Jote Joteyali Serial: ಗೆಳೆಯ ಜೇಂಡೆಯಿಂದ ಅಪಾಯದಲ್ಲಿ ಆರ್ಯವರ್ಧನ್? ಮುಂದಿದೆ ಬಿಗ್ ಟ್ವಿಸ್ಟ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ಆರ್ಯವರ್ಧನ್

ಆರ್ಯವರ್ಧನ್

  • Share this:
    ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ (Jote Joteyali) ಕೂಡ ಒಂದು. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ರಾಜನಂದಿನಿ (Rajanandini) ಅಧ್ಯಾಯದ ಬಳಿಕವಂತೂ ಕುತೂಹಲ ಸನ್ನಿವೇಶಗಳಿಂದ ಪ್ರೇಕ್ಷಕರನ್ನು ಈ ತಂಡವು ಮನ ರಂಜಿಸುತ್ತಿದೆ. ರಾಜವರ್ಧನ್ (Rajavardhan) ಮತ್ತು ರಾಜನಂದಿನಿ ಸಾವಿಗೆ ಪ್ರತೀಕಾರ ತೀರಿಸಲು ಇದೀಗ ಅನು ಸಿರಿಮನೆ ತಯಾರಾಗಿದ್ದಾಳೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಆರ್ಯವರ್ಧನ್ ಮೇಲೆ ಅನು ಸಿರಿಮನೆಗೆ ದ್ವೇಷದ ಭಾವನೆ ಬಂದಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ ಎಂದರೆ ಸುಳ್ಳಾಗದು.

    ಅನುಸಿರಿಮನೆಯ ಮುಂದಿನ ನಡೆ ಏನು?

    ವಾಸ್ತವದಲ್ಲಿ ಅನು ಸಿರಿಮನೆ ಆರ್ಯವರ್ಧನ್ ಅನ್ನು ಅತಿಯಾಗಿ ಪ್ರೀತಿಸುತ್ತಿದ್ದಾಳೆ. ಆದರೆ ರಾಜನಂದಿನಿಯಾಗಿ ಅನು ಬದಲಾದಾಗ ಆಕೆ ಆರ್ಯವರ್ಧನ್ ಮೇಲೆ ಪ್ರತೀಕಾರವನ್ನು ತೋರಿಸುವ ಬಗ್ಗೆ ಯೋಚಿಸುತ್ತಾಳೆ. ಇತ್ತೀಚಿಗೆ ಆರ್ಯವರ್ಧನ್ ಮೇಲೆ ಅನು ಸಿರಿಮನೆಗೆ ನಂಬಿಕೆ ‌ಬಂದಂತೆ ತೋರುತ್ತಿದೆ. ಅಷ್ಟೇ ಅಲ್ಲದೆ ಜೇಂಡೆ ಬಲೆಯಿಂದ ಆರ್ಯವರ್ಧನ್ ‌ಅನ್ನು ರಕ್ಷಿಸಲು ಹೋಗಿ ತನ್ನ ಜೀವಕ್ಕೆ ಅಪಾಯ ತಂದುಕೊಂಡಿದ್ದಳು ಅನು. ತನ್ನ ಅತ್ತಿಗೆ ಅನುನ ಈ ವರ್ತನೆ ಕಂಡು ಈಗಾಗಲೇ ಹರ್ಷನಿಗೆ ಹಲವಾರು ಬಾರಿ ಸಂಶಯ ಮೂಡುತ್ತಿದೆ. ಅಷ್ಟೇ ಅಲ್ಲದೆ ಅನು ಮಾಡುತ್ತಿರುವ ಕೆಲಸದ ಬಗ್ಗೆ ಹರ್ಷನಿಗೆ ಯಾರನ್ನು ‌ನಂಬಬೇಕು ಎಂದು ತೋಚುತ್ತಿಲ್ಲಾ.

    ಇದನ್ನೂ ಓದಿ: Paaru Serial: ವೈಮನಸ್ಸು ಮರೆತು ಮತ್ತೆ ಒಂದಾದ ಜನನಿ-ಪಾರು! ಹೆಚ್ಚಿತು ಕುತೂಹಲ

    ಶಾರದ ದೇವಿಯ ನಿಗೂಢ ವರ್ತನೆ ಬಗ್ಗೆ ಅನುಗೆ ಮೂಡುತ್ತಿದಿದೆಯೇ ಅನುಮಾನ?

    ಆರ್ಯವರ್ಧನ್ ಮೇಲೆ ಬೆಟ್ಟದಷ್ಡು ನಂಬಿಕೆ ‌ಇಟ್ಟುಕೊಂಡಿರುವ ಶಾರದಾ ದೇವಿ ವರ್ತನೆಯಲ್ಲಿ ಇತ್ತಿಚೆಗೆ ಬಹಳ ಬದಲಾವಣೆ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಆರ್ಯನ ಬಗ್ಗೆ ಹರ್ಷ ಹಾಗೂ ಅನು ಹೇಳಿದ ಯಾವುದೇ ‌ಮಾತನ್ನು ನಂಬಲು ಆಕೆ ತಯಾರಿಲ್ಲ.
    ಜೋಗತವ ಭೇಟಿಯಾದಗೆಲ್ಲಾ ಅನು ಸಿರಿಮನೆಗೆ ಎಚ್ಚರಿಕೆ ನೀಡಿತ್ತಾ ಬಂದಿದ್ದಾಳೆ. ಈ ಬಾರಿ ಅನು ಸಿರಿಮನೆ ಇನ್ನೂ ಹಲವಾರು ವಿಚಾರಗಳನ್ನು ತಿಳಿಯುವುದು ಬಾಕಿ ಇದೆ ಎಂದು ಹೇಳಿದ್ದಾಳೆ.ಶಾರದಾ ದೇವಿಯ ಈ ನಿಗೂಢ ವರ್ತನೆ ಮೇಲೆ ಏನೋ ಬಲವಾದ ಕಾರಣ ಅಡಗಿದೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕೂತುಹಲ ಅಡಗಿದೆ.ಆರ್ಯನ ಬಗ್ಗೆ ಯಾವುದೇ ಮಾಹಿತಿಯನ್ನು ಅನು ಶಾರದಾ ದೇವಿ ಬಳಿ ಕೇಳಿದರು ಅವರು ಮೌನವಾಗಿದ್ದು ಬಿಡುತ್ತಾರೆ. ಆದರೆ ಯಾವುದೋ ಒಂದು ಘಟನೆ ಈ‌ ಹಿಂದೆ ಶಾರದಾ ದೇವಿ ಬಾಳಲ್ಲಿ ನಡೆದಿರುವುದಂತು ಸತ್ಯ. ಮುಂದೆನಾಗುತ್ತದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    ಇದನ್ನೂ ಓದಿ: Lakshana Serial: ಮೌರ್ಯನ ಬಂಧಿಸಲು ಚಕ್ರವ್ಯೂಹ ರಚಿಸಿದ ಭೂಪತಿ! ಮುಂದಿದೆ ಬಿಗ್ ಟ್ವಿಸ್ಟ್

    ಆರ್ಯನ ಬಲಗೈ ಬಂಟ ಜೇಂಡೆ ಬಗ್ಗೆ ಆರ್ಯ ತುಂಬಾ ಚಿಂತಿತನಾಗಿದ್ದಾನೆ. ತನ್ನ ಸ್ನೇಹಿತನನ್ನು ಕಣ್ಣು ಮುಚ್ಚಿ ನಂಬುತ್ತಿದ್ದ ಆರ್ಯ ಅನು ವಿಚಾರದಲ್ಲಿ ಆತನನ್ನು ನಂಉ ತಯಾರಿಲ್ಲ. ನಂಬಿಕೆ ದ್ರೋಹ ಬಗೆಯುತ್ತಿರುವ ಜೇಂಡೆ ಬಗ್ಗೆ ಆರ್ಯನಿಗೆ ಯಾವುದೇ ಮಾಹಿತಿ ಇಲ್ಲಾ. ಆತನೇ ತನ್ನ ಹೆಂಡತಿ ಅನು ಸಿರಿಮನೆಯನ್ನು ಕೊಲ್ಲಲು ಸಂಚು ಮಾಡಿದ್ದಾನೆ ಎನ್ನುವ ಬಗ್ಗೆ ತಿಳಿದರೆ ಜೇಂಡೆಯನ್ನು ಸುಮ್ಮನೆ ಬಿಡ್ತಾನಾ ಆರ್ಯ. ಈ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ದೊರಕ ಬೇಕಷ್ಟೆ. ಆರ್ಯವರ್ಧನ್ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದ ಅನು ಸಿರಿಮನೆ ಇದೀಗ ದ್ವೇಷಿಸಲು ಆರಂಭಿಸಿದ್ದಾಳೆ. ಮುಂದೆ ವಾಸ್ತವವನ್ನು ಅರಿತು ಮತ್ತೆ ಅವರಿಬ್ಬರ ನಡುವೆ ಮೊದಲಿನ ಪ್ರೀತಿ ಕಾಣಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
    Published by:Swathi Nayak
    First published: