• Home
  • »
  • News
  • »
  • entertainment
  • »
  • Jothe Jotheyali Serial: ಅನು ಸಿರಿಮನೆ ಕಾರ್ ಆಕ್ಸಿಡೆಂಟ್, ಇನ್ನಾದರೂ ಬಯಲಾಗುತ್ತಾ ಜೇಂಡೆ ನಿಜಮುಖ?

Jothe Jotheyali Serial: ಅನು ಸಿರಿಮನೆ ಕಾರ್ ಆಕ್ಸಿಡೆಂಟ್, ಇನ್ನಾದರೂ ಬಯಲಾಗುತ್ತಾ ಜೇಂಡೆ ನಿಜಮುಖ?

ಜೇಂಡೆ

ಜೇಂಡೆ

 ಆರ್ಯವರ್ಧನ್ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದ ಅನು ಸಿರಿಮನೆ ಇದೀಗ ದ್ವೇಷಿಸಲು ಆರಂಭಿಸಿದ್ದಾಳೆ.ಮುಂದೆ ವಾಸ್ತವವನ್ನು ಅರಿತು ಮತ್ತೆ ಅವರಿಬ್ಬರ ನಡುವೆ ಮೊದಲಿನ ಪ್ರೀತಿ ಕಾಣಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

  • Share this:

    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jothe Jotheyali) ಕೂಡ ಒಂದು. ಪ್ರತಿದಿನ ರೋಚಕ ತಿರುವುಗಳು ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ತಂಡವು ಟಿಆರ್ಪಿ (TRP) ನಲ್ಲೂ ಸದಾ ಮುಂದಿರುತ್ತದೆ. ಇದೀಗ ರಾಜನಂದಿನಿ (Rajannadini) ಅಧ್ಯಾಯದ ಬಳಿಕವಂತೂ ಹೊಸ ಹೊಸ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ ಜೊತೆ ಜೊತೆಯಲಿ ತಂಡ. ಆರ್ಯವರ್ಧನ್ (Aryavardhan) ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದ ಅನು ಸಿರಿಮನೆ (Anu Sirimane ಇದೀಗ ದ್ವೇಷಿಸಲು ಆರಂಭಿಸಿದ್ದಾಳೆ.ಮುಂದೆ ವಾಸ್ತವವನ್ನು ಅರಿತು ಮತ್ತೆ ಅವರಿಬ್ಬರ ನಡುವೆ ಮೊದಲಿನ ಪ್ರೀತಿ ಕಾಣಿಸುತ್ತದೆಯೇ ಎಂದು ಕಾದು ನೋಡಬೇಕಿದೆ.


    ಅಪಾಯದಲ್ಲಿ ಅನುಸಿರಿಮನೆ ಜೀವ?


    ಈಗಾಗಲೇ ಹಲವಾರು ಬಾರಿ ಅನು ಸಿರಿಮನೆ ಕೊಲ್ಲಲು ಪ್ರಯತ್ನಿಸಿದ ಜೇಂಡೆ ಇದೀಗ ಮತ್ತೆ ರೌಡಿಗಳನ್ನು ಕಳುಹಿಸಿ ಅನು ಸಿರಿಮನೆ ಕಾರಿಗೆ ಆಕ್ಸಿಡೆಂಟ್ ಆಗುವಂತೆ ಮಾಡಿದ್ದಾನೆ. ಆರ್ಯವರ್ಧನ್ ಮತ್ತು ಜೇಂಡೆಯ ಎಲ್ಲಾ ವಿಚಾರಗಳನ್ನು ತಿಳಿದಿದ್ದಾಳೆ ಅನು ಎನ್ನುವ ಕಾರಣಕ್ಕಾಗಿ ಜೇಂಡೆ ಅನುಸಿರಿ ಮನೆಯನ್ನು ಕೊಲ್ಲಲು ರೌಡಿಗಳನ್ನು ಕಳುಹಿಸಿದ್ದಾನೆ. ನನ್ನ ಗೆಳೆಯ ಆರ್ಯವರ್ಧನ್ ಅನು ಬಗ್ಗೆ ಯಾವುದೇ ವಿಚಾರಗಳನ್ನು ಹೇಳಿದರೂ ನಂಬಲು ತಯಾರಿಲ್ಲ ಎನ್ನುವ ವಿಚಾರಕ್ಕಾಗಿ ಸ್ವತಃ ಜೇಂಡೆಯೇ ಈ ಕಾರ್ಯಕ್ಕೆ ಹೊರಟಿದ್ದಾನೆ. ಈಗಾಗಲೇ ಈ ಬಗ್ಗೆ ಜೇಂಡೆ ಮತ್ತು ಆರ್ಯನ ಮಧ್ಯೆ ಭಿನ್ನಾಭಿಪ್ರಾಯಗಳು ಕೂಡ ಎದ್ದಿತ್ತು. ಆರ್ಯನ ಅನುಪಸ್ಥಿತಿಯನ್ನು ತನ್ನ ಬೇಳೆ ಬೇಯಿಸಿಕೊಳ್ಳಲು ಜೇಂಡೆ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಆರ್ಯನನ್ನು ತನ್ನ ಸೀಕ್ರೆಟ್ ಪ್ಲೇಸ್ ನಲ್ಲಿ ಇರಿಸಿಕೊಂಡಿದ್ದಾನೆ ಜೇಂಡೆ.


    ಇದನ್ನೂ ಓದಿ: Hitler Kalyana Serial: ಪವಿತ್ರಾಳನ್ನು ಕೊಲ್ಲಲು ಹೋಗಿ ಎಜೆ ಮುಂದೆ ಸಿಕ್ಕಿಬಿದ್ದನಾ ದೇವ್?


    ಶಾರದಾದೇವಿ ವರ್ತನೆ ನಿಗೂಢ!


    ರಾಜನಂದಿನಿಯ ತಾಯಿ ಶಾರದಾದೇವಿಯವರು ರಾಜನಂದಿನಿ ಮತ್ತು ರಾಜವರ್ಧನ್ ಅವರ ಸಾವಿನ ಬಳಿಕ ಆರ್ಯನೇ ತನ್ನ ಮಗ ಎನ್ನುವ ಭಾವನೆಯಿಂದ ಇದ್ದಾರೆ. ಅಷ್ಟೇ ಅಲ್ಲದೆ ಆತನ ಮೇಲೆ ಬೆಟ್ಟದಷ್ಟು ನಂಬಿಕೆಯನ್ನು ಕೂಡ ಇಟ್ಟುಕೊಂಡಿದ್ದಾರೆ ಶಾರದಾದೇವಿ. ಈಗಾಗಲೇ ಅನುಸಿರಿಮನೆ ಮತ್ತು ಹರ್ಷವರ್ಧನ್ ಆರ್ಯನ ಹಿನ್ನೆಲೆ ಬಗ್ಗೆ ಮತ್ತು ಆತ ರಾಜನಂದಿನಿ ವಿಲಾಸಕ್ಕೆ ಮತ್ತು ಆಫೀಸ್ ಗೆ ಮಾಡುತ್ತಿರುವ ಮೋಸದ ಬಗ್ಗೆ ಶಾರದಾದೇವಿ ಬಳಿ ಹೇಳಿದ್ದಾರೆ. ಆದರೆ ಇದಾವುದನ್ನೂ ಶಾರದದೇವಿ ನಂಬಿದಂತೆ ಕಾಣಿಸುತ್ತಿಲ್ಲ. ಅಷ್ಟೇ ಅಲ್ಲದೆ ಇದೀಗ ಹರ್ಷನಿಗೆ ಹೇಳದೆ ಶಾರದಾದೇವಿಯವರು ಮನೆಯಿಂದ ಎಂದು ಹೊರಹೋಗಿದ್ದಾರೆ. ಹರ್ಷ ಮತ್ತು ಮಾನ್ಸಿಗೆ‌ ಶಾರದದೇವಿ ಮೇಲೆ ಕೋಪ ಕೂಡ ಬಂದಿದೆ.


    ಮನದ ಮಾತುಗಳನ್ನು ಗುರೂಜಿ ಬಳಿ ಹೇಳಿಕೊಂಡ ಶಾರದಾದೇವಿ


    ಶಾರದಾದೇವಿಯ ನಡವಳಿಕೆ ಇತ್ತೀಚೆಗೆ ತೀರಾ ಬದಲಾವಣೆಗಳು ಕಾಣಿಸುತ್ತಿವೆ. ಇದಕ್ಕೆ ಏನೋ ಬಲವಾದ ಕಾರಣಗಳಿವೆ ಎನ್ನುವ ಬಗ್ಗೆ ಈಗಾಗಲೇ ಹರ್ಷ ಮತ್ತು ಅನುಗೆ ತಿಳಿದಿದೆ. ಆದರೆ ಶಾರದದೇವಿ ಇದರ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿಲ್ಲ. ಇದೀಗ ಮನೆಯವರಿಗೆ ತಿಳಿಯದಂತೆ ಗುರೂಜಿ ಒಬ್ಬರನ್ನು ಶಾರದದೇವಿ ಭೇಟಿಯಾಗಲು ಹೋಗಿದ್ದಾರೆ ಅಷ್ಟೇ ಅಲ್ಲದೆ 22 ವರ್ಷಗಳಿಂದ ಕಾಪಾಡಿಕೊಂಡು ಬಂದ ರಹಸ್ಯದ ಬಗ್ಗೆ ಮಾತನಾಡಿದ್ದಾರೆ. ತನ್ನ ಮನದ ಮಾತುಗಳನ್ನು ಗುರೂಜಿ ಬಳಿ ಹೇಳಿಕೊಂಡಿದ್ದು ಇದು ಪ್ರೇಕ್ಷಕರಲ್ಲಿ ಮತ್ತೆ ಧಾರಾವಾಹಿಯಲ್ಲಿ ಹೊಸ ಬಗ್ಗೆ ಸೂಚನೆ ಕೊಟ್ಟಿದೆ.


    ಇದನ್ನೂ ಓದಿ: Gattimela serial: ಧ್ರುವ-ಅದಿತಿ ಲವ್ ಸ್ಟೋರಿಗೆ ವೇದಾಂತ್ ಸಹಾಯ ದೊರಕುತ್ತಾ? ಮುಂದಿದೆ ಬಿಗ್ ಟ್ವಿಸ್ಟ್


    ಆಕ್ಸಿಡೆಂಟ್ ನಲ್ಲಿ ಅನು ಸತ್ತಿದ್ದಾಳೆಯೇ?


    ಆರ್ಯವರ್ಧನ್ ಗೆ ಮತ್ತೆ ಇಂಜೆಕ್ಷನ್ ಕೊಟ್ಟು ಜೇಂಡೆ ಆತನನ್ನು ಪ್ರಜ್ಞೆ ತಪ್ಪಿಸುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅನುಸಿರಿಮನೆ ಅನ್ನು ಫಾಲೋ ಮಾಡುವಂತೆ ರೌಡಿಗಳನ್ನು ಕೂಡ ನೇಮಿಸಿದ್ದಾನೆ. ಇದೀಗ ಅನುಸಿರಿಮನೆ ಕಾರ್ ಬ್ರೇಕ್ ಫೇಲ್ ಆಗಿದ್ದು ದೇವಸ್ಥಾನದ ಬಳಿ ಒಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಅನುಸಿರಿಮನೆ ಸತ್ತಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಜೇಂಡೆ ಕಡೆಯ ರೌಡಿಗಳು ತಪ್ಪು ತಿಳಿದುಕೊಂಡು ಅನು ಸತ್ತಿದ್ದಾಳೆ ಎಂದು ಜೇಂಡೆ ಬಳಿ ಹೇಳಿದ್ದಾರೆ. ಇದರಿಂದ ಜೇಂಡೆ ಸಂತಸದಲ್ಲಿ ಕುಣಿದಾಡುತ್ತಿದ್ದಾನೆ.

    Published by:Swathi Nayak
    First published: