Gattimela Serial: ಅಪಾಯದಲ್ಲಿದ್ದ ಅದಿತಿಯನ್ನು ಪಾರು ಮಾಡಿದ ಆದ್ಯ? ಮುಂದಿದೆ ಬಿಗ್ ಟ್ವಿಸ್ಟ್

 ಸುಹಾಸಿನಿಯ ಕುತಂತ್ರದಿಂದ ಇದೀಗ ವಸಿಷ್ಠ ಮನೆಯಲ್ಲಿ ಸಮಸ್ಯೆಗಳು ಒಂದರ ಮೇಲೆ ಒಂದರಂತೆ ಎದುರಾಗುತ್ತಿದೆ. ಆದರೆ ರೌಡಿ ಬೇಬಿ ಅಮೂಲ್ಯಾ ತನ್ನ ಬುದ್ದಿವಂತಿಕೆಯಿಂದ ಸುಹಾಸಿನಿಯ ಅಹಂಕಾರವನ್ನು ‌ಮಟ್ಟ ಹಾಕುತ್ತಾಳೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. 

ಆದ್ಯ

ಆದ್ಯ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ರೌಡಿ ಬೇಬಿ ಅಮೂಲ್ಯ (Amulya) ಮತ್ತು ವೇದಾಂತ್ (Vedanth) ವಸಿಷ್ಠ ನಡುವಿನ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರ ಕಾಯುತ್ತಿರುತ್ತಾರೆ. ಸುಹಾಸಿನಿಯ ಕುತಂತ್ರದಿಂದ ಇದೀಗ ವಸಿಷ್ಠ ಮನೆಯಲ್ಲಿ ಸಮಸ್ಯೆಗಳು ಒಂದರ ಮೇಲೆ ಒಂದರಂತೆ ಎದುರಾಗುತ್ತಿದೆ. ಆದರೆ ರೌಡಿ ಬೇಬಿ ಅಮೂಲ್ಯಾ ತನ್ನ ಬುದ್ದಿವಂತಿಕೆಯಿಂದ ಸುಹಾಸಿನಿಯ ಅಹಂಕಾರವನ್ನು ‌ಮಟ್ಟ ಹಾಕುತ್ತಾಳೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ವೈದೇಹಿಯ (Vaidehi) ಒಳ್ಳೆಯತನದಿಂದ ಮನೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೂಡ ದೊರಕುತ್ತಿದೆ. ಆದಷ್ಟು ಬೇಗ ವೈದೇಹಿಯೇ ತನ್ನ ಅಮ್ಮ ಎನ್ನುವ ವಿಚಾರ ವೇದಾಂತ್ ಮನೆಯವರಿಗೆ ತಿಳಿಯಲಿ ಎಂಬ ಕೋರಿಕೆ ಪ್ರೇಕ್ಷಕರಲ್ಲಿದೆ.

    ಕೋಮಾದಿಂದ ಎದ್ದ ಧ್ರುವನ ಮುಂದಿನ ಪ್ಲಾನ್ ಏನು?

    ಈಗಾಗಲೇ ಸುಹಾಸಿನಿ ಅಲ್ಲ ಕುತಂತ್ರದ ಬಗ್ಗೆ ತಿಳಿದಿರುವ ದ್ರುವ ಒಂದು ಬಾರಿ ಮನೆಯಿಂದ ಹೊರನಡೆದು ಒಂಟಿಯಾಗಿ ತನ್ನ ಜೀವನ ನಡೆಸುತ್ತಿದ್ದ. ಆದರೆ ಅಮೂಲ್ಯ ಮಾಡಿದ ಪ್ಲಾನ್ ಇಂದ ಮತ್ತೆ ಧ್ರುವ ಆ ಮನೆಗೆ ಸೇರುವಂತಾಯಿತು. ಆದರೆ ಸುಹಾಸಿನಿ ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ ಎಂಬ ವಿಚಾರ ತಿಳಿದ ಮೇಲೆ ಮತ್ತೆ ಧ್ರುವ ಸುಹಾಸಿನಿ ವಿರುದ್ಧ ಸೈಲೆಂಟಾಗಿ ಹೋರಾಡಲು ಆರಂಭಿಸಿದ್ದನು. ಧ್ರುವನಿಗೆ ಸಾಥ್ ಕೊಡಲು ವಿಕ್ರಾಂತ್ ವಸಿಷ್ಟ ಕೂಡ ಸುಹಾಸಿನಿಯ ವಿರುದ್ಧ ಹೋರಾಡಲು ಆರಂಭಿಸಿದ್ದಾನೆ.

    ಅದೇ ರೀತಿ ವಿಕ್ರಾಂತ್ ಮತ್ತು ಧ್ರುವ ಸೇರಿಕೊಂಡು ವಸಿಷ್ಟ ಫ್ಯಾಮಿಲಿಯ ಹಳೆಯ ವಿಚಾರಗಳನ್ನು ತಿಳಿಯಲು ಒಬ್ಬ ವ್ಯಕ್ತಿಯನ್ನು ನೇಮಿಸಿದ್ದರು ಕೂಡ. ಆತನಿಂದಲೇ ವೈದೇಹಿ ವಸಿಷ್ಟ ಫ್ಯಾಮಿಲಿಯ ಸೊಸೆ ಮತ್ತು ವೇದಾಂತ್ ವಿಕ್ರಾಂತ್ ಆದ್ಯ ಹಾಗೂ ಧ್ರುವನ ಅಮ್ಮ ಎನ್ನುವ ಧ್ರುವನಿಗೆ ವಿಚಾರ ತಿಳಿದಿತ್ತು. ಅಷ್ಟರೊಳಗೆ ಕುತಂತ್ರಿ ಸುಹಾಸಿನಿ ಧ್ರುವನಿಗೆ ಆಕ್ಸಿಡೆಂಟ್ ಮಾಡಿಸಿ ಕೋಮಾಕ್ಕೆ ಹೋಗುವಂತೆ ಮಾಡಿದ್ದಾರೆ. ಇದೀಗ ಮತ್ತೆ ದೃವನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಸುಹಾಸಿನಿ ಮತ್ತೆ ಆತನನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಅದೇ ಕಾರಣಕ್ಕೆ ನರ್ಸ್ ಒಬ್ಬಳ ನೇಮಕ ಕೂಡ ಮಾಡಿದ್ದಾರೆ. ಇದೀಗ ಧ್ರುವ ಮತ್ತೆ ಹುಷಾರಾದರೆ‌ ಸುಹಾಸಿನಿಯ ನಿಜಮುಖ ಮನೆಯವರ ಮುಂದೆ ಬಯಲಾಗುತ್ತದೆ. ಆದಷ್ಟು ಬೇಗ ವಿಚಾರ ವೇದಾಂತ್ ವಸಿಷ್ಠ ಹಾಗೂ ತಿಳಿಯಲಿ ಎನ್ನುವ ಕೋರಿಕೆ ಪ್ರೇಕ್ಷಕರಲ್ಲಿದೆ.

    ಇದನ್ನೂ ಓದಿ: Paaru Serial: ಅರುಂಧತಿಯ ಮೋಸದ ಜಾಲ ಕಂಡುಹಿಡಿದರಾ ಆದಿ-ಪ್ರೀತೂ? ಮುಂದಿದೆ ಬಿಗ್ ಟ್ವಿಸ್ಟ್

    ಸುಹಾಸಿನಿ ಕೈಯಲ್ಲಿ ಸಿಕ್ಕಿ ಬಿದ್ದೇ ಬಿಟ್ಲಾ ಅದಿತಿ?

    ಧ್ರುವ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಅದಿತಿ ಇದೀಗ ಆತನನ್ನು ನೋಡಿಕೊಳ್ಳಲು ನರ್ಸ್ ರೂಪದಲ್ಲಿ ಬಂದಿದ್ದಾಳೆ. ಆದರೆ ಸುಹಾಸಿನಿ ಅಂದುಕೊಂಡಂತೆ ಮಾಡಲು ಅದಿತಿಯ ಸಹಾಯ ತೆಗೆದುಕೊಂಡು ಏನು ಮಾಡುತ್ತಾಳೆ ಎನ್ನುವುದನ್ನು ಕಾದುನೋಡಬೇಕಿದೆ. ಆದರೆ ಧ್ರುವನ ರೂಮಿಗೆ ಇದೀಗ ಸುಹಾಸಿನಿ ಹೋಗಲು ಹೊರಟಿದ್ದಾಳೆ. ಅದಿತಿಯೇ ನರ್ಸ್ ಎಂದು ತಿಳಿದರೆ ಸುಹಾಸಿನಿ ಅವಳನ್ನು ಸುಮ್ಮನೆ ಬಿಡುತ್ತಾಳಾ? ಆದರೆ ಆದ್ಯಳಿಗೆ ಈಗಾಗಲೇ ಅದಿತಿ ನರ್ಸ್ ಆಗಿ ಬಂದಿರುವ ವಿಚಾರ ತಿಳಿದಿದ್ದರಿಂದ ಹೇಗೆ ಉಪಾಯದಿಂದ ಅದಿತಿಯನ್ನು ಬಚಾವ್ ಮಾಡುತ್ತಾಳೆ. ಆದರೆ ಸುಹಾಸಿನಿಯ ಪ್ಲಾನ್ ಬಗ್ಗೆ ಅದಿತಿಗೆ ತಿಳಿದರೆ ಮುಂದೆ ಏನೆಲ್ಲ ಟ್ವಿಸ್ಟ್ ಎದುರಾಗಲಿದೆ ಎನ್ನುವ ಕುತೂಹಲ ‌ಪ್ರೇಕ್ಷಕರಲ್ಲಿದೆ.

    ಇದನ್ನೂ ಓದಿ: Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

    ಸುಹಾಸಿನಿಯ ಒಂದೊಂದೇ ಮುಖವನ್ನು ಬಯಲು ಮಾಡುತ್ತಾರಾ?

    ಈ ಎಲ್ಲಾ ಬೆಳವಣಿಗೆಯನ್ನು ನೋಡುತ್ತಾ ಸದ್ಯದಲ್ಲಿ ಸುಹಾಸಿನಿಯ ನಿಜಮುಖ ಮನೆಯಲ್ಲಿ ಬಯಲಾಗುವುದು ಸುಳ್ಳಲ್ಲ. ಅಕ್ಕತಂಗಿಯರು ಒಂದಾಗಿ ಇತ್ತ ಅಣ್ಣತಮ್ಮಂದಿರು ಸೇರಿಕೊಂಡು ಸುಹಾಸಿನಿಯ ಒಂದೊಂದೇ ಮುಖವನ್ನು ಬಯಲು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
    Published by:Swathi Nayak
    First published: