Gattimela: ಅಕ್ಕನ ಒಳಿತಿಗಾಗಿ ಮಂಡಿ ಸೇವೆ ಮಾಡಿದ ಅಮೂಲ್ಯ! ಇನ್ನಾದರೂ ತಂಗಿಯ ಮೇಲೆ ಪ್ರೀತಿ ಹುಟ್ಟ ಬಹುದೇ ಆರತಿಗೆ

ಮುಗ್ಧ ಆರತಿಯ ಮನದಲ್ಲಿ ತಂಗಿ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿಸುತ್ತಿದ್ದಾಳೆ ಕುತಂತ್ರಿ ಸುಹಾಸಿನಿ. ತನ್ನ ಅಕ್ಕನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಅಮೂಲ್ಯಾಳಿಗೆ ಆರತಿಯ ಈ ನಡವಳಿಕೆಯಿಂದ ಬೇಸರ ತಂದಿದೆ.

ಅಮೂಲ್ಯ

ಅಮೂಲ್ಯ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ರೌಡಿ ಬೇಬಿ ಅಮೂಲ್ಯಾ (Amulya) ಮತ್ತು ವೇದಾಂತ್ (Vedanth) ನಡುವಿನ ಬಾಂಧವ್ಯ ನೋಡಲೆಂದು ಎಲ್ಲರೂ ಧಾರಾವಾಹಿಯಲ್ಲಿ ತಪ್ಪದೆ ನೋಡುತ್ತಾರೆ. ವೇದಾಂತ್ ವಸಿಷ್ಠ ಕೋಪ ಅಮೂಲ್ಯ ನಾನ್ ಸ್ಟಾಪ್ ಮಾತು ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಇದೀಗ ಧಾರವಾಹಿಯಲ್ಲಿ ಅಮೂಲ್ಯಳ ಅಕ್ಕ ಆರತಿ ಪ್ರೆಗ್ನೆಂಟ್ ಆಗಿದ್ದಾಳೆ. ಮುಗ್ಧ ಆರತಿಯ ಮನದಲ್ಲಿ ತಂಗಿ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿಸುತ್ತಿದ್ದಾಳೆ ಕುತಂತ್ರಿ ಸುಹಾಸಿನಿ. ತನ್ನ ಅಕ್ಕನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಅಮೂಲ್ಯಾಳಿಗೆ ಆರತಿಯ ಈ ನಡವಳಿಕೆಯಿಂದ ಬೇಸರ ತಂದಿದೆ.

   ಸುಹಾಸಿನಿಯ  ಕುತಂತ್ರಕ್ಕೆ ಆರತಿ ಗಾಳ

  ತನ್ನ ಕುತಂತ್ರಕ್ಕೆ ಸುಹಾಸಿನಿ ಆರತಿಯನ್ನು ಗಾಳವಾಗಿ ಬಳಸಿಕೊಳ್ಳುತ್ತಿದ್ದಾಳೆ. ಹೌದು ಆರತಿಯ ಮುಗ್ಧತೆಯನ್ನು ಬಳಸಿಕೊಂಡು ಅಮೂಲ್ಯ- ವೇದಾಂತ್ ಮದುವೆಯನ್ನು ತಡೆಯಲು ಪ್ರಯತ್ನ ಪಟ್ಟಿದ್ದಳು ಆದರೆ ಅದೇಕೋ ಫಲಿಸಲಿಲ್ಲ. ಇದೀಗ ಆರತಿ ಗರ್ಭಿಣಿ ಎಂದು ತಿಳಿದ ಬಳಿಕ ಮತ್ತೆ ಸುಹಾಸಿನಿ ತನ ನಾಟಕವನ್ನು ಮುಂದುವರಿಸಿದ್ದಾಳೆ. ಅಕ್ಕ-ತಂಗಿ ಮಧ್ಯೆಯಿದ್ದ ಪ್ರೀತಿಯನ್ನು ದ್ವೇಷವಾಗಿ ಬದಲಾಯಿಸಿದ್ದಾಳೆ ಸುಹಾಸಿನಿ. ಅಕ್ಕ ಆರತಿಯ ನಡೆತೆಯಿಂದ ನೊಂದು ಹೋಗಿದ್ದಾಳೆ ಅಮೂಲ್ಯ. ಈ ಹಿಂದೆ ಆಧ್ಯಾ ಗರ್ಭಿಣಿಯಾದಾಗ ಅವಳ ಮಗುವನ್ನು ಕೂಡ ಸಾಯುವಂತೆ ಮಾಡಿದ್ದಳು ಸುಹಾಸಿನಿ. ಈಗ ಅದೇ ಆಸ್ತಿ ವಿಚಾರವಾಗಿ ಆರತಿಯ ಮಗುವನ್ನು ಕೊಲ್ಲಿಸುವ ಸಂಚನ್ನು ಮಾಡುತ್ತಿದ್ದಾಳೆ ಸುಹಾಸಿನಿ.

  ಇದನ್ನೂ ಓದಿ: Jothe Jotheyali Serial: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೆ ಟ್ವಿಸ್ಟ್! ಹರ್ಷನ ವರ್ತನೆ ನೋಡಿ ಮಾನ್ಸಿ ಗೆ ಕನ್ಫ್ಯೂಷನ್

  ಮಂಡಿ ಸೇವೆ ಪೂರ್ತಿಗೊಳಿಸಿದ  ಅಮೂಲ್ಯ

  ತನ್ನ ಅಕ್ಕನ ಒಳಿತಿಗಾಗಿ ದೇವಸ್ಥಾನದಲ್ಲಿ ತಾಯಿ ಮಾಡಬೇಕಿದ್ದ ಮಂಡಿ ಸೇವೆಯನ್ನು‌ ಅಮೂಲ್ಯ ಪೂರ್ತಿಗೊಳಿಸಿದ್ದಾಳೆ. ಇದು ಆಕೆಗೆ ಅವಳ ಅಕ್ಕನ ಮೇಲಿರುವ ಪ್ರೀತಿ ಮತ್ತು ಇನ್ನೊಬ್ಬರಿಗಾಗಿ ಮಿಡಿಯುವ ಹೃದಯದ ಸಲುವಾಗಿ ಮಾಡಿದ್ದಾಳೆ. ಇನ್ನಾದರೂ ಆರತಿಗೆ ತನ್ನ ತಂಗಿ ಅಮೂಲ್ಯ ಮೇಲೆ ನಂಬಿಕೆ ಹುಟ್ಟಿ ಹಿಂದಿನಂತೆ ಉತ್ತಮ ಬಾಂಧವ್ಯ ಬೆಳೆದರೆ ಸಾಕು.

  ತಾಯಿ ಮಗಳ ನಡುವಿನ ಬಾಂಧವ್ಯ  ಪ್ರೇಕ್ಷಕರ ಮುಂದೆ

  ಇತ್ತ ಸುಹಾಸಿನಿಯ ಕುತಂತ್ರದಿಂದ ಮನೆಯ ಮಗಳು ಕೆಲಸದವಳಾಗಿ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಹೌದು ವೈಜಯಂತಿ ಆಗಿ ಮನೆಯಲ್ಲಿ ತಾಯಿಯ ಸೇವೆ ಮಾಡುತ್ತಿರುವ ವೈದೇಹಿ ವಸಿಷ್ಠ ಫ್ಯಾಮಿಲಿಯ ನಿಜವಾದ ಸೊಸೆ. ಆದ್ಯ ,ವಿಕ್ರಾಂತ್ ಹಾಗೂ ವೇದಾಂತ್ ನ ನಿಜವಾದ ತಾಯಿ. ತನ್ನ ಮಕ್ಕಳೊಂದಿಗೆ ಇದ್ದರು ವೈದೇಹಿಗೆ ಮಕ್ಕಳ ಪ್ರೀತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ತಾಯಿಯ ಜೊತೆಗೆ ತಾಯಿಯ ಸೇವೆ ಮಾಡುತ್ತಿದ್ದರು ಮಗಳು ಎಂದು ಹೇಳಿಕೊಳ್ಳುವ ಸೌಭಾಗ್ಯ ಆಕೆಗಿಲ್ಲ. ಆದರೆ ನಿನ್ನೆಯ ಸಂಚಿಕೆಯಲ್ಲಿ ವೈದೇಹಿಯ ಹಳೆ ಹಾಡಿನ ಮೂಲಕ ಆಕೆಯೇ ಆ ಮನೆಯ ಮಗಳು ಎನ್ನುವ ವಿಚಾರ ತಾಯಿಗೆ ತಿಳಿದಿದೆ. ತಾಯಿ ಮಗಳ ನಡುವಿನ ಬಾಂಧವ್ಯದ ನಿನ್ನೆಯ ಸಂಚಿಕೆಯಿಂತೂ ಕಣ್ಣೀರು ತರಿಸುವಂತಿತ್ತು.

  ಇದನ್ನೂ ಓದಿ: Actress Samikshaa: ಸುಬ್ಬಲಕ್ಮಿ ಸಂಸಾರದ ಶನಾಯ ರಿಯಲ್ ಲೈಫ್​ನಲ್ಲಿ ತುಂಬಾ ಪಾಪ ಅಂತೆ, ಹೌದಾ ಅಂತೀರಾ! ಈ ಸ್ಟೋರಿ ಓದಿ

  ಆಫೀಸ್ ಕಡೆಗೆ ಹೆಜ್ಜೆ ಹಾಕುತ್ತಾಳ ಅಮೂಲ್ಯ

  ಆರತಿಯ ಪತಿ ವಿಕ್ಕಿ ಅವಳ ಆರೋಗ್ಯ ವಿಚಾರಿಸಿ ಕೊಳ್ಳುವುದಕ್ಕಾಗಿ ಆಫೀಸಿಗೆ ಹೋಗದೆ ಮನೆಯಲ್ಲೇ ಇದ್ದಾನೆ. ವೇದಾಂತ್ ಗೆ ಆಫೀಸ್ ನಲ್ಲಿ ಒತ್ತಡ ಜಾಸ್ತಿಯಾಗುತ್ತಿದೆ. ಕಾಂತ ಮತ್ತು ವಿಕ್ಕಿ ಪ್ಲಾನ್ ನಿಂದ ಮತ್ತೆ ಅಮೂಲ್ಯಾಳಿಗೆ ಆಫೀಸ್ ಗೆ ಹೋಗುವ ಅವಕಾಶ ಇದೆ. ಮತ್ತೆ ಸುಹಾಸಿನಿ ಅವಕಾಶವನ್ನು ತಡೆಯುತ್ತಾಳ ಎಂಬುದನ್ನು ಕಾದು ನೋಡಬೇಕಿದೆ.ಈ ಹಿಂದೆ ಎರಡು ಬಾರಿ ಆಫೀಸ್ ಗೆ ಅಮೂಲ್ಯ ಹೋಗುವುದನ್ನು ತನ್ನ ಕುತಂತ್ರದಿಂದ ತಡೆದಿದ್ದಳು ಸುಹಾಸಿನಿ. ಇದೀಗ ಮತ್ತೆ ಅದೇ ರೀತಿ ‌ಮಾಡುತ್ತಾಳ ಎಂಬುವುದೇ ಪ್ರೇಕ್ಷಕರ ಪ್ರಶ್ನೆ.
  Published by:Swathi Nayak
  First published: