Jothe Jotheyali: ಲಂಡನ್​ನಿಂದ ಬಂದ ಆರ್ಯವರ್ಧನ್​ಗೆ ಕಾದಿದೆ​ ಶಾಕ್​ - ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​

ಸದ್ಯಕ್ಕೀಗ ವಿದೇಶದಿಂದ ಆರ್ಯವರ್ಧನ್ ಮರಳಿದ್ದಾನೆ. ಆತ ಮನೆಯೊಳಗೆ ಬಂದಾಗ ಅನು ಮೆಟ್ಟಿಲಿಳಿದು ಬರುತ್ತಿರುವುದು ಅವನಿಗೆ ಸಾಕ್ಷಾತ್ ರಾಜನಂದಿನಿಯನ್ನೇ ಕಂಡ ಹಾಗಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ(Jothe jotheyali serial) ಹೊಸ ಹೊಸ ತಿರುವು, ಹೊಸ ಬಗೆಯ ಕತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದೆ. ಇದೀಗ ಮತ್ತೊಂದು ತಿರುವು ಬರುತ್ತಿದ್ದು, ವೀಕ್ಷಕರು ಉಸಿರು ಬಿಗಿ ಹಿಡಿದು ಮುಂದಿನ ಎಪಿಸೋಡ್‌ಗಳಿಗೆ (Episode) ಕಾಯುವಂತಾಗಿದೆ. ಜೊತೆ ಜೊತೆಯಲಿ ಸೀರಿಯಲ್ (Serial) ನಲ್ಲಿ ಈಗ ರಾಜನಂದಿನಿ (Rajanandini) ಕಥೆ ಶೇ. 90% ಭಾಗ ಮುಕ್ತಾಯಗೊಂಡಿದೆ. ಈಗ ಅನು ಗೆ ಆರ್ಯವರ್ಧನ್ (Anu Aryavardhan) ಬಗ್ಗೆ ಸಂಪೂರ್ಣವಾಗಿ ಅರ್ಥವಾಗಿದ್ದು, ಈ ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಮಾಡಬೇಕು. ರಾಜವರ್ಧನ್ (Rajavardhan) ಹಾಗೂ ರಾಜನಂದಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತೀರ್ಮಾನಿಸಿದ್ದಾಳೆ.

    ಆರ್ಯ ವರ್ಧನ್‌ನಿಂದ ತನ್ನ ಕುಟುಂಬಕ್ಕಾದ ಅನ್ಯಾಯವನ್ನು ಸರಿ ಮಾಡಬೇಕು ಅಂತ ಅನು ಅಂದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಅದನ್ನು ಕಾರ್ಯರೂಪಕ್ಕೆ ತರಲೂ ಪ್ರಯತ್ನಿಸಿದ್ದಾಳೆ. ಅದರ ಮೊದಲ ಹೆಜ್ಜೆಯಾಗಿ ಹರ್ಷನನ್ನು ಆರ್ಯವರ್ಧನ್ ಕೂರುತ್ತಿದ್ದ ಬಾಸ್ ಸೀಟ್‌ ಮೇಲೆ ಕೂರಿಸಿದ್ದಾಳೆ. ಈ ಹರ್ಷ ಅರ್ಥಾತ್ ಹರ್ಷವರ್ಧನ ರಾಜನಂದಿನಿಯ ತಮ್ಮ.

    ಇದನ್ನೂ ಓದಿ: Rachana Smith: ಕಮಲಿಯ ಅನಿಕಾ ಬಣ್ಣದ ಲೋಕಕ್ಕೆ ಬಂದು 9 ವರ್ಷ - ರಚನಾ ಸ್ಮಿತ್​ ರಿಯಲ್​ ಸ್ಟೋರಿ ಇದು

     ಹರ್ಷನನ್ನು ಆರ್ಯವರ್ಧನ ಕೂರುತ್ತಿದ್ದ ಸೀಟಿನ ಮೇಲೆ ಕೂರಿಸಿದ್ದಾಳೆ ಅನು

    ತನ್ನ ಪಿತ್ರಾರ್ಜಿತ ಆಸ್ತಿಯನ್ನು ಯಾರೋ ಅನುಭೋಗಿಸುವುದನ್ನು ನೋಡುತ್ತಿರುವ ನತದೃಷ್ಟ. ಆದರೆ ಆತನಿಗೆ ಅವನ ಆಸ್ತಿಯನ್ನು ಮತ್ತೆ ನೀಡಲು ಮುಂದಾಗಿದ್ದಾಳೆ ಅನು. ಇಲ್ಲಿಯವರೆಗೆ ಹರ್ಷನನ್ನು ಭಾವ ಎಂದು ಕರೆಯುತ್ತಿದ್ದ ಅನು ಇದೀಗ ಏಕಾಏಕಿ ಆತನ ಹೆಸರು ಹಿಡಿದು ಕರೆದಿದ್ದಾಳೆ. ಸ್ವತಃ ರಾಜ ನಂದಿನಿಯಂತೇ ಆತನ ಜೊತೆಗೆ ಅನು ವರ್ತನೆ ಇದೆ. ಅವಳೇ ಹರ್ಷನನ್ನು ಕರೆತಂದು ಆರ್ಯವರ್ಧನ ಕೂರುತ್ತಿದ್ದ ಸೀಟಿನ ಮೇಲೆ ಕೂರಿಸಿದ್ದಾಳೆ. ಇನ್ನು ಮೇಲೆ ಈ ಎಲ್ಲ ಅಧಿಕಾರವೂ ನಿನ್ನದೇ ಅಂದಿದ್ದಾಳೆ.

    ಶಾರದಾದೇವಿಯ ಬಳಿ ಹಳೆ ವಿಚಾರ ಕೆದಕಿದ ಅನು ಸಿರಿಮನೆ

    ತನ್ನ ಪತಿ ಮತ್ತು ಮಗಳನ್ನು ಕಳೆದುಕೊಂಡ ಶಾರದಾದೇವಿಯ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಆರ್ಯವರ್ಧನ್ ಇಲ್ಲಿ ಮನೆಯ ಪೂರ್ತಿ ಜವಾಬ್ದಾರಿಯನ್ನು ತೆಗೆದು ಕೊಂಡಿರುತ್ತಾನೆ. ಆದರೆ ಈ ಬಗ್ಗೆ ಅನು ಮತ್ತೆ ಶಾರದಾದೇವಿಯ ಬಳಿ ಹಳೆಯ ವಿಚಾರಗಳನ್ನೆಲ್ಲ ಮತ್ತೆ ಕೇಳುತ್ತಾಳೆ. ಆರ್ಯವರ್ಧನ್ ನಿಂದಲೇ ಈ ಮನೆ ಮತ್ತು ವರ್ಧನ್ ಕಂಪನಿ ಉಳಿದಿರುವುದೆಂದು ನಂಬಿರುವ ಶಾರದಾದೇವಿಯ ಮುಗ್ಧತೆಯನ್ನು ಕಂಡು ಅನು ವ್ಯಥೆ ಪಡುತ್ತಾಳೆ. ಸತ್ಯವನ್ನು ಹೇಳಲಾಗದೆ ತನ್ನಲ್ಲೇ ತಾನು ಕೊರಗುತ್ತಿದ್ದಾಳೆ. ಸಾಕ್ಷಿ ಸಮೇತ ಆರ್ಯ ಸರ್ ಬಣ್ಣ ಬಯಲು ಮಾಡಬೇಕು ಎಂದು ಯೋಚಿಸುತ್ತಾಳೆ.

    ಮೀರಾಳ ಬಾಯಿ ಯನ್ನು ಮುಚ್ಚಿಸುತ್ತಿದ್ದಾಳೆ ಅನು

    ಇತ್ತ ಖಡಕ್ಕಾಗಿ ಮೀರಾಳಿಗೆ ವಾರ್ನ್ ಮಾಡುತ್ತಿರುವ ಅನು ಆರ್ಯವರ್ಧನ್ ನ ಕಂಡು ಮೀರಾ ವಿಚಲಿತಳಾಗಿದ್ದಾಳೆ. ಆಫೀಸ್ ನಲ್ಲಿ ‌ ನಡೆಯುತ್ತಿರುವ ಪ್ರತಿ ವಿಚಾರಗಳನ್ನು ಆರ್ಯ ಸರ್ ಗೆ ತಲುಪಿಸುತ್ತಿದ್ದ ಮೀರಾಳ ಬಾಯಿ ಯನ್ನು ಮುಚ್ಚಿಸುತ್ತಿದ್ದಾಳೆ ಅನು. ಹರ್ಷವರ್ಧನ್ ಹಾಗೂ ಶಾರದಾ ದೇವಿ ಈ ಕಂಪನಿಯ ಓನರ್  ಆರ್ಯವರ್ಧನ್ ಈ ಕಂಪನಿಯ ಕೇರ್ ಟೇಕರ್ ಅಷ್ಟೇ ಈ ಕಂಪೆನಿಯ ಓನರ್ ಅಲ್ಲಾ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ ಅನು.

    ಇದನ್ನೂ ಓದಿ: Sathya Serial: ಸತ್ಯಗೆ ಸುತ್ತಿಕೊಂಡ ಮದುವೆ ನಂಟು ಕಾರ್ತಿಕ್ ತಾಳಿ ಕಟ್ಟೋದೊಂದೆ ಬಾಕಿ!

    ವಿದೇಶದಿಂದ ಆರ್ಯವರ್ಧನ್ ಮರಳಿದ್ದಾನೆ

    ಸದ್ಯಕ್ಕೀಗ ವಿದೇಶದಿಂದ ಆರ್ಯವರ್ಧನ್ ಮರಳಿದ್ದಾನೆ. ಆತ ಮನೆಯೊಳಗೆ ಬಂದಾಗ ಅನು ಮೆಟ್ಟಿಲಿಳಿದು ಬರುತ್ತಿರುವುದು ಅವನಿಗೆ ಸಾಕ್ಷಾತ್ ರಾಜನಂದಿನಿಯನ್ನೇ ಕಂಡ ಹಾಗಾಗಿದೆ. ಆದರೆ ಅನು ಮುಖದಲ್ಲಿ ಸಣ್ಣ ನಗೆಯಿದ್ದರೂ ಕಠಿಣತೆ ಇದೆ. ಆರ್ಯವರ್ಧನ್‌ ಎದುರು ಹಾಕಿಕೊಂಡು ಹರ್ಷನನ್ನು ಬಾಸ್‌ ಆಗಿ ಮಾಡುವ ಛಲವಿದೆ. ಮುಂದೇನಾಗುತ್ತೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕು.
    Published by:Swathi Nayak
    First published: