Padmini Devanahalli: ತೆಲುಗಿಗೆ ಹೊರಟ 'ಹಿಟ್ಲರ್‌'ನ ಸೊಸೆ! 'ಪದ್ಮಿನಿ'ಯ 'ಪರಿಣಯ'ವನ್ನು ಜನ ಮೆಚ್ಚುತ್ತಾರಾ?

ಕನ್ನಡದ ನಟಿಯೊಬ್ಬರು ಜೀ ತೆಲುಗು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸದ್ಯ ಟಾಪ್‌ ಸೀರಿಯಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೈದೇಹಿ ಪರಿಣಯಮ್‌ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಇಲ್ಲಿ ಸೊಸೆಯಾಗಿ ಜನ ಮನ್ನಣೆ ಪಡೆದ ಇವರು, ವೈದೆಹಿ ಎಂಬ ಪ್ರಮುಖ ಪಾತ್ರದಲ್ಲಿ ಪ್ರೇಕ್ಷರ ಮುಂದೆ ಬಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಹಿಟ್ಲರ್‌ ಕಲ್ಯಾಣ (Hitler Kalyana) ವಿಶೇಷ ಎಳೆಯನ್ನಿಟ್ಟುಕೊಂಡು ನೋಡುಗರನ್ನು ರಂಜಿಸುತ್ತಿರುವ ಧಾರಾವಾಹಿ. ಈ ಧಾರಾವಾಹಿಯಲ್ಲಿ ಎಜೆ ಹಾಗೂ ಲೀಲಾ (Leela) ಪಾತ್ರಕ್ಕೆ ಎಷ್ಟೂ ಪ್ರಾಮುಖ್ಯತೆಯಿದೆಯೊ ಅದೇ ರೀತಿ ಮೂವರು ಸೊಸೆಯಂದಿರ ಸುತ್ತ ಕೂಡಾ ಕಥೆ ಸಾಗ್ತಾ ಇದೆ. ಹೀಗೆ ಪ್ರತಿಯೊಂದು ಪಾತ್ರಕ್ಕೂ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲಿ ಪ್ರಾಮುಖ್ಯತೆಯಿದೆ. ಇದೀಗ ವಿಶೇಷ ಅಂದರೆ, ಹಿಟ್ಲರ್‌ನ ಮೂರು ಸೊಸೆಯರಲ್ಲಿ ಕೊನೆಯ ಸೊಸೆ ಪಾತ್ರ ನಿರ್ವಹಿಸುತ್ತಿರುವ ಸರಸ್ವತಿ (Saraswathi) ಪಕ್ಕದ ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜೀ ತೆಲುಗು (Zee Telugu) ಕಿರುತೆರೆಯಲ್ಲಿ ಜನಮನಗೆದ್ದ ವೈದೇಹಿ ಪರಿಯನ್ (Vaidehi Pariyan) ಎಂಬ ಧಾರಾವಾಹಿಯಲ್ಲಿ ಕನ್ನಡದ ನಟಿ ಪದ್ಮಿನಿಯವರೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಜೀ ತೆಲುಗು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸದ್ಯ ಟಾಪ್‌ ಸೀರಿಯಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೈದೇಹಿ ಪರಿನಿಯಮ್‌ ಧಾರವಾಹಿಯಲ್ಲಿ ಕಾಣಿಸಿಕೊಳ್ಳಿದ್ದಾರೆ. ವಿಶೇಷ ಅಂದರೆ ಇಲ್ಲಿ ಸೊಸೆಯಾಗಿ ಜನ ಮನ್ನಣೆ ಪಡೆದ ಪದ್ಮಿನಿ, ವೈದೆಹಿ ಎಂಬ ಪ್ರಮುಖ ಪಾತ್ರದಲ್ಲಿ ಪ್ರೇಕ್ಷರ ಮುಂದೆ ಬಂದಿದ್ದಾರೆ.

  ಇದನ್ನೂ ಓದಿ: Sharanya Shetty: ಎಂಜಿನಿಯರಿಂಗ್ ಪದವೀಧರೆಯಂತೆ ಗಟ್ಟಿಮೇಳದ ಸುಂದರಿ - ಕಿರುತೆರೆಯಲ್ಲಿ ಮಿಂಚಲು ಶರಣ್ಯಾ ಶೆಟ್ಟಿ ರೆಡಿ

  ಪರಿಣಯಮ್‌ ಧಾರಾವಾಹಿ ಮುಖ್ಯ ಕಥೆ ‌ಏನು?

  ಇನ್ನೂ ಧಾರಾವಾಹಿಯ ಬಗ್ಗೆ ಹೇಳುವುದಾದರೆ ವೈದೆಹಿ ಎಂಬ ರಾಮನ ಭಕ್ತೆಯ ಸುತ್ತ ಹೆಣೆದಿರುವ ಕಥೆಯಿದಾಗಿದ್ದು, ದೈವಾಂಶು ವೈದೇಹಿ ಕಲ್ಯಾಣವಾಗಿರುತ್ತದೆ. ಆದರೆ ಕಾರಣಾಂತರಗಳಿಂದ ದೈವಾಂಶು ವೈದೇಹಿ ಒಟ್ಟಿಗೆ ಇರುವ ಸೌಭಾಗ್ಯ ಇರೋದಿಲ್ಲಾ.. ಅದರಿಂದ ದೈವಾಂಶು ಶ್ರವಂತಿ ಎಂಬ ಹುಡುಗಿಯನ್ನ ಮದುವೆಯಾಗುತ್ತಾನೆ. ಆದರೆ ಟ್ವಿಸ್ಟ್‌ ಅಂದರೆ ವೈದೇಹಿ ದೈವಾಂಶುವನ್ನು ಅರಸಿ ಮತ್ತೆ ಬಂದಿದ್ದಾಳೇ. ಮಾತ್ರವಲ್ಲದೆ ವೈದೇಹಿಗೆ ದೈವಾಂಶೂ ಬೇರೊಂದು ಮದುವೆಯಾಗಿರೋದು ಕೂಡಾ ತಿಳಿದಿದೆ. ಮುಂದೆ ಏನಾಗಬಹುದು ಎಂಬ ಕುತೂಹಲ ಸದ್ಯ ಎಲ್ಲಡೆ ಮನೆಮಾಡಿದೆ. ಇದಿಷ್ಟು ಸೀರಿಯಲ್‌ ಕಥೆ.

  ನಾಯಕನಟನಾಗಿ ಕನ್ನಡ ನಟ ಪವನ್ ಕಾಣಿಸಿಕೊಂಡಿದ್ದಾರೆ

  ಮತ್ತೊಂದು ಖುಷಿಯ ವಿಚಾರ ಏನೆಂದರೆ ಈ ಧಾರಾವಾಹಿಯಲ್ಲಿ ನಾಯಕನಟನಾಗಿ ಕನ್ನಡ ನಟ ಪವನ್ ಕಾಣಿಸಿಕೊಂಡಿದ್ದಾರೆ. ಒಂದೇ ಧಾರಾವಾಹಿಯಲ್ಲಿ ನಮ್ಮ ಕನ್ನಡದ ನಟ ಹಾಗೂ ನಟಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಹೆಮ್ಮೆಯ ವಿಚಾರ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಕನ್ನಡದ ನಟ-ನಟಿಯರು ಪರಭಾಷೆಗಳಲ್ಲಿ ನಟಿಸಿ ಮಿಂಚುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದೆ.

  ಜಾಜಿ ಪಾತ್ರ ಮಾಡಿ ಜನರ ಮನಸ್ಸು ಗೆದ್ದ ನಟಿ ಪದ್ಮಿನಿ ದೇವನಹಳ್ಳಿ

  ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ 'ಮಹಾದೇವಿ' ಎಂಬ ಭಕ್ತಿ ಪ್ರಧಾನ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಜಾಜಿ ಪಾತ್ರ ಮಾಡಿ ಜನರ ಮನಸ್ಸು ಗೆದ್ದ ನಟಿ ಪದ್ಮಿನಿ ದೇವನಹಳ್ಳಿ ಅವರು ಈ ಪಾತ್ರದ ಮೂಲಕ ಮನೆ ಮಾತಾಗಿದ್ದರು.

  ಇದನ್ನೂ ಓದಿ: Sathya Serial: ಅಮೂಲ್ ಬೇಬಿನ ಮದುವೆಯಾಗಲ್ಲ ಎಂದ ಸತ್ಯ - ಸಂದಿಗ್ಧ ಪರಿಸ್ಥಿತಿಯಲ್ಲಿ ರಾಮಚಂದ್ರ ರಾಯರು

  ಪದ್ಮಿನಿ ತಂದೆ ಕೂಡ ನಾಟಕ ಮಾಡುತ್ತಿದ್ದರಿಂದ ಪದ್ಮಿನಿಗೂ ಕೂಡ ನಟನೆಗೆ ಕಡೆಗೆ ಒಲವು ಮೂಡಿತ್ತು. ಅವರ ತಂದೆಗೆ ಶ್ರುತಿ ನಾಯ್ಡು ಪರಿಚಯವಿದ್ದರಿಂದ ಪದ್ಮಿನಿ 'ಮಹಾದೇವಿ' ಧಾರಾವಾಹಿ ಆಡಿಶನ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪದ್ಮಿನಿ ಆಯ್ಕೆಯಾಗಿ ಉತ್ತಮವಾಗಿ ನಟಿಸಿದ್ದರು. ಈ ಪಾತ್ರ ಅವರಿಗೆ ಬಹಳಷ್ಟು ಅಭಿಮಾನಿಗಳನ್ನು ಪಡೆಯುವಲ್ಲಿ ಸಹಾಯ ಮಾಡಿತ್ತು. ಅದೇ ರೀತಿ ಈ ದಾರವಾಹಿಯ ಬಳಿಕ ಅವರು ನಟನೆಯಲ್ಲಿ ತೊಡಗಿಸಿಕೊಂಡಿರಲಿಲ್ಲಾ. ಹಿಟ್ಲರ್ ಕಲ್ಯಾಣದಲ್ಲಿ ಉತ್ತಮ ಪಾತ್ರ ದೊರಕಿರುವುದರಿಂದ ಮತ್ತೆ ಆರು ನಟನೆಯತ್ತ ಮುಖ ಮಾಡಿದ್ದಾರೆ. ಇನ್ನು ಪದ್ಮಿನಿ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
  Published by:Swathi Nayak
  First published: