Jothe Jotheyali Serial: ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಸಿರಿಮನೆ! ವರ್ಕೌಟ್ ಆಯ್ತಾ ಹರ್ಷ-ಮೀರಾ ಪ್ಲಾನ್?

ತಾನು ಬೆಟ್ಟದಷ್ಟು ಪ್ರೀತಿ ಮಾಡುತ್ತಿದ್ದ ಆರ್ಯ ಸರ್ ನ ಅನು ಇದೀಗ ದ್ವೇಷಿಸುತ್ತಿದ್ದಾಳೆ. ರಾಜನಂದಿನಿ ಮತ್ತು ರಾಜವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಅನು ಮತ್ತು ಹರ್ಷ ಹಾಗೂ ಮೀರಾ ಕೈ ಜೋಡಿಸಿದ್ದಾರೆ.

ಅನು ಸಿರಿಮನೆ

ಅನು ಸಿರಿಮನೆ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jothe Jotheyali). ಇದೀಗ ಪ್ರತಿದಿನ ಹೊಸ ಹೊಸ ತಿರುವುಗಳನ್ನು ಮೂಲಕ ವೀಕ್ಷಕರನ್ನು ಮನ ರಂಜಿಸುತ್ತಿದೆ . ರಾಜನಂದಿನಿ (Rajanandini) ಅಧ್ಯಾಯದ ಬಳಿಕವಂತೂ ಧಾರಾವಾಹಿಯಲ್ಲಿ ಒಂದೊಂದು ಸಂಚಿಕೆ ಕೂಡ ಹೊಸ ತಿರುವನ್ನು ನೀಡುತ್ತಿದೆ. ತಾನು ಬೆಟ್ಟದಷ್ಟು ಪ್ರೀತಿ ಮಾಡುತ್ತಿದ್ದ ಆರ್ಯ (Arya) ಸರ್ ನ ಅನು (Anu) ಇದೀಗ ದ್ವೇಷಿಸುತ್ತಿದ್ದಾಳೆ. ರಾಜನಂದಿನಿ ಮತ್ತು ರಾಜವರ್ಧನ್ ಸಾವಿಗೆ ನ್ಯಾಯ ಒದಗಿಸಿಕೊಡಲು ಅನು ಮತ್ತು ಹರ್ಷ ಹಾಗೂ ಮೀರಾ (Meera) ಕೈ ಜೋಡಿಸಿದ್ದಾರೆ. ವೀಕ್ಷಕರನ್ನು ಧಾರಾವಾಹಿಯಲ್ಲಿ ಮುಂದೇನು ನಡೆಯುತ್ತದೆ ಎನ್ನುವ ಕುತೂಹಲದಲ್ಲಿ ಪ್ರತಿದಿನ ಧಾರಾವಾಹಿಯನ್ನು ನೋಡಲು ಕಾಯುತ್ತಿರುತ್ತಾರೆ.

  ಆಸ್ತಿಯ ಪಾಲನ್ನು ತನ್ನ ಹೆಸರಿಗೆ ಬರೆಸಿಕೊಂಡ ಅನು ಸಿರಿಮನೆ

  ಈ ಹಿಂದೆ ಆಸ್ತಿಯ ಪಾಲು ಮಾಡುವ ಸಂದರ್ಭದಲ್ಲಿ ಯಾವುದೇ ಆಸ್ತಿ ನನಗೆ ಬೇಡ ಎಂದು ಹೇಳಿದ್ದಳು. ಆದರೆ ಆರ್ಯವರ್ಧನ ನಿಜಮುಖ ಬಯಲಾದ ಬಳಿಕ ಇದೀಗ ಆಕೆ ಅವಳ ಪಾಲಿಗೆ ಬರುವಂತಹ ಆಸ್ತಿಯನ್ನು ತೆಗೆದುಕೊಳ್ಳುವುದಾಗಿ ಹೇಳಿ, ಆಸ್ತಿ ಪತ್ರಕ್ಕೆ ಸಹಿ ಕೂಡ ಹಾಕಿದ್ದಾಳೆ. ಆದರೆ ಇದರ ಹಿಂದಿನ ಉದ್ದೇಶ ಇನ್ನೂ ಯಾರಿಗೂ ತಿಳಿದಿಲ್ಲ. ಹರ್ಷವರ್ಧನ್ ಹಾಗೂ ಮೀರಾ ಮತ್ತು ಅನು ಮೂರು ಜನ ಸೇರಿಕೊಂಡು ಏನು ಹೊಸ ಪ್ಲಾನ್ ಮಾಡಿದಂತಿದೆ ಆಸ್ತಿ ವಿಚಾರ.

  ಹೌದು ಅವರು ಇದೀಗ ಅನು ಆಸ್ತಿಯ ಪವರ್ ಆಫ್ ಅಟಾರ್ನಿ ಯನ್ನು ತನಗೆ ನೀಡಿದ್ದಾಳೆ ಎಂದು ಅಂದುಕೊಂಡಿದ್ದಾನೆ. ಅಷ್ಟೇ ಅಲ್ಲ ಸಹಿ ಹಾಕುತ್ತಿರುವ ಸಂದರ್ಭದಲ್ಲಿ ಆರ್ಯನನ್ನು ಉಪಾಯದ ಮೂಲಕ ಮನೆಯಿಂದ ಹೊರ ಹೋಗುವಂತೆ ಮಾಡಿಸಿದ್ದಾರೆ.

  ನೀವು ಒಂದು ಬಾರಿ ಇದನ್ನು ನೋಡಿ ಮತ್ತೆ ನನಗೆ ಸಮಾಧಾನವಾಗುತ್ತದೆ ಎಂದು ಅನು ಆರ್ಯನ ಬಳಿ ಹೇಳುತ್ತಿರುವ ಸಂದರ್ಭದಲ್ಲಿ ಮೀರಾ ಆರ್ಯ ಸರ್ ಗೆ ಕಾಲ್ ಮಾಡಿ ಸಿಎಂ ಮೀಟಿಂಗ್ ಇದೆ ಅರ್ಜೆಂಟಾಗಿ ನೀವು ಬನ್ನಿ ಎಂದು ಹೇಳುತ್ತಾಳೆ.

  ಇದೆಲ್ಲವೂ ಮೀರಾ ಅನು ಹಾಗೂ ಹರ್ಷನ ಉಪಾಯವಾಗಿದೆ. ಆದರೆ ಇದರ ಹಿಂದಿನ ಉದ್ದೇಶ ಏನೆಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಷ್ಟೆ. ವಾಸ್ತವದಲ್ಲಿ ಆ ಗುತ್ತಿಗೆ ಯಾವುದೇ ಮೀಟಿಂಗ್ ಇರಲಿಲ್ಲ. ಮೀರಾಳ ಮೇಲೆ ಆರ್ಯ ಇಟ್ಟುಕೊಂಡಿರುವ ನಂಬಿಕೆಯನ್ನು ಅಸ್ತ್ರವಾಗಿತ್ತು ಕೊಂಡು ಪ್ಲಾನ್ ಅನ್ನು ಹರ್ಷ ಮತ್ತು ಅನು ಮಾಡಿದ್ದಾರೆ‌.

  ಇದನ್ನೂ ಓದಿ: Nammane Yuvarani Serial: 1000 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ನಮ್ಮನೆ ಯುವರಾಣಿ

  ಅನು ಮತ್ತು ಹರ್ಷನ ದೂರ ಮಾಡುತ್ತಿದ್ದಾರಾ ಶಾರದಾದೇವಿ?

  ಜೇಂಡೆಯ ನಿಜಮುಖ ಇದೀಗ ಶಾರದ ದೇವಿಯ ಮುಂದೆ ಬಯಲಾಗಿದೆ. ಅಜ್ಜಯ್ಯ ನನ್ನ ಕಿಡ್ನಾಪ್ ಮಾಡಿ ಅನು ಬಗ್ಗೆ ಕೇಳಿದ ವಿಚಾರ ಈಗಾಗಲೇ ಅವರಿಗೆ ತಿಳಿದಿದೆ. ಹಾಗೆ ಇದರ ಹಿಂದೆ ಆರ್ಯನ ಕೈವಾಡ ಇದೆ ಎನ್ನುವುದು ಕೂಡ ಗೊತ್ತಾಗಿದೆ. ಆದರೆ ಎಲ್ಲಾ ತಿಳಿದು ಏನು ತಿಳಿಯದವರಂತೆ ನಾಟಕ ಮಾಡುತ್ತಿದ್ದಾರೆ ಶಾರದಾದೇವಿ.

  ಅನು ಮತ್ತು ಹರ್ಷನನ್ನು ಅಷ್ಟಾಗಿ ಮಾತನಾಡಿಸುತ್ತಿಲ್ಲ ಅವರು ಆದರೆ ಜೇಂಡೆ ಹಾಗೂ ಆರ್ಯನ ಬಳಿ ಬಹಳ ಸಲುಗೆಯಿಂದ‌ ನಡೆದುಕೊಳ್ಳುತ್ತಿರುವುದು ಅನ್ನು ಹರ್ಷ ಗಮನಿಸಿದ್ದಾನೆ. ಇದರ ಹಿಂದಿನ ಉದ್ದೇಶ ಏನೆಂಬುದು ಅವರಿಬ್ಬರಿಗೂ ತಿಳಿದಿಲ್ಲ.

  ಇದನ್ನೂ ಓದಿ: Ramachari Serial: 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ

  ಅನುನ ತವರು ಮನೆಗೆ ಕರೆದುಕೊಂಡು ಹೋಗಲು ತಂದೆ-ತಾಯಿ

  ಆರ್ಯವರ್ಧನ್ ಬಗ್ಗೆಗಿನ ಸ್ವಲ್ಪ ಸತ್ಯವನ್ನು ತಿಳಿದ ಸುಬ್ಬು ಇದೀಗ ಅನು ನನ್ನು ಮತ್ತೆ ಮನೆಗೆ ಕರೆದುಕೊಂಡು ಬರುವುದಾಗಿ ಹೇಳಿ ರಾಜನಂದಿನಿ ವಿಲಾಸಕ್ಕೆ ಹೋಗಿದ್ದಾರೆ. ಅನುಗೆ ಆ ಮನೆಯಲ್ಲಿ ಅಪಾಯವಿದೆ ಎಂದು ಅವರಿಗೆ ದೃಢವಾಗಿ ಅನಿಸಿದೆ.

  ಆದರೆ ಅನು‌ನ ವರ್ತನೆ ಅವರಿಗೆ ಇನ್ನೂ ಭಯ ಹುಟ್ಟಿಸುವಂತೆ ಆಗಿದೆ. ಆದರೆ ಇದೀಗ ಅನು ಗರ್ಭವತಿ ಎಂದು ತಿಳಿದ ಮೇಲೆ ಎಲ್ಲಾ ಪ್ಲಾನ್ ಗಳು ಉಲ್ಟಾ ಹೊಡೆಯುತ್ತದೆ ಎಂದು ಪ್ರೇಕ್ಷಕರಿಗೆ ಬಲವಾಗಿ ಅನಿಸುತ್ತದೆ. ಅನು ಯಾವಾಗ ತನ್ನ ತಾಯ್ತನದ ಬಗ್ಗೆ ಹೇಳುತ್ತಾಳೆ ಎನ್ನುವುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಕಾಡುತ್ತಿದೆ
  Published by:Swathi Nayak
  First published: