Jothe Jotheyali: ಅಧರ್ಮದ ವಿರುದ್ಧ ಹೋರಾಡಲು ಜೊತೆಯಾದ ಅನು-ಮೀರಾ! ಇನ್ನೇನು ಕಾದಿದೆ ಆರ್ಯವರ್ಧನ್‌ಗೆ?

ರಾಜನಂದಿನಿ ಹಾಗೂ ರಾಜ್ಯವರ್ಧನ್ ಸಾವಿಗೆ ಕಾರಣರಾದ ಆರ್ಯವರ್ಧನ್ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ್ದಾಳೆ ಅನು ಸಿರಿಮನೆ. ಇತ್ತ ಆರ್ಯ ಸರ್‌ ಇಷ್ಟಪಡುತ್ತಿದ್ದ ಮೀರಾ ಇದೀಗ ಅವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾಳೆ!

ರಾಜನಂದಿನಿ ಹಾಗೂ ರಾಜ್ಯವರ್ಧನ್ ಸಾವಿಗೆ ಕಾರಣರಾದ ಆರ್ಯವರ್ಧನ್ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ್ದಾಳೆ ಅನು ಸಿರಿಮನೆ. ಇತ್ತ ಆರ್ಯ ಸರ್‌ ಇಷ್ಟಪಡುತ್ತಿದ್ದ ಮೀರಾ ಇದೀಗ ಅವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾಳೆ!

ರಾಜನಂದಿನಿ ಹಾಗೂ ರಾಜ್ಯವರ್ಧನ್ ಸಾವಿಗೆ ಕಾರಣರಾದ ಆರ್ಯವರ್ಧನ್ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ್ದಾಳೆ ಅನು ಸಿರಿಮನೆ. ಇತ್ತ ಆರ್ಯ ಸರ್‌ ಇಷ್ಟಪಡುತ್ತಿದ್ದ ಮೀರಾ ಇದೀಗ ಅವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾಳೆ!

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jothe Jotheyali) ಕೂಡ ಒಂದು. ನಟ ಅನಿರುದ್ಧ ಹಾಗೂ ಮೇಘ ಶೆಟ್ಟಿ ಅಭಿನಯದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿ ಟಿಆರ್ ಪಿ ನಲ್ಲೂ ಸದಾ ಮುಂದಿರುತ್ತದೆ. ಇತ್ತೀಚೆಗೆ ಈ ಧಾರಾವಾಹಿಯಲ್ಲಿ ರಾಜನಂದಿನಿ ಅಧ್ಯಾಯವು ಪ್ರಸಾರಗೊಂಡಿತ್ತು. ಅನು ಸಿರಿಮನೆ (Anu Sirimane) ಮನಸ್ಸಿನಲ್ಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಅದೇ ರೀತಿ ಇದೀಗ ಅನು ಇದೀಗ ರಾಜನಂದಿನಿ (Rajanandini) ಹಾಗೂ ರಾಜ್ಯವರ್ಧನ್ ಸಾವಿಗೆ ಕಾರಣರಾದ ಆರ್ಯವರ್ಧನ್ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ್ದಾಳೆ.

  ಮೀರಾಳಿಗೆ ಆರ್ಯವರ್ಧನ್ ಬಗೆಗಿನ ಸತ್ಯದರ್ಶನ

  ಆಫೀಸ್ ಪ್ರತಿ ನ ವಿಷಯದಲ್ಲೂ ಆರ್ಯವರ್ಧನ್ ಗೆ ಜೊತೆಯಾಗಿರುವುದು ಮೀರಾ ಹೆಗಡೆ. ಹೌದು ಆರಂಭದಿಂದಲೇ ಆರ್ಯ ಸರ್ ನ ಕಂಡರೆ ಮೀರಾಳಿಗೆ ಗೌರವದ ಜೊತೆಗೆ ಪ್ರೀತಿ ಕೂಡ ಇತ್ತು. ದೊಡ್ಡ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಆರ್ಯ ಬಗ್ಗೆ ಮೀರಾಳಿಗೆ ಅಕ್ಕರೆ ಜಾಸ್ತಿ. ಅದೇ ರೀತಿ ತಾನು ಪ್ರೀತಿಸುತ್ತಿದ್ದ ಆರ್ಯ ಸರ್ ಇದೀಗ ಅನುಸಿರಿ ಮನೆಯ ಸ್ವಂತ ಎಂದು ತಿಳಿದ ಮೇಲೆ ಮೀರಾಳಿಗೆ ಅನು ಅವರನ್ನು ಕಂಡರೆ ಅಷ್ಟಕಷ್ಟೇ ಆಗಿತ್ತು.

  ಆದರೆ ಇದೀಗ ಮೀರಾ ಆರ್ಯ ಸರ್ ನ ದ್ವೇಷಿಸಲು ಪ್ರಾರಂಭಿಸಿದ್ದಾಳೆ. ವೀಕ್ಷಕರೆಲ್ಲರಿಗೂ ಇದು ಶಾಕಿಂಗ್ ವಿಷಯ ಎಂದರೆ ತಪ್ಪಾಗಲಾರದು. ಹೌದು ಮೀರಾಳನ್ನು ರಾಜನಂದಿನಿ ವಿಲಾಸಕ್ಕೆ ಡಿನ್ನರ್ ಗೆ ಕರೆದು ಅನು ಸಿರಿಮನೆ ರಾಜ ನಂದಿನಿಯ ಸಾವಿಗೆ ಕಾರಣ ಯಾರು ಎಂಬುವುದನ್ನು ತಿಳಿಸಿದ್ದಾಳೆ. ಅದೇ ರೀತಿ ಸೀಕ್ರೆಟ್ ರೂಂ ಒಳಗಡೆ ಏನಿದೆ ಎಂಬುದನ್ನು ತೋರಿಸಿದ್ದಾಳೆ. ವಾಸ್ತವದಲ್ಲಿ ಆರ್ಯವರ್ಧನ್ ಗೆ ಕಂಪೆನಿಯಲ್ಲಿ ಯಾವುದೇ ರೀತಿಯ ಅಧಿಕಾರ ಇಲ್ಲ ಎಂಬುದನ್ನು ಕೂಡ ತಿಳಿಸಿದ್ದಾಳೆ ಅನುಸಿರಿಮನೆ. ಮೀರಾಳಿಗಂತೂ ಈ ಶಾಕ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ತನ್ನ ಮನೆಯಲ್ಲಿದ್ದ ಆರ್ಯ ಸರ್ ಎಲ್ಲಾ ಫೋಟೋಗಳನ್ನು ತೆಗೆದು ಹಾಕುತ್ತಿದ್ದಾಳೆ ಮೀರಾ.

  ಇದನ್ನೂ ಓದಿ: Ibbani: 'ನನ್ನಮ್ಮ ಸೂಪರ್‌ ಸ್ಟಾರ್' ಖ್ಯಾತಿಯ ಇಬ್ಬನಿಯಿಂದ ಕೂದಲು ದಾನ! ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು

  ರಾಜನಂದಿನಿಯ ಸಾವಿಗೆ ನ್ಯಾಯ ಒದಗಿಸಲು ಒಂದಾದ ಮೀರಾ-ಅನು ಸಿರಿಮನೆ

  ರಾಜನಂದಿನಿಯ ಸಾವಿಗೆ ನ್ಯಾಯ ಒದಗಿಸಲು ಮೀರಾ ಹಾಗೂ ಅನು ಸಿರಿಮನೆ ಈಗ ಒಂದಾಗಿದ್ದಾರೆ. ಅದೇ ರೀತಿ ಮೀರಾ ಆಫೀಸ್ ಕಡೆ ಹೋಗಲು ಹಿಂದೇಟು ಹಾಕುತ್ತಿದ್ದಾಳೆ. ಆದರೆ ಅನು ಮೀರಾಳಿಗೆ ಕರೆಮಾಡಿ ಆಫೀಸ್ ಗೆ ಬರುವಂತೆ ಹೇಳಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸೋಣ ಎಂದು ಹೇಳಿದ್ದಾಳೆ.

  ಆಫೀಸ್ ಗೆ ತಡವಾಗಿ ಬಂದ ಮೀರಾಳನ್ನು ಕಂಡು ಆರ್ಯವರ್ಧನ್ ಬಲಗೈ ಬಂಟ ಜೇಂಡೆಗೆ ಆಶ್ಚರ್ಯವಾಗುತ್ತದೆ. ಅದೇ ರೀತಿ ಮೀರಾಜಿ ಬಳಿ ಪ್ರಶ್ನೆಗಳ ಮೇಲೆ ಪ್ರಶ್ನೆ ಯನ್ನು ಕೇಳುತ್ತಾನೆ ಜೇಂಡೆ. ಮೀರಾಳ ಒಗ್ಗಟ್ಟು ಮಾತಿನಿಂದ ಜೇಂಡೆ ಆಶ್ಚರ್ಯಚಕಿತನಾಗಿದ್ದಾನೆ.

  ಇದನ್ನೂ ಓದಿ: Aniruddha Jatkar: ಮೋದಿಗೆ 'ಜೊತೆ ಜೊತೆಯಲಿ' ನಟ ಅನಿರುದ್ಧ್ ಪತ್ರ! ಲೆಟರ್​ನಲ್ಲೇನಿದೆ?

  ಸದ್ಯದಲ್ಲೇ ಹರ್ಷವರ್ಧನ್ ಪಾಲಾಗುತ್ತಾ ಆಫೀಸ್!

  ಆಫೀಸ್ ನಿಂದ ಹರ್ಷವರ್ಧನನ್ನು ಹೊರಹಾಕಲು ಜೇಂಡೆ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾನೆ. ಈ ಬಗ್ಗೆ ಅನು ಹಾಗೂ ಮೀರಾಳಿಗೆ ಸಂಶಯ ಕೂಡ ಇದೆ. ಇದನ್ನು ತಿಳಿದುಕೊಳ್ಳಲು ಇದೀಗ ಮೀರಾ ಹಾಗೂ ಅನು ಪ್ರಯತ್ನ ಪಡುತ್ತಿದ್ದಾರೆ. ದಾದಾ ಆರ್ಯನ ಮೇಲೆ ಹರ್ಷವರ್ಧನ ಎಲ್ಲಿಲ್ಲದ ಅಭಿಮಾನ. ವಾಸ್ತವ ತಿಳಿದು ಆಫೀಸ್ ಜವಾಬ್ದಾರಿ ತೆಗೆದುಕೊಳ್ಳುತ್ತಾನಾ ಹರ್ಷ? ಹರ್ಷವರ್ಧನ್ ಗೆ ನ್ಯಾಯ ಒದಗಿಸಿ ಕೊಡುತ್ತಾಳಾ ಅನು ಎಂದು ಕಾದು ನೋಡಬೇಕಿದೆ. ಮುಂದಿನ ಸಂಚಿಕೆಗಳಲ್ಲಿ ಏನಾಗುತ್ತದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಜೊತೆ ಜೊತೆಯಲಿ ಅಭಿಮಾನಿಗಳಿಗೆ ಕಾಡುತ್ತಿದೆ.
  Published by:Swathi Nayak
  First published: