Jothe Jotheyali: ಶಾನುಭೋಗರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಜೇಂಡೆ! ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ‌ಮತ್ತೆ ಟ್ವಿಸ್ಟ್

ಆರ್ಯವರ್ಧನ್ ಬಗೆಗಿನ ಎಲ್ಲಾ ಸತ್ಯವನ್ನು ತಿಳಿದಿರುವ ಶಾನುಭೋಗರ ಬಳಿ ಅನು ಸಿರಿಮನೆ ಸಹಾಯವನ್ನು ಕೇಳಿದ್ದಾಳೆ. ಆದರೆ ಜೇಂಡೆಗೆ ಈ ಬಗ್ಗೆ ತಿಳಿದಿದೆ ‌ಮುಂದೆನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಜೇಂಡೆ

ಜೇಂಡೆ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಅದ್ಭುತ ಕಥೆಯನ್ನೊಳಗೊಂಡ ಧಾರವಾಹಿ ಜನಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ರಾಜನಂದಿನಿ (Rajanandini) ಅಧ್ಯಾಯದ ಬಳಿಕ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳಲ್ಲಿ ಗೆ ಧಾರವಾಹಿಯು ಮುನ್ನುಗ್ಗುತ್ತಿದೆ. ರಾಜವರ್ಧನ್ (Rajavardhan) ಹಾಗೂ ರಾಜನಂದಿನಿಯ ಸಾವಿಗೆ ನ್ಯಾಯ ಒದಗಿಸಿಕೊಡಲು ಅನುಸಿರಿಮನೆ ಹಾಗೂ ಮೀರಾ ಕೈಜೋಡಿಸಿದ್ದಾರೆ. ಆರ್ಯವರ್ಧನ್ ಬಗೆಗಿನ ಎಲ್ಲಾ ಸತ್ಯವನ್ನು ತಿಳಿದಿರುವ ಶಾನುಭೋಗರ (Shanubogh) ಬಳಿ ಅನು ಸಿರಿಮನೆ (Anu Sirimane) ಸಹಾಯವನ್ನು ಕೇಳಿದ್ದಾಳೆ. ಆದರೆ ಜೇಂಡೆಗೆ ಈ ಬಗ್ಗೆ ತಿಳಿದಿದೆ ‌ಮುಂದೆನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

  ಆರ್ಯವರ್ಧನ್ ಗೆ ಅಪಘಾತ?

  ಆರ್ಯವರ್ಧನ್ ಗೆ ಅಪಘಾತ ವಾಗಿರುವುದರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತೋರಿಸಿದ್ದಾರೆ‌. ಇದು ಜೇಂಡೆ ಮಾಡಿಸಿದ ತಂತ್ರ ‌ಎಂದು‌ ಹೊರ ನೋಟದಲ್ಲೇ ಬಿಂಬಿತವಾಗುತ್ತಿದೆ. ಹರ್ಷವರ್ಧನ್ ಆರ್ಯ ಮತ್ತು ಜೇಂಡೆಯ ಮೊಸದ ಬಗ್ಗೆ ಎಲ್ಲಾ‌ ವಿಚಾರಗಳನ್ನು ಅನು ಈಗಾಗಲೇ ತಿಳಿಸಿದ್ದಾಳೆ. ಅವನಿಂದ ತಪ್ಪಿಸಿಕೊಳ್ಳಲು ಈ ಅಪಘಾತದ ನಾಟಕ ಮಾಡಿರುವ ಸಾಧ್ಯತೆ ಕೂಡ ಇದೆ.

  ಆರ್ಯ ಮತ್ತು ಜೇಂಡೆಯ ತಂತ್ರಗಳು ಹೊಸ ಪ್ಲಾನ್ ಗಳು ಏನಿರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲಾ. ಆದರೇ ಇತ್ತೀಚೆಗೆ ಅನು ಸಿರಿಮನೆಗೆ ರಾಜನಂದಿನಿಯ ಬಗ್ಗೆ ತಿಳಿದ ಮೇಲೆ ಆಕೆಗೆ ಪ್ರತಿ ವಿಚಾರಗಳನ್ನು ಸಂಶಯದಲ್ಲೇ ನೋಡಬೇಕಾಗುವ ಪರಿಸ್ಥಿತಿ ಎದುರಾಗಿದೆ. ಈ ಅಪಘಾತ ಕೂಡ ಪೂರ್ಣ ನಿಯೋಜಿತ ಎಂದು ಅನುಗೆ ಸಂಶಯ ಎದುರಾಗಿದೆ.

  ಇದನ್ನೂ ಓದಿ: Bettada Hoo: ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಬೆಟ್ಟದ ಹೂ ಧಾರಾವಾಹಿ

  ಗೊಂದಲದಲ್ಲಿರುವ ಅನು ಸಿರಿಮನೆ

  ಇತ್ತ ಅನು ಪತಿಯ ಸೇವೆ ಮಾಡಬೇಕಾ ಇಲ್ಲಾ ಅನ್ಯಾಯದ ವಿರುದ್ಧ ಹೋರಾಡಬೇಕ ಎನ್ನುವ ಗೊಂದಲದಲ್ಲಿದ್ದಾಳೆ. ಮುಂದೇನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಇದೇ ವೇಳೆಗೆ ಜೋಗ್ತವ್ವ ಬಂದಿದ್ದು, ನೀನು ಕಂಡಿದ್ದನ್ನು ಪ್ರಮಾಣಿಸಿ ನೋಡು. ತಾಳ್ಮೆ ಮುಖ್ಯ. ಆತುರ ಪಟ್ಟು ಎಲ್ಲಾ ಕೆಲಸವನ್ನು ಹಾಳು ಮಾಡಿಕೊಳ್ಳಬೇಡ. ತಪ್ಪು ಮಾಡಿದವರು ಶಿಕ್ಷೆಯನ್ನು ಅನುಭವಿಸಲೇ ಬೇಕು ಎಂದು ಹೇಳಿ ಹೋಗುತ್ತಾಳೆ.

  ಹರ್ಷನ ಮನಸ್ಸು ಅತಂತ್ರ!

  ಹೌದು ತನ್ನ ದಾದನ ಬಗ್ಗೆ ಎಲ್ಲಾ ಸತ್ಯವನ್ನು ತಿಳಿದ ಹರ್ಷವರ್ಧನ್ ಗೆ ದಾದಾ ಮೋಸ ಮಾಡಿರುವುದಿಲ್ಲ ಎಂಬ ನಂಬಿಕೆ ಇದೆ. ತನ ಗೊಂದಲಗಳನ್ನೇಲ್ಲಾ ದಾದಾನ ಬಳಿ ಕೇಳಿ ಪರಿಹರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಪಘಾತದ ಸುದ್ದಿ ಹರ್ಷನಿಗೆ ತಿಳಿದಿದೆ. ಈಗ ಆರ್ಯನ ಬಳಿ ಹರ್ಷ ಅದೆಲ್ಲವನ್ನೂ ಕೇಳಬೇಕಿದೆ.  ನಿಜವಾಗಲೂ ತನಗೆ ಮೋಸವಾಗಿದೆಯಾ. ದಾದಾ ಎಚ್ಚರವಾಗುವವರೆಗೂ ಕಾಯುವುದಾಗಿ ನಿಶ್ಚಯ ಮಾಡಿದ್ದಾನೆ.

  ಇದನ್ನೂ ಓದಿ: Sushmitha Ramkala: ಪಾರು ಎದುರಾಳಿ ಯಾಮಿನಿ ರಿಯಲ್ ಲೈಫ್​ನಲ್ಲೂ ಎಷ್ಟು ಸ್ಟೈಲಿಶ್​ ನೋಡಿ

  ಶಾನುಭೋಗರಿಗೆ ಜೇಂಡೆಯಿಂದ ಖಡಕ್ ವಾರ್ನಿಂಗ್

  ಇತ್ತ ಶಾನುಭೋಗರು ಆರ್ಯವರ್ಧನ್ ಸರ್ ನ ನೋಡಲು ಮನೆಗೆ ಬಂದಿದ್ದಾರೆ. ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಜೇಂಡೆ ಶಾನುಭೋಗರನ್ನು ಗದರಿಸಿದ್ದಾನೆ. ನಿಮ್ಮ ಪಾಡಿಗೆ ನೀವು ಇರಬಹುದು ನಿಮ್ಮ ಕುಟುಂಬದ ಬಗ್ಗೆ ನಿಮಗೆ ಯೋಚನೆ ಇರಲಿ ಎಂದು ಬ್ಲಾಕ್ ಮೈಲ್ ಕೂಡ ಮಾಡಿದ್ದಾನೆ. ಇದೇ ಹೊತ್ತಿಗೆ ಅನು ಸಿರಿಮನೆ ಅಲ್ಲಿಗೆ ತಲುಪಿದ್ದಾಳೆ. ನಿಮ್ಮ ಸಹಾಯ ಕೊನೆವರೆಗೂ ನಮಗೆ ಬೇಕು ಎನ್ನುವಂತೆ ಅನು ಜೇಂಡೆ ಎದುರಲ್ಲೇ ಶಾನುಭೋಗರಿಗೆ ಹೇಳಿದ್ದಾಳೆ.

  ಪ್ರೇಕ್ಷಕರಿಗೆ ಎಲ್ಲರಿಗೂ ಈಗ ಧಾರವಾಹಿಯಲ್ಲಿ ನಿಜಕ್ಕೂ ವಿಲನ್ ಯಾರು ಹೀರೋ ಯಾರು ಎಂಬುದೇ ಬಹುದೊಡ್ಡ ಪ್ರಶ್ನೆ ಇದೆ. ಆರ್ಯವರ್ಧನ್ ಗೆ ಈಗಲೂ ರಾಜನಂದಿನಿಯ ಆಸ್ತಿಯ ಮೇಲೆ ಕಣ್ಣಿದೆಯೇ? ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
  Published by:Swathi Nayak
  First published: