Jothe Jotheyali: ರೋಚಕ ತಿರುವಿನೊಂದಿಗೆ 'ಜೊತೆ ಜೊತೆಯಲಿ', ರಾಜನಂದಿನಿಯಾಗಿ ಬಂದ ಅನು ಸಿರಿಮನೆ!

ಅನು ಆರ್ಯವರ್ಧನನ ಮೊದಲನೇ ಹೆಂಡತಿ ರಾಜ ನಂದಿನಿಯ ಕೊಲೆ ರಹಸ್ಯ ಬೇಧಿಸುವಂತೆ, ಅವಳ ಕೊಲೆಯ ಬಗೆಗಿನ ಹುಡುಕಾಟ ಶುರುವಾಯ್ತು. ಇದೀಗ ಜೊತೆ ಜೊತೆಯಲಿ ಧಾರಾವಾಹಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಜೊತೆ ಜೊತೆಯಲಿ

ಜೊತೆ ಜೊತೆಯಲಿ

 • Share this:
  'ನಂಬಿಕೆ' ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ 'ಜೊತೆ ಜೊತೆಯಲಿ' (Zee Kannada) ಧಾರಾವಾಹಿ ಕಥೆ ಹಲವಾರು ರೋಚಕ, ಮನಮೋಹಕ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ. 'ಜೊತೆ ಜೊತೆಯಲಿ' ಸೀರಿಯಲ್‌ ಮೂಲಕ ಸ್ಯಾಂಡಲ್‌ವುಡ್‌ (Sandalwood) ನಟ ಅನಿರುದ್ಧ (Anirudha) ಕಿರುತೆರೆಗೆ ಬಂದರು. ಈ ಸೀರಿಯಲ್‌ ಅವರಿಗೆ ಮತ್ತೆ ಬ್ರೇಕ್ ನೀಡಿತು. ಈ ಸೀರಿಯಲ್‌ (Serial) ನಲ್ಲಿ ಅವರು ಹಲವು ಶೇಡ್‌ಗಳಲ್ಲಿ ನಟಿಸಿರೋದು ವಿಶೇಷ. ಇದರಲ್ಲಿ ಅನಿರುದ್ಧ ಅವರು ಆರ್ಯ ವರ್ಧನ್ (Arya Vardhan) ಎಂಬ ಮಧ್ಯವಯಸ್ಕ ಸಾಲ್ಟ್ ಪೆಪ್ಪರ್ ಹೀರೋ ಆಗಿ ಎಷ್ಟು ಫೇಮಸ್ ಆಗ್ತಾರೆ ಅಂದರೆ ಇವರ ಹೇರ್‌ಸ್ಟೈಲ್‌ಅನ್ನು ಬಹಳ ಮಂದಿ ಫಾಲೋ ಮಾಡಲಿಕ್ಕೆ ಶುರು ಮಾಡುತ್ತಾರೆ.

  ಜೊತೆ ಜೊತೆಯಲಿ ಧಾರಾವಾಹಿಯ ಕಥೆ ಏನು?

  ಆರ್ಯವರ್ಧನ್ ಮೂಲ ಹೆಸರು ಸಂಜಯ್ ಪಾಟೀಲ್. ಆರ್ಯವರ್ಧನ್ ಶಾರದಾ ದೇವಿಯ ಅಳಿಯ. ಶಾರದಾ ದೇವಿಯ ಪುತ್ರಿ ರಾಜನಂದಿನಿ ಎಂಬುದು ಅನುಗೆ ಗೊತ್ತಾಗಿದೆ. ಆರ್ಯವರ್ಧನ್ ಹಳೇ ವಿಚಾರಗಳ ಬಗ್ಗೆ ಅನು ಸಿರಿಮನೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ರಾಜನಂದಿನಿ ಗೊತ್ತೋ ಗೊತ್ತಿಲ್ಲದೆ ಅನುಗೆ ಪದೇ ಪದೇ ದೊಡ್ಡ ಪ್ರಶ್ನೆಯಾಗುತ್ತಿದ್ದಾಳೆ.

  ಅನಿರುದ್ಧ್ ನಟನೆಗೆ ಮೆಚ್ಚುಗೆ

  ಆರ್ಯವರ್ಧನ್ ಖಳನಾಯಕನಾದರೆ ಧಾರಾವಾಹಿ ನೋಡಲ್ಲ ಎಂದಿದ್ದೋರು ಈಗ ಅನಿರುದ್ಧ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿಯ ಎಪಿಸೋಡ್‌ ದಿನದಿಂದ ದಿನಕ್ಕೆ ರೋಚಕವಾಗಿ ಮೂಡಿಬರುತ್ತಿದೆ. ಆರಂಭದಿಂದಲೂ ಈ ಧಾರಾವಾಹಿ ಟಾಪ್ 5ರೊಳಗಡೆ ಸ್ಥಾನ ಪಡೆದಿದೆ.

  ಇದನ್ನೂ ಓದಿ: Sathya Serial: ಬಾಲನ ಸುಳ್ಳಿನ ಅರಮನೆಯಲ್ಲಿ ಸಿಲುಕಿದಳಾ ದಿವ್ಯಾ? ಮುಂದೆ ಏನ್ ಮಾಡ್ತಾಳೆ ಸತ್ಯಾ?

  ಕನ್ನಡ ಸೀರಿಯಲ್‌ ಇತಿಹಾಸದಲ್ಲೇ ಒಂದು ಹೊಸ ಹೆಜ್ಜೆ

  ಅನು ಆರ್ಯವರ್ಧನನ ಮೊದಲನೇ ಹೆಂಡತಿ ರಾಜ ನಂದಿನಿಯ ಕೊಲೆ ರಹಸ್ಯ ಬೇಧಿಸುವಂತೆ, ಅವಳ ಕೊಲೆಯ ಬಗೆಗಿನ ಹುಡುಕಾಟ ಶುರುವಾಯ್ತು. ಇದನ್ನು ಇನ್ನಷ್ಟು ರೋಚಕವಾಗಿಸಲು ಕನಸು, ದೇವಿಯ ಪಾತ್ರಗಳೆಲ್ಲ ಬಂದವು. ಇವೆಲ್ಲಕ್ಕಿಂತ ಮುಖ್ಯವಾಗಿ ಹೀರೋ ಆಗಿ ಮೆರೆದ ಆರ್ಯವರ್ಧನ ಏಕಾಏಕಿ ವಿಲನ್ ಆಗಿ ಬದಲಾಗಿಬಿಟ್ಟದ್ದು ಕನ್ನಡ ಇತಿಹಾಸದಲ್ಲೇ ಒಂದು ಹೊಸ ಹೆಜ್ಜೆ.

  ಇವರು ಹೀರೋನಾ? ವಿಲನ್ನಾ?

  ಶುರುವಲ್ಲಿ ಈ ಜೋಡಿಯನ್ನು ಇಷ್ಟಪಡುವ ಸಾವಿರಾರು ಜನ ಈ ಟರ್ನ್ ಅನ್ನು ತೀವ್ರವಾಗಿ ವಿರೋಧಿಸಿದ್ರು. ಹೀಗೆಲ್ಲ ನಮ್ಮ ಭಾವನೆಗೆ ಹರ್ಟ್ ಮಾಡಿದ್ರೆ ಸೀರಿಯಲ್ ಬಹಿಷ್ಕರಿಸ್ತೀವಿ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಗಲಾಟೆ ಶುರುವಾಯಿತು ಇದಕ್ಕೆ ಆರ್ಯವರ್ಧನ್ ಪಾತ್ರ ಮಾಡುವ ಅನಿರುದ್ಧ ಅವರೇ ಸ್ಪಷ್ಟನೆ ಕೊಡಬೇಕಾಯಿತು. ಸೀರಿಯಲ್‌ ಟೀಮ್ ಗೆ ಮುಂದಿನ ಕತೆ ಸ್ಪಷ್ಟವಿತ್ತು. ಅವರು ಆರ್ಯನನ್ನು ಹೀರೋ ಆಗಿ ಒಪ್ಪಿದ ಜನರೇ, ಆತನನ್ನು ವಿಲನ್‌ ಆಗಿಯೂ ಒಪ್ಪುವ ಹಾಗೆ ಮಾಡಿದರು.

  ಲಂಡನ್‌ಗೆ ಹೊರಟಿರುವ ಆರ್ಯವರ್ಧನ್

  ಇತ್ತ ಆರ್ಯವರ್ಧನ್ ಅನು ನಡೆದುಕೊಂಡ ರೀತಿಯ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಲಂಡನ್‌ಗೆ ಹೊರಟಿರುವ ಆರ್ಯನ ಮನಸಲ್ಲಿ ಅನುಳದ್ದೇ ಯೋಚನೆ ಇರುತ್ತದೆ. ಆಗ ಝೇಂಡೇ ಬೇರೆ ದೇಶಕ್ಕೆ ಹೋಗುವಾಗ ಇರುವ ಹುಮ್ಮಸಿಲ್ಲ. ಏನಾಗಿದೆಯೋ ಗೊತ್ತಿಲ್ಲ ಕಾಲ ಬದಲಾದಂತೆಯೇ, ಸ್ನೇಹಿತನು ಬದಲಾಗುತ್ತಾನೆ ಎಂದು ಹೇಳಿದಾಗ ಆರ್ಯ ಮಾತನಾಡಲು ಶುರು ಮಾಡುತ್ತಾನೆ. ಯಾಕೋ ಜೀವನದಲ್ಲಿ ಮೊದಲ ಬಾರಿಗೆ ಕೆಲಸವನ್ನೆಲ್ಲಾ ಪಕ್ಕಕ್ಕಿಟ್ಟು ಇಲ್ಲೇ ಕೂರಬೇಕು ಎನಿಸುತ್ತಿದೆ. ಒಂದು ಕ್ಷಣವೂ ಆಕೆಯನ್ನ ಬಿಟ್ಟು ಇರೋದಕ್ಕೆ ಆಗೋದಿಲ್ಲ ಅನಿಸುತ್ತಿದೆ. ನಾನು ಲಂಡನ್‌ಗೆ ಹೋದರೆ ಏನೋ ಆಗುತ್ತೆ ಅನಿಸುತ್ತಿದೆ. ಕೊನೆಪಕ್ಷ ದ್ವೇಷವನ್ನ ಬೇಕಿದ್ದರೂ ಸಹಿಸಿಕೊಳ್ಳುತ್ತೀನಿ. ಆದರೆ, ತಿರಸ್ಕಾರವನ್ನ ಸಹಿಸೋದಿಲ್ಲ. ಅನು ನನ್ನ ತಿರಸ್ಕರಿಸುತ್ತಿದ್ದಾಳೆ ಎಂದು ಕೊರಗುತ್ತಾನೆ.

  ಇದನ್ನೂ ಓದಿ: Yamuna Srinidhi: ಯಮುನಾ ಶ್ರೀನಿಧಿ ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು ನೀವೇ ಓದಿ ನೋಡಿ

  ರಾಜ ನಂದಿನಿ ಸಾವು ಆಕಸ್ಮಿಕವಾಗಿತ್ತು. ಆಕೆ ಬಂಡೆಯಲ್ಲಿ ಕಾಲು ಜಾರಿ ಬಿದ್ದಿದ್ದಳು ಅನ್ನೋದನ್ನು ಸೀರಿಯಲ್‌ ಮುಂದಿನ ಭಾಗದಲ್ಲಿ ತೋರಿಸಲಾಗುತ್ತದೆ. ಅಲ್ಲಿಗೆ ರಾಜನಂದಿನಿ ಅಧ್ಯಾಯಕ್ಕೆ ಮುಕ್ತಿ ಸಿಗುತ್ತದೆ. ಮುಂದೆ ಅನು ಆರ್ಯ ಚೆನ್ನಾಗಿರುತ್ತಾರಾ? ಯಲ್ಲಮ್ಮ ತಾಯಿ ದಯದಿಂದ ಅವರ ಬದುಕು ಸುಗಮವಾಗುತ್ತಾ? ಅಥವಾ ಮತ್ತೆ ರೋಚಕ ಟ್ವಿಸ್ಟ್ ಸಿಗುತ್ತಾ ಅನ್ನೋದನ್ನು ಇನ್ನಷ್ಟೇ ನೋಡಬೇಕಿದೆ.
  Published by:Swathi Nayak
  First published: