• Home
  • »
  • News
  • »
  • entertainment
  • »
  • Jothe Jothyali Serial: ಅನು ಬಳಿ ಎಲ್ಲಾ ರಹಸ್ಯ ಹೇಳಿ ಬಿಡುತ್ತಾನಾ ಆರ್ಯವರ್ಧನ್?

Jothe Jothyali Serial: ಅನು ಬಳಿ ಎಲ್ಲಾ ರಹಸ್ಯ ಹೇಳಿ ಬಿಡುತ್ತಾನಾ ಆರ್ಯವರ್ಧನ್?

ಆರ್ಯವರ್ಧನ್

ಆರ್ಯವರ್ಧನ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಪ್ರತಿದಿನ ರೋಚಕ ತಿರುವುಗಳು ಒಂದಿಗೆ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ.

  • Share this:

    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jothe Jothyali) ಕೂಡ ಒಂದು. ಪ್ರತಿದಿನ ರೋಚಕ ತಿರುವುಗಳು ಒಂದಿಗೆ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಇದೀಗ ರಾಜನಂದಿನಿ (Rajanandini) ಅಧ್ಯಾಯದ ಬಳಿಕವಂತೂ ಆರ್ಯವರ್ಧನ್ ಮೋಸದ ಬಗ್ಗೆ ಒಬ್ಬೊಬ್ಬರಿಗೆ ತಿಳಿಯುತ್ತಾ ಬಂದಿದೆ. ರಾಜನಂದಿನಿ ಹಾಗೂ ರಾಜವರ್ಧನ್ (Rajavardhan) ಸಾವಿಗೆ ನ್ಯಾಯ ಒದಗಿಸಿಕೊಡಲು ರಾಜನಂದಿನಿ ಮತ್ತೆ ಅನು ಸಿರಿಮನೆ (Anu Sirimane) ರೂಪದಲ್ಲಿ ಆರ್ಯ ವಿಲಾಸಕ್ಕೆ ಬಂದಿದ್ದಾಳೆ. ಆರ್ಯವರ್ಧನ್ ಬಂಟ ಜೇಂಡೆ ಸದ್ಯದ ಮಟ್ಟಿಗೆ ಆರ್ಯವರ್ಧನ್ ಗೆ ವಿಲನ್ ಆಗುವ ಸಾಧ್ಯತೆ ಕೂಡ ಕಾಣಿಸುತ್ತಿದೆ.


    ಅಪಘಾತ ನಡೆದ ಬಗ್ಗೆ ನಿಜಾಂಶ ಬಯಲು


    ವಾಸ್ತವದಲ್ಲಿ ಆರ್ಯವರ್ಧನ್ ಗೆ ಆಗಿದ್ದು ಆಕ್ಸಿಡೆಂಟ್ ಅಲ್ಲ. ಇದು ಜೇಂಡೆ ಮತ್ತು ಆರ್ಯ ಕಾರಿನಲ್ಲಿ ಹೋಗುತ್ತಿರುವಾಗ ನಡೆದ ಒಂದು ಮಾತಿನ ಚಕಮಕಿಯಿಂದ ಆರ್ಯ ಜೇಂಡೆ ಮೇಲಿನ ಸಿಟ್ಟಿನಿಂದ ಕಾರ್ ಡೋರ್ ಓಪನ್ ಮಾಡಿ ಚಲಿಸುತ್ತಿರುವ ಕಾರಿನಿಂದ ಹೊರಗೆ ಹಾರುತ್ತಾನೆ. ಇದರಿಂದ ಆರ್ಯವರ್ಧನ್ ತಲೆಗೆ ಬಲವಾದ ಪೆಟ್ಟು ಕೂಡ ಬೀಳುತ್ತದೆ. ಇದನ್ನು ಎಲ್ಲರ ಮುಂದೆ ಜೇಂಡೆ ಅಪಘಾತವೆಂದು ಹೇಳಿ ಬಿಡುತ್ತಾನೆ.


    ಇದನ್ನೂ ಓದಿ: Hitler Kalyana: ಚಂದ್ರಶೇಖರ್ ಮೇಲಿನ ಕಳಂಕ ತೊಳೆದು ಹಾಕಿದ ಮಿಸ್ಟರ್ ಪರ್ಫೆಕ್ಟ್; ವರ್ಕೌಟ್ ಆದ ದುರ್ಗಾಳ ಪ್ಲಾನ್


    ಅನು ಸಿರಿಮನೆ ಬಳಿ ಸತ್ಯ ಹೇಳಲು ಮುಂದಾದ ಆರ್ಯವರ್ಧನ್


    ಅನುಸಿರಿ ಮನೆಯಲ್ಲಿ ಮನಸ್ಪೂರ್ವಕವಾಗಿ ಇಷ್ಟಪಡುತ್ತಿರುವ ಆರ್ಯನಿಗೆ ಜೇಂಡೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿ ಮನಸ್ಸು ಕೆಡಿಸುವ ಮಾಡುತ್ತಿದ್ದಾನೆ. ತನ್ನ ಬದುಕಿನಲ್ಲಾದ ಎಲ್ಲಾ ವಿಚಾರಗಳನ್ನು ಅನು ಬಳಿ ಹೇಳಿಕೊಳ್ಳುತ್ತೇನೆ ಎಂದು ಆರ್ಯ ಯೋಚಿಸಿದ್ದಾನೆ. ಆದರೆ ಪದೇ ಪದೇ ಸತ್ಯ ಹೇಳುವ ಆರ್ಯನ ಪ್ರಯತ್ನವನ್ನು ಜೇಂಡೆ ತಪ್ಪಿಸುತ್ತಿದ್ದಾನೆ. ಆದರೆ ಪದೇ ಪದೇ ಸತ್ಯ ಹೇಳುವ ಆರ್ಯನ ಪ್ರಯತ್ನವನ್ನು ಜೇಂಡೆ ತಪ್ಪಿಸುತ್ತಿದ್ದಾನೆ.


    ಅನು ಸಿರಿಮನೆಯ ಪ್ರೀತಿಯಲ್ಲಿ ಕಳೆದುಕೊಳ್ಳುತ್ತೇನೊ ಎಂಬ ಭಯದಲ್ಲಿ ಆರ್ಯ ಕಳೆದು ಹೋಗಿದ್ದಾನೆ. ಆದರೆ ಜೇಂಡೆ ಮಾತಿನಲ್ಲೇ ಆರ್ಯನನ್ನು ಹೆದರಿಸಿ ಇಟ್ಟು ನಿನ್ನ ನಿಜವಾದ ಫ್ಯಾಮಿಲಿ ಬಗ್ಗೆ ತಿಳಿದಾಗ ಅನು ಊಟಿ ಕಡೆ ಹೋಗಿ ಅಲ್ಲಿಂದ ಸತ್ಯವನ್ನು ತಿಳಿದುಕೊಂಡು ಬರುವ ಸಾಹಸವನ್ನು ಮಾಡಿದ್ದಾಳೆ.


    ಇನ್ನು ನೀನು ಮಾಡಿದ ಎಲ್ಲ ಮೋಸ ಗಳ ಬಗ್ಗೆ ತಿಳಿದರೆ ಅನು ಮನೆ ಬಿಟ್ಟು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆರ್ಯನ ಬಳಿ ಹೇಳುತ್ತಾನೆ.


    ಇದನ್ನೂ ಓದಿ: Kannadathi Serial: ಹೀರೋ ಜೊತೆ ಮದುವೆ ಆಗೋದು ನಾನೇ ಅಂತಿದ್ದಾಳೆ ವರೂಧಿನಿ!


    ಅನು ಗರ್ಭಿಣಿಯಾಗಿದ್ದಾಳಾ?


    ಹೌದು ಕಳೆದ ಕೆಲವು ಸಂಚಿಕೆಗಳಲ್ಲಿ ಅನುಸಿರಿ ಮನೆಯ ಆರೋಗ್ಯದಲ್ಲಿ ಏರುಪೇರಾಗುವುದು ಕಾಣುತ್ತಿದ್ದೆವು. ಆಕೆಗೆ ತಲೆಸುತ್ತುವುದು ಹಸಿವಿಲ್ಲದೆ ಇರುವ ಸಮಸ್ಯೆಗಳೆಲ್ಲಾ ಕಾಣಿಸುತ್ತಿತ್ತು. ಇದೀಗ ಇಂದಿನ ಸಂಚಿಕೆಯಲ್ಲಿ ಡಾಕ್ಟರನ್ನು ಭೇಟಿಯಾಗಲು ಹೋಗಿದ್ದಾಳೆ ಅಲ್ಲಿ ಲೇಡಿ ಡಾಕ್ಟರ್ ನೀವು ಪ್ರೆಗ್ನೆಂಟ್ ಆಗಿದ್ದೀರಿ ಎಂದು ಹೇಳುತ್ತಾರೆ. ಈ ಬಗ್ಗೆ ಕೇಳಿ ಶಾಕ್ ಕೂಡ ಆಗುತ್ತದೆ.


    ಡಾಕ್ಟರ್ ಎಷ್ಟೇ ಹೇಳಿದರೂ ನಾನು ಇದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಇದು ಧಾರವಾಹಿಯ ಹೊಸ ಟ್ವಿಸ್ಟ್ ಗೆ ಕಾರಣವಾಗುತ್ತಾ ನೋಡಬೇಕಿದೆ. ಅನು ಗರ್ಭಿಣಿಯಾಗಿರುವುದು ಕನಸೋ ಇಲ್ಲಾ ನನಸೊ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬಹುದು.


    ರಾಜನಂದಿನಿ ಆರ್ಯವರ್ಧನ ಮೋಸಗಾರ ಅಂತ ತಿಳಿದಿದ್ದರೂ ಮೋಸಗಾರ ಆಗಿರಲಿಲ್ಲ. ರಾಜ ನಂದಿನಿ ಸಾವು ಆಕಸ್ಮಿಕವಾಗಿತ್ತು. ಆಕೆ ಬಂಡೆಯಲ್ಲಿ ಕಾಲು ಜಾರಿ ಬಿದ್ದಿದ್ದಳು ಅನ್ನೋದನ್ನು ಸೀರಿಯಲ್‌ ಮುಂದಿನ ಭಾಗದಲ್ಲಿ ತೋರಿಸಲಾಗುತ್ತದೆ. ಅಲ್ಲಿಗೆ ರಾಜನಂದಿನಿ ಅಧ್ಯಾಯಕ್ಕೆ ಮುಕ್ತಿ ಸಿಗುತ್ತದೆ. ಮುಂದೆ ಅನು ಆರ್ಯ ಚೆನ್ನಾಗಿರುತ್ತಾರಾ ಅಥವಾ ಮತ್ತೆ ರೋಚಕ ಟ್ವಿಸ್ಟ್ ಸಿಗುತ್ತಾ ಅನ್ನೋದನ್ನು ಇನ್ನಷ್ಟೇ ನೋಡಬೇಕಿದೆ.

    Published by:Swathi Nayak
    First published: