Hitler Kalyana: ಅಜ್ಜಿಯ ಉಪಾಯದಿಂದ ಒಂದಾಗ್ತಾರಾ ಲೀಲಾ ಮತ್ತು ಏಜೆ? ಹಿಟ್ಟರ್ ಕಲ್ಯಾಣದಲ್ಲಿ ಬಿಗ್ ಟ್ವಿಸ್ಟ್

ಎಜೆ ಮತ್ತು ಲೀಲಾ ಒಂದಾಗಬೇಕು ಎನ್ನುವ ಉದ್ದೇಶದಿಂದ ಅಜ್ಜಿ ಮನೆಯ ಹೊರಗೆ ಟೆಂಟ್ ಹಾಕಿಕೊಂಡು ಹಠ ಮಾಡಿ ಕುಳಿತುಕೊಂಡಿದ್ದಾರೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ (Hitler Kalyana) ಒಂದು. ಮಿಸ್ಟರ್ ಪರ್ಫೆಕ್ಟ್ ಎಜೆ (AJ) ಮತ್ತು ಎಡವಟ್ಟು ಸುಂದರಿ ಲೀಲಾ (Leela) ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತ ಇರುತ್ತಾರೆ. ಇದೀಗ ಎಜೆ ಮತ್ತು ಲೀಲಾ ನಡುವೆ ಇರುವ ಭಿನ್ನಭಿಪ್ರಾಯಗಳೆಲ್ಲವೂ ಸರಿಯಾಗಿ ಅಜ್ಜಿಯ ಸಂತೋಷಕ್ಕೋಸ್ಕರ ಒಂದಾಗುವ ಸಾಧ್ಯತೆ ಕಾಣಿಸುತ್ತಿದೆ. ಎಜೆ ಮತ್ತು ಲೀಲಾ ಒಂದಾಗಬೇಕು ಎನ್ನುವ ಉದ್ದೇಶದಿಂದ ಅಜ್ಜಿ ಮನೆಯ ಹೊರಗೆ ಟೆಂಟ್ ಹಾಕಿಕೊಂಡು ಹಟ ಮಾಡಿ ಕುಳಿತುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಅವರಿಬ್ಬರ ಮಧ್ಯೆ ಪ್ರೀತಿ (Love) ಹುಟ್ಟಿ ಒಳ್ಳೆಯ ರೀತಿಯಲ್ಲಿ ಅನ್ಯೋನ್ಯತೆಯಿಂದ ಇರುತ್ತಾರಾ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದೆ.

    ಕೌಸಲ್ಯ ಕುತಂತ್ರಕ್ಕೆ ಲೀಲಾ ಮತ್ತು ಎಜೆ ನಡುವೆ ಮುಂದೇನಾಗುತ್ತದೆ?

    ಲೀಲಾಳ ತಾಯಿ ದುಡ್ಡಿನ ಆಸೆಗೆ ಲೀಲಾ ಮತ್ತು ಎಜೆ ವಿಚ್ಛೇದನ ಮಾಡಿಸುವ ಪ್ರಯತ್ನದಲ್ಲಿ ಒಂದು ಬಾರಿ ಸೋತು ಇದೀಗ ಮತ್ತೆ ಮತ್ತೆ ಏನಾದರೂ ಸಂಚು ಮಾಡಿ ಅವರಿಬ್ಬರ ನಡುವಿನ ಬಾಂಧವ್ಯವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ.

    ಆದರೆ ಅವರಿಬ್ಬರ ನಡುವಿನ ಮನಸ್ಸಿನಲ್ಲಿ ಅಡಗಿರುವ ಪ್ರೀತಿ ವಿಚ್ಛೇದನದ ಸುಳಿಯಿಂದ ಹೊರಬರಲು ಸಾಧ್ಯವಾಯಿತು. ಎಜೆ ಮತ್ತು ಲೀಲಾ ನಡುವೆ ಪರಸ್ಪರ ಪ್ರೀತಿ ಹುಟ್ಟುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆದಿರುವುದು ವೀಕ್ಷಕರಲ್ಲಿ ನಿರಾಸೆ ಕೂಡ ಉಂಟಾಗಿತ್ತು.

    ಕೌಸಲ್ಯ ಕುತಂತ್ರಕ್ಕೆ ಲೀಲಾ ಮತ್ತು ಎಜೆ ನಡುವೆ ಮುಂದೇನಾಗುತ್ತದೆ ಎಂದು ವೀಕ್ಷಕರಲ್ಲಿ ಕುತೂಹಲ ಹುಟ್ಟಿದೆ. ಲೀಲಾ ಮೇಲೆ ವಿನಾಕಾರಣ ಸಿಟ್ಟು ಮಾಡಿಕೊಂಡಿರುವ ದುರ್ಗಾ ಅವಳನ್ನು ಮನೆಯಿಂದ ಹೊರ ಹಾಕಲು ತುಂಬಾ ಬಾರಿ ಪ್ರಯತ್ನ ಕೂಡ ಪಟ್ಟಿದ್ದಾರೆ‌. ಮುಂದೆ ಲೀಲಾ ಮತ್ತು ಎಜೆ ವಿಚ್ಛೇದನವಾಗುತ್ತಾ ಎನ್ನುವುದನ್ನು ನೋಡಬೇಕಿದೆ.

    ಇದನ್ನೂ ಓದಿ: Aarohi Narayan: ದೃಶ್ಯಂ ಸುಂದರಿ ಆರೋಹಿ ನಾರಾಯಣ್ ರಿಯಲ್ ಲೈಫ್​ನಲ್ಲಿ ಎಷ್ಟು ಸ್ಟೈಲಿಶ್​ ನೋಡಿ

    ಮನೆಯಿಂದ ಹೊರ ನಡೆದ ಎಜೆ ತಾಯಿ

    ಲೀಲಾ ಮತ್ತು ಎಜೆ ನಡುವಿನ ಬಾಂಧವ್ಯ ಸರಿಯಾಗಿ ಇಲ್ಲ ಇಲ್ಲ ವಿಚಾರ ಇದೀಗ ಅಜ್ಜಿಗೆ ತಿಳಿದಿದೆ. ವಿಚ್ಛೇದನದ ವಿಚಾರ ತಿಳಿದ ಮೇಲಂತೂ ಅಜ್ಜಿ ತೀರಾ ಸೋತು ಹೋಗಿದ್ದಾರೆ.ಅದೇ ಕಾರಣಕ್ಕೆ ಎಜೆ ಪಿಎ ವಿಶ್ವರೂಪ್ ಪ್ಲಾನ್ ಮೂಲಕ ಇದೀಗ ಅಜ್ಜಿ ಮನೆಯಿಂದ ಹೊರಗೆ ಹೂ ತೋಟದಲ್ಲಿ ಒಂದು ಟೆಂಟ್ ಹಾಕಿಕೊಂಡು ಬದುಕುತ್ತೇನೆ ಎಂದು ಹಠದಲ್ಲಿ ಕುಳಿತಿದ್ದಾರೆ ಅಷ್ಟೇ ಅಲ್ಲದೆ ಯಾರು ಎಷ್ಟೇ ಕರೆದರೂ ಮನೆಯ ಒಳಕ್ಕೆ ಹೋಗಲು ಅಜ್ಜಿ ಇದೀಗ ತಯಾರಿಲ್ಲ.

    ಎಜೆ-ಲೀಲಾ ಒಂದಾಗುವವರೆಗೆ ಮನೆಗೆ ಕಾಲಿಡಲ್ಲ ಎಂದು ಅಜ್ಜಿ ಶಪಥ ಮಾಡಿದ್ದಾರೆ. ಅಜ್ಜಿಗೆ ಎಜೆ ಪಿಎ ವಿಶ್ವರೂಪ್  ಹೀಗೆ ಮಾಡಿದರೆ ಬಾಸ್ ಹಾಗೂ ಲೀಲಾ ಒಂದಾಗುತ್ತಾರೆ ಎಂದು ಉಪಾಯವನ್ನು ಕೇಳಿ ಕೊಟ್ಟಿರುವುದರಿಂದ ಅಜ್ಜಿ ಈ ರೀತಿಯಲ್ಲಾ ಮಾಡುತ್ತಿದ್ದಾರೆ. ಆದರೆ ಇನ್ನೂ ಈ ಬಗ್ಗೆ ಎಜೆಗಾಗಲಿ ಲೀಲಾಗಾಗಲಿ ಈ ಬಗ್ಗೆ ಗೊತ್ತಿಲ್ಲ.

    ಇದನ್ನೂ ಓದಿ: Pavitra Lokesh: ರಮ್ಯಾ ಬಿಗ್ ಫ್ರಾಡ್ ಎಂದ Naresh, ನನಗೆ ಜೀವ ಬೆದರಿಕೆ ಇದೆ ಎಂದು ಹೊಸ ಬಾಂಬ್

    ಅನ್ಯೋನ್ಯತೆಯಿಂದ ಇರುವಂತೆ ನಾಟಕ ಮಾಡುತ್ತಿರುವ  ಲೀಲಾ ಏಜೆ

    ಇದೇ ಕಾರಣಕ್ಕೆ ಎಜೆ ಮತ್ತು ಲೀಲಾ ಒಂದಾಗಿ ಅನ್ಯೋನ್ಯತೆಯಿಂದ ಇರುವಂತೆ ನಾಟಕ ಮಾಡಲು ಆರಂಭಿಸಿದ್ದಾರೆ. ಆದರೆ ಇದೇ ನಾಟಕ ಮುಂದೆ ಅವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗುವುದಂತು ಸತ್ಯ. ಅಜ್ಜಿ ಮನವೊಲಿಸಲು ಲೀಲಾ ಎಷ್ಟೇ ನಾಟಕ ಮಾಡಿದರು ಅಜ್ಜಿ ಅದನ್ನು ಒಪ್ಪಲು ತಯಾರಿಲ್ಲ ಅಷ್ಟೇ ಅಲ್ಲದೆ ರಾತ್ರಿ ಕೂಡ ಅದೇ ಟೆಂಟ್ ಒಳಗಡೆ ಕಳೆಯುತ್ತಾರೆ ಅಜ್ಜಿ. ಮುಂದೇನು ಮಾಡುತ್ತಾಳೆ ಲೀಲಾ? ಕೊನೆಗೂ ಲೀಲಾ ಏಜೆ ಒಂದಾಗುತ್ತಾರ ಕಾದು ನೋಡಬೇಕಿದೆ.
    Published by:Swathi Nayak
    First published: