Hitler Kalyana Serial: ಪವಿತ್ರಾಳನ್ನು ಕೊಲ್ಲಲು ಹೋಗಿ ಎಜೆ ಮುಂದೆ ಸಿಕ್ಕಿಬಿದ್ದನಾ ದೇವ್?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ ಕೂಡ ಒಂದು. ಎಡವಟ್ಟು ಲೀಲಾ ಮತ್ತು ಮಿಸ್ಟರ್ ಪರ್ಫೆಕ್ಟ್ ಎಜೆ ನಡುವಿನ ಮುದ್ದಾದ ಸಂಭಾಷಣೆ ಕೇಳಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ.

ದೇವ್

ದೇವ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ (Hitler Kalyana) ಕೂಡ ಒಂದು. ಎಡವಟ್ಟು ಲೀಲಾ ಮತ್ತು ಮಿಸ್ಟರ್ ಪರ್ಫೆಕ್ಟ್ ಎಜೆ ನಡುವಿನ ಮುದ್ದಾದ ಸಂಭಾಷಣೆ ಕೇಳಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಇದೀಗ ಲೀಲಾ (Leela)) ಮತ್ತು ಎಜೆ (AJ) ಪರಸ್ಪರ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಕೂಡ ಕಾಣಿಸುತ್ತಿರುವುದು ಬಹಳ ಸಂತೋಷ. ಎಜೆಯದ್ದು ಸಿಕ್ಕಾಪಟ್ಟೆ ಸ್ಟ್ರಿಕ್ಟ್ (Strict) ಮತ್ತು ಸೈಲೆಂಟ್ ಕ್ಯಾರೆಕ್ಟರ್, ಇತ್ತಾ ಲೀಲಾ ಎಡವಟ್ಟು ಮತ್ತು ತನ್ನ ನಾನ್ ಸ್ಟಾಪ್ ಮಾತುಗಳಿಂದಲೇ‌ ಫೇಮಸ್. ಆದರೆ ಇದೀಗ ಅಜ್ಜಿಯ ಆಸೆಯಂತೆ ಲೀಲಾ ಮತ್ತು ಎಜೆ ಒಂದಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

    ಈಗಾಗಲೇ ಹಲವಾರು ಬಾರಿ ಎಜೆ ಮುಂದೆ ಸಿಕ್ಕಿಹಾಕಿಕೊಂಡಿರುವ
    ದೇವ್ ಗೆ ಎಜೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ. ಆದರೇ ದೇವ್ ಗೆ ಬುದ್ದಿ ಬಂದಂತೆ ಕಾಣಿಸುತ್ತಿಲ್ಲಾ. ಲೀಲಾಳನ್ನು ತಾಯಿ ಜೊತೆ ಮಾತನಾಡಿಸುವ ವಿಚಾರವಾಗಿ ಎಜೆ ಲೀಲಾಳನ್ನು ತವರು ಮನೆ ಕಡೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಾಯಿ ಮಾರ್ಕೆಟ್ ಕಡೆಗೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಲೀಲಾಳ ತಂಗಿ ರೇವತಿ ದೇವ್ ಜೊತೆ ಮಾತನಾಡಲು ಆತನನ್ನು ಮನೆಗೆ ಕರೆಸಿ ಕೊಂಡಿದ್ದಾಳೆ. ಅಲ್ಲಿಂದ ಉಪಾಯದಲ್ಲಿ ಪಾರಾದ ದೇವು ಇದೀಗ ಮತ್ತೆ ಎಜೆ ಮನೆಯಲ್ಲಿ ಹೋಗಿ ತನ್ನ ಪತ್ನಿ ಪವಿತ್ರಾಳನ್ನು ಕೊಲ್ಲುವ ಯೋಜನೆಯನ್ನು ಹಾಕಿಕೊಂಡಿದ್ದಾನೆ.

    ಇದನ್ನೂ ಓದಿ: Nammane Yuvarani Serial: ಉಪಾಯದಿಂದ ಕಲ್ಪನಾಳ ಮನೆ ಸೇರಿದ ಗಂಗಾ! ಮುಂದಿದೆ ಬಿಗ್ ಟ್ವಿಸ್ಟ್

    ಪವಿತ್ರಾಳನ್ನು ಕೊಲೆ ಮಾಡಲು ಪ್ರಯತ್ನ ಪಟ್ಟ ದೇವ್

    ದೇವ್ ಬಗ್ಗೆ ಈಗಾಗಲೇ ಪತಿ ಪವಿತ್ರಾಳಿಗೆ ಎಲ್ಲಾ ವಿಚಾರಗಳು ತಿಳಿದಿದೆ. ಅಷ್ಟೇ ಅಲ್ಲದೆ ಪವಿತ್ರ ತನ್ನ ನಿಜರೂಪವನ್ನು ಎಜೆ ಮುಂದೆ ಬಯಲು ಮಾಡುತ್ತಾಳೆ ಎನ್ನುವುದಕ್ಕಾಗಿಯೇ ಪವಿತ್ರಾಳನ್ನು ಕೊಲ್ಲಲು ಪ್ರಯತ್ನಪಟ್ಟು ಆಕೆಯನ್ನು ಕೋಮಾದಲ್ಲಿ ಇರುವಂತೆ ಮಾಡಿದ್ದಾನೆ ದೇವ್. ಆದರೆ ಈ ಬಗ್ಗೆ ಮನೆಯಲ್ಲಿ ಯಾರಿಗೂ ಮಾಹಿತಿ ಇಲ್ಲ.ಈಗಾಗಲೇ ಹಲವಾರು ಬಾರಿ ದೇವ್ ಪವಿತ್ರಾಳನ್ನು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಇದೇ ಕಾರಣಕ್ಕೆ ಲೀಲಾ ಪವಿತ್ರ ಗಳನ್ನು ತನ್ನ ಮನೆಗೆ ಕರೆಸಿಕೊಂಡು ಬಂದಿದ್ದಾಳೆ. ಆದರೆ ದೇವ್ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು‌ ಪವಿತ್ರಾಳನ್ನು ಹಲವಾರು ಬಾರಿ ಕೊಲ್ಲಲು ಪ್ರಯತ್ನಪಟ್ಟಿದ್ದಾನೆ. ಇದೀಗ ದೇವ್ ಪವಿತ್ರಾಳಿಗೆ ವಿಶ್ವ ಕುಡಿಸುವ ಪ್ರಯತ್ನ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ಬಹಳ ಒಳ್ಳೆಯವನಂತೆ ನಟಿಸಿ ವಿಷವನ್ನು ಪವಿತ್ರಾಳ ಬಾಯಿಗೆ ಹಾಕಲು ಪ್ರಯತ್ನಪಟ್ಟಿದ್ದಾನೆ. ಈಗಾಗಲೇ ಪವಿತ್ರಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ದೇವ್ ನ ನಿಜಮುಖ ಇಲ್ಲಿ ಬಯಲು ಮಾಡುತ್ತಿಲ್ಲ ಎನ್ನುವ ಭಯ ಆತನಿಗಿದೆ. ಹಾಗೆಯೇ ಲೀಲಾಳ ತಂಗಿ ರೇವತಿಯನ್ನು ಮದುವೆಯಾಗುವ ಮಹದಾಸೆಯನ್ನು ಇಟ್ಟುಕೊಂಡಿದ್ದಾನೆ ದೇವ್. ಹಾಗೆಯೇ ಲೀಲಾಳ ತಂಗಿ ರೇವತಿಯನ್ನು ಮದುವೆಯಾಗುವ ಮಹದಾಸೆಯನ್ನು ಇಟ್ಟುಕೊಂಡಿದ್ದಾನೆ ದೇವ್. ಲೀಲಾಳ ತಂಗಿ ರೇವತಿಯನ್ನು ಮತ್ತು ಪವಿತ್ರಾಳನ್ನು ದೇವ್ ನಿಂದ ಹೇಗೆ ಪಾರು ಮಾಡುತ್ತಾನೆ ಎಜೆ ಎಂದು ಕಾದುನೋಡಬೇಕಿದೆ.

    ಇದನ್ನೂ ಓದಿ: Kannadathi Serial: ಸೈಕೋ ವರೂಧಿನಿಯ ಮುಂದಿನ ನಡೆ ಏನು? ಮುಂದೆ ಇದೆಯಾ ಬಿಗ್ ಟ್ವಿಸ್ಟ್

    ಪ್ರೀತಿಯಲ್ಲಿ ಬೀಳುತ್ತಾರಾ ಎಜೆ ಮತ್ತು ಲೀಲಾ?

    ಎಜೆ ಮತ್ತು ಲೀಲಾ ಅನಿವಾರ್ಯವಾಗಿ ಮದುವೆಯಾಗಿದ್ದಾರೆ. ಇತ್ತ ಎಜೆ ತನ್ನ ಮೊದಲ ಹೆಂಡತಿ ಅಂತರಾಳಿಗೆ ಮಾತುಕೊಟ್ಟಂತೆ ಲೀಲಾಳನ್ನು ಮದುವೆಯಾಗಿದ್ದರೆ, ಲೀಲಾ ತನ್ನ ಮುದ್ದಿನ ತಂಗಿ ಚುಕ್ಕಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅನಿವಾರ್ಯತೆಗೆ ಕಟ್ಟುಬಿದ್ದು ಮದುವೆಯಾಗಿದ್ದಾಳೆ. ಅಜ್ಜಿ ಮಾಡಿದಂತಹ ಪ್ಲಾನ್ ನಿಂದ ಎಜೆ ಮತ್ತು ಲೀಲಾ ಪ್ರೀತಿಯಲ್ಲಿ ಬೀಳುವ ಎಲ್ಲಾ ಸೂಚನೆಯೂ ಕಾಣಿಸುತ್ತಿದೆ. ಆದರೆ ಅವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಸಿ ತೀರುತ್ತೇನೆ ಎಂದು ಅಜ್ಜಿ ಪಣತೊಟ್ಟಿದ್ದಾರೆ. ಅಜ್ಜಿಯ ಸಂತೋಷಕ್ಕೋಸ್ಕರ ಪ್ರೀತಿಯ ನಾಟಕವಾಗುತ್ತಿರುವ ಲೀಲಾ ಮತ್ತು ಎಜೆ ನಿಜವಾಗಿಯೂ ಪ್ರೀತಿಯಲ್ಲಿ ಬೀಳುತ್ತಾರಾ ಎನ್ನುವ ಬಗ್ಗೆ ಕಾದುನೋಡಬೇಕಿದೆ.
    Published by:Swathi Nayak
    First published: