ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ (Hitler Kalyana) ಕೂಡ ಒಂದು. ಎಡವಟ್ಟು ಲೀಲಾ (Leela) ಮತ್ತು ಮಿಸ್ಟರ್ ಪರ್ಫೆಕ್ಟ್ ಎಜೆ (AJ) ನಡುವಿನ ಮುದ್ದಾದ ಸಂಭಾಷಣೆಯನ್ನು ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ.ಇದೀಗ ಎಜೆ ಮತ್ತು ಲೀಲಾ ನಡುವೆ ಪ್ರೀತಿ ಹುಟ್ಟುತ್ತಿರುವ ಸಂಚಿಕೆ ಅಂತೂ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಎಜೆ ಮತ್ತು ಲೀಲಾ ಜೋಡಿಗೆ ಅಭಿಮಾನಿಗಳ ಬಳಗವೇ ಇದೆ. ಮುಂದಿನ ಸಂಚಿಕೆಗಳಲ್ಲಿ ಇವರಿಬ್ಬರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗುವ ಬಗ್ಗೆ ಈಗಾಗಲೇ ಸೂಚನೆ ದೊರಕುತ್ತಿದೆ. ಮೂರು ಸೊಸೆಯಂದಿರಿಗೆ ಅತ್ತೆಯಾಗಿ ಲೀಲಾ ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತದೆ ಎನ್ನುವ ಬಗ್ಗೆ ಕಾದುನೋಡಬೇಕಿದೆ.
ಎಜೆ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡನಾ ದೇವ್?
ಎಜೆಯ ಕಿರಿಯ ಸೊಸೆ ಸರೂನ ತಮ್ಮ ದೇವ್ ಈಗಾಗಲೇ ಹಲವಾರು ಬಾರಿ ಆತನ ಪತ್ನಿ ಪವಿತ್ರಾಳನ್ನು ಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಆದರೆ ಎಜೆ ಪವಿತ್ರಾಳನ್ನು ಪ್ರತಿಬಾರಿ ದೇವ್ ಬಲೆಯಿಂದ ರಕ್ಷಿಸುತ್ತಾ ಬಂದಿದ್ದಾನೆ. ಆದರೆ ಈ ಬಾರಿ ದೇವ್ ಎಜೆಯ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಅಷ್ಟೇ ಅಲ್ಲದೆ ಲೀಲಾ ತವರು ಮನೆಯಲ್ಲಿದ್ದ ಎಜೆ ಮತ್ತು ಲೀಲಾ ತಕ್ಷಣವೇ ಪವಿತ್ರಾಳನ್ನು ರಕ್ಷಿಸಲು ಮನೆಗೆ ವಾಪಸ್ ಬಂದಿದ್ದಾರೆ.ಆದರೆ ಈ ಬಾರಿ ದೇವ್ ರೆಡ್ ಹ್ಯಾಂಡ್ ಆಗಿ ಎಜೆ ಮುಂದೆ ಸಿಕ್ಕಿಹಾಕಿಕೊಂಡಿರುವುದರಿಂದ ದೇವ್ ಅನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ.ಈಗಾಗಲೇ ಪವಿತ್ರಾಳಿಗೆ ತನ್ನ ಪತಿ ಕೆಟ್ಟವನು ಎಂದು ತಿಳಿದಿದೆ ಅಷ್ಟೇ ಅಲ್ಲದೆ ಲೀಲಾ ಮತ್ತು ಎಜೆ ಬಾಳಲ್ಲಿ ದೇವ್ ಎಷ್ಟು ಆಟವಾಡಿದ್ದಾನೆ ಹಿಂದೂ ಪವಿತ್ರಾಳಿಗೆ ತಿಳಿದಿದೆ. ಈ ಬಗ್ಗೆ ಎಜೆಯ ಬಳಿ ಹೇಳಲು ಹೋದ ಪವಿತ್ರಾಳನ್ನು ಕೊಲೆ ಮಾಡಲು ಪ್ರಯತ್ನಪಟ್ಟಿದ್ದಾನೆ ದೇವ್. ಇದೇ ಕಾರಣಕ್ಕೆ ಇದೀಗ ಪವಿತ್ರಾ ಕೋಮಾದಲ್ಲಿ ಇದ್ದಾಳೆ.
ಇದನ್ನೂ ಓದಿ: Jothe Jotheyali Serial: ಅನು ಸಿರಿಮನೆ ಕಾರ್ ಆಕ್ಸಿಡೆಂಟ್, ಇನ್ನಾದರೂ ಬಯಲಾಗುತ್ತಾ ಜೇಂಡೆ ನಿಜಮುಖ?
ದೇವ್ ಸತ್ಯ ಬಿಡಿಸಲು ಎಜೆ ಮಾಸ್ಟರ್ ಪ್ಲಾನ್
ಈಗಾಗಲೇ ದೇವ್ ಎಷ್ಟು ಕೆಟ್ಟವನೆಂದು ತಿಳಿದಿರುವ ಎಜೆಗೆ ಆತನ ಕುತಂತ್ರ ಬುದ್ಧಿಯ ಹಿನ್ನೆಲೆ ಬಗ್ಗೆ ಅರಿವಿಲ್ಲ. ಇದೇ ಕಾರಣಕ್ಕೆ ಎಜೆ ಇದೀಗ ದೇವ್ ಗೆ ಡ್ರಿಂಕ್ಸ್ ಪಾರ್ಟಿಯೊಂದನ್ನು ಅರೆಂಜ್ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ತನ್ನೆಲ್ಲ ಕುತಂತ್ರದ ಬಗ್ಗೆ ದೇವ್ ಎಜೆ ಬಳಿ ಹೇಳಿಬಿಡುತ್ತಾನೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ ಲೀಲಾ ತಂಗಿ ಚುಕ್ಕಿಯ ಮನಸ್ಸು ಕೆಡಿಸಿ ಆಕೆಯನ್ನು ಮದುವೆಯಾಗಲು ಪ್ರಯತ್ನ ಪಡುತ್ತಿದ್ದಾನೆ ದೇವ್. ಈ ಬಗ್ಗೆ ಎಜೆಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಆದರೆ ಚುಕ್ಕಿಯನ್ನು ಜೀವನವನ್ನು ಹಾಳು ಮಾಡಲು ದೇವ್ ರತ್ನ ಕೊಡುತ್ತಿದ್ದಾನೆ ಎನ್ನುವ ಬಗ್ಗೆ ಈಗಾಗಲೇ ತಿಳಿದಿದೆ. ಇದೀಗ ಎಜೆಯ ಬಳಿ ಈ ವಿಚಾರಗಳನ್ನು ದೇವ್ ಹೇಳಿಕೊಳ್ಳುತ್ತಾನಾ? ಪವಿತ್ರಾ ಮತ್ತು ಚುಕ್ಕಿ ಬಾಳನ್ನು ದೇವ್ ಸುಳಿಯಿಂದ ರಕ್ಷಿಸುವ ಜವಾಬ್ದಾರಿ ಎಜೆ ಮೇಲಿದೆ.
ಇದನ್ನೂ ಓದಿ: Puttakkana Makkalu Serial: ತಾಯಿ ಮಾತಿಗೆ ಕಟ್ಟುಬಿದ್ದು ಚಂದ್ರು ಪ್ರೀತಿಯನ್ನು ಕಳೆದುಕೊಳ್ಳುತ್ತಾಳಾ ವಸು?
ಮಿಸ್ಟರ್ ಪರ್ಫೆಕ್ಟ್ ಎಜೆ ಚುಕ್ಕಿ-ಪವಿತ್ರಾ ಬದುಕನ್ನು ಹೇಗೆ ಸರಿ ಪಡಿಸುತ್ತಾನೆ
ಲೀಲಾಳ ತಂಗಿ ಚುಕ್ಕಿ ದೇವ್ ನ ಮೋಸದ ಪ್ರೀತಿಗೆ ಈಗಾಗಲೇ ಶರಣಾಗಿದ್ದಾಳೆ. ಹಾಗೇಯೆ ತನ್ನನ್ನು ನೋಡಲು ಬಂದ ಎಲ್ಲಾ ಸಂಬಂಧಗಳನ್ನು ಮನೆಯವರಿಗೆ ತಿಳಿಯದಂತೆ ತಪ್ಪಿಸುತ್ತಿದ್ದಾಳೆ ಚುಕ್ಕಿ. ಲೀಲಾಳ ತಂಗಿ ಚುಕ್ಕಿ ದೇವ್ ನ ಮೋಸದ ಪ್ರೀತಿಗೆ ಈಗಾಗಲೇ ಶರಣಾಗಿದ್ದಾಳೆ. ಹಾಗೇಯೆ ತನ್ನನ್ನು ನೋಡಲು ಬಂದ ಎಲ್ಲಾ ಸಂಬಂಧಗಳನ್ನು ಮನೆಯವರಿಗೆ ತಿಳಿಯದಂತೆ ತಪ್ಪಿಸುತ್ತಿದ್ದಾಳೆ ಚುಕ್ಕಿ. ಈ ಬಗ್ಗೆ ಎಜೆಗೆ ಸಂಶಯ ಬಂದಿದ್ದು ಚುಕ್ಕಿ ಬಳಿ ಸತ್ಯ ತಿಳಿಯುವ ಬಗ್ಗೆ ಪ್ರಯತ್ನ ಕೂಡ ಪಟ್ಟಿದ್ದಾನೆ ಎಜೆ. ಆದರೆ ದೇವ್ ನ ಬಣ್ಣದ ಮಾತುಗಳಿಗೆ ಬಲಿಯಾದ ಚುಕ್ಕಿ ಯಾರ ಬಳಿಯೂ ಸತ್ಯ ಹೇಳಲು ತಯಾರಿಲ್ಲಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ