Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

ಎಜೆಗೆ‌ ಈಗೀಗ ಅವಳ‌ ಮೇಲೆ ಒಳ್ಳೆಯ ‌ಅಭಿಪ್ರಾಯ ಮೂಡುತ್ತಿದೆ. ಅಜ್ಜಿ ಮಾಡಿದಂತಹ ಪ್ಲಾನ್ ನಿಂದ ಎಜೆ ಮತ್ತು ಲೀಲಾ ಪ್ರೀತಿಯಲ್ಲಿ ಬೀಳುವ ಎಲ್ಲಾ ಸೂಚನೆಯೂ ಕಾಣಿಸುತ್ತಿದೆ.

ಲೀಲಾ ಮತ್ತು ಎಜೆ

ಲೀಲಾ ಮತ್ತು ಎಜೆ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ‌ಕಲ್ಯಾಣ(Hitler Kalyana) ಕೂಡ ಒಂದು. ಮಿಸ್ಟರ್ ಪರ್ಫೆಕ್ಟ್ ಎಜೆ (Mr. Perfect AJ) ಮತ್ತು ಎಡವಟ್ಟು ಲೀಲಾ (Leela) ನಡುವಿನ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರಿಗೆ ಬಹಳ ಖುಷಿ. ಇದೀಗ ಅವರಿಬ್ಬರ ನಡುವಿನ ಜಗಳವೂ ಪ್ರೀತಿಯಾಗಿ ಮಾರ್ಪಾಡಾಗುವ ಸಾಧ್ಯತೆ ಕಾಣಿಸುತ್ತಿದೆ. ತಂದೆ ಮನೆಯಿಂದ ಮತ್ತೆ ವಾಪಸ್ಸು ಎಜೆ ಮನೆಗೆ ಬಂದ ಲೀಲಾ ಅಲ್ಲಿ ಮತ್ತೆ ತನ್ನ ದರ್ಬಾರನ್ನು ಶುರುಮಾಡಿದ್ದಾಳೆ. ನೀಲಾಳನ್ನು ಕಂಡರೆ ಸದಾ ಕೋಪಿಸಿಕೊಳ್ಳುತ್ತಿದ್ದ ಎಜೆಗೆ‌ ಈಗೀಗ ಅವಳ‌ ಮೇಲೆ ಒಳ್ಳೆಯ ‌ಅಭಿಪ್ರಾಯ ಮೂಡುತ್ತಿದೆ. ಅಜ್ಜಿ ಮಾಡಿದಂತಹ ಪ್ಲಾನ್ ನಿಂದ ಎಜೆ ಮತ್ತು ಲೀಲಾ ಪ್ರೀತಿಯಲ್ಲಿ ಬೀಳುವ ಎಲ್ಲಾ ಸೂಚನೆಯೂ ಕಾಣಿಸುತ್ತಿದೆ.

    ಎಜೆ ಮತ್ತು ಲೀಲಾ ಅನಿವಾರ್ಯವಾಗಿ ಮದುವೆಯಾಗಿದ್ದಾರೆ. ಇತ್ತ ಎಜೆ ತನ್ನ ಮೊದಲ ಹೆಂಡತಿ ಅಂತರಾಳಿಗೆ ಮಾತುಕೊಟ್ಟಂತೆ ಲೀಲಾಳನ್ನು ಮದುವೆಯಾಗಿದ್ದರೆ, ಲೀಲಾ ತನ್ನ ಮುದ್ದಿನ ತಂಗಿ ಚುಕ್ಕಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅನಿವಾರ್ಯತೆಗೆ ಕಟ್ಟುಬಿದ್ದು ಮದುವೆಯಾಗಿದ್ದಾಳೆ. ಆದರೆ ಅವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಸಿ ತೀರುತ್ತೇನೆ ಎಂದು ಅಜ್ಜಿ ಪಣತೊಟ್ಟಿದ್ದಾರೆ. ಇದೇ ಕಾರಣಕ್ಕೆ ಅಜ್ಜಿ ಇದೀಗ ಮನೆಯಿಂದ ಹೊರಗೆ ಟೆಂಟ್ ಹಾಕಿಕೊಂಡು ಸತ್ಯಾಗ್ರಹ ಮಾಡುತ್ತಿದ್ದಾರೆ. ಎಲ್ಲಾ ಸೌಕರ್ಯಗಳು ಇದ್ದುಕೊಂಡು ಈ ರೀತಿ ಟೆಂಟ್ ನಲ್ಲಿ ತಾಯಿ ಇರುವುದನ್ನು ಕಾಣಲು ಎಜೆಗೆ ಸಾಧ್ಯವಾಗುತ್ತಿಲ್ಲ. ಹಾಗೆಯೇ ಲೀಲಾ ಳಿಗೆ ಅಜ್ಜಿಯ ಮೇಲೆ ಎಲ್ಲಿಲ್ಲದ ಪ್ರೀತಿ.

    ಇದನ್ನೂ ಓದಿ: Jothe Jotheyali Serial: ಜೇಂಡೆ ಕುತಂತ್ರದಿಂದ ಅಪಾಯದಲ್ಲಿ ಸಿಲುಕಿರುವ ಆರ್ಯವರ್ಧನ್? ಇದೇನಿದು ಬಿಗ್ ಟ್ವಿಸ್ಟ್

    ಅಜ್ಜಿಗೆ ಸಾಥ್ ನೀಡಲು ಕೈ ಜೋಡಿಸಿದ ಎಜೆಯ ಪಿಎ ವಿಶ್ವರೂಪ್

    ಅಜ್ಜಿಗೆ ಸಾಥ್ ನೀಡಲು ಇದೀಗ ಎಜೆಯ ಪಿಎ ವಿಶ್ವರೂಪ್ ಹಲವು ರೀತಿಯ ಐಡಿಯಾಗಳನ್ನು ಅಜ್ಜಿಗೆ ಕೊಡುತ್ತಿದ್ದಾರೆ. ಅಜ್ಜಿಯ ಸಂತೋಷಕ್ಕೋಸ್ಕರ ಪ್ರೀತಿಯ ನಾಟಕವಾಗುತ್ತಿರುವ ಲೀಲಾ ಮತ್ತು ಎಜೆ ನಿಜವಾಗಿಯೂ ಪ್ರೀತಿಯಲ್ಲಿ ಬೀಳುತ್ತಾರಾ ಎನ್ನುವ ಬಗ್ಗೆ ಕಾದುನೋಡಬೇಕಿದೆ.

    ಲೀಲಾಳ ತಾಯಿ ದುಡ್ಡಿನ ಆಸೆಗೆ ಲೀಲಾ ಮತ್ತು ಎಜೆ ವಿಚ್ಛೇದನ ಮಾಡಿಸುವ ಪ್ರಯತ್ನದಲ್ಲಿ ಒಂದು ಬಾರಿ ಸೋತು ಇದೀಗ ಮತ್ತೆ ಮತ್ತೆ ಏನಾದರೂ ಸಂಚು ಮಾಡಿ ಅವರಿಬ್ಬರ ನಡುವಿನ ಬಾಂಧವ್ಯವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಆಕೆ ಮಾಡುತ್ತಿರುವ ಎಲ್ಲ ಪ್ಲಾನ್ ಗಳು ಫ್ಲಾಪ್ ಆಗುತ್ತಿವೆ.

    ಮೊದಲ ದಿನ ಅಜ್ಜಿ ಟೆಂಟ್ ನಲ್ಲಿ ಕೂತಿದ್ದರೆ ಮರುದಿನ ಉಪವಾಸ ಸತ್ಯಾಗ್ರಹ ಕೂಡ ಮಾಡಲು ಪ್ರಾರಂಭಿಸಿದ್ದರು. ಲೀಲಾ ಮತ್ತು ಎಜೆ ಅಜ್ಜಿಯ ಕಣ್ಮುಂದೆ ಡಿನ್ನರ್ ಮಾಡಿದರೆ ಅಜ್ಜಿ ಊಟ ಮಾಡುವುದಾಗಿ ಕೇಳಿಕೊಂಡಿದ್ದರು. ಇದೀಗ ಲೀಲಾ ಎಜೆಗೆ ಕೈತುಂಬಾ ಊಟ ಕೂಡ ಮಾಡಿಸಿದ್ದಾಳೆ. ಅಜ್ಜಿ ಇದನ್ನು ಕಂಡು ಬಹಳ ಸಂತೋಷವಾಗಿದ್ದಾರೆ. ಲೀಲಾ ಮತ್ತು ಎಜೆ ನೈಟ್ ‌ಔಟ್ ಹೊರಟಿದ್ದಾರೆ. ಈ ಮಧ್ಯೆ ಅವರಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು ಎಲ್ಲವೂ ಮರೆಯಾಗಿ ಪ್ರೀತಿಯಲ್ಲಿ ಬೀಳುವ ಬಗ್ಗೆ ಸೂಚನೆ ಕಾಣಿಸುತ್ತಿದೆ.

    ಇದನ್ನೂ ಓದಿ: Kichcha Sudeep: ಡಿಕೆಡಿ ವೇದಿಕೆಗೆ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್​, ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ನಟ

    ವಿರೋಧಿಗಳ ಮಧ್ಯೆ ಗೆಲ್ಲುತ್ತಾ ಎಜೆ ಮತ್ತು ಲೀಲಾ ಪ್ರೀತಿ

    ಒಂದೆಡೆ ಲೀಲಾ ಮತ್ತು ಎಜೆ ದೂರವಾಗಬೇಕು ಎಂದು‌ ಎಜೆಯ ಮೂರು ಸೊಸೆಯಂದಿರು ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಲೀಲಾಳನ್ನು ಮನೆಯಿಂದ ಹೊರಹಾಕಲು ಸೊಸೆಯಂದಿರು ಆರಂಭದಿಂದಲೂ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇತ್ತ ಲೀಲಾಳ ತಾಯಿ 70 ಕೋಟಿ ದುಡ್ಡಿನ ಆಸೆಗೆ ಸಾಕಿದ ಮಗಳ ಸಂಸಾರವನ್ನು ಹಾಳು ಮಾಡಲು ಪ್ರಯತ್ನ ಪಡುತ್ತಿದ್ದಾಳೆ. ಆದರೆ ಅಜ್ಜಿ ಪ್ಲಾನ್ ಮುಂದೆ ಸೊಸೆಯಂದಿರ ಪ್ಲಾನ್ ಮತ್ತು ಲೀಲಾ ತಾಯಿಯ ಪ್ಲಾನ್ ಗಳೆಲ್ಲವೂ ಪ್ಲಾಪ್ ಆಗುತ್ತಿವೆ. ಲೀಲಾ ಮತ್ತು ಎಜೆಯ ನಡುವೆ ಪ್ರೀತಿ ಯಾವಾಗ ಹುಟ್ಟುತ್ತದೆ ಎನ್ನುವ ಕಾತರತೆ ಪ್ರೇಕ್ಷಕರಲ್ಲಿ ಅಡಗಿದೆ
    Published by:Swathi Nayak
    First published: