನೂ ಕೆಲವು ಸಂದರ್ಭದಲ್ಲಿ ಭಾವ ಎಂದು ಕರೆಯುವುದನ್ನು ಕಂಡಾಗ ಮಾನ್ಸಿಗೆ ಕನ್ಫ್ಯೂಷನ್ ಆಗುತ್ತಿದೆ.
    Published by:Swathi Nayak
    First published: