Gattimela Serial: ಸಂಕಷ್ಟದಿಂದ ಹೇಗೆ ಹೊರಗೆ ಬರ್ತಾಳೆ ರೌಡಿ ಬೇಬಿ? ವರ್ಕೌಟ್ ಆಗ್ಬಿಡ್ತಾ ಸುಹಾಸಿನಿ ಪ್ಲಾನ್?

ಅಕ್ಕ-ತಂಗಿಯರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ತಂದಿಡುವುದರಲ್ಲಿ ಈಗ ಸುಹಾಸಿನಿ ಯಶಸ್ವಿಯಾಗಿದ್ದಾಳೆ. ಅಮೂಲ್ಯ ಮತ್ತು ಆರತಿ ಪರಸ್ಪರ ಜಗಳ ಮಾಡಲು ಪ್ರಾರಂಭಿಸಿದ್ದಾರೆ. ಇದೀಗ ಅಕ್ಕ-ತಂಗಿ ಜಗಳ ತವರು ಮನೆಯ ತನಕ ತಲಪುವ ಸೂಚನೆ ಎದ್ದು ಕಾಣುತ್ತಿದೆ.

ಅಮೂಲ್ಯಾ

ಅಮೂಲ್ಯಾ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ರೌಡಿ ಬೇಬಿ ಅಮೂಲ್ಯ (Rowdy Baby Amulya) ಮತ್ತು ವೇದಾಂತ್ (Vedanth) ಜೋಡಿ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಧಾರಾವಾಹಿಯಲ್ಲಿ ಕುತಂತ್ರಿ ಸುಹಾಸಿನಿಯಿಂದಾಗಿ ಮನೆಯ ಎಲ್ಲರ ಮನಸ್ಸು ಮುರಿದುಹೋಗುತ್ತಿದೆ.  ಅಕ್ಕ-ತಂಗಿಯರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ತಂದಿಡುವುದರಲ್ಲಿ ಈಗ ಸುಹಾಸಿನಿ ಯಶಸ್ವಿಯಾಗಿದ್ದಾಳೆ. ಅಮೂಲ್ಯ ಮತ್ತು ಆರತಿ (Arathi) ಪರಸ್ಪರ ಜಗಳ ಮಾಡಲು ಪ್ರಾರಂಭಿಸಿದ್ದಾರೆ ಕೂಡ. ಇದೀಗ ಅಕ್ಕ-ತಂಗಿ ಜಗಳ ತವರು ಮನೆಯ ತನಕ ತಲಪುವ ಸೂಚನೆ ಎದ್ದು ಕಾಣುತ್ತಿದೆ. ಮುಂದೆನಾಗುತ್ತದೆ ಎನ್ನುವ ‌ಕೂತೂಹಲ‌ ಈಗೀಗ ಪ್ರೇಕ್ಷಕರಿಗೆ ಹೆಚ್ಚಾಗ ತೊಡಗಿದೆ.

  ಎಲ್ಲರನ್ನೂ  ಸಂಶಯದಲ್ಲೇ  ಕಾಣುತ್ತಿದ್ದಾಳೆ  ಆರತಿ

  ಆರತಿ ವಾಸ್ತವದಲ್ಲಿ ತುಂಬಾ ಮುಗ್ಧ ಹುಡುಗಿ. ಇದೀಗ ಆಕೆ ತಾಯಿಯಾಗುತ್ತಿದ್ದಾಳೆ ಎನ್ನುವ ವಿಚಾರ ತಿಳಿದ ಮೇಲಂತೂ ಆಕೆ ಸ್ವಂತ ತಾಯಿ ಮತ್ತು ಸ್ವಂತ ತಂಗಿಯ ಮೇಲೂ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ.  ಗರ್ಭದಲ್ಲಿರುವ ಮಗುವಿನ ಮೇಲೆ ಅತಿಯಾದ ಪ್ರೀತಿ ಮತ್ತು ಸುಹಾಸಿನಿಯ ಕುತಂತ್ರದಿಂದ ಇದೀಗ ಆರತಿ ಎಲ್ಲರನ್ನೂ ಸಂಶಯದಲ್ಲಿ ಕಾಣುತ್ತಿದ್ದಾಳೆ. ಅಷ್ಟೇ ಅಲ್ಲ ನಿನ್ನೆ ಸಂಚಿಕೆಯಲ್ಲಿ ತವರುಮನೆಯಿಂದ ತಾಯಿ ಪ್ರೀತಿಯಿಂದ ಮಾಡಿ ತಂದಿದ್ದ ಸಿಹಿತಿಂಡಿಗಳನ್ನು ಆರತಿ ಬೇಡವೆಂದು ಹೇಳುತ್ತಾಳೆ. ಹಾಗೆ ಇಲ್ಲೂ ಕೂಡ ತವರು ಮನೆಯಿಂದ ಬಂದ ತಾಯಿ ಮತ್ತು ತಂಗಿಗೆ ಸುಹಾಸಿನಿಯನ್ನ ಅವಮಾನವಾದರೂ‌ ಏನೂ ಹೇಳದೆ ಸುಮ್ಮನೆ ಇರುವುದನ್ನು ಕಂಡಾಗ ಆರತಿಗೆ ಹೆತ್ತ ತಾಯಿ ಮೇಲೆ ನಂಬಿಕೆ ಇಲ್ಲವೇನೊ ಎಂದು ಅನಿಸುತ್ತಿದೆ.

  ಇದನ್ನೂ ಓದಿ: Hitler Kalyana Serial: ಎಜೆ ನೀಡಿದ ಸರ್ಪ್ರೈಸ್ ಲೀಲಾ ಫುಲ್ ಖುಷ್! ಎಡವಟ್ಟು ಸುಂದರಿ ಲವ್​ನಲ್ಲಿ ಬಿದ್ಲಾ?

  ಆರತಿ ತನ್ನ ಸ್ವಂತ ಬುದ್ಧಿಯಿಂದ ಈ ರೀತಿ ಮಾಡುತ್ತಿಲ್ಲ

  ಆರತಿ ತನ್ನ ಸ್ವಂತ ಬುದ್ಧಿಯಿಂದ ಈ ರೀತಿ ಮಾಡುತ್ತಿಲ್ಲ ಎಂದು ಅಮೂಲ್ಯಾಳಿಗೆ ತಿಳಿದಿದೆ. ಆದರೆ ಆರತಿ ಇದನ್ನು ಅರ್ಥ ಮಾಡಿಕೊಳ್ಳಲು ಕೂಡ ಪ್ರಯತ್ನಿಸುತ್ತಿಲ್ಲ. ಈಗ ಆರತಿ ಮತ್ತು ಅಮೂಲ್ಯ ನಡುವಿನ ಕಿತ್ತಾಟ ಅತಿರೇಕಕ್ಕೆ ತಲುಪಿದೆ. ಅಷ್ಟೇ ಅಲ್ಲ ತವರುಮನೆಗೆ ಅಮ್ಮನನ್ನು ಬೇಟಿಯಾಗಲು ಇದೀಗ ಇಬ್ಬರೂ ಹೊರಟಿದ್ದಾರೆ. ಅಲ್ಲಿ ಮುಂದೇನು ಎಡವಟ್ಟು ಮಾಡುತ್ತಾರೆ ಎನ್ನುವ ವಿಕ್ರಾಂತ್ ಮತ್ತು ವೇದಾಂತ್ ಗೆ ಕಾಡುತ್ತಿದೆ. ಅಮೂಲ್ಯಾಳಿಂದ ತನ್ನ ಹೊಟ್ಟೆಯಲ್ಲಿರುವ ಮಗುವಿಗೆ ಏನೋ ಸಮಸ್ಯೆ ಇದೆ ಎನ್ನುವ ಪೀಲ್ ಆರತಿಯ ಮನಸಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿದೆ.

  ಇದನ್ನೂ ಓದಿ: Anu Janardhan: ಸತ್ಯ ಧಾರಾವಾಹಿಯ ಈ ಖತರ್ನಾಕ್ ವಿಲನ್ ರಿಯಲ್​ ಲೈಫ್​ನಲ್ಲಿ ತುಂಬಾ ಸಾಫ್ಟ್​ ಅಂತೆ

  ತವರು ಮನೆ ಕಡೆಗೆ ಬೇರೆಬೇರೆಯಾಗಿ ಹೊರಟ ಅಕ್ಕ-ತಂಗಿ

  ಇದೀಗ ಅಕ್ಕ ತಂಗಿ ಇಬ್ಬರೂ ಬೇರೆಬೇರೆಯಾಗಿ ತವರು ಮನೆ ಕಡೆ ಹೊರಟಿದ್ದಾರೆ. ಅಮ್ಮು ತನ್ನ ರಾಣಿ ತೆಗೆದುಕೊಂಡು ಹೊರಟಿದ್ದರೆ, ಇತ್ತ ಆರತಿ ವಾಚ್ ಮ್ಯಾನ್ ಕೈಯಲ್ಲಿ ಕ್ಯಾಬ್ ಬುಕ್ ಮಾಡಿಸಿಕೊಂಡು ಹೊರಟಿದ್ದಾಳೆ. ಸಣ್ಣ ವಯಸ್ಸಿಗೆ ಹಿರಿ ಸೊಸೆ ಪಟ್ಟ ದೊರಕಿದರೆ ಹೀಗೆ ಆಗುವುದು. ವಸಿಷ್ಟ ಮನೆಯ ಸೊಸೆ ಹೇಗಿರಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಅಮ್ಮುಗೆ ಇಲ್ಲ ಇಂದು ಆರತಿ ಕಾರಿನಲ್ಲಿ ಗೊಣಗುತ್ತಿದ್ದರೇ, ಇತ್ತ ರಾಣಿಯಲ್ಲಿ ಹೋಗುತ್ತಿರುವ ಅಮ್ಮು,  ಅಕ್ಕ ಆರತಿಗೆ ವಸಿಷ್ಟ ಮನೆಯ ಸೊಸೆ ಎನ್ನುವ ಅಹಂಕಾರ ಬಂದಿದೆ. ಅತ್ತೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾಳೆ ಆರತಿ ಎಂದು ಗೊಣಗುತ್ತಿದ್ದಾಳೆ. ವಿಶೇಷ ಎಂದರೆ ಕೋಪಿಸಿಕೊಂಡು ಹೋಗುತ್ತಿರುವ ಅಕ್ಕತಂಗಿಯರು ತವರು ಮನೆಯಲ್ಲಿ ತನ್ನ ವರಸೆಯನ್ನೇ ಬದಲಾಯಿಸಿದ್ದಾರೆ. ಹೌದು ತಾವು ಹೀಗೆ ಬಂದೆವು ಯಾವುದೇ ರೀತಿ ಸಮಸ್ಯೆಯಿಲ್ಲ ಎಂದು ಹೇಳಿಬಿಡುತ್ತಾರೆ. ಈ ಬಗ್ಗೆ ಕೇಳಿ ತಾಯಿ ಪರಿಮಳಾಗೆ ಖುಷಿ ಕೂಡ ಆಗುತ್ತದೆ. ತಾಯಿಯ ಬುದ್ಧಿ ಮಾತಿನಿಂದ ಮತ್ತೆ ಅಕ್ಕ-ತಂಗಿ ಒಂದಾಗುತ್ತಾರೆ ಎಂಬುದನ್ನು ನೋಡಬೇಕಿದೆ.
  Published by:Swathi Nayak
  First published: