Gattimela Serial: ಹೆತ್ತ ತಾಯಿಯನ್ನು ಅವಮಾನ ಮಾಡಿದ ಸುಹಾಸಿನಿಯನ್ನು ಸುಮ್ಮನೆ ಬಿಡ್ತಾಳಾ ರೌಡಿ ಬೇಬಿ?

ಕುತಂತ್ರಿ ಸುಹಾಸಿನಿ ಅಕ್ಕ ಮತ್ತು ತಂಗಿಯ ನಡುವೆ ಭಿನ್ನಾಭಿಪ್ರಾಯ ತಂದಿಡುವುದರಲ್ಲಿ ಯಶಸ್ವಿಯಾಗಿದ್ದಾಳೆ. ಇತ್ತೀಚಿನ ಸಂಚಿಕೆಗಳಲ್ಲಿ ಅಕ್ಕ-ತಂಗಿ ನಡುವಿನ ಬಾಂಧವ್ಯವು ಮುರಿದು ಬೀಳುವ ಎಲ್ಲ ಸೂಚನೆಯೂ ಕಾಣಿಸುತ್ತಿದೆ.

ಅಮೂಲ್ಯಾ

ಅಮೂಲ್ಯಾ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದೆ ಗಟ್ಟಿಮೇಳ (Gattimela). ಅಮೂಲ್ಯ (Amulya) ಹಾಗೂ ವೇದಾಂತ್ (Vedanth) ಲವ್ ಸ್ಟೋರಿ ನೋಡಲು ಪ್ರೇಕ್ಷಕರೆಲ್ಲರೂ ಸದಾ ಕಾಯುತ್ತಿರುತ್ತಾರೆ. ಇದೀಗ ರೌಡಿ ಬೇಬಿ ಅಮೂಲ್ಯ ತನ್ನ ಒಡಹುಟ್ಟಿದ ಅಕ್ಕನಿಂದಾಗಿ ಬಹಳ ಬೇಸರಗೊಂಡಿದ್ದಾಳೆ. ಕುತಂತ್ರಿ ಸುಹಾಸಿನಿ (Suhasini) ಅಕ್ಕ ಮತ್ತು ತಂಗಿಯ ನಡುವೆ ಭಿನ್ನಾಭಿಪ್ರಾಯ ತಂದಿಡುವುದರಲ್ಲಿ ಯಶಸ್ವಿಯಾಗಿದ್ದಾಳೆ. ಇತ್ತೀಚಿನ ಸಂಚಿಕೆಗಳಲ್ಲಿ ಅಕ್ಕ-ತಂಗಿ ನಡುವಿನ ಬಾಂಧವ್ಯವು ಮುರಿದು ಬೀಳುವ ಎಲ್ಲ ಸೂಚನೆಯೂ ಕಾಣಿಸುತ್ತಿದೆ. ಇತ್ತ ವೇದಾಂತ್ ಮತ್ತು ವಿಕ್ರಾಂತ್ ಅಮೂಲ್ಯಳ ನೋವನ್ನು ಕಂಡು ಆಕೆಗೆ ಆ ನೋವಿನಿಂದ ಹೊರಗೆ ಬರಲು ಆಫೀಸ್ ಗೆ ಮತ್ತೆ ಹೋಗುವಂತೆ ಮಾಡಿದ್ದಾರೆ.

  ಇದೀಗ ಸುಹಾಸಿನಿ ಆರತಿಯ ಮೇಲೆ ಒಂದು ಕಣ್ಣು ಇಟ್ಟುಕೊಂಡಿದ್ದಾಳೆ. ಈ ಹಿಂದೆ ಆಧ್ಯಾ ಗರ್ಭಿಣಿಯಾದಾಗ ಅವಳ ಮಗುವನ್ನು ಹೊಟ್ಟೆಯಲ್ಲೇ ಸಾಯುವಂತೆ ಮಾಡಿದ್ದಳು. ಮತ್ತೆ ಈಗ ಆಸ್ತಿಯ ವಿಚಾರವಾಗಿ ಆರತಿಯ ಮಗುವನ್ನು ಕೊಲ್ಲುವುದರಲ್ಲಿ ಸಂಶಯವಿಲ್ಲ. ಮಗುವನ್ನು ಕೊಂದು ಅಪವಾದವನ್ನು ಮತ್ತೆ ಅಮೂಲ್ಯಾಳ ತಲೆಗೆ ಹಾಕುವ ಯೋಚನೆಯಲ್ಲಿದ್ದಾಳೆ ಸುಹಾಸಿನಿ.

  ಅಮೂಲ್ಯ ನೀಡಿದ ಪಾಯಸವನ್ನು ಬೇಡವೆಂದು ತಿರಸ್ಕರಿಸಿದ ಆರತಿ

  ತನ್ನ ಅಕ್ಕನ ಒಳಿತಿಗಾಗಿ ದೇವಸ್ಥಾನದಲ್ಲಿ ತಾಯಿ ಮಾಡಬೇಕಿದ್ದ ಮಂಡಿ ಸೇವೆಯನ್ನು‌ ಅಮೂಲ್ಯ ಪೂರ್ತಿಗೊಳಿಸಿದ್ದಾಳೆ. ಇದು ಆಕೆಗೆ ಅವಳ ಅಕ್ಕನ ಮೇಲಿರುವ ಪ್ರೀತಿ ಮತ್ತು ಇನ್ನೊಬ್ಬರಿಗಾಗಿ ಮಿಡಿಯುವ ಹೃದಯದ ಸಲುವಾಗಿ ಮಾಡಿದ್ದಾಳೆ. ದೇವಸ್ಥಾನದಲ್ಲಿ ಅರ್ಚಕರು ನೀಡಿದ ಪ್ರಸಾದದಲ್ಲಿ ಅಮೂಲ್ಯ ಅಕ್ಕನಿಗಾಗಿ ಪ್ರೀತಿಯಿಂದ ಪಾಯಸ ಮಾಡಿಕೊಟ್ಟಿದ್ದಳು. ಆದರೆ ತನ್ನ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಅತಿಯಾದ ಪ್ರೀತಿ ಹಾಗೂ ಅತ್ತೆ ತಲೆಗೆ ತುಂಬಿಸಿದ ವಿಚಾರಗಳ ಬಳಿಕ ಅಮೂಲ್ಯ ನೀಡಿದ ಪಾಯಸವನ್ನು ಆರತಿ ಬೇಡವೆಂದು ತಿರಸ್ಕರಿಸಿದ್ದಾಳೆ. ಅಕ್ಕ ಆರತಿಯ ಚುಚ್ಚು ಮಾತಿನಿಂದ ಅಮೂಲ್ಯ ಬಹಳ ಬೇಸರಿಸಿಕೊಂಡ ಸಂಚಿಕೆಯನ್ನು ಭಾವನಾತ್ಮಕವಾಗಿ ಎಲ್ಲರ ಮನಸ್ಸು ಗೆದ್ದದ್ದಂತು ಸುಳ್ಳಲ್ಲ.

  ಇದನ್ನೂ ಓದಿ: Jothe Jothyali Serial: ಅನು ಬಳಿ ಎಲ್ಲಾ ರಹಸ್ಯ ಹೇಳಿ ಬಿಡುತ್ತಾನಾ ಆರ್ಯವರ್ಧನ್?

  ಆಫೀಸ್ಗೆ ರಾಯಲ್ ಆಗಿ ಎಂಟ್ರಿ ಕೊಟ್ಟ ರೌಡಿ ಬೇಬಿ ಅಮೂಲ್ಯಾಳ

  ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಅದನ್ನು ಹೊರಗಡೆ ತೋರಿಸಿ ಅನುಕಂಪಗಿಟ್ಟಿಸಿಕೊಳ್ಳುವ ಜಾಯಮಾನ ರೌಡಿ ಬೇಬಿ ಅಮೂಲ್ಯಾಳದ್ದಲ್ಲ. ಅಕ್ಕನ ವಿಚಾರವಾಗಿ ಮನದಲ್ಲಿ ಎಷ್ಟೇ ಬೇಸರವಿದ್ದರೂ ಇದೀಗ ಆಫೀಸ್ ಕಡೆ ಹೆಜ್ಜೆ ಹಾಕಿದ್ದಾಳೆ ಅಮೂಲ್ಯ. ರೌಡಿ ಬೇಬಿ ಎಂಟ್ರಿ ಆಫೀಸ್ಗೆ ಹೊಸ ಕಳೆ ತಂದುಕೊಟ್ಟಂತೆ ಕಾಣಿಸುತ್ತಿದೆ. ಕಾಂತ ಸಹಾಯದಿಂದ ಆಫೀಸ್ಗೆ ತನ್ನದೇ ಸ್ಟೈಲ್ ನಲ್ಲಿ ರಾಯಲ್ ಆಗಿ ಎಂಟ್ರಿ ಕೊಟ್ಟಿದ್ದಾಳೆ ಅಮೂಲ್ಯ.

  ಗರ್ಭದಲ್ಲಿರುವ ಮಗುವಿನ ಮೇಲೆ ಅತಿಯಾದ ಪ್ರೀತಿ ಮತ್ತು ಸುಹಾಸಿನಿಯ ಕುತಂತ್ರದಿಂದ ಇದೀಗ ಆರತಿ ಎಲ್ಲರನ್ನೂ ಸಂಶಯದಲ್ಲಿ ಕಾಣುತ್ತಿದ್ದಾಳೆ. ಅಷ್ಟೇ ಅಲ್ಲ ನಿನ್ನೆ ಸಂಚಿಕೆಯಲ್ಲಿ ತವರುಮನೆಯಿಂದ ತಾಯಿ ಪ್ರೀತಿಯಿಂದ ಮಾಡಿ ತಂದಿದ್ದ ಸಿಹಿತಿಂಡಿಗಳನ್ನು ಆರತಿ ಬೇಡವೆಂದು ಹೇಳುತ್ತಾಳೆ. ಹಾಗೆ ಇಲ್ಲೂ ಕೂಡ ತವರು ಮನೆಯಿಂದ ಬಂದ ತಾಯಿ ಮತ್ತು ತಂಗಿಗೆ ಸುಹಾಸಿನಿಯಿಂದ ಅವಮಾನವಾದರೂ‌ ಏನೂ ಹೇಳದೆ ಸುಮ್ಮನೆ ಇರುವುದನ್ನು ಕಂಡಾಗ ಆರತಿಗೆ ಹೆತ್ತ ತಾಯಿ ಮೇಲೆ ನಂಬಿಕೆ ಇಲ್ಲವೇನೊ ಎಂದು ಅನಿಸುತ್ತಿದೆ. ಮನೆಯಲ್ಲಿ ನಡೆದ ಘಟನೆಯನ್ನು ಅದಿತಿ ಅಮೂಲ್ಯಾಳಿಗೆ ಕರೆಮಾಡಿ ಹೇಳುತ್ತಾಳೆ. ತನ್ನ ಹೆತ್ತವರಿಗೆ ಅವಮಾನ ಮಾಡಿದ ಅತ್ತೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲು ಆಫೀಸ್ ನಿಂದ ಸಿಟ್ಟಿನಲ್ಲೇನಲ್ಲೇ ಮನೆಗೆ ತಕ್ಷಣವೇ ಬರುತ್ತಾಳೆ.

  ಇದನ್ನೂ ಓದಿ: Puttakkana Makkalu Serial: ಸ್ನೇಹ ಮುಂದೆ ಸಿಕ್ಕಿ ಬೀಳುತ್ತಾನಾ ಕಂಠಿ? ಮತ್ತೆ ಎಲ್ಲಾ ಕಡೆಯಿಂದ ಕಂಟಕ

  ತವರಿಂದ ಬಂದ ಹೆತ್ತವರಿಂದ ಅವಮಾನ ಮಾಡಿದ ಸುಹಾಸಿನಿ

  ಈ ವಿಚಾರವಾಗಿ ಅತ್ತೆಯ ವಿವಾದಕ್ಕೆ ಕೂಡ ಇಳಿಯುತ್ತಾಳೆ ಅಮೂಲ್ಯ. ವೇದಾಂತ್ ಈ ಮಧ್ಯೆ ಮನೆಗೆ ಸಡನ್ ಆಗಿ ಎಂಟ್ರಿ ಕೊಟ್ಟಾಗ ಸುಹಾಸಿನಿ ಅಲ್ಲೂ ತನ್ನ ನಾಟಕದ ಮಾತಿನಿಂದ ಸತ್ಯವನ್ನು ಮರೆಮಾಚಿ ಅಲ್ಲೂ ಒಂದು ನಾಟಕದ ಮಾತನ್ನು ಹೇಳಿಬಿಡುತ್ತಾಳೆ. ಮುಂದೆ ಅಕ್ಕ-ತಂಗಿಯರ ನಡುವೆ ಏನು ನಡೆಯುತ್ತದೆ ಅವರಿಬ್ಬರ ಬಾಂಧವ್ಯ ಮತ್ತೆ ಹೇಗೆ ಒಂದಾಗುತ್ತದೆ ತಿನ್ನುವ ಬಗ್ಗೆ ಪ್ರೇಕ್ಷಕರ ಎಲ್ಲರಿಗೂ ಕುತೂಹಲ ಇದೆ.
  Published by:Swathi Nayak
  First published: