Jothe Jotheyali: ಆರ್ಯನಿಗೆ ಆಗಿರೋ‌ ಆಕ್ಸಿಡೆಂಟ್ ಅನು ದಿಕ್ಕನ್ನು ಬದಲಾಯಿಸುತ್ತಾ? ಏನಿದು ಬಿಗ್ ಟ್ವಿಸ್ಟ್

ರಾಜನಂದಿನಿ ಮತ್ತು ರಾಜವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನ ಪಡುತ್ತಿದ್ದಾಳೆ. ‌ಆರ್ಯವರ್ಧನ್ ನ ಅತಿಯಾಗಿ ನಂಬಿ ಆರಾಧಿಸುತ್ತಿದ್ದ ಮೀರಾ ಹೆಗಡೆ ಕೂಡ ಅನು ಜೊತೆ ನ್ಯಾಯದ ಪರ  ಕೈ ಹೋರಾಡಲು ಜೋಡಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯು ತಮ್ಮ ಅದ್ಭುತ ನಟನೆಯಿಂದ ಮತ್ತು ಉತ್ತಮ ಕಥೆಯಿಂದ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ರಾಜನಂದಿನಿ (Rajanandini) ಅಧ್ಯಾಯ ಮುಗಿದ ಬಳಿಕ ಈ ಧಾರಾವಾಹಿಯಲ್ಲಿ ದಿನಕ್ಕೊಂದು ಹೊಸ ತಿರುವುಗಳಂತೆ ಕಥೆ ಪ್ರೇಕ್ಷಕರನ್ನು ಮನ ರಂಜಿಸುತ್ತಿದೆ. ಅನು ಸಿರಿಮನೆಗೆ ಇದೀಗ ಎಲ್ಲಾ ಸತ್ಯದ ಅರಿವಾಗಿ ರಾಜನಂದಿನಿ ಮತ್ತು ರಾಜವರ್ಧನ್ (Rajavardhan) ಸಾವಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನ ಪಡುತ್ತಿದ್ದಾಳೆ. ‌ಆರ್ಯವರ್ಧನ್ ನ ಅತಿಯಾಗಿ ನಂಬಿ ಆರಾಧಿಸುತ್ತಿದ್ದ ಮೀರಾ ಹೆಗಡೆ ಕೂಡ ಅನು ಜೊತೆ ನ್ಯಾಯದ ಪರ  ಕೈ ಹೋರಾಡಲು ಜೋಡಿಸಿದ್ದಾಳೆ.

  ಮೀರಾಳಿಗೆ ಆರ್ಯವರ್ಧನ್ ಬಗೆಗಿನ ಸತ್ಯ ದರ್ಶನ

  ಆಫೀಸ್ ಪ್ರತಿ ನ ವಿಷಯದಲ್ಲೂ ಆರ್ಯವರ್ಧನ್ ಗೆ ಜೊತೆಯಾಗಿರುವುದು ಮೀರಾ ಹೆಗಡೆ. ಹೌದು ಆರಂಭದಿಂದಲೇ ಆರ್ಯ ಸರ್ ನ ಕಂಡರೆ ಮೀರಾಳಿಗೆ ಗೌರವದ ಜೊತೆಗೆ ಪ್ರೀತಿ ಕೂಡ ಇತ್ತು. ದೊಡ್ಡ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಆರ್ಯ ಬಗ್ಗೆ ಮೀರಾಳಿಗೆ ಅಕ್ಕರೆ ಜಾಸ್ತಿ.

  ಅದೇ ರೀತಿ ತಾನು ಪ್ರೀತಿಸುತ್ತಿದ್ದ ಆರ್ಯ ಸರ್ ಇದೀಗ ಅನುಸಿರಿ ಮನೆಯ ಸ್ವಂತ ಎಂದು ತಿಳಿದ ಮೇಲೆ ಮೀರಾಳಿಗೆ ಅನು ಅವರನ್ನು ಕಂಡರೆ ಅಷ್ಟಕಷ್ಟೇ ಆಗಿತ್ತು. ತನ್ನ ತಂತ್ರಗಳನ್ನೆಲ್ಲ ಉಪಯೋಗಿಸಿ ಮೀರಾ ಹಾಗೂ ಅನು ಇದೀಗ ಆಫೀಸ್ ನಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಒಂದೊಂದಾಗಿ ಕಂಡು ಹಿಡಿಯುತ್ತಿದ್ದಾರೆ.

  ಇದನ್ನೂ ಓದಿ: Gattimela Serial: ಸುಹಾಸಿನಿ ಮಾತು ಕೇಳಿ ಅಮೂಲ್ಯಳನ್ನು ದ್ವೇಷಿಸುತ್ತಾಳಾ ಆರತಿ?

  ಹರ್ಷವರ್ಧನ್ಗೆ ತಿಳಿಯಿತೆ ಎಲ್ಲಾ ಸತ್ಯ ?

  ಮುಗ್ಧ ಹರ್ಷವರ್ಧನ್ ತನ್ನ ದಾದ ನನ್ನು ಅತಿಯಾಗಿ ಪ್ರೀತಿಸುವುದರ ಜೊತೆಗೆ ಗೌರವಿಸುತ್ತಿದ್ದ ಕೂಡ. ದಾದನೇ ಕಂಪನಿ ಉಳಿಸಲು ಕಾರಣ, ರಾಜನಂದಿನಿ ವಿಲಾಸದ ಬೆಳವಣಿಗೆಗೆ ಅವನೇ ಕಾರಣ ಎಂದು ನಂಬಿದ್ದಾನೆ. ಹರ್ಷನ ಮುಗ್ಧತೆಯನ್ನು ದಾಳವಾಗಿ ಬಳಸಿಕೊಂಡು ಜೇಂಡೆ ಕಂಪನಿಯಿಂದ ಹರ್ಷನನ್ನು ಹೊರಹಾಕುವ ಪ್ರಯತ್ನ ಪಡುತ್ತಿದ್ದಾರೆ. ಆದರೆ ಅನು ಮೀರಾ ಮಾಡಿದ ಉಪಾಯದಿಂದ ಈ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಾಧ್ಯವಾಗಿದೆ.

  ಜೇಂಡೆ ನೀಡಿದಾ ಚಹಾದಲ್ಲಿ ಎನೋ ನಿಗೂಡತೆ ಅಡಗಿದೆ ಎಂದು ತಿಳಿದ ಮೀರಾ ಮತ್ತು ಅನು ಆ ಚಹಾವನ್ನು ಲ್ಯಾಬ್ ಗೆ ಟೆಸ್ಟ್ ಗೆ ಕಳುಹಿಸಿದ್ದಾರೆ. ಇನ್ನೇನು ಜೇಂಡೆಯ ಅಂತ್ಯವಾಗುವುದರಲ್ಲಿ ಸಂಶಯವಿಲ್ಲ.

  ಇತ್ತ ಜೇಂಡೆ ಕಳುಹಿಸಿದ ರಮೇಶ್ ಎಂಬ‌ ವ್ಯಕ್ತಿ ಮೋಸಗಾರ ಎಂಬುವ ಬಗ್ಗೆ ಅನು ಮತ್ತು ಮೀರಾ ತಿಳಿದುಕೊಂಡು ಅವನನ್ನು ಹಿಂಬಾಲಿಸಿ ಕೊಂಡು ಹೋದಾಗ ರಮೇಶ್ ಎಂಬ‌ ವ್ಯಕ್ತಿ ನಾಟಕ ಮಾಡುತ್ತಿದ್ದಾನೆ ಎಂದು ಹರ್ಷ ನ ಎದುರೇ ಬಯಲು ‌ಮಾಡುತ್ತಾರೆ.

  ಆರ್ಯ ಬಗ್ಗೆ ಹುಚ್ಚು ಅಭಿಮಾನ ಮತ್ತು ಗೌರವ ಇಟ್ಟುಕೊಂಡಿರುವ ಹರ್ಷನಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನು ಏನೇ ಹೇಳಿದರೂ ಅವರು ಹರ್ಷ ಅದನ್ನು ಪರಿಸ್ಥಿತಿ ಇಲ್ಲಾ. ಆದರೆ ರಾಜ ನಂದಿನಿಯ ಸಾವಿಗೆ ಮತ್ತು ರಾಜವರ್ಧನ್ ಸಾವಿಗೆ ಕಾರಣವಾಗಿರುವುದು ಆರ್ಯ ಎಂದು ಹೇಳಿದಾಗ ಸ್ವಲ್ಪ ಮಟ್ಟಿಗೆ ಅದನ್ನು ನಂಬಿದ್ದಾನೆ ಹರ್ಷ. ತನ್ನ ಬಾಲ್ಯವನ್ನು ಕಿತ್ತುಕೊಂಡ ಆರ್ಯವರ್ಧನ್ ಮೇಲೆ ಹರ್ಷನಿಗೆ ಎಲ್ಲಿಲ್ಲದ ಕೋಪ ಕೂಡ ಬಂದಿದೆ. ಅದೇ ಸಿಟ್ಟಿನಿಂದ ಕಾರಿನ ಬಳಿ ಹೋಗುತ್ತಾನೆ ಹರ್ಷ.

  ಇದನ್ನೂ ಓದಿ: Sathya Serial: ಬೈಕ್ ನಲ್ಲೇ ಅತ್ತೆ ಮನೆಗೆ ರಾಯಲ್ ಆಗಿ ಎಂಟ್ರಿ ಕೊಡ್ತಾಳಾ ಸತ್ಯಾ?

  ಆಕ್ಸಿಡೆಂಟ್ ಆಕಸ್ಮಿಕವೋ ಜೇಂಡೆಯ ಪ್ರಿ ಪ್ಲಾನೋ?

  ಆರ್ಯವರ್ಧನ್ ಬದುಕಿನ ಎಲ್ಲ ಸತ್ಯಗಳು ಹರ್ಷನಿಗೆ ತಿಳಿದಿದೆ ಎಂಬ ಸೂಚನೆ ದೊರೆಕಿದ ಮೇಲೆ ಆರ್ಯ ನಿಗೆ ಆಕ್ಸಿಡೆಂಟ್ ಆಯಿತೇ? ಇಲ್ಲ ಆಕ್ಸಿಡೆಂಟ್ ಗೂ ಹರ್ಷನಿಗೆ ತಿಳಿದ ಸತ್ಯಕ್ಕೆ ಸಂಬಂಧ ಇದೆಯ ಇಲ್ಲವೇ ಎಂದು ಪ್ರೇಕ್ಷಕರಲ್ಲಿ ಸಂಶಯ ಮೂಡಿದೆ.

  ರಾಜನಂದಿನಿ ವಿಲಾಸಕ್ಕೆ ಹೋದ ಅನು ಹಾಗೂ ಹರ್ಷನಿಗೆ ಆರ್ಯವರ್ಧನ್ ತಲೆಗೆ ಬ್ಯಾಂಡೇಜ್ ಹಾಕಿಕೊಂಡು ಮಲಗಿರುವುದು ಅಷ್ಟೇ ಕಾಣಿಸುತ್ತದೆ. ಮುಂದಿನ ಸಂಚಿಕೆಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ತೆರೆಯಬಹುದೇ ಕಾದು ನೋಡ ಬೇಕಿದೆ..
  Published by:Swathi Nayak
  First published: