Jothe Jotheyali Serial: ಜೇಂಡೆ ಕುತಂತ್ರದಿಂದ ಅಪಾಯದಲ್ಲಿ ಸಿಲುಕಿರುವ ಆರ್ಯವರ್ಧನ್? ಇದೇನಿದು ಬಿಗ್ ಟ್ವಿಸ್ಟ್

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಅಧ್ಯಾಯದ ಬಳಿಕ ಅನು ಸಿರಿಮನೆ ರಾಜವರ್ಧನ್ ಮತ್ತು ರಾಜನಂದಿನಿ ಸಾವಿಗೆ ನ್ಯಾಯ ಒದಗಿಸಿಕೊಡಲು ಹೋರಾಡುತ್ತಿದ್ದಾಳೆ.

ಆರ್ಯವರ್ಧನ್

ಆರ್ಯವರ್ಧನ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಜೊತೆ ಜೊತೆಯಲಿ (Jothe Jotheyali). ಅನುಸಿರಿಮನೆ (Anu Sirimane) ಮತ್ತು ಆರ್ಯವರ್ಧನ್ (Aryavardhan) ನಡುವಿನ ಗಂಭೀರ ಸಂಭಾಷಣೆ ನೋಡಲು ಪ್ರೇಕ್ಷಕರ ಕಾಯುತ್ತಿರುತ್ತಾರೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ (Rajanandini) ಅಧ್ಯಾಯದ ಬಳಿಕ ಅನು ಸಿರಿಮನೆ ರಾಜವರ್ಧನ್ ಮತ್ತು ರಾಜನಂದಿನಿ ಸಾವಿಗೆ ನ್ಯಾಯ ಒದಗಿಸಿಕೊಡಲು ಹೋರಾಡುತ್ತಿದ್ದಾಳೆ.ಆದರೆ ಈ ನಡುವೆ ಅನುಗೆ ಆರ್ಯನ ಮೇಲೆ ಒಳ್ಳೆಯ ಅಭಿಪ್ರಾಯ ಬರುವ ಸಾಧ್ಯತೆ ಕೂಡ ಕಾಣಿಸುತ್ತಿದೆ. ಮುಂದೇನಾಗುತ್ತದೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ ಎಂದರೆ ಸುಳ್ಳಾಗದು.

    ಅಪಾಯದ ಸುಳಿಯಲ್ಲಿ ಆರ್ಯವರ್ಧನ್

    ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋಗಿರುವಂತಹ ಅನು ಸಿರಿಮನೆ ಜೀವಕ್ಕೆ ಜೇಂಡೆಯಿಂದ ಅಪಾಯವಾಗುವ ಸಾಧ್ಯತೆ ಇತ್ತು. ಆದರೆ ಅನುಸಿರಿ ಮನೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಆರ್ಯವರ್ಧನ್ ತನ್ನ ಜೀವವನ್ನು ಪಣಕ್ಕಿಟ್ಟು ಜೇಂಡೆ ಕಳುಹಿಸಿದ ರೌಡಿಗಳೊಂದಿಗೆ ಫೈಟ್ ಮಾಡಿ ಅನುಸಿರಿಮನೆಯನ್ನು ರಕ್ಷಿಸುತ್ತಾನೆ.

    ಅಷ್ಟೇ ಅಲ್ಲದೆ ತನ್ನ ಜೀವಕ್ಕೆ ಕುತ್ತು ತಂದು ಕೊಂಡಿದ್ದಾನೆ. ಆರ್ಯ ಅನು ಬಳಿ ತನ್ನ ಜೀವನದಲ್ಲಿ ನಡೆದಂತಹ ಎಲ್ಲಾ ಘಟನೆಯನ್ನು ಹೇಳುವ ಯೋಚನೆಯನ್ನು ಕೂಡ ಮಾಡಿದ್ದಾನೆ. ಅಷ್ಟೇ ಅಲ್ಲದೆ ಇದೆ ಕಾರಣಕ್ಕೋಸ್ಕರ ದೇವಾಲಯಕ್ಕೆ ಆರ್ಯವರ್ಧನ್ ಆಗಮಿಸಿದ್ದಾನೆ. ಆದರೆ ನಡೆದ ಈ ಘಟನೆಯಿಂದ ಮತ್ತೆ ಅನು ಮನದಲ್ಲಿ ಆರ್ಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಹುದೇ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ.

    ಇದನ್ನೂ ಓದಿ: Actress Sudha Rani: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ಚಂದನವನದ ಸುಂದರಿ ಸುಧಾರಾಣಿ

    ಅನು ಜೀವಕ್ಕೆ ಅಪಾಯ ತಂದ ಜೇಂಡೆಯನ್ನು ಸುಮ್ಮನೆ ಬಿಡುತ್ತಾನಾ ಆರ್ಯ?

    ಆರ್ಯವರ್ಧನ್ ಬಲಗೈ ಬಂಟ ಜೇಂಡೆ ಅನುಸಿರಿಮನೆಯನ್ನು ಕೊಲ್ಲಲು ರೌಡಿಗಳನ್ನು ಕಳುಹಿಸಿದ ವಿಚಾರ ಆರ್ಯವರ್ಧನ್ ಗೆ ತಿಳಿದರೆ ಮುಂದೆ ಜೇಂಡೆಯ ಪರಿಸ್ಥಿತಿ ಹೇಗಿರಬಹುದು ಎನ್ನುವ ಬಗ್ಗೆ ಊಹೆ ಮಾಡಲು ಸಾಧ್ಯವಿಲ್ಲ.

    ಅನು ಸಿರಿಮನೆ ಬಳಿ ನಡೆದ ಘಟನೆಯಲ್ಲಿ ಎಲ್ಲಾ ಹೇಳಬೇಕು ಎಂದು ಆರ್ಯವರ್ಧನ್ ಹೊರಟಾಗೆಲ್ಲಾ ಜೆಂಡೆ ಅವನನ್ನು ತಡೆಯುತ್ತಾನೆ ಬಂದಿದ್ದಾನೆ. ಅಷ್ಟೇ ಅಲ್ಲದೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಅನು ಸಿರಿಮನೆ ಮೇಲೆ ಸಂಶಯಪಡುತ್ತಿದ್ದ ಜೇಂಡೆ ಮೇಲೆ ಆರ್ಯ ನಿಗೆ ಈಗಾಗಲೇ ಅಸಮಧಾನವಿದೆ.

    ಆರ್ಯ ಮತ್ತು ಜೇಂಡೆ ಮಧ್ಯೆ ಮನಸ್ತಾಪ

    ಹಾಗೆ ಅನು ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಎಂದು ತೋರಿಸಲು ಜೇಂಡೆ ಪ್ರಯತ್ನಪಟ್ಟರು ಆರ್ಯ ಅದನ್ನು ಒಪ್ಪಲು ತಯಾರಿಲ್ಲ. ಇದೇ ವಿಚಾರಕ್ಕೆ ಆರ್ಯ ಮತ್ತು ಜೇಂಡೆ ಮಧ್ಯೆ ಮನಸ್ತಾಪ ಉಂಟಾಗಿ ಆರ್ಯ ಕಾರಿನಿಂದ ಕೆಳಗಡೆ ಬಿದ್ದು ತಲೆಗೆ ಗಾಯ ಕೂಡ ಮಾಡಿಸಿಕೊಂಡಿದ್ದ.ಆದರೆ ಜೇಂಡೆ ಇದನ್ನು ಆಕ್ಸಿಡೆಂಟ್ ಎಂದು ಎಲ್ಲರಲ್ಲೂ ನಂಬಿಸಿದ್ದ.

    ಇದನ್ನೂ ಓದಿ: Olavina Nildana: ಮಲೆನಾಡಿನ ಮಧುರ ಪ್ರೇಮಕಥೆ, ಶೀಘ್ರದಲ್ಲಿ ಬರ್ತಿದೆ ಒಲವಿನ ನಿಲ್ದಾಣ!

    ತಾನು ಗರ್ಭಿಣಿಯನ್ನು ವಿಚಾರವನ್ನು ಅನು ಹೇಳಿಬಿಡುತ್ತಾಳಾ?

    ತಾನು ಗರ್ಭಿಣಿ ಎನ್ನುವ ವಿಚಾರವನ್ನು ಅನುಸಿರಿಮನೆ ಇನ್ನೂ ಮನೆಯಲ್ಲಿ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಆದರೆ ನಡೆದ ಈ ಘಟನೆಯಿಂದ ಅನು ಈ ವಿಚಾರವನ್ನು ಮನೆಯಲ್ಲಿ ಹೇಳಿಬಿಡುತ್ತಾಳಾ ಎನ್ನುವ ಬಗ್ಗೆ ನೋಡಬೇಕು.

    ಈ ಹಿಂದೆ ತನ್ನ ಆಸ್ತಿಯಲ್ಲಿ ಯಾವುದೇ ಪಾಲು ನನಗೆ ಬೇಡ ಎಂದು ಹೇಳಿದ ಅನುಸಿರಿಮನೆ ಇದೀಗ ಮತ್ತೆ ತನ್ನ ಪಾಲಿನ ಆಸ್ತಿ ನನಗೆ ಬೇಕು ಎಂದು ತಿಳಿದುಕೊಂಡಿದ್ದಾಳೆ. ಇದರ ಹಿಂದಿನ ಉದ್ದೇಶ ಇನ್ನೂ ಅನು ಯಾರ ಬಳಿಯೂ ಹೇಳಿಕೊಂಡಿಲ್ಲಾ.  ಮುಂದೆ ಧಾರವಾಹಿಯಲ್ಲಿ ಯಾವೆಲ್ಲ ಟ್ವಿಸ್ಟ್ ಬರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಅಡಗಿರುವುದನ್ನು ಸುಳ್ಳಲ್ಲ.

    ಆರ್ಯನ ನಿಜ ರೂಪ ಎಲ್ಲರ ಮುಂದೆ ಬಯಲಾಗುತ್ತಿದೆ. ಆದರೆ ವಾಸ್ತವದಲ್ಲಿ ರಾಜ ನಂದಿನಿಯ ಸಾವಿಗೆ ಆರ್ಯ ಕಾರಣವಲ್ಲ. ಈ ಬಗ್ಗೆ ತಿಳಿದ ಮೇಲಾದರೂ ಅನು ಆರ್ಯನ ಮೇಲೆ ಪ್ರೀತಿ ತೋರಿಸುತ್ತಾಳಾ ಎಂದು ನೋಡಬೇಕಿದೆ.
    Published by:Swathi Nayak
    First published: