Hitler Kalyana: ಚಂದ್ರಶೇಖರ್ ಮೇಲಿನ ಕಳಂಕ ತೊಳೆದು ಹಾಕಿದ ಮಿಸ್ಟರ್ ಪರ್ಫೆಕ್ಟ್; ವರ್ಕೌಟ್ ಆದ ದುರ್ಗಾಳ ಪ್ಲಾನ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ. ಎಡವಟ್ಟು ಲೀಲಾ ಮತ್ತು ಮಿಸ್ಟರ್ ಪರ್ಫೆಕ್ಟ್ ಎಜೆ ನಟನೆಗೆ ಸೋಲದ ಅಭಿಮಾನಿಗಳಿಲ್ಲಾ.

ಎಜೆ

ಎಜೆ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ (Hitler Kalyana). ಎಡವಟ್ಟು ಲೀಲಾ (Leela) ಮತ್ತು ಮಿಸ್ಟರ್ ಪರ್ಫೆಕ್ಟ್ ಎಜೆ (AJ) ನಟನೆಗೆ ಸೋಲದ ಅಭಿಮಾನಿಗಳಿಲ್ಲಾ. ಇತ್ತೀಚಿಗೆ ಕೆಲವು ಸಂಚಿಕೆಗಳಿಂದ ಧಾರಾವಾಹಿಯಲ್ಲಿ ಲೀಲಾಳ ಪಾತ್ರ ಒಬ್ಬಳು ಮಗಳು ತಂದೆಯನ್ನು ಸಂತೈಸುತ್ತಿರುವ ಎಂತಹವರಿಗಾದರೂ ಇಷ್ಟವಾಗಬಹುದು. ತಂದೆ ಮಗಳ ನಡುವಿನ ಬಾಂಧವ್ಯಕ್ಕೆ ಈ ಸಂಚಿಕೆಗಳು ಸಾಕ್ಷಿಯಾಗಿವೆ. ಮಾಡದ ತಪ್ಪಿಗೆ ಅವಮಾನ ಕ್ಕೊಳಗಾಗಿ ಸೋತು ಹೋಗಿರುವ ಚಂದ್ರಶೇಖರ್ ಗೆ (Chandrashekhar) ಮಗಳು ಲೀಲಾ ಪ್ರತಿದಿನ ಭರವಸೆಯ ಮಾತುಗಳನ್ನು ಹೇಳಿ ತಂದೆಯನ್ನು ನೋವಿನಿಂದ ಹೊರಗೆ ತರಲು ಪ್ರಯತ್ನಿಸುತ್ತಿರುವುದನ್ನು ಕಂಡಾಗ ಕಣ್ಣಾಲಿಗಳು ತುಂಬಿಹೋಗುತ್ತದೆ.

  ಇದನ್ನೂ ಓದಿ: Sathya Serial: ಕೋಟೆ ಮನೆಯ ಸೊಸೆ ಸತ್ಯಾಳಿಗೆ ಪ್ರತಿ ದಿನ ಅಗ್ನಿ ಪರೀಕ್ಷೆ ! ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯಾ

  ಸಮಾಜದ ಮುಂದೆ ಸತ್ಯ ಬಯಲು ಮಾಡಿದ ಎಜೆ

  ಚಂದ್ರಶೇಖರ್ ಮೇಲೆ ಸಂಪೂರ್ಣ ನಂಬಿಕೆ ಇರುವ ಎಜೆಗೆ ಒಂದು ಒಳ್ಳೆಯ ಸಂದರ್ಭ ನೋಡಿಕೊಂಡು ಎಲ್ಲರ ಸಮ್ಮುಖದಲ್ಲೇ ಚಂದ್ರಶೇಖರ್ ಯಾವುದೇ ತಪ್ಪು ಮಾಡಲಿಲ್ಲ ಎಂಬುದನ್ನು ಸಮಾಜಕ್ಕೆ ತಿಳಿಸಬೇಕಿತ್ತು. ಅದೇ ಕಾರಣಕ್ಕೆ ಎಜೆ ಸೈಲೆಂಟಾಗಿ ಇದ್ದುಕೊಂಡೇ ತನ್ನ ಕಾರ್ಯವನ್ನು ಮಾಡಲು ಮಾಡಿದ್ದಾರೆ.

  ಕಳೆದ ಸಂಚಿಕೆಯಲ್ಲಿ ಎಜೆ ಚಂದ್ರಶೇಖರ್ ಕೆಲಸಮಾಡುತ್ತಿದ್ದ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಿದಕ್ಕೆ ಕಾರಣ ಕೇಳುತ್ತಾನೆ. ಮುಂದೆ ಅಲ್ಲಿ ಕೂಡ ಒಂದು ಪರ್ಫೆಕ್ಟ್ ಪ್ಲಾನ್ ಮಾಡಿ ಬ್ಯಾಂಕಿನ ಮ್ಯಾನೇಜ್ಮೆಂಟ್ ಅನ್ನು ಎಜೆ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಾನೆ.

  ಇದೀಗ ನಿನ್ನೆ ಸಂಚಿಕೆಯಲ್ಲಿ ಬ್ಯಾಂಕ್ ಕಾರ್ಯಕ್ರಮಕ್ಕೆ ಎಜೆ ಮುಖ್ಯ ಅತಿಥಿಯಾಗಿ ಆಗಮಿಸಿದರೆ ಶೀಲ ಹಾಗೂ ಚಂದ್ರಶೇಖರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾರೆ. ಚಂದ್ರಶೇಖರ್ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹಾಕಿದ ಆ ಲೇಡಿಯನ್ನು ಅದೇ ಕಾರ್ಯಕ್ರಮಕ್ಕೆ ಎಜೆ ಬರುವಂತೆ ಮಾಡಿ ವೇದಿಕೆಯ ಮೇಲೆಯೇ ಚಂದ್ರಶೇಖರ್ ಯಾವುದೇ ತಪ್ಪಿಲ್ಲ ಎಂದು ಎಲ್ಲರ ಎದುರಲ್ಲೇ ಹೇಳುವಂತೆ ಮಾಡಿದ್ದಾರೆ‌. ಇದೀಗ ಚಂದ್ರಶೇಖರ್ ಅಪವಾದ ಮುಕ್ತವಾಗಿ ಬಹಳ ಸಂತೋಷವಾಗಿದ್ದಾರೆ.

  ದೇವ್ ಕುತಂತ್ರಕ್ಕೆ ಮತ್ತೆ ಬಗೆಯಾಗುತ್ತದ ಎಜೆ-ಲೀಲಾ ಸಂಬಂಧ ಇತ್ತೀಚಿನ ದಿನಗಳಲ್ಲಿ ದೇವ್ ಕುತಂತ್ರದಿಂದ ಲೀಲಾ ಮತ್ತು ಎಜೆಯ ನಡುವೆ ಅಂತರ ಹೆಚ್ಚುತ್ತಿದೆ. ಲೀಲಾ ಮನೆಯ ಕಷ್ಟದ ಸಮಯವನ್ನೇ ಬಳಸಿಕೊಳ್ಳುವ ಲೀಲಾ ಕುಟುಂಬಕ್ಕೆ ನಾನು ಒಳ್ಳೆಯವನು ಎನ್ನುವುವಂತೆ ನಟಿಸುತ್ತಿದ್ದಾನೆ. ಆದರೆ ಇದೀಗ ದೇವ್ ಪ್ಲಾನ್ ಎಲ್ಲಾ ಉಲ್ಟಾ ಹೊಡೆದಿದೆ. ಲೀಲಾಳ ತಂಗಿ ಚುಕ್ಕಿ ಹಾಗೂ ದೇವ್ ಪರಸ್ಪರ ಮಾತನಾಡುತ್ತಿರುವುದನ್ನು ಕಂಡ ಎಜೆಗೆ ದೇವ್ ನ ಪ್ಲಾನ್ ಎಲ್ಲಾ ತಿಳಿಯುವಂತೆ ಮಾಡಿದೆ.

  ಹಿಂದಿನ ದಿನ ಬ್ಯಾಂಕ್ ಕಾರ್ಯಕ್ರಮಕ್ಕೆ ನೀವು ಹೋಗಲೇ ಬೇಡಿ ಎಂದ ದೇವ್, ಎಜೆಗೆ ಹೆದರಿ‌ ದೇವ್, ಲೀಲಾ ತಂದೆಯ ಬಳಿ ಸರ್ ಪ್ರೋಗ್ರಾಂಗೆ ಹೋಗಲೇಬೇಕು ನೀವು, ನೀವಿಲ್ಲದೇ ಪ್ರೋಗ್ರಾಂಗೆ ಸ್ವಲ್ಪವೂ ಕಳೆ ಇರುವುದಿಲ್ಲ. ನಿಮ್ಮನ್ನು ಅಷ್ಟು ಬ್ಯಾಂಕ್‌ನವರು ಆದರದಿಂದ ಸ್ವಾಗತಿಸಿರುವುದರಿಂದ ನೀವು ಬ್ಯಾಂಕ್‌ಗೆ ತೆರಳಲೇ ಬೇಕು ಎಂದು ಒತ್ತಾಯಿಸುತ್ತಾನೆ ಒತ್ತಾಯಿಸಿ ಕಾರ್ಯಕ್ರಮಕ್ಕೆ ‌ಹೋಗುವಂತೆ ಮಾಡಿದ್ದಾನೆ.

  ಇದನ್ನೂ ಓದಿ: Reality Show: ಡಿಕೆಡಿ - ಡ್ರಾಮಾ ಜೂನಿಯರ್ಸ್ ಮಹಾಸಂಗಮ, ಜೀ ಕನ್ನಡದಲ್ಲಿ ಮನರಂಜನೆಯ ಮಹಾಪೂರ

  ವರ್ಕೌಟ್ ಆದ ದುರ್ಗಾಳ ಸೀಕ್ರೆಟ್ ಪ್ಲಾನ್

  ಎಜೆ ಎಲ್ಲಾ ವಿಚಾರಗಳು ಪರ್ಫೆಕ್ಟ್ ಎಂದು ತಿಳಿದಿರುವ ದುರ್ಗಾ ಸೈಲೆಂಟಾಗಿ ಇದ್ದುಕೊಂಡೇ ಆ ಅಪವಾದ ಹಾಕಿದ ಲೇಡಿಯ ಬಳಿ ಎಂಥದೇ ಸಂದರ್ಭ ಬಂದರೂ ತನ್ನ ಹೆಸರನ್ನು ಹೇಳದಂತೆ ಮಾಡಿಕೊಂಡಿದ್ದಾಳೆ. ಅದಕ್ಕೋಸ್ಕರ ಹುಷಾರು ತಪ್ಪಿದ ಆಕೆಯ ಮಗುವನ್ನು ತನ್ನ ವಶಕ್ಕೆ ಕೂಡ ಪಡೆದುಕೊಂಡಿದ್ದಾಳೆ ದುರ್ಗಾ.

  ಇದೀಗ ಲೀಲಾಳ ತಂದೆ ಅಪವಾದ ಮುಕ್ತವಾಗಿದ್ದಾರೆ. ಎಜೆ ಮಾಡಿದ ಈ ಕಾರ್ಯದಿಂದ ಮತ್ತೆ ಲೀಲಾ ಎಜೆ ಮನೆಗೆ ಹೋಗುತ್ತಾಳಾ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದುನೋಡಬೇಕಿದೆ.
  Published by:Swathi Nayak
  First published: