Hitler Kalyana Serial: ಕೌಸಲ್ಯಾ ಕುತಂತ್ರದಿಂದ ದೂರವಾಗ್ತಾರಾ ಲೀಲಾ ಮತ್ತು ಎಜೆ?

ಲೀಲಾಳನ್ನು ತಾಯಿ ಮನೆಯಿಂದ ವಾಪಸ್ ಕರೆದುಕೊಂಡು ಬಂದ ಎಜೆ ಅವಳ ಸಂತೋಷಕ್ಕೋಸ್ಕರ ಇದೀಗ ಅವಳ ನೆಚ್ಚಿನ ಸೆಲೆಬ್ರಿಟಿಗಳನ್ನು ಎಜೆ ಸರ್ಪ್ರೈಸ್ ಆಗಿ ಮೀಟ್ ಕೂಡ ಮಾಡಿಸಿದ್ದಾನೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ (Hitler Kalyana) ಕೂಡ ಒಂದು. ಮಿಸ್ಟರ್ ಪರ್ಫೆಕ್ಟ್ (Mr.Perfect) ಎಜೆ ಮತ್ತು ಎಡವಟ್ಟು ಸುಂದರಿ ಲೀಲಾ (Leela) ನಡುವಿನ ಕ್ಯೂಟ್ ಜೋಡಿ ನೋಡಲು ಪ್ರೇಕ್ಷಕರು ಕಾಯುತ್ತಾ ಇರುತ್ತಾರೆ. ಇದೀಗ ಲೀಲಾಳಿಗೆ ಲೈಟಾಗಿ ಎಜೆ ಮೇಲೆ ಲವ್ (Love) ಆದಂತೆ ಕಾಣಿಸುತ್ತಿದೆ. ಆದರೆ ಲೀಲಾಳ ಚಿಕ್ಕಮ್ಮ ಮತ್ತು ಮೂರು ಸೊಸೆಯಂದಿರ ಎಡವಟ್ಟಿನಿಂದ ಲೀಲಾ ಮತ್ತು ಎಜೆ (AJ) ನಡುವೆ ಭಿನ್ನಾಭಿಪ್ರಾಯಗಳು ನೋಡುವ ಸಾಧ್ಯತೆ ಕಾಣಿಸುತ್ತಿದೆ. ಲೀಲಾಳನ್ನು ತಾಯಿ ಮನೆಯಿಂದ ವಾಪಸ್ ಕರೆದುಕೊಂಡು ಬಂದ ಎಜೆ ಅವಳ ಸಂತೋಷಕ್ಕೋಸ್ಕರ ಇದೀಗ ಅವಳ ನೆಚ್ಚಿನ ಸೆಲೆಬ್ರಿಟಿಗಳನ್ನು ಎಜೆ ಸರ್ಪ್ರೈಸ್ ಆಗಿ ಮೀಟ್ ಕೂಡ ಮಾಡಿಸಿದ್ದಾನೆ.

  ಲೀಲಾಳಿಗೆ ಅವಳಿಗೆ ಎಜೆ ಮೇಲೆ ಲವ್ವಾಗಿದಾ?

  ಲೀಲಾ ಮಾಡುವ ಎಡವಟ್ಟು ಮತ್ತು ನಾನ್ ಸ್ಟಾಪ್ ಮಾತಿಗೆ ಸದಾ ಕೋಪಿಸಿಕೊಳ್ಳುವ ಎಜೆ ಇದೀಗ ಲೀಲಾಳಿಗೋಸ್ಕರ ಈ ರೀತಿಯ ಸರ್ಪ್ರೈಸ್ ಪ್ಲಾನ್ ಮಾಡಿರುವುದು ನಿಜಕ್ಕೂ ವಿಶೇಷ. ಈಗೀಗ ಲೀಲಾ ಎಜೆಯನ್ನು ಮನಸ್ಸಿನಲ್ಲಿ ಇಷ್ಟಪಡಲು ಆರಂಭಿಸಿದ್ದಾಳೆ. ಹೌದು ತನಗಾಗಿ ಸರ್ಪ್ರೈಸ್ ಪ್ಲಾನ್ ಮಾಡಿದ ಎಜೆಯ ಮೇಲಿನ ಲೀಲಾಳಿಗೆ ಒಳ್ಳೆಯ ಭಾವನೆ ಮೂಡಿದೆ. ಎಜೆ ಕಾರ್ ನಲ್ಲಿ ಕುಳಿತು ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವುದು ಲೀಲಾ ಕಣ್ಣಿಗೆ ಬಿದ್ದಿದೆ. ಅವನ ಮಗುವಿನಂತ ನಗುವನ್ನು ಕಂಡ ಲೀಲಾ ಅಲ್ಲೇ ಕಳೆದು ಹೋಗಿದ್ದಾಳೆ. ಲೀಲಾಳಿಗೆ ಮದುವೆಗಿಂತ ಮುಂಚೆಯೇ ನಟಿಯಾಗಬೇಕೆಂದು ಭಯಕ್ಕೆ ಬಹಳ ಇತ್ತು. ಇದೆ ಆಸೆಯಿಂದ ಆಡಿಶನ್ ಕೊಡಲು ಕೂಡ ಸಾಕಷ್ಟು ಕಡೆ ಹೋಗುತ್ತಿದ್ದಳು ಲೀಲಾ‌. ಮದುವೆಯಾದ ಬಳಿಕ ಅನಿವಾರ್ಯತೆಗೆ ಕಟ್ಟು ಬಿತ್ತು ತನ್ನೆಲ್ಲಾ ಆಸೆ ಬಯಕೆಗಳನ್ನು ಬದಿಗಿಟ್ಟು ಎಜೆ ಮನೆಗೆ ಬೇಕಾದ ರೀತಿ‌ ಇದ್ದಾಳೆ.

  ಇದನ್ನೂ ಓದಿ: Made In China: ರಿಲೀಸ್ ಡೇಟ್​ ಅನೌನ್ಸ್ ಮಾಡಿದ ಕನ್ನಡದ ಮೊದಲ ವರ್ಚುವಲ್ ಸಿನಿಮಾ, ಆದ್ರೆ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ಬಿಡುಗಡೆಯಂತೆ

  ಕೌಸಲ್ಯ ಯಡವಟ್ಟಿನಿಂದ ಲೀಲಾ ಮತ್ತು ಎಜೆ ವಿಚ್ಚೇದನವಾಗುತ್ತಾ

  ಇದೀಗ ಲೀಲಾ ಚಿಕ್ಕಮ್ಮನ ಹಣದ ದುರಾಸೆಯಿಂದ ಎಜೆ ಮತ್ತು ಲೀಲಾ ನಡುವೆ ಭಿನ್ನಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಹೌದು ಲೀಲಾಳಿಗೆ ತಿಳಿಯದಂತೆ ಎಜೆಗೆ ದಿವೋರ್ಸ್ ಲೆಟರ್ ಕಳಿಸಿದ್ದಾಳೆ ಚಿಕ್ಕಮ್ಮ. ಆದರೆ ಲೀಲಾಳಿಗೆ ಈ ಬಗ್ಗೆ ಯಾವುದೇ ರೀತಿಯ ಐಡಿಯಾ ಕೂಡ ಇಲ್ಲಾ. ಇನ್ನೂ ಅಜ್ಜಿಗೆ ಮಾತ್ರ ಇವರಿಬ್ಬರಲ್ಲಿ ಪ್ರೇಮಾಂಕುರವಾಗುತ್ತಿರುವುದನ್ನು ಕಂಡು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇಷ್ಟಾಯಿತು ಎನ್ನುವಷ್ಟರಲ್ಲಿ ಕೌಸಲ್ಯ ಮಾಡಿದ ಯಡವಟ್ಟಿನಿಂದ ಲೀಲಾ ಬೆಲೆ ತೆರಲೇಬೇಕಾಗಿದೆ. ಲೀಲಾ ತಾನು ನೀಡಿರುವ ಗ್ರೀಂಟಿಂಗ್ ಕಾರ್ಡ ಅನ್ನು ಎಜೆ ಓದಿ ಸಂತಸಗೊಂಡಿದ್ದಾರೆ ಎಂದು ಅಂದುಕೊಂಡು ಇದ್ದಾಳೆ.

  ಇದನ್ನೂ ಓದಿ: Paaru Serial: ಅರಸನಕೋಟೆ ಹಿರಿಯ ಸೊಸೆಗೆ ಮತ್ತೆ ಸಂಕಷ್ಟ! ಸಮಸ್ಯೆಯಿಂದ ಹೇಗೆ ಹೊರಬರುತ್ತಾಳೆ ಪಾರು?

  ವಿಚ್ಛೇದನದ ವಿಚಾರ ಮೂರು ಸೊಸೆಯಂದಿರಿಗೆ ಈಗಾಗಲೇ ತಿಳಿದಿದೆ ?

  ಇನ್ನು ಈ ವಿಚ್ಛೇದನದ ವಿಚಾರ ಮೂರು ಸೊಸೆಯಂದಿರಿಗೆ ಈಗಾಗಲೇ ತಿಳಿದಿದೆ. ಲೀಲಾ ಮೇಲೆ ವಿನಾಕಾರಣ ಸಿಟ್ಟು ಮಾಡಿಕೊಂಡಿರುವ ದುರ್ಗಾ ಅವಳನ್ನು ಮನೆಯಿಂದ ಹೊರ ಹಾಕಲು ತುಂಬಾ ಬಾರಿ ಪ್ರಯತ್ನ ಕೂಡ ಪಟ್ಟಿದ್ದಾರೆ‌.  ಇದೀಗ ಈ ವಿಚಾರವನ್ನು ಎಜೆಗೆ ತಿಳಿಸಿ ಲೀಲಾಳನ್ನು ಮನೆಯಿಂದ ಓಡಿಸುವ ಪ್ಲಾನ್ ಇವರದ್ದು. ಲೀಲಾಳ ಮೇಲೆ ಇನ್ನೊಂದು ಬ್ರಹ್ಮಾಸ್ತ್ರ ಬಿಡಲು ದುರ್ಗಾ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾಳೆ. ಮುಂದೆ ಲೀಲಾ ಮತ್ತು ಎಜೆ ವಿಚ್ಛೇದನವಾಗುತ್ತಾ ಎನ್ನುವುದನ್ನು ನೋಡಬೇಕಿದೆ. ಕೌಶಲ್ಯ ಕುತಂತ್ರಕ್ಕೆ ಲೀಲಾ ಮತ್ತು ಎಜೆ ನಡುವೆ ಮುಂದೇನಾಗುತ್ತದೆ ಎಂದು ವೀಕ್ಷಕರಲ್ಲಿ ಕುತೂಹಲ ಹುಟ್ಟಿದೆ. ಎಜೆ ಮತ್ತು ಲೀಲಾ ನಡುವೆ ಪರಸ್ಪರ ಪ್ರೀತಿ ಹುಟ್ಟುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆದಿರುವುದು ವೀಕ್ಷಕರಲ್ಲಿ ನಿರಾಸೆ ಕೂಡ ಉಂಟಾಗಿದೆ.
  Published by:Swathi Nayak
  First published: