Hitler Kalyana Serial: ಎಜೆ ನೀಡಿದ ಸರ್ಪ್ರೈಸ್ ಲೀಲಾ ಫುಲ್ ಖುಷ್! ಎಡವಟ್ಟು ಸುಂದರಿ ಲವ್​ನಲ್ಲಿ ಬಿದ್ಲಾ?

ತಂದೆ ಮನೆಯಿಂದ ಮತ್ತೆ ವಾಪಸ್ಸು ಎಜೆ ಮನೆಗೆ ಬಂದ ಲೀಲಾ ಅಲ್ಲಿ ಮತ್ತೆ ತನ್ನ ದರ್ಬಾರನ್ನು ಶುರುಮಾಡಿದ್ದಾಳೆ. ಲೀಲಾಳನ್ನು ಕಂಡರೆ ಸದಾ ಕೋಪಿಸಿಕೊಳ್ಳುತ್ತಿದ್ದ ಎಜೆಗೆ‌ ಈಗೀಗ ಅವಳ‌ ಮೇಲೆ ಒಳ್ಳೆಯ ‌ಅಭಿಪ್ರಾಯ ಮೂಡುತ್ತಿದೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯು ಸದಾ ಪ್ರೇಕ್ಷಕರನ್ನು ಮನರಂಜಿಸುವ ಯಶಸ್ವಿಯಾಗಿದೆ. ಎಡವಟ್ಟು ಲೀಲಾ (Leela) ಮತ್ತು‌ ಮಿಸ್ಟರ್ ಪರ್ಫೆಕ್ಟ್ ಎಜೆ (AJ) ಜೋಡಿಯಂತೂ ಎಲ್ಲರಿಗೂ ಇಷ್ಟ. ಇದೀಗ ಮತ್ತೆ ಲೀಲಾ ಎಜೆ ಮನೆಗೆ ಬಂದ ಬಳಿಕವಂತೂ ಅವರಿಬ್ಬರ ನಡುವಿನ ಕ್ಯೂಟ್ ಸಂಭಾಷಣೆಯಂತೂ ಇನ್ನೂ ಚೆನ್ನಾಗಿ ಮೂಡಿ‌ ಬರುತ್ತಿದೆ. ತಂದೆ ಮನೆಯಿಂದ ಮತ್ತೆ ವಾಪಸ್ಸು ಎಜೆ ಮನೆಗೆ ಬಂದ ಲೀಲಾ ಅಲ್ಲಿ ಮತ್ತೆ ತನ್ನ ದರ್ಬಾರನ್ನು ಶುರುಮಾಡಿದ್ದಾಳೆ. ನೀಲಾಳನ್ನು ಕಂಡರೆ ಸದಾ ಕೋಪಿಸಿಕೊಳ್ಳುತ್ತಿದ್ದ ಎಜೆಗೆ‌ ಈಗೀಗ ಅವಳ‌ ಮೇಲೆ ಒಳ್ಳೆಯ ‌ಅಭಿಪ್ರಾಯ ಮೂಡುತ್ತಿದೆ.

  ಅನಿವಾರ್ಯ ಕಾರಣದಿಂದ ಲೀಲಾ ಮತ್ತು ಎಜೆಯ ಮದುವೆ

  ಅನಿವಾರ್ಯ ಕಾರಣದಿಂದ ಲೀಲಾ ಮತ್ತು ಎಜೆಯ ಮದುವೆಯಾಗಿದ್ದಾರೆ. ತನ್ನ ತಂಗಿ ಚುಕ್ಕಿಯ ಭವಿಷ್ಯಕೋಸ್ಕರ ಲೀಲಾ ಎಜೆಯನ್ನು ಮದುವೆಯಾಗಿದ್ದಾಳೆ. ಇತ್ತ ಲೀಲಾಳನ್ನು ಸ್ವತಹ ಎಜೆಯ ಹೆಂಡತಿ ಅಂತರ ಸೆಲೆಕ್ಟ್ ಮಾಡಿರುತ್ತಾಳೆ. ಆದರೆ ಇಲ್ಲಿಯತನಕ ಅವರಿಬ್ಬರ ನಡುವೆ ಯಾವುದೇ ರೀತಿಯ ಪ್ರೀತಿಯ ಭಾವನೆ ಬೆಳೆದದ್ದು ಕಾಣಿಸುತ್ತಿರಲಿಲ್ಲ. ಎಜೆಯದ್ದು ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಮತ್ತು ಸೈಲೆಂಟ್ ಕ್ಯಾರೆಕ್ಟರ್, ಇತ್ತಾ ಲೀಲಾ ಎಡವಟ್ಟು ಮತ್ತು ತನ್ನ ನಾನ್ ಸ್ಟಾಪ್ ಮಾತುಗಳಿಂದಲೇ‌ ಫೇಮಸ್.

  ಲೀಲಾ ಸದ್ಯ ಶ್ರೀಮಂತರ ಮನೆಯ ಸೊಸೆಯಾಗಿದ್ದಾಳೆ. ಎಜೆ ಹೆಂಡತಿ. ಎಷ್ಟು ಒಡವೆ ಬೇಕಾದರೂ ಹಾಕಿಕೊಳ್ಳಬಹುದು. ಲೀಲಾಳಿಗೆ ಮದುವೆಗಿಂತ ಮುಂಚೆಯೇ ನಟಿಯಾಗಬೇಕೆಂದು ಬಯಕೆ ಬಹಳ ಇತ್ತು. ಇದೆ ಆಸೆಯಿಂದ ಆಡಿಶನ್ ಕೊಡಲು ಕೂಡ ಸಾಕಷ್ಟು ಕಡೆ ಹೋಗುತ್ತಿದ್ದಳು ಲೀಲಾ‌. ಮದುವೆಯಾದ ಬಳಿಕ ಅನಿವಾರ್ಯತೆಗೆ ಕಟ್ಟು ಬಿತ್ತು ತನ್ನೆಲ್ಲಾ ಆಸೆ ಬಯಕೆಗಳನ್ನು ಬದಿಗಿಟ್ಟು ಎಜೆ ಮನೆಗೆ ಬೇಕಾದ ರೀತಿ‌ ಇದ್ದಾಳೆ. ಮನೆಯಲ್ಲಿ ಒಂದು ಬಾರಿ ನಟನೆಗೆ ಅವಕಾಶವನ್ನು ಪಡೆದುಕೊಂಡ ಲೀಲಾಳಿಗೆ ಮತ್ತೆ ಪವಿತ್ರಾಳಿಗೆ ಅಪಾಯ ಎದುರಾದ ಬಳಿಕ ನಿಂತು ಹೋಗಿತ್ತು.

  ಇದನ್ನೂ ಓದಿ: Kannada Serial: ಧಾರಾವಾಹಿ ಪ್ರಿಯರಿಗೆ ಗುಡ್​ ನ್ಯೂಸ್​, ಮತ್ತೆ ಸ್ಟಾರ್ಟ್ ಆಗ್ತಿದೆ ಮಗಳು ಜಾನಕಿ

  ಲೀಲಾಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಎಜೆ

  ಸದಾ ನಟನೆ ಬಗ್ಗೆ ಯೋಚಿಸುತ್ತಿರುವ ಲೀಲಾಳಿಗೆ ಎಜೆ ಎಂದು ಮರೆಯಲು ಸಾಧ್ಯವೇ ಇಲ್ಲದಂತಹ ಒಂದು ಸರ್ಪ್ರೈಸ್ ನೀಡಿದ್ದಾರೆ. ಹೌದು ಎಜೆ ಕಡೆಯಿಂದ ಲೀಲಾಳಿಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಲೀಲಾಗ ಟಿವಿಯಲ್ಲಿ ಬರುವ ಗೀತಾ ಮತ್ತು ಗುರುಮೂರ್ತಿಯನ್ನು ಕಂಡರೆ ಸಿಕ್ಕಾಪಟ್ಟೆ ಇಷ್ಟ. ಅದನ್ನು ತಿಳಿದಿದ್ದ ಎಜೆ ಡಿನ್ನರ್ ಪ್ಲಾನ್ ಎಂದು ಹೇಳಿ ಲೀಲಾಳನ್ನು ಕರೆದುಕೊಂಡು ಬಂದು ಅವರಿಬ್ಬರನ್ನು ಸರ್ಪ್ರೈಸ್ ಆಗಿ ಮೀಟ್ ಮಾಡಿಸಿದ್ದಾನೆ. ಅವರಿಬ್ಬರನ್ನು ಕಂಡ ಲೀಲಾ ಆಶ್ಚರ್ಯ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾಳೆ. ಅದರಲ್ಲೂ ನಿಮಗೋಸ್ಕರ ವೇ ನಾವು ಬಂದಿದ್ದು ಎಂಬುದನ್ನು ಕೇಳಿದ ಮೇಲಂತೂ ಲೀಲಾಳ ಕಾಲು ನೆಲದ ಮೇಲೆ ನಿಂತಿರಲಿಲ್ಲಾ.

  ಇದನ್ನೂ ಓದಿ: Bombat Bhojana: ಈ ಬಾರಿ ಬೊಂಬಾಟ್​ ಭೋಜನದಲ್ಲಿ ಲಂಚ್ ಬಾಕ್ಸ್ ಸ್ಪೆಷಲ್, ಸಿಹಿಕಹಿ ಚಂದ್ರು ಜೊತೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಿಂದ ನಳಪಾಕ

  ಲೀಲಾಳಿಗೆ ಅವಳಿಗೆ ಎಜೆ ಮೇಲೆ ಲವ್ವಾಗಿದಾ?

  ಲೀಲಾ ಮಾಡುವ ಎಡವಟ್ಟು ಮತ್ತು ನಾನ್ ಸ್ಟಾಪ್ ಮಾತಿಗೆ ಸದಾ ಕೋಪಿಸಿಕೊಳ್ಳುವ ಎಜೆ ಇದೀಗ ಲೀಲಾಳಿಗೋಸ್ಕರ ಈ ರೀತಿಯ ಸರ್ಪ್ರೈಸ್ ಪ್ಲಾನ್ ಮಾಡಿರುವುದು ನಿಜಕ್ಕೂ ವಿಶೇಷ. ಈಗೀಗ ಲೀಲಾ ಎಜೆಯನ್ನು ಮನಸ್ಸಿನಲ್ಲಿ ಇಷ್ಟಪಡಲು ಆರಂಭಿಸಿದ್ದಾಳೆ. ಹೌದು ತನಗಾಗಿ ಸರ್ಪ್ರೈಸ್ ಪ್ಲಾನ್ ಮಾಡಿದ ಎಜೆಯ ಮೇಲಿನ ಲೀಲಾಳಿಗೆ ಒಳ್ಳೆಯ ಭಾವನೆ ಮೂಡಿದೆ. ಎಜೆ ಕಾರ್ ನಲ್ಲಿ ಕುಳಿತು ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವುದು ಲೀಲಾ ಕಣ್ಣಿಗೆ ಬಿದ್ದಿದೆ. ಅವನ ಮಗುವಿನಂತ ನಗುವನ್ನು ಕಂಡ ಲೀಲಾ ಅಲ್ಲೇ ಕಳೆದು ಹೋಗಿದ್ದಾಳೆ. ಮುಂದೆ ಎಜೆ ಜೊತೆಗೆ ಪ್ರೀತಿಯಲ್ಲಿ ಬೀಳುವುದರಲ್ಲಿ ನೋ ಡೌಟ್.
  Published by:Swathi Nayak
  First published: