Ashwini: ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ ಮೂಲಕ ಮತ್ತೆ ಕನ್ನಡ ಧಾರಾವಾಹಿಗೆ ಮರಳಿದ್ದಾರೆ ಅಶ್ವಿನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ನಾಗಕನ್ಯೆ ಆಗಿ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ.

ಅಶ್ವಿನಿ

ಅಶ್ವಿನಿ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆರತಿ (Aarthi) ಪಾತ್ರದಲ್ಲಿ ಈ ಮೊದಲು ಮಿಂಚುತ್ತಿದ್ದ ಅಶ್ವಿನಿ (Ashwini) ಬಗ್ಗೆ ತಿಳಿಯದವರಿಲ್ಲಾ. ಆರತಿ ಪಾತ್ರದಿಂದ ಅವರು ಹಿಂದೆ ಸರಿದಿದ್ದರೂ ಜನರು ಈಗಲೂ ಅಶ್ವಿನಿ ಅವರನ್ನು ಆರತಿ ಎಂದೆ ಗುರುತಿಸುತ್ತಾರೆ. ತಮ್ಮ ಮುಗ್ಧ ನಟನೆಯಿಂದ ಇವರು ಜನ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆರತಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಗಟ್ಟಿಮೇಳ ಧಾರಾವಾಹಿಯಿಂದ ಹಿಂದೆ ಸರಿದ ಮೇಲೆ ಇವರು ಕನ್ನಡದ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲಾ. ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ (Yedeudu Shri Siddalingeshwara) ಧಾರಾವಾಹಿಯಲ್ಲಿ ನಾಗಕನ್ಯೆ ಆಗಿ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ.

  ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಆಗಿರುವ ಅಶ್ವಿನಿ

  ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಆಗಿರುವ ಅಶ್ವಿನಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಆಗಾಗ ಫೋಟೊ ಶೂಟ್ ಮಾಡಿಸಿ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಕೆಲಕಾಲ ನಟಿಸಿದ ಇವರು ಮುಂದೆ ತೆಲುಗು ಕಿರುತೆರೆಯತ್ತ ಮುಖ ಮಾಡಿದ್ದರು ಅಲ್ಲಿ ನಾಗ ಬೈರವಿ ಧಾರಾವಾಹಿಯ ಮೂಲಕ ತೆಲುಗು ಅಭಿಮಾನಿಗಳನ್ನು ಕೂಡ ಪಡೆಯುವಲ್ಲಿ ಇವರು ಯಶಸ್ವಿಯಾಗಿದ್ದರು. ವಿಶೇಷ ಎಂದರೆ ಅಲ್ಲೂ ಕೂಡ ಅವರು ನಾಗಕನ್ನಿಕೆಯ ಪಾತ್ರದಲ್ಲಿ ಮಿಂಚಿದ್ದರು.

  ಇದನ್ನೂ ಓದಿ: Sushma Shekhar: ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಸುಷ್ಮಾ ಶೇಖರ್

  ನಾಗ ಬೈರವಿ ಧಾರಾವಾಹಿಯಲ್ಲಿ ಬುಡಕಟ್ಟು ಜನಾಂಗದ ಹುಡುಗಿ ಶೇಡ್ ನಲ್ಲಿ ‌ ಗುರುತಿಸಿಕೊಂಡಿದ್ದರು

  ನಾಗ ಬೈರವಿ ಧಾರಾವಾಹಿಯಲ್ಲಿ ಇವರು ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿ ಶೇಡ್ ನಲ್ಲಿ ‌ ಗುರುತಿಸಿಕೊಂಡಿದ್ದರು. ನಾಗ ಬೈರವಿ ಧಾರಾವಾಹಿಯಲ್ಲಿ ಇವರ ನಟನೆಗೆ ಮೆಚ್ಚಿ ತೆಲುಗು ಸಿನಿಮಾದಲ್ಲಿ ಅವಕಾಶ ಕೂಡಾ ಬಂದಿದ್ದಂತೆ. ಕೋವಿಡ್ ಕಾರಣದಿಂದ ಎರಡು ಧಾರಾವಾಹಿಗಳಿಂದ ಹೊರನಡೆದ ಇವರು ಅಭಿಮಾನಿಗಳ ಕೋರಿಕೆಯ ಮೇರೆಗೆ ಮತ್ತೆ ನಾಗ ಭೈರವಿ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಉತ್ತಮ ಕಥೆ ಹಾಗೂ ಪಾತ್ರ ದೊರಕಿದರೆ ಮರಳಿ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಈ ಹಿಂದೆ ಹೇಳಿಕೊಂಡಿದ್ದರು.

  ರಾಧಾ ರಮಣ ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದಲ್ಲಿ ಮಿಂಚಿದ್ದರು

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಜನಪ್ರಿಯ ರಾಧಾ ರಮಣ ಧಾರಾವಾಹಿಯಲ್ಲಿ ಇವರು ಅಶ್ವಿನಿ ಪಾತ್ರದಲ್ಲಿ ಮಿಂಚಿದ್ದರು. ಅಲ್ಲು ಕೂಡ ಅವರು ನಾಯಕನ ಮುದ್ದಿನ ತಂಗಿಯಾಗಿ ಮುಗ್ಧತೆಯ ಪ್ರತಿರೂಪವಾಗಿ ನಟಿಸಿದ್ದರು.

  ಇದನ್ನೂ ಓದಿ: Sathya Serial: ಕೋಟೆ ಮನೆ ಸೊಸೆ ಸತ್ಯಾಳಿಗೆ ಇನ್ನು ಪ್ರತಿದಿನ ಹೊಸ ಹೊಸ ಪರೀಕ್ಷೆ!

  ನಾಗಕನ್ಯೆ ಅವತಾರ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

  ಇದೀಗ ಮತ್ತೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರವಾಹಿಯಲ್ಲಿ ನಾಗಕನ್ಯೆ ಅವತಾರ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಎಲ್ಲರಿಗೂ ಖುಷಿ ತಂದಿದೆ.  ಉತ್ತಮ ಕಥೆ ಮೂಲಕ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿ ತನ್ನದೇ ಆದ ಅಭಿಮಾನಿಗಳನ್ನು ಪಡೆಯುವಲ್ಲಿ ಆರಂಭದಿಂದಲೂ ಯಶಸ್ವಿಯಾಗಿದೆ. ಟಿಆರ್ ಪಿನಲ್ಲೂ ಟಾಪ್ 5 ಒಳಗಡೆ ತನ್ ಸ್ಥಾನವನ್ನು ಪ್ರತಿವಾರ ಇದು ಪಡೆಯುತ್ತಿದೆ. ಶಾಪಗ್ರಸ್ಥ ನಾಗಕನ್ಯೆಯಾಗಿ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಇಲ್ಲಿ ತಮ್ಮ ಅದ್ಭುತ ನಟನೆಯಿಂದ ಮತ್ತೆ ಇನ್ನು ಹೆಚ್ಚಿನ ಅಭಿಮಾನಿಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ.

  ಹೌದು ತನ್ನ ಸುಂದರ ಕಣ್ಣುಗಳಿಂದ ಇವರು ಇಲ್ಲಿ ನಾಗಕನ್ಯೆ ಪಾತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳಿಗೆ ಇವರು ಕಾಣಿಸಿಕೊಳ್ಳುವ ಮೂಲಕ ತಮ್ಮ ಎಂಟ್ರಿಯನ್ನು ಧಾರಾವಾಹಿಯಲ್ಲಿ ಮಾಡಿದ್ದಾರೆ. ಈ ಬಗ್ಗೆ ಅಶ್ವಿನಿ ಅವರು ಯಾವುದೇ ಮಾಹಿತಿಯನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರಲಿಲ್ಲಾ. ತಮ್ಮ ಪ್ರೀತಿಯ ನಟಿಯನ್ನು ಮತ್ತೆ ಕನ್ನಡ ಧಾರಾವಾಹಿಯಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದರು. ಇನ್ನು ಮುಂದೆ ಯಾವ ಧಾರಾವಾಹಿಗಳಲ್ಲಿಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹುಟ್ಟಿದೆ.
  Published by:Swathi Nayak
  First published: