Gattimela Serial: ಅಪಾಯದಲ್ಲಿರುವ ಧ್ರುವನ ರಕ್ಷಿಸುವವರು ಯಾರು? ಮುಂದಿದೆ ಬಿಗ್ ಟ್ವಿಸ್ಟ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ ಕೂಡ ಒಂದು. ರೌಡಿ ಬೇಬಿ ಅಮೂಲ್ಯ ಮತ್ತು ವೇದಾಂತ ನಡುವಿನ ಮುದ್ದಾದ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ.

ಧ್ರುವ

ಧ್ರುವ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ರೌಡಿ ಬೇಬಿ ಅಮೂಲ್ಯ ಮತ್ತು ವೇದಾಂತ್ (Vedanth) ನಡುವಿನ ಮುದ್ದಾದ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಬಜಾರಿ ಅಮೂಲ್ಯ (Amulya) ಎಷ್ಟೇ ಜೋರಾಗಿದ್ದರೂ ಮನಸ್ಸಿನಲ್ಲಿ ಬಹಳ ಮುಗ್ದೆ ಮತ್ತು ಇನ್ನೊಬ್ಬರ ನೋವಿಗೆ ಮಿಡಿಯುವ ಹೃದಯ ಇವಳದ್ದು. ಧಾರಾವಾಹಿಯ ನಾಯಕಿ ಅಮೂಲ್ಯಾಳ ಈ ಗುಣ ಪ್ರೇಕ್ಷಕರಿಗೆ ಎಲ್ಲರಿಗೂ ಅಚ್ಚುಮೆಚ್ಚು. ಮದುವೆಯ ಬಳಿಕ ಕೂಡ ತವರುಮನೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿರುವ ಅಮೂಲ್ಯಾಳ ಈ ಗುಣ ಹೆಣ್ಣುಮಕ್ಕಳಿಗೆ ಮಾದರಿಯಾಗಿರುವುದರಲ್ಲಿ ಸಂಶಯವಿಲ್ಲ.

    ಸುಹಾಸಿನಿ ಸಂಚಿನಿಂದ ಹೆಚ್ಚಿದ ಅಮೂಲ್ಯಾಳ ಆತಂಕ

    ಈಗಾಗಲೇ ಸುಹಾಸಿನಿಯ ಕುತಂತ್ರದ ಬಗ್ಗೆ ಅರಿವಿರುವ ಅಮೂಲ್ಯ ಸುಹಾಸಿನಿಯ ಮುಂದಿನ ಯೋಜನೆ ಬಗ್ಗೆ ಚಿಂತಿತರಾಗಿದ್ದಾಳೆ. ತನ್ನ ಎಲ್ಲಾ ಸತ್ಯಗಳನ್ನು ತಿಳಿದಿರುವ ಮತ್ತು ಹೆತ್ತಮ್ಮನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುವ ಧೃವನನ್ನು ಆಕ್ಸಿಡೆಂಟ್ ಮಾಡಿಸಿ ಕೋಮಾ ಸ್ಥಿತಿಯಲ್ಲಿ ಇರುವಂತೆ ಮಾಡಿದ್ದಾಳೆ ಸುಹಾಸಿನಿ. ಆದರೆ ಇದೀಗ ಮತ್ತೆ ಧೃವನನ್ನು ಕೊಲ್ಲುವ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ ಸುಹಾಸಿನಿ. ಅಷ್ಟೇ ಅಲ್ಲದೆ ಧೃವನನ್ನು ನೋಡಿಕೊಳ್ಳಲು ನರ್ಸ್ ಒಬ್ಬಳನ್ನು ನೇಮಕ ಮಾಡುವಂತೆ ವೇದಾಂತ್ ಬಳಿ ಹೇಳಿ ತನ್ನ ಉಪಾಯವನ್ನು ನರ್ಸ್ ಮೂಲಕ ನೆರೆವೇರಿಸುವ ಪ್ಲಾನ್ ನಲ್ಲಿ ಇದ್ದಳು ಸುಹಾಸಿನಿ. ಆದರೆ ವೇದಾಂತ್ ಪಿಎ ಕಾಂತನ ಸಹಾಯದಿಂದ ಅದಿತಿ ಧೃವನನ್ನು ನೋಡಿಕೊಳ್ಳಲು ನರ್ಸ್ ಆಗಿ ಬಂದಿದ್ದಳು. ಆದರೆ ಇದೀಗ ಈ ಬಗ್ಗೆ ಸುವಾಸಿನಿ ತಿಳಿದುಕೊಂಡಿದ್ದಾಳೆ ಮತ್ತು ಅದಿತಿಯನ್ನು ಇನ್ನು ಮುಂದೆ ಧೃವನನ್ನು ನೋಡಿಕೊಳ್ಳಲು ಬರುವ ಅವಶ್ಯಕತೆ ಇಲ್ಲ ಎಂದು ವೇದಾಂತ್ ಮೂಲಕ ಹೇಳಿಸಿದ್ದಾಳೆ

    ಇದನ್ನೂ ಓದಿ: Mouna Guddemane: ರಾಮಾಚಾರಿಯ ಚಾರು ಡಾಕ್ಟರ್​ ಆಗ್ಬೇಕಿತ್ತಂತೆ, ನಟಿ ಮೌನ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

    ಇನ್ನು ಮುಂದೆ ಧೃವನನ್ನು ತಾನೇ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾಳೆ ಸುಹಾಸಿನಿ. ಈ ವಿಚಾರವಾಗಿ ಅಮೂಲ್ಯ ಮತ್ತು ವಿಕ್ರಾಂತ್ ಚಿಂತಿರರಾಗಿದ್ದಾರೆ. ಸುಹಾಸಿನಿಯಿಂದ ಧ್ರುವನಿಗೆ ಅಪಾಯ ಇದೆ ಎನ್ನುವ ‌ಬಗ್ಗೆ ಈಗಾಗಲೇ ಇಬ್ಬರಿಗೂ ‌ತಿಳಿದಿದೆ‌. ಅಷ್ಟೇ ಅಲ್ಲದೆ ಈ‌ ಹಿಂದೆ ಕಾಂತನ ಬಳಿ‌ ಒಳ್ಳೆಯ ನರ್ಸ್ ಅನ್ನು ಫಿಕ್ಸ್ ಮಾಡುವಂತೆ ಹೇಳಿದ್ದನು‌ ವಿಕ್ರಾಂತ್.

    ಧ್ರುವನನ್ನು ಅಪಾಯದಿಂದ ರಕ್ಷಿಸುವವರಾರು

    ಈಗಾಗಲೇ ಅದಿತಿಯ ಮದುವೆಯ ತಯಾರಿಯಲ್ಲಿ ಪರಿಮಳ ಮತ್ತು ಮಂಜುನಾಥ್ ಇದ್ದಾರೆ. ಅಷ್ಟೇ ಅಲ್ಲದೆ ಹುಡುಗನ ಕಡೆಯವರು ಮನೆಗೆ ಬಂದು ಅದಿತಿಯನ್ನು ನೋಡಿ ಒಪ್ಪಿಗೆ ಕೂಡ ಸೂಚಿಸಿದ್ದಾರೆ. ಭಾವ ವೇದಾಂತ್ ಮಾತಿಗೆ ಕಟ್ಟುಬಿದ್ದು ಅದಿತಿ ಕೂಡ ಒಲ್ಲದ ಮನಸ್ಸಿನಿಂದ ಈ ಮದುವೆಗೆ ಒಪ್ಪಿಗೆಯನ್ನು ನೀಡಿದ್ದಾಳೆ. ಆದರೆ ತನ್ನ ಮನಸಲ್ಲೆಲ್ಲ ಕೇವಲ ಧೃವನನ್ನು ತುಂಬಿಕೊಂಡಿದ್ದಾಳೆ ಅದಿತಿ. ಅದಿತಿ ಮತ್ತು ಧ್ರುವನ ಪ್ರೀತಿ ಬಗ್ಗೆ ಆದ್ಯಾಳಿಗೆ ಬಿಟ್ಟರೆ ಬೇರಾರಿಗೂ ಗೊತ್ತಿಲ್ಲ.ಸುಹಾಸಿನಿ ಕುತಂತ್ರದಿಂದ ಅದಿತಿ ಮತ್ತು ಧ್ರುವ ಬೇರೆಯಾಗುವ ಸನ್ನಿವೇಶಗಳು ಎದುರಾಗಿದೆ.

    ಇದನ್ನೂ ಓದಿ: Kannadathi Serial: ಧೂಮಪಾನ ನಿಷೇಧ ಜಟಾಪಟಿಯಲ್ಲಿ ಗೆಲುವು ಯಾರಿಗೆ? ಮುಂದಿದೆ ಬಿಗ್ ಟ್ವಿಸ್ಟ್

    ಸುಹಾಸಿನಿಯ ವಕ್ರದೃಷ್ಟಿಗೆ ಬಿದ್ದ ಮಂಜುನಾಥ್

    ಈಗಾಗಲೇ ಸುಮಾರು ದಿನಗಳಿಂದ ಅಮೂಲ್ಯ ತಂದೆ ಮಂಜುನಾಥ್ ವಸಿಷ್ಠ ಮನೆಯ ನೈಟ್ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೇವಲ ಅಮೂಲ್ಯಳಿಗೆ ಮಾತ್ರ ತಿಳಿದಿತ್ತು. ಹೆತ್ತವರು ತಮಗಾಗಿ ಪಡುತ್ತಿರುವ ಕಷ್ಟ ಕಂಡು ಅಮೂಲ್ಯ ಮತ್ತು ಆರತಿ ತವರುಮನೆಗೆ ದುಡ್ಡಿನ ಸಹಾಯ ಮಾಡಲು ಈಗಾಗಲೇ ಕೈಜೋಡಿಸಿದ್ದಾರೆ.ಆದರೆ ಈ ಮಧ್ಯೆ ಸುಹಾಸಿನಿಯ ವಕ್ರದೃಷ್ಟಿಗೆ ಮಂಜುನಾಥ್ ಸಿಕ್ಕಿಬಿದ್ದಿದ್ದಾರೆ. ತಮ್ಮ ಮನೆಯ ನೈಟ್ ವಾಚ್ ಮ್ಯಾನ್ ಕೆಲಸವನ್ನು ಮಂಜುನಾಥ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಿಸಿಟಿವಿ ಫೂಟೇಜ್ ಮೂಲಕ ಸುಹಾಸಿನಿ ನೋಡಿದ್ದಾಳೆ. ತಂದೆಯ ಈ ಪರಿಸ್ಥಿತಿ ಕಂಡು ಅಮೂಲ್ಯಳ ತುಂಬಾ ಬೇಸರಿಸಿಕೊಂಡಿದ್ದಾಳೆ.
    Published by:Swathi Nayak
    First published: