Gattimela Serial: ಧ್ರುವನ ಪ್ರೀತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅದಿತಿ! ಮುಂದಿದೆ ಬಿಗ್ ಟ್ವಿಸ್ಟ್?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳ ಪ್ರತಿ ದಿನ ಹೊಸ ಹೊಸ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ರೌಡಿ ಬೇಬಿ ಅಮೂಲ್ಯ ಮತ್ತು ವೇದಾಂತ್ ನಡುವಿನ ಕ್ಯೂಟ್ ಜಗಳ ನೋಡಲು ಎಲ್ಲರಿಗೂ ಅಚ್ಚುಮೆಚ್ಚು.

ಅದಿತಿ

ಅದಿತಿ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳ (Gattimela) ಪ್ರತಿ ದಿನ ಹೊಸ ಹೊಸ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ರೌಡಿ ಬೇಬಿ ಅಮೂಲ್ಯ (Amulya) ಮತ್ತು ವೇದಾಂತ್ (Vedanth) ನಡುವಿನ ಕ್ಯೂಟ್ ಜಗಳ ನೋಡಲು ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೆ ಪ್ರೀತಿ ವಾತ್ಸಲ್ಯ ಮತ್ತು ಸಂಬಂಧಗಳಿಗೆ ಬೆಲೆ ಕೊಡುವ ವಿಚಾರಗಳನ್ನು ಈ ಧಾರವಾಹಿಯಲ್ಲಿ ಬಹಳ ಚೆನ್ನಾಗಿ ತೋರಿಸಿಕೊಡುತ್ತಿದ್ದಾರೆ. ತವರುಮನೆಯವರು ಪಡುತ್ತಿರುವ ಕಷ್ಟವನ್ನು ಕಂಡು ತಮ್ಮ ಮಧ್ಯೆ ಇದ್ದಂತಹ ಭಿನ್ನಾಭಿಪ್ರಾಯಗಳನ್ನು ಕೂಡ ಮರೆತ ಆರತಿ (Aarthi) ಮತ್ತು ಅಮೂಲ್ಯ ತವರುಮನೆಗೆ ಕೊಡುವ ಗೌರವ ರೀತಿ ಕಂಡು ವೀಕ್ಷಕರಿಗೆ ಸಂತಸ ತಂದಿದೆ.

    ಅದಿತಿ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡ ವೇದಾಂತ್

    ಅದಿತಿ ಮತ್ತು ಧ್ರುವ ಪ್ರೀತಿಸುತ್ತಿರುವ ವಿಚಾರ ಎರಡು ಮನೆಗಳಲ್ಲಿ ಯಾರಿಗೂ ಇವರಿಗೆ ತಿಳಿದಿಲ್ಲ. ಕಳೆದ ಕೆಲ ಸಂಚಿಕೆಗಳ ಹಿಂದೆ ಆಧ್ಯಾ ತನ್ನ ಬುದ್ಧಿವಂತಿಕೆಯಿಂದ ಅದಿತಿ ಮತ್ತು ದ್ರುವ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ನರ್ಸ್ ರೂಪದಲ್ಲಿ ಬಂದಿರುವ ಅತಿಥಿಯನ್ನು ಆಧ್ಯಾ ನೋಡಿದ್ದಾಳೆ. ಆದರೆ ಪ್ರೀತಿಯ ವಿಚಾರ ತಿಳಿದ ಮೇಲೆ ಈ ಬಗ್ಗೆ ಯಾರಿಗೂ ಹೇಳದಂತೆ ಅದಿತಿ ಆದ್ಯಾಳಿಂದ ಮಾತನ್ನು ಕೂಡ ತೆಗೆದುಕೊಂಡಿದ್ದಾಳೆ. ವೇದಾಂತ್ ಈಗ ಅದಿತಿಯ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಪರಿಮಳ ಬಳಿ ಹೇಳಿದ್ದಾನೆ. ಧ್ರುವನ ಈಗಿರುವ ಪರಿಸ್ಥಿತಿಯಲ್ಲಿ ಅದಿತಿ ಮತ್ತು ಧ್ರುವನ ಲವ್ ಸ್ಟೋರಿಗೆ ಯಾರ ಸಹಾಯವೂ ದೊರಕುವುದಿಲ್ಲ ಎಂಬ ವಿಚಾರವು ಈಗಾಗಲೇ ಅದಿತಿಗೆ ತಿಳಿದಿದೆ ಇದೇ ಕಾರಣಕ್ಕೆ ಆಕೆ ವೇದಾಂತ್ ಬಳ್ಳಿ ಈ ಬಗ್ಗೆ ಯಾವುದೇ ವಿಚಾರಗಳನ್ನು ಹೇಳಿಕೊಳ್ಳಲಿಲ್ಲ.

    ಇದನ್ನೂ ಓದಿ: Ranjani Raghavan : ಪುಣೆ ಶನಿವಾರ್ ವಾಡದಲ್ಲಿ ರಂಜನಿ ರಾಘವನ್ ಜಾಲಿ ಮೂಡ್!

    ಅದಿತಿಯನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ

    ಈಗಾಗಲೇ ಅದಿತಿಯ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡ ವೇದಾಂತ ಗಂಡಿನ ಕಡೆಯವರನ್ನು ತಕ್ಷಣಕ್ಕೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಮನೆಗೆ ಬರುವಂತೆ ತಿಳಿಸಿದ್ದಾನೆ. ಆದರೆ ಈ ಬಗ್ಗೆ ಅಮೂಲ್ಯಾಳಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿಲ್ಲ. ಈ ಮಧ್ಯೆ ಅದಿತಿ ಯಾವುದೇ ವಿಚಾರವನ್ನು ವೇದಾಂತ್ ಬಳಿ ಹೇಳಿಕೊಂಡಿಲ್ಲ ಕೂಡ.  ಧ್ರುವ ಮತ್ತು ಅದಿತಿಯನ್ನು ಒಂದು ಮಾಡಲು ಆಧ್ಯಾಳಿಂದ ಮಾತ್ರ ಸಾಧ್ಯ. ಆದರೆ ಈ ಬಗ್ಗೆ ಅವಳಿಗೆ ಯಾವ ಸುಳಿವು ಕೂಡ ಇಲ್ಲಾ. ಅದಿತಿ ತನ್ನ ಪ್ರೀತಿ ವಿಚಾರವನ್ನು ವೇದಾಂತ್ ಬಳಿ ಹೇಳಿಕೊಳ್ಳುತ್ತಾಳಾ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.

    ಇದನ್ನೂ ಓದಿ: Jothe Jotheyali Serial: ಅನು ಸಿರಿಮನೆ ಕಾರ್ ಆಕ್ಸಿಡೆಂಟ್, ಇನ್ನಾದರೂ ಬಯಲಾಗುತ್ತಾ ಜೇಂಡೆ ನಿಜಮುಖ?

    ಸುಹಾಸಿನಿಯ ಕುತಂತ್ರಕ್ಕೆ ಬಲಿಯಾಗುತ್ತಾ ಅದಿತಿ ಮತ್ತು ದ್ರುವನ ಪ್ರೀತಿ?

    ಕೋಮಾದಲ್ಲಿರುವ ದ್ರುವನ್ನು ನೋಡಿಕೊಳ್ಳುವ ನರ್ಸ್ ಆಗಿ ವಸಿಷ್ಠ ಮನೆಗೆ ಅದಿತಿ ಕಳೆದ ಕೆಲ ದಿನಗಳಿಂದ ಬರುತ್ತಿದ್ದಾಳೆ. ಇತ್ತೀಚೆಗೆ ದ್ರುವನ ಆರೋಗ್ಯದಲ್ಲಿ ಚೇತರಿಕೆ ‌ಕೂಡ ಕಂಡುಬರುತ್ತಿದೆ. ದ್ರುವನನ್ನು ನೋಡಿಕೊಳ್ಳಲು ನರ್ಸ್ ಬೇಕು ಎಂದು ಸುಹಾಸಿನಿ ಹೇಳಿದ ಮುಖ್ಯ ಉದ್ದೇಶವೇ ಆತನನ್ನು ಕೊಲ್ಲುವುದಾಗಿತ್ತು. ಅದೇ ವಿಚಾರವಾಗಿ ನರ್ಸ್ ‌ಕೈಯಲ್ಲಿ ಆತನ ಪ್ರಾಣಕ್ಕೆ ಅಪಾಯ ಇರುವಂತಹ ಮಾತ್ರೆಗಳನ್ನು ಕೊಟ್ಟಿದ್ದಳು ಸುಹಾಸಿನಿ. ಇದೇ ಕಾರಣಕ್ಕೆ ನರ್ಸ್ ಬಳಿ ಮಾತನಾಡಲು ಹೊರಟಿದ್ದಳು ಸುಹಾಸಿನಿ. ಆದರೇ ಮೊದಲ ಬಾರಿ ಆದ್ಯ ಅದಿತಿಯನ್ನು ಸುಹಾಸಿನಿ ಕೈಯಿಂದ ಪಾರು ಮಾಡಿದ್ದಳು. ಇದೀಗ ಎರಡನೇ ಬಾರಿ ಮತ್ತೆ ಅದಿತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ‌ಹಾಕಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಸುಹಾಸಿನಿಗೆ ಧ್ರುವ ಮತ್ತು ಅದಿತಿ ನಡುವಿನ ಪ್ರೀತಿಯ ವಿಚಾರ ಕೂಡ ತಿಳಿದಿದೆ.
    Published by:Swathi Nayak
    First published: