Gattimela Serial: ಆರತಿಯ ಜೀವ ಕಾಪಾಡಲು ಹೋಗಿ ತನ್ನ ಜೀವಕ್ಕೆ ಕುತ್ತು ತಂದು ಕೊಂಡ ವೇದಾಂತ್!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಧಾರಾವಾಹಿಯು ಟಿಆರ್ಪಿ ನಲ್ಲೂ ಮುಂದಿದೆ

ವೇದಾಂತ್

ವೇದಾಂತ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ (Gattimela). ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಧಾರಾವಾಹಿಯು ಟಿಆರ್ಪಿ ನಲ್ಲೂ ಮುಂದಿದೆ. ರೌಡಿ ಬೇಬಿ ಅಮೂಲ್ಯ Rowdy Baby Amulya) ಮತ್ತು ವೇದಾಂತ್ (Vedanth) ಲವ್ ಸ್ಟೋರಿ ಎಲ್ಲರಿಗೂ ಅಚ್ಚುಮೆಚ್ಚು. ಅಣ್ಣ ತಮ್ಮಂದಿರ ನಡುವಿನ ಬಾಂಧವ್ಯವನ್ನು ಎತ್ತಿಹಿಡಿಯುವ ಧಾರಾವಾಹಿಯು ಸಂಬಂಧಗಳ ಬೆಲೆಗಳನ್ನು ಕೂಡ ತಿಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಸುಹಾಸಿನಿ (Suhasini) ಕುತಂತ್ರದಿಂದ ರೌಡಿ ಬೇಬಿ ಕೂಡ ಕಣ್ಣೀರು ಹಾಕುತ್ತಿರುವುದು ಧಾರಾವಾಹಿಯಲ್ಲಿ ಕಾಣಿಸುತ್ತಿದೆ. ಇದೀಗ ಧಾರಾವಾಹಿಯಲ್ಲಿ ಹೊಸದೊಂದು ತಿರುವು ಎದುರಾಗಿ ಅಗ್ರಜ ವೇದಾಂತ್ ಜೀವಕ್ಕೆ ಅಪಾಯ ಎದುರಾಗಿದೆ.

    ಆರತಿ ಇದೀಗ ಗರ್ಭಿಣಿ ಎಂಬ ವಿಚಾರ ತಿಳಿದ ಮೇಲಂತೂ ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಿವೆ. ಅಮೂಲ್ಯ ಮತ್ತು ಆರತಿಯ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಡಲು ಕುತಂತ್ರಿ ಸುಹಾಸಿನಿ ಎಷ್ಟೇ ಪ್ರಯತ್ನ ಪಟ್ಟರು ಅದು ವ್ಯರ್ಥ ಪ್ರಯತ್ನವಾಗಿದೆ. ಅಕ್ಕ ತಂಗಿಯರು ಹಿಂದಿನಂತೆ ಅನ್ಯೋನ್ಯತೆಯಿಂದ ಇರುವುದು ಕೂಡ ಕಾಣಿಸುತ್ತಿದೆ.

    ಇದನ್ನೂ ಓದಿ: Kannadathi Serial: ವಿಘ್ನಗಳೆಲ್ಲಾ ಕಳೆದು ಸುಸೂತ್ರವಾಗಿ ನಡೆಯಿತು ಹರ್ಷ-ಭುವಿಯ ಕನ್ನಡದ ಮದುವೆ

    ಆರತಿಯನ್ನು ರಕ್ಷಣೆ ಮಾಡುವ ಭರದಲ್ಲಿ ವೇದಾಂತ್ ಜೀವಕ್ಕೆ ಕುತ್ತು!

    ವಿಕ್ರಾಂತ್ ಹಾಗೂ ಆರತಿಗೆ ಸರ್ಪ್ರೈಸ್ ಗಿಫ್ಟ್ ಕೊಡಲು ಹೊರಟಿರುವ ವೇದಾಂತ್ ಗೆ ಶಾಲೆಯ ಬಿಲ್ಡಿಂಗ್ ಬಳಿ ಅಪಾಯ ಎದುರಾಗಿದೆ. ಸುಹಾಸಿನಿ ಆರತಿಗೆ ಹುಟ್ಟುತ್ತಿರುವ ಮಗುವನ್ನು ಗರ್ಭದಲ್ಲಿ ಕೊಲ್ಲುವ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಈ ಹಿಂದೆ ಮನೆಯ ಮಗಳು ಆದ್ಯ ಗರ್ಭಿಣಿಯಾಗಿದ್ದಾಗ ಆಕೆಯ ಮಗುವನ್ನು ಗರ್ಭದಲ್ಲಿ ಕೊಲ್ಲಲು ಪ್ರಯತ್ನಪಟ್ಟು ಯಶಸ್ವಿಯಾಗಿದ್ದರು ಸುಹಾಸಿನಿ. ಇದೀಗ ಶಾಲೆಯ ಬಿಲ್ಡಿಂಗ್ ಮೇಲಿನಿಂದ ಆರತಿಯನ್ನು ತಳ್ಳುವ ಪ್ರಯತ್ನ ಮಾಡಿದ್ದಾರೆ ಸುಹಾಸಿನಿಯ ಕಡೆಯ ರೌಡಿಗಳು. ಆದರೆ ಆರತಿಯನ್ನು ರಕ್ಷಣೆ ಮಾಡುವ ಭರದಲ್ಲಿ ವೇದಾಂತ್ ತನ್ನ ಜೀವಕ್ಕೆ ಕುತ್ತು ತಂದು ಕೊಂಡಿದ್ದಾನೆ. ಕುತಂತ್ರಿ ಸುಹಾಸಿನಿ ಮುಂದೆ ಇನ್ನೇನ್ನೆಲ್ಲ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ ಎನ್ನುವುದನ್ನು ಕಾದು ಕುತಂತ್ರಿ ಸುಹಾಸಿನಿ ಮುಂದೆ ಇನ್ನೇನ್ನೆಲ್ಲಾ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಿದೆ.

    ಧೃವನನ್ನು ನೋಡಿಕೊಳ್ಳಲು ನರ್ಸ್ ಆಗಿ ವೇದಾಂತ್ ಮನೆಗೆ ಕಾಲಿಟ್ಟ ಅದಿತಿ

    ಧೃವನನ್ನು ನೋಡಿಕೊಳ್ಳಲು ಇದೀಗ ನರ್ಸ್ ಆಗಿ ವೇದಾಂತ್ ಮನೆಗೆ ಕಾಲಿಟ್ಟಿದ್ದಾಳೆ ಅದಿತಿ. ಸುಹಾಸಿನಿಯ ನಿಜರೂಪ ತಿಳಿದಿರುವ ಧೃವನನ್ನು ಆಕ್ಸಿಡೆಂಟ್ ಮಾಡಿಸಿ ಕೋಮಾಕ್ಕೆ ಹೋಗುವಂತೆ ಮಾಡಿದ ಸುಹಾಸಿನಿ ಇದೀಗ ಮತ್ತೆ ಅವನನ್ನು ಕೊಲ್ಲುವ ಪ್ರಯತ್ನವನ್ನು ಮಾಡಲು ತಯಾರಾಗಿದ್ದಾಳೆ. ಕಳೆದ ಸಂಚಿಕೆಯಲ್ಲಿ ದೃವನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದ್ದು ವೈದೇಹಿಯನ್ನು ಅಮ್ಮ ಎಂದು ಕರೆದಿದ್ದಾನೆ ಕೂಡ. ಆದರೆ ಅವನ ಜೀವಕ್ಕೆ ಇದೆ ಅಪಾಯವಾಗಿ ಪರಿಣಮಿಸುವ ಸಾಧ್ಯತೆ ಇದೆ. ನರ್ಸ್ ಆಗಿ ಅದಿತಿ ಬಂದಿರುವುದು ಸುಹಾಸಿನಿ ಗೆ ತಿಳಿದರೆ ಆಕೆಯ ಪ್ಲಾನ್ ಎಲ್ಲಾ ಹೊಡಿಯುವುದಂತು ಸತ್ಯ.

    ಇದನ್ನೂ ಓದಿ: Jenu Goodu Serial: ಜೇನುಗೂಡು ನಡು ಕೋಟೆ ಮನೆಯಲ್ಲಿ ದಿಯಾ-ಶಶಾಂಕ್ ಮದುವೆ ಸಂಭ್ರಮ

    ಆದ್ಯನ ಎದುರು ಸಿಕ್ಕಿಹಾಕಿಕೊಂಡ ಅದಿತಿ

    ಅದಿತಿ ನರ್ಸ್ ಆಗಿ ಬಂದಿರುವ ವಿಚಾರ ಯಾರಿಗೂ ವೇದಾಂತ್ ಮನೆಯಲ್ಲಿ ತಿಳಿದಿಲ್ಲ ಆದರೆ ನೆನ್ನೆಯ ಸಂಚಿಕೆಯಲ್ಲಿ ವೇದಾಂತ ಮುದ್ದಿನ ತಂಗಿ ಆದ್ಯನ ಎದುರು ಅದಿತಿ ಸಿಕ್ಕಿಹಾಕಿಕೊಂಡಿದ್ದಾಳೆ. ಆದರೆ ಅಣ್ಣನ ಸಂತೋಷಕ್ಕಾಗಿ ಮತ್ತು ಅದಿತಿ ಮತ್ತು ದೃವನ ಪ್ರೀತಿ ಉಳಿಸುವುದಕ್ಕಾಗಿ ಆದ್ಯ ಬಗ್ಗೆ ಯಾರಲ್ಲೂ ಹೇಳುವುದಿಲ್ಲ ಎಂದು ಅದಿತಿಗೆ ಮಾತು ಕೂಡ ಕೊಟ್ಟಿದ್ದಾಳೆ. ಆದ್ದರಿಂದ ಮುಂದಿನ ಸಂಚಿಕೆಗಳಲ್ಲಿ ಧ್ರುವ ಮತ್ತು ಅದಿತಿ ಲವ್ ಸ್ಟೋರಿಗೆ ಆದ್ಯಾಳಿಂದ ಹೆಲ್ಪ್ ಸಿಗುವುದಂತೂ ಪಕ್ಕ.
    Published by:Swathi Nayak
    First published: